ವಯಸ್ಸು 30 ದಾಟುತ್ತಿದ್ದಂತೆ ದೃಷ್ಟಿ ಮಂಜಾಗ್ತಿದಿಯಾ; ಕಣ್ಣಿನ ಆರೋಗ್ಯಕ್ಕೆ ಇರಲಿ ಎಚ್ಚರ
Jan 11, 2024 05:29 PM IST
ವಯಸ್ಸು 30 ಆಗುತ್ತಿದ್ದಂತೆ ಕಣ್ಣುಗಳು ಮಂಜಾಗುತ್ತಿವೆಯೇ, ಕಣ್ಣಿನ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ
ಕಣ್ಣಿನ ಆರೋಗ್ಯ ಕಪಾಡಿಕೊಳ್ಳಲು ಸಹಕಾರಿಯಾಗುವ ಕೆಲವು ಅಂಶಗಳನ್ನ ಇಲ್ಲಿ ನೀಡಲಾಗಿದೆ. ವಯಸ್ಸು 30 ದಾಟುತ್ತಿದ್ದಂತೆ ದೃಷ್ಟಿ ಮಂಜಾಗುತ್ತಿದ್ದರೆ ಏನು ಮಾಡಬೇಕು ಅನ್ನೋದನ್ನ ತಿಳಿಯಿರಿ.
ಕೆಲವರಿಗೆ ಸಾಮಾನ್ಯ ದೃಷ್ಟಿ ಸಮಸ್ಯೆ ಇರುತ್ತದೆ. ಆದರೆ ಬೆಳಗ್ಗೆ ಕಣ್ಣುಗಳು ಸ್ವಲ್ಪ ಸಮಯದವರೆಗೆ ಮಸುಕಾಗಿರುತ್ತವೆ. ನಿದ್ದೆಯಿಂದ ಎದ್ದ ನಂತರವೂ ಕಣ್ಣುಗಳು ದೃಷ್ಟಿ ಸರಿಯಿಲ್ಲ ಎಂಬ ಭಾವನೆ ಮೂಡುತ್ತದೆ. ಈ ಲಕ್ಷಣಗಳು ಯಾರಲ್ಲಿ ಕಾಣಿಸಿಕೊಂಡರೂ ಕಾರಣಗಳು ಒಂದೇ ಆಗಿರಬಹುದು ಎನ್ನುತ್ತಾರೆ ನೇತ್ರ ತಜ್ಞರು.
ಧೂಮಪಾನ, ಆಹಾರ ಕ್ರಮ, ನಿದ್ರೆಯ ಕೊರತೆ, ಅತಿಯಾಗಿ ಮೊಬೈಲ್, ಟಿವಿ ನೋಡುವುದು ಸೇರಿದಂತೆ ಅನೇಕ ಜೀವನ ಶೈಲಿಯಲ್ಲಿ ರೂಢಿಸಿಕೊಂಡಿರುವ ಅಭ್ಯಾಸಗಳು ಕಣ್ಣಿನ ಆರೋಗ್ಯಕ್ಕೆ ಮಾರಕವಾಗಿವೆ. ವಿಶೇಷವಾಗಿ ನೀವು 30ರ ಹರೆಯನ್ನು ತಲುಪಿದಾಗ ದೃಷ್ಟಿಹೀನತೆ ಎದ್ದು ಕಾಣಿಸುತ್ತದೆ.
ನಿಮಯಿತವಾದ ಕಣ್ಣಿನ ಪರೀಕ್ಷೆಗಳು ಅತ್ಯುತ್ತಮ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವ ಅತ್ಯಂತ ನಿರ್ಣಾಯಕ ಹಂತಗಳಲ್ಲಿ ಒಂದಾಗಿದೆ. ವೈದ್ಯರು ಕಣ್ಣಿನ ಆಂತರಿಕ ರಚನೆಗಳನ್ನು ಪರಿಶೀಲಿಸುತ್ತಾರೆ, ವಕ್ರೀಭವನದ ಸ್ಥಿತಿಯನ್ನು ಆಧರಿಸಿ ಕನ್ನಡಕವನ್ನು ಸೂಚಿಸಬಹುದು. ಕನಿಷ್ಠ ಎರಡು ವರ್ಷಗಳಿಗೊಮ್ಮೆ ನೇತ್ರಶಾಸ್ತ್ರಜ್ಞರನ್ನು ಭೇಟಿ ಮಾಡಬೇಕು. ಗ್ಲುಕೋಮಾ, ಕಣ್ಣಿನ ಪೊರೆ ಹಾಗೂ ಮ್ಯಾಕ್ಯುಲರ್‌ನಂತಹ ಕಾಯಿಲೆಗಳ ಆರಂಭಿಕ ಲಕ್ಷಣಗಳನ್ನು ಪತ್ತೆಹಚ್ಚಿಸಲು ಸಹಕಾರಿಯಾಗಿರುತ್ತದೆ. ಆರೋಗ್ಯಕರ ಕಣ್ಣಿಗಳಿಗಾಗಿ ಏನು ಮಾಡಬೇಕು ಅನ್ನೋದನ್ನು ತಿಳಿಯೋಣ.
- ರೋಗ ನಿರೋಧಕಗಳು ಹೇರಳವಾಗಿರುವ ಆಹಾರ
ಅತ್ಯುತ್ತಮ ಕಣ್ಣಿನ ಆರೋಗ್ಯಕ್ಕಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿನ ಆಹಾರವನ್ನು ಸೇವಿಸಿ. ವಿಟಮಿನ್ ಎ, ಒಮೆಗಾ 3, ಕೊಬ್ಬಿನಾಮ್ಲುಗಳು, ವಿಟಮಿನ್ ಸಿ, ಇ, ಸತು, ಕಬ್ಬಿನಾಂಶ ಹಾಗೂ ತಾಮ್ರದಂತಹ ಜೀವಸತ್ವಗಳು ಹೇರಳವಾಗಿರುವ ಸಮತೋಲಿತ ಆಹಾರವನ್ನು ಸೇವಿಸಿ. ದೇಹದ ನೈಸರ್ಗಿಕ ರಕ್ಷಣೆಯಿಂದ ಕಣ್ಣಿನ ಕಾಯಿಲೆಗಳಿಂದ ದೂರ ಇರಬಹುದು.
- ಎಲ್‌ಇಡಿ ಪರದೆಗಳಿಂದ ಸುರಕ್ಷಿತವಾಗಿರಿ
ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಎಲ್‌ಇಡಿ ಪರದೆಗಳು ಮುಖ್ಯವಾಗುತ್ತವೆ. ಕಡಿಮೆ ತರಂಗಾಂತರದ ಗೋಚರ ಬೆಳಕಿನಿಂದ ಕಣ್ಣುಗಳನ್ನು ರಕ್ಷಿಸಿಕೊಳ್ಳಬೇಕು. ವಿಶೇಷವಾಗಿ ನೀಲಿ ಬೆಳಕಿನ ವರ್ಣಪಟಲದಿಂದ ದೂರ ಇರಿ. ಹೆಚ್ಚಿನ ಡಿಜಿಟಲ್ ಸಾಧನಗಳು, ಮೊಬೈಲ್ ಸಾಧನಗಳು ಹೆಚ್ಚಾಗಿ ನೀಲಿ ಬೆಳಕನ್ನು ಹೊರಸೂಸುತ್ತವೆ. ಕೆಲವೊಂದು ಗ್ಯಾಜೆಟ್‌ಗಳಲ್ಲಿ ಹೆಚ್ಚಿನ ಶಕ್ತಿಯ ವಿಕಿರಣಗಳನ್ನು ಎದುರಿಸಲು ನೀಲಿ ಫಿಲ್ಟರ್ ನೀಡಲಾಗಿರುತ್ತದೆ. ಹೀಗಾಗಿ ಈ ಸಾಧನಗಳನ್ನು ಹೆಚ್ಚಾಗಿ ಬಳಸುವುದು ಕಣ್ಣಿಗೆ ಅಪಾಯ.
- ಸೂರ್ಯನ ಕಿರಣಗಳಿಂದ ರಕ್ಷಣೆ
ವಯಸ್ಸು 30 ದಾಟಿದ ಅನೇಕ ಮಂದಿ ಹೊರಗಡೆ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಸೂರ್ಯ ಬೆಳಕು ನೇರಳಾತೀತ (ಯುವಿ) ಕಿರಣಗಳನ್ನು ಹೊಂದಿರುತ್ತದೆ. ಅದು ದೀರ್ಘಾವಧಿಯಲ್ಲಿ ಕಣ್ಣುಗಳಿಗೆ ಹಾನಿ ಮಾಡುತ್ತದೆ. ಯುವಿ ರಕ್ಷಣೆಗಾಗಿ ಸನ್‌ಗ್ಲಾಸ್ ಉಪಯೋಗಿಸಿ. ಸನ್‌ಗ್ಲಾಸ್ ದೊಡ್ಡದಿದ್ದರೆ ಕಣ್ಣುಗಳ ಸುತ್ತಲಿನ ಚರ್ಮವನ್ನು ಸಹ ರಕ್ಷಿಸಿಕೊಳ್ಳಬಹುದು. ಟೋಪಿ ಧರಿಸುವುದರಿಂದ ಸೂರ್ಯನ ಬೆಳಕಿಗೆ ಒಡ್ಡಿ0 ಕೊಳ್ಳುವುದನ್ನು ಕಡಿಮೆ ಮಾಡಬಹುದು.
- ವ್ಯಾಯಾಮ ಮಾಡುವುದು
ನಿಯಮಿತ ವ್ಯಾಯಾಮ ಮಾಡುವುದರಿಂದ ದೇಹದಾದ್ಯಂತ ರಕ್ತ ಪರಿಚಲನೆ ಸುಧಾರಿಸುತ್ತದೆ. ಕಣ್ಣುಗಳಿಗೆ ಆಮ್ಲಜನಕ ಪೂರೈಕೆಯನ್ನು ಹೆಚ್ಚಿಸುತ್ತದೆ. ಅನೇಕ ಕಣ್ಣಿನ ಕಾಯಿಲೆಗಳ ಅಪಾಯವನ್ನು ವ್ಯಾಯಾಮ ಕಡಿಮೆ ಮಾಡುತ್ತದೆ.
- ಆರೋಗ್ಯಕರ ಪರದೆಯ ಅಭ್ಯಾಸ
ವಯಸ್ಸು 30ರ ವೇಳೆಗೆ ಅನೇಕರು ಕೆಲಸಕ್ಕೆ ಸೇರಿಸಿಕೊಂಡಿರುತ್ತಾರೆ. ಬಹುತೇಕ ಕಂಪ್ಯೂಟರ್, ಲ್ಯಾಪ್‌ಟಾಪ್‌ನ ಉದ್ಯೋಗಿಗಳಾರುತ್ತಾರೆ. ಮೊಬೈಲ್ ಬಳಕೆ ಅತ್ಯಗತ್ಯವಾಗಿರುತ್ತದೆ. ಇಂತಹ ಡಿಸ್‌ಪ್ಲೇ ಅಥವಾ ಸ್ಕೀನ್‌ಗಳನ್ನು ನೋಡುತ್ತಾ ಹೆಚ್ಚಿನ ಕಾಲ ಕಳೆಯುವ ವ್ಯಕ್ತಿಗಳಲ್ಲಿ ದೃಷ್ಟಿ ಮಂಜಾಗುವ ಸಮಸ್ಯೆ ಬರುತ್ತದೆ. ಇವುಗಳ ಬಳಕೆಯನ್ನು ಕಡಿಮೆ ಮಾಡಿ. ನಿಮ್ಮ ಮುಖವನ್ನು ಆಗಾಗ ತೊಳೆದುಕೊಳ್ಳುವ ಮೂಲಕ ಹೈಡ್ರೇಟೆಡ್ ಆಗಿರಿ.
- ಧೂಮಪಾಲ ಮಾಡಬೇಡಿ
ಧೂಮಪಾನ ಅಭ್ಯಾಸ ಶ್ವಾಸಕೋಶಗಳಿಗೆ ಅಷ್ಟೇ ಅಲ್ಲ ಕಣ್ಣುಗಳಿಗೆ ಹಾನಿಕಾರವಾಗಿದೆ. ಕಾಂಜಂಕ್ಟಿವಲ್ ಸಮಸ್ಯೆ, ರೆಟಿನಾದ ರೋಗಶಾತ್ರ ಸೇರಿದಂತೆ ವಿವಿಧ ರೀತಿಯ ಕಣ್ಣಿನ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.
- ಒಣ ಕಣ್ಣುಗಳು
ಒಣ ಕಣ್ಣುಗಳು ಸಾಮಾನ್ಯವಾಗಿದ್ದು, ಸ್ವಯಂ ನಿರೋಧಕ ಕಾಯಿಲೆ ಅಥವಾ ಹೆಚ್ಚಾಗಿ ಕಂಪ್ಯೂಟರ್ ಬಳಕೆಯಿಂದಾಗಿ ಕಣ್ಣಿನ ಸಮಸ್ಯೆ ಬರುತ್ತದೆ. ಮಧುಮೇಹವು ಒಣ ಕಣ್ಣುಗಳಿಗೆ ಕಾರಣವಾಗುತ್ತದೆ.
- ವ್ಯವಸ್ಥಿತಿ ರೋಗಗಳು
ಮಧುಮೇಹ ಮತ್ತು ಅಧಿಕ ರಕ್ತದೊತ್ತಡ, ಸಂಧಿವಾತ, ಹೆಮಟೊಲಾಜಿಕಲ್ ಮತ್ತು ಶ್ವಾಸಕೋಶದ ಕಾಯಿಲೆಗಳಂತಹ ಇತರ ಪರಿಸ್ಥಿತಿಗಳಂತಹ ವ್ಯವಸ್ಥಿತ ರೋಗಗಳನ್ನು ಅರ್ಥಮಾಡಿಕೊಳ್ಳುವುದು ನಿರ್ಣಾಯಕವಾಗಿದೆ. ಈ ಪರಿಸ್ಥಿತಿಗಳು ಕಣ್ಣುಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ. ದೇಹದಲ್ಲಿ ಶುಗರ್ ಹೆಚ್ಚಾದಾಗ ಕಣ್ಣುಗಳು ಮಂಜಾಗುತ್ತವೆ. ಹೀಗಾಗಿ ಶುಗರ್ ಮಟ್ಟವನ್ನು ಸರಿಯಾಗಿ ನಿರ್ವಹಿಸಬೇಕಾಗುತ್ತದೆ.
ವಿಭಾಗ