logo
ಕನ್ನಡ ಸುದ್ದಿ  /  ಜೀವನಶೈಲಿ  /  Health Tips: ಆಯುರ್ವೇದದ ಪ್ರಕಾರ ಉತ್ತಮ ಆರೋಗ್ಯಕ್ಕಾಗಿ ವಾತ, ಪಿತ್ತ, ಕಫವನ್ನು ಸಮತೋಲನದಲ್ಲಿಡುವುದು ಹೇಗೆ..?

Health Tips: ಆಯುರ್ವೇದದ ಪ್ರಕಾರ ಉತ್ತಮ ಆರೋಗ್ಯಕ್ಕಾಗಿ ವಾತ, ಪಿತ್ತ, ಕಫವನ್ನು ಸಮತೋಲನದಲ್ಲಿಡುವುದು ಹೇಗೆ..?

HT Kannada Desk HT Kannada

Mar 15, 2024 07:00 AM IST

google News

ಆಯುವೇದದ ಪ್ರಕಾರ ಉತ್ತಮ ಆರೋಗ್ಯಕ್ಕಾಗಿ ವಾತ, ಪಿತ್ತ, ಕಫವನ್ನು ಸಮತೋಲನದಲ್ಲಿಡುವ ವಿಧಾನ

  • Health Tips: ಆರ್ಯುವೇದದ ಪ್ರಕಾರ ಕಫ , ವಾತ ಹಾಗೂ ಪಿತ್ತದಲ್ಲಿ ಉಂಟಾಗುವ ದೋಷವು ನಮ್ಮ ಸಮಗ್ರ ಆರೋಗ್ಯವನ್ನು ಹಾಳು ಮಾಡುತ್ತದೆ. ಈ ಮೂರು ದೋಷಗಳನ್ನು ಸಮತೋಲನದಲ್ಲಿಟ್ಟುಕೊಳ್ಳುವುದು ಹೇಗೆ ಎಂದು ನೀವು ಯೋಚಿಸುತ್ತಿದ್ದರೆ ಅದಕ್ಕೆ ಪರಿಹಾರ ಇಲ್ಲಿದೆ ನೋಡಿ.

ಆಯುವೇದದ ಪ್ರಕಾರ ಉತ್ತಮ ಆರೋಗ್ಯಕ್ಕಾಗಿ ವಾತ, ಪಿತ್ತ, ಕಫವನ್ನು ಸಮತೋಲನದಲ್ಲಿಡುವ ವಿಧಾನ
ಆಯುವೇದದ ಪ್ರಕಾರ ಉತ್ತಮ ಆರೋಗ್ಯಕ್ಕಾಗಿ ವಾತ, ಪಿತ್ತ, ಕಫವನ್ನು ಸಮತೋಲನದಲ್ಲಿಡುವ ವಿಧಾನ

ಆಯುರ್ವೇದ: ಭಾರತೀಯ ಪುರಾತನ ವೈದ್ಯ ಪದ್ಧತಿಯಾದ ಆರ್ಯುವೇದವು ಅಗ್ನಿ, ಗಾಳಿ, ನೀರು, ಭೂಮಿ ಹಾಗೂ ಆಕಾಶವೆಂಬ ಐದು ಅಂಶಗಳ ತತ್ವವನ್ನು ಆಧರಿಸಿದೆ. ಈ ಅಂಶಗಳಿಂದ ಮನುಷ್ಯನಿಗೆ ಮುಖ್ಯವಾಗಿ ಮೂರು ದೋಷಗಳು ಬರುತ್ತದೆ. ಇವುಗಳನ್ನು ವಾತ , ಪಿತ್ತ ಹಾಗೂ ಕಫ ಎಂದು ಕರೆಯಲಾಗುತ್ತದೆ. ಪ್ರತಿಯೊಂದು ದೋಷವು ಆ ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಅವಲಂಬಿಸಿ ನಿರ್ಧರಿತವಾಗುತ್ತದೆ. ಹೀಗಾಗಿ ಕಫ, ವಾತ ಹಾಗೂ ಪಿತ್ತ ಈ ಸಮಸ್ಯೆಯಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಬೇಕು ಎಂದು ನಿಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಹೇಗೆ ಸಮತೋಲನದಲ್ಲಿ ಇಟ್ಟುಕೊಳ್ಳಬೇಕು ಎನ್ನುವುದಕ್ಕೆ ಮಾಹಿತಿ ಇಲ್ಲಿದೆ ನೋಡಿ

ಕಫ, ವಾತ ಹಾಗೂ ಪಿತ್ತವನ್ನು ಸಮತೋಲನಗೊಳಿಸುವುದು ಹೇಗೆ..?

ಭೂಮಿ ಮೇಲಿರುವ ಪ್ರತಿಯೊಬ್ಬ ಮನುಷ್ಯನ ದೇಹವು ಆಕಾಶ, ಭೂಮಿ, ನೀರು, ಅಗ್ನಿ ಹಾಗೂ ಗಾಳಿಯೆಂಬ ಐದು ಮೂಲಭೂತ ಅಂಶಗಳಿಂದ ಮಾಡಲ್ಪಟ್ಟಿದೆ ಎಂದು ಆರ್ಯುವೇದ ಹೇಳಿತ್ತದೆ. ಈ ಅಂಶಗಳು ಒಟ್ಟಾಗಿ ಸೇರಿ ಮನುಷ್ಯನಿಗೆ ವಿವಿಧ ದೋಷಗಳನ್ನು ತರುತ್ತದೆ. ಇವುಗಳನ್ನೇ ಕಫ , ವಾತ ಹಾಗೂ ಪಿತ್ತ ಎಂದು ಕರೆಯಲಾಗುತ್ತದೆ.

1. ಕಫ ದೋಷ : ಕಫವು ಭೂಮಿ ಹಾಗೂ ನೀರಿಗೆ ಸಂಬಂಧಿಸಿದೆ. ಇದು ಸ್ಥೂಲ ದೇಹಕ್ಕೆ ಕಾರಣವಾಗುತ್ತದೆ. ನಾವು ಭೌತಿಕವಾಗಿ ಸ್ಪರ್ಶಿಸಲು ಸಾಧ್ಯವಾಗುವಂತಹ ಎಂದರೆ ನಮ್ಮ ಮೂಳೆಗಳು, ಸ್ನಾಯುಗಳು, ಹಲ್ಲುಗಳು, ಉಗುರು ಹಾಗೂ ಕೂದಲು ಇವೆಲ್ಲ ಕಫಕ್ಕೆ ಸಂಬಂಧಿಸಿದೆ. ಕಫವು ಶಕ್ತಿ ಹಾಗೂ ಭಾವನಾತ್ಮಕ ಬೆಂಬಲ ನೀಡುತ್ತದೆ. ಆದರೆ ಕಫದಲ್ಲಿನ ಅಸಮತೋಲನವು ಆಲಸ್ಯ, ತೂಕ ಏರಿಕೆಗೆ ಕಾರಣವಾಗುತ್ತದೆ.

ಕಫ ದೋಷವನ್ನು ಹೊಂದಿರುವವರು ಎಂದಿಗೂ ಸಕ್ರಿಯರಾಗಿರಬೇಕು. ನಿಮ್ಮ ದಿನನಿತ್ಯದ ದಿನಚರಿಯಲ್ಲಿ ಕಾರ್ಡಿಯೋ, ಜಾಗಿಂಗ್, ವಾಕಿಂಗ್, ಸೈಕ್ಲಿಂಗ್ ಸೇರಿದಂತೆ ವಿವಿಧ ವ್ಯಾಯಾಮಗಳಲ್ಲಿ ಭಾಗಿಯಾಗಬೇಕು. ಅಲ್ಲದೇ ನೀವು ಲಘು ಅಹಾರ ಸೇವನೆ ಮಾಡಬೇಕು. ತರಕಾರಿಗಳು , ಮೆಣಸು, ಮಸಾಲೆಗಳು, ದೊಡ್ಡ ಮೆಣಸು, ಬೆಳ್ಳುಳ್ಳಿ, ಈರುಳ್ಳಿ, ದಾಲ್ಚಿನ್ನಿ, ಏಲಕ್ಕಿ, ಲವಂಗ, ಶುಂಠಿ, ಮೆಣಸು, ಸೇಬು ಸೇರಿದಂತೆ ವಿವಿಧ ಹಣ್ಣುಗಳನ್ನು ಸೇವನೆ ಮಾಡಿ. ದ್ವಿದಳ ಧಾನ್ಯಗಳನ್ನೂ ನೀವು ಸೇವಿಸಬಹುದು.

ಪ್ರಬಲವಾದ ಕಫ ದೋಷ ಹೊಂದಿರುವ ಜನರು 14-16 ಗಂಟೆಗಳ ಮಧ್ಯಂತರ ಉಪವಾಸದಲ್ಲಿ ತೊಡಗಬೇಕು. ಕಫ ಹೆಚ್ಚಿಸುವ ಎಣ್ಣೆಯಂಶಯುಕ್ತ ಆಹಾರಗಳನ್ನು ಸೇವಿಸಬಾರದು. ಆಲಸ್ಯವನ್ನು ತಡೆಗಟ್ಟಲು ಯತ್ನಿಸಿ.

2. ಪಿತ್ತ ದೋಷ : ಪಿತ್ತ ದೋಷವು ಬೆಂಕಿ ಹಾಗೂ ನೀರಿನೊಂದಿಗೆ ಸಂಬಂಧ ಹೊಂದಿರುತ್ತದೆ. ಇದು ದೇಹದಲ್ಲಿ ಜೀರ್ಣಕ್ರಿಯೆ ಹಾಗೂ ಚಯಾಪಚಯದ ಮೇಲೆ ಪರಿಣಾಮ ಬೀರುತ್ತದೆ. ದೇಹದ ಉಷ್ಣತೆ, ಬುದ್ಧಿವಂತಿಕೆ ಹಾಗೂ ಧೈರ್ಯವು ಪಿತ್ತಕ್ಕೆ ಸಂಬಂಧಿಸಿದೆ. ಪಿತ್ತ ದೋಷದಿಂದಾಗಿ ಕೋಪ, ಉರಿಯೂತ, ತೂಕ ಹೆಚ್ಚಳ, ಎದೆಯುರಿ ಹಾಗೂ ಚರ್ಮದ ಸಮಸ್ಯೆಗಳು ಉಂಟಾಗುತ್ತದೆ.

ಪಿತ್ತ ದೋಷದಿಂದ ಪಾರಾಗಲು ನೀವು ಸಿಹಿ ಹಾಗೂ ಕಹಿ ಅಹಾರವನ್ನು ಸಮತೋಲಿತವಾಗಿ ಸೇವನೆ ಮಾಡಬೇಕು. ನೀವು ಸೌತೆಕಾಯಿ, ಎಲೆಗಳ ಸೊಪ್ಪು ಹಾಗೂ ಸಿಹಿ ಹಣ್ಣುಗಳಂತಹ ಆಹಾರವನ್ನು ಸೇವನೆ ಮಾಡಬಹುದು. ನಿಮ್ಮ ಆಹಾರದಲ್ಲಿ ಮಸಾಲೆಯುಕ್ತ, ಎಣ್ಣೆಯುಕ್ತ, ಹುಳಿ , ಉಪ್ಪು ಹಾಗೂ ಖಾರ ಅತಿಯಾಗಿರುವ ಆಹಾರವನ್ನು ತ್ಯಜಿಸುವುದು ಉತ್ತಮ. ಇವುಗಳು ಪಿತ್ತ ದೋಷವನ್ನು ಇನ್ನಷ್ಟು ಹೆಚ್ಚಿಸುತ್ತವೆ.

ಯೋಗ, ಈಜು , ವಾಕಿಂಗ್ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವ ಮೂಲಕ ಪಿತ್ತದ ಸಮತೋಲನವನ್ನು ಕಾಯ್ಸುಕೊಳ್ಳಬಹುದಾಗಿದೆ. ಅತಿಯಾದ ಶಾಖ ಹಾಗೂ ಸೂರ್ಯನ ಕಿರಣಗಳಿಂದ ಅಂತರ ಕಾಯ್ದುಕೊಳ್ಳಿ. ಕೆಲಸದ ನಡುವೆ ವಿಶ್ರಾಂತಿ ಪಡೆಯುವುದನ್ನೂ ಮರೆಯಬೇಡಿ.

3. ವಾತ ದೋಷ : ವಾತ ದೋಷವು ಆಕಾಶಕ್ಕೆ ಸಂಬಂಧಿಸಿದೆ. ಉಸಿರಾಟ, ಸ್ನಾಯು , ರಕ್ತ ಪರಿಚಲನೆ ಹಾಗೂ ಹೊಟ್ಟೆಯಿಂದ ಕರುಳಿನವರೆಗೆ ಆಹಾರದ ಚಲನೆ ಇವೆಲ್ಲವೂ ವಾತಕ್ಕೆ ಸಂಬಂಧಿಸಿದೆ. ವಾತವು ಸೃಜನಶೀಲತೆ, ಚೈತನ್ಯ ಹಾಗೂ ನಮ್ಯತೆಯನ್ನು ಉತ್ತೇಜಿಸುತ್ತದೆ. ವಾತನದಲ್ಲಿ ಅಸಮತೋಲನವು ಆತಂಕ, ನಿದ್ರಾಹೀನತೆ, ಒಣ ಚರ್ಮ ಹಾಗೂ ಜೀರ್ಣಾಂಗ ವ್ಯವಸ್ಥೆಗೆ ತೊಂದರೆಯನ್ನುಂಟು ಮಾಡುತ್ತದೆ.

ವಾತ ದೋಷದ ಸಮಸ್ಯೆಯಿಂದ ಪಾರಾಗಲು ಬೇಯಿಸಿದ ಧಾನ್ಯಗಳು, ತರಕಾರಿಗಳಿಂದ ತಯಾರಿಸಿದ ಸೂಪ್‌ಗಳು ಮತ್ತು ವಿವಿಧ ಪೌಷ್ಠಿಕ ಅಹಾರ ಸೇವನೆ ಮಾಡಬೇಕು. ದಾಲ್ಚಿನ್ನಿ, ಏಲಕ್ಕಿ, ಲವಂಗ , ಶುಂಠಿ ಮುಂತಾದ ಮಸಾಲೆಗಳನ್ನು ನಿಮ್ಮ ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಿ. ನಿಮ್ಮ ದಿನನಿತ್ಯದ ದಿನಚರಿಯಲ್ಲಿ ಯೋಗ ಧ್ಯಾನ ಹಾಗೂ ವ್ಯಾಯಾಮವನ್ನು ಸೇರಿಸಿಕೊಳ್ಳಿ. ದಿನವಿಡೀ ಬೆಚ್ಚನೆಯ ದ್ರವವಂಶಯುಕ್ತ ಪದಾರ್ಥಗಳನ್ನು ಸೇವನೆ ಮಾಡಿ. ಸರಿಯಾದ ಊಟ ಸೇವನೆ ಹಾಗೂ ನಿದ್ರಾ ವೇಳಾಪಟ್ಟಿಯನ್ನು ಸರಿಯಾಗಿ ಕಾಯ್ದುಕೊಳ್ಳಿ.

ಆರ್ಯುವೇದದಲ್ಲಿ ಈ ದೋಷಗಳಿಗೆ ತುಂಬಾನೇ ಮಹತ್ವವಿದ್ದು ಈ ಸಮತೋಲನವನ್ನು ಕಾಪಾಡಿಕೊಳ್ಳುವ ಮೂಲಕ ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ. ಹೀಗಾಗಿ ನಿಮ್ಮ ಕಫ, ವಾತ ಮತ್ತು ಪಿತ್ತವನ್ನು ಎಂದಿಗೂ ಸಮತೋಲನದಲ್ಲಿ ಇಟ್ಟುಕೊಳ್ಳುವುದು ಮುಖ್ಯವಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ