logo
ಕನ್ನಡ ಸುದ್ದಿ  /  ಜೀವನಶೈಲಿ  /  Skin Care: ಅಲರ್ಜಿ, ರಿಂಗ್‌ವರ್ಮ್‌, ದದ್ದು ಮಳೆಗಾಲದಲ್ಲಿ ಕಾಡುವ ಚರ್ಮದ ಸಮಸ್ಯೆಗಳ ನಿವಾರಣೆಗೆ ಇಲ್ಲಿದೆ ಸರಳ ಪರಿಹಾರ

Skin Care: ಅಲರ್ಜಿ, ರಿಂಗ್‌ವರ್ಮ್‌, ದದ್ದು ಮಳೆಗಾಲದಲ್ಲಿ ಕಾಡುವ ಚರ್ಮದ ಸಮಸ್ಯೆಗಳ ನಿವಾರಣೆಗೆ ಇಲ್ಲಿದೆ ಸರಳ ಪರಿಹಾರ

Reshma HT Kannada

Jun 16, 2024 03:50 PM IST

google News

ಅಲರ್ಜಿ, ರಿಂಗ್‌ವರ್ಮ್‌, ದದ್ದು ಮಳೆಗಾಲದಲ್ಲಿ ಕಾಡುವ ಸಕಲ ಚರ್ಮದ ಸಮಸ್ಯೆಗಳ ನಿವಾರಣೆಗೆ ಇಲ್ಲಿದೆ ಸರಳ ಪರಿಹಾರ

    • ಮಳೆಗಾಲ ಶುರುವಾದಾಕ್ಷಣ ಒಂದಿಲ್ಲೊಂದು ಚರ್ಮದ ಸಮಸ್ಯೆ ಕಾಡುವುದು ಸಹಜ. ಕೊಳಚೆ ನೀರು ಚರ್ಮದ ಅಲರ್ಜಿಗೆ ಕಾರಣವಾಗುತ್ತದೆ. ಇದರಿಂದ ಚರ್ಮದಲ್ಲಿ ತುರಿಕೆ, ಕಜ್ಜಿ, ದದ್ದು ಮುಂತಾದ ಸಮಸ್ಯೆಗಳು ಕಾಣಿಸಬಹುದು. ಇದರ ಪರಿಹಾರಕ್ಕೆ ಮನೆಯಲ್ಲೇ ಕೆಲವು ಸರಳ ಪರಿಹಾರ ಕಂಡುಕೊಳ್ಳಬಹುದು.
ಅಲರ್ಜಿ, ರಿಂಗ್‌ವರ್ಮ್‌, ದದ್ದು ಮಳೆಗಾಲದಲ್ಲಿ ಕಾಡುವ ಸಕಲ ಚರ್ಮದ ಸಮಸ್ಯೆಗಳ ನಿವಾರಣೆಗೆ ಇಲ್ಲಿದೆ ಸರಳ ಪರಿಹಾರ
ಅಲರ್ಜಿ, ರಿಂಗ್‌ವರ್ಮ್‌, ದದ್ದು ಮಳೆಗಾಲದಲ್ಲಿ ಕಾಡುವ ಸಕಲ ಚರ್ಮದ ಸಮಸ್ಯೆಗಳ ನಿವಾರಣೆಗೆ ಇಲ್ಲಿದೆ ಸರಳ ಪರಿಹಾರ

ಬಿಸಿಲ ಬೇಗೆಯಿಂದ ಕಾದಿರುವ ನಮಗೆ ಮಳೆಗಾಲ ಎಂದರೆ ಏನೋ ಒಂಥರ ಖುಷಿ ಸಿಗುವುದು ಖಂಡಿತ. ಆದರೆ ಮಳೆಗಾಲದಲ್ಲಿ ಬೇಡವೆಂದರೂ ಚರ್ಮದ ಸಮಸ್ಯೆಗಳು ಕಾಡುತ್ತವೆ. ಕೊಳಚೆ ನೀರು ಇನ್ನಿಲ್ಲದ ಚರ್ಮದ ಸಮಸ್ಯೆಗಳನ್ನು ತಂದೊಡುತ್ತದೆ. ಇದರಿಂದ ತುರಿಕೆ, ದದ್ದು, ಕಜ್ಜಿ, ರಿಂಗ್‌ವರ್ಮ್‌ ಮುಂತಾದ ಸಮಸ್ಯೆಗಳು ಕಾಣಿಸಬಹುದು. ವಾತಾವರಣದಲ್ಲಿ ಆರ್ದ್ರತೆಯ ಮಟ್ಟ ಹೆಚ್ಚಿರುವ ಕಾರಣ ಶಿಲೀಂಧ್ರಗಳು ಮತ್ತು ಬ್ಯಾಕ್ಟೀರಿಯಾಗಳು ಅಭಿವೃದ್ಧಿ ಹೊಂದಲು ಸಹಾಯವಾಗುತ್ತದೆ. ಇದರ ಪರಿಣಾಮವಾಗಿ ರಿಂಗ್‌ವರ್ಮ್‌ ಮತ್ತು ಕ್ಯಾಂಡಿಡಿಯಾಸಿಸ್‌ನಂತಹ ಶಿಲೀಂಧ್ರಗಳ ಸೋಂಕುಗಳು ಉಂಟಾಗುತ್ತವೆ.

ಇದರೊಂದಿಗೆ ಬೆವರು ಹರಿಯದೇ ಇರುವುದು ಹಾಗೂ ಅತಿಯಾದ ಬೆವರು ಮುಳ್ಳು ಶಾಖದ ದದ್ದುಗಳಿಗೆ ಕಾರಣವಾಗಬಹುದು. ಇದರೊಂದಿಗೆ ಮಳೆಗಾಲದಲ್ಲಿ ಸೊಳ್ಳೆಗಳ ಕಡಿತವೂ ಹೆಚ್ಚು. ಚರ್ಮವು ಶುಷ್ಕ ಮತ್ತು ಸೂಕ್ಷ್ಮವಾಗಬಹುದು. ಇದು ಎಸ್ಜಿಮಾ ಮತ್ತು ಇತರ ಉರಿಯೂತದ ಚರ್ಮದ ಪರಿಸ್ಥಿತಿಗಳ ಉಲ್ಬಣಕ್ಕೆ ಒಳಗಾಗುತ್ತದೆ. ಆದರೆ ಈ ಎಲ್ಲಾ ಸಮಸ್ಯೆಗಳಿಗೂ ಮನೆಮದ್ದುಗಳಿಂದಲೇ ಪರಿಹಾರ ಕಂಡುಕೊಳ್ಳಬಹುದು. ಅಂತಹ ಅದ್ಭುತ ಮನೆಮದ್ದುಗಳು ಇಲ್ಲಿವೆ.

ಮಳೆಗಾಲದಲ್ಲಿ ಚರ್ಮದ ಸಮಸ್ಯೆ ನಿವಾರಿಸುವ ಮನೆಮದ್ದುಗಳು

ಬೇವು

ಬೇವು ಪ್ರಬಲವಾದ ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿದೆ, ಇದು ವಿವಿಧ ಚರ್ಮದ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರವಾಗಿದೆ. ಬೇವಿಯ ಎಣ್ಣೆಯ ಬಳಕೆಯಿಂದ ವಯಸ್ಸಾದಂತೆ ಕಾಣುವ ಲಕ್ಷಣಗಳನ್ನು ಕಡಿಮೆ ಮಾಡಬಹುದು. ಇದು ಚರ್ಮ ಒಣಗುವುದು ಮತ್ತು ಸುಕ್ಕುಗಟ್ಟುವುದನ್ನು ತಡೆಯುತ್ತದೆ. ಇದರೊಂದಿಗೆ ಶಸ್ತ್ರಚಿಕಿತ್ಸೆಯ ನಂತರದ ಗಾಯದ ನಿವಾರಣೆಗೂ ಇದು ಉತ್ತಮ ಔಷಧಿ.

ಆಲೊವೆರಾ ಜೆಲ್‌

ಆಲೊವೆರಾ ಜೆಲ್‌ ಚರ್ಮವನ್ನು ತಂಪಾಗಿಸುತ್ತದೆ ಹಾಗೂ ಇದು ಚರ್ಮದ ಸಮಸ್ಯೆಗಳನ್ನು ನಿವಾರಿಸುತ್ತದೆ. ಲೋಳೆಸರದ ಎಲೆಗಳಿಂದ ಜೆಲ್‌ ತೆಗೆದು ಅದನ್ನು ದದ್ದುಗಳಿರುವ ಜಾಗಕ್ಕೆ ಹಚ್ಚಬಹುದು. ಇದು ಕಿರಿಕಿರಿ ಉಂಟು ಮಾಡುವ ಚರ್ಮವನ್ನು ಶಾಂತಗೊಳಿಸುತ್ತದೆ ಮತ್ತು ಇದು ಚರ್ಮದ ಸಮಸ್ಯೆಗಳನ್ನು ಬೇಗನೆ ಗುಣಪಡಿಸುತ್ತದೆ.

ಅರಿಶಿನ

ಅರಿಶಿನದ ಉರಿಯೂತದ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಚರ್ಮದ ದದ್ದುಗಳಿಗೆ ಚಿಕಿತ್ಸೆ ನೀಡಲು ಅತ್ಯುತ್ತಮ ಆಯ್ಕೆಯಾಗಿದೆ. ಅರಿಶಿನ ಪುಡಿಯೊಂದಿಗೆ ನೀರನ್ನು ಬೆರೆಸಿ. ನಿಮಗೆ ಸಮಸ್ಯೆ ಇರುವ ಜಾಗಕ್ಕೆ ಹಚ್ಚಿ. ಅದನ್ನು ಸ್ವಲ್ಪ ಹೊತ್ತು ಒಣಗಲು ಬಿಟ್ಟು ನಂತರ ತೊಳೆಯಬೇಕು.

ತೆಂಗಿನೆಣ್ಣೆ

ಮಳೆಗಾಲದಲ್ಲಿ ಎದುರಾಗುವ ಹಲವು ಸಮಸ್ಯೆಗಳಿಗೆ ತೆಂಗಿನೆಣ್ಣೆ ಮದ್ದು. ತೆಂಗಿನ ಎಣ್ಣೆಯು ನೈಸರ್ಗಿಕ ಮಾಯಿಶ್ಚರೈಸರ್ ಆಗಿದ್ದು ಅದು ಶುಷ್ಕ ಮತ್ತು ಚರ್ಮದ ತುರಿಕೆಯನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ತೈಲದ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಶಿಲೀಂಧ್ರಗಳ ಸೋಂಕನ್ನು ತಡೆಗಟ್ಟುವಲ್ಲಿ ಸಹ ಸಹಾಯ ಮಾಡುತ್ತದೆ. ಚರ್ಮಕ್ಕೆ ದದ್ದು ಉಂಟಾಗಲು ಬೆಚ್ಚಗಿನ ತೆಂಗಿನೆಣ್ಣೆಯನ್ನು ಹಚ್ಚಬಹುದು.

ಓಟ್‌ಮೀಲ್‌

ಓಟ್‌ಮೀಲ್‌ ಚರ್ಮಕ್ಕೆ ಹಿತವಾದ ಅನುಭವವನ್ನು ನೀಡುತ್ತದೆ. ಇದು ಚರ್ಮದ ಕಿರಿಕಿರಿ ತುರಿಕೆಯನ್ನು ನಿವಾರಿಸುತ್ತದೆ. ಓಟ್‌ಮೀಲ್‌ ಅನ್ನು ನೆನೆಸಿ ನುಣ್ಣಗೆ ಪೇಸ್ಟ್‌ನಂತೆ ರುಬ್ಬಿ ಚರ್ಮದ ಅಲರ್ಜಿ ಉಂಟಾಗಿರುವ ಜಾಗಕ್ಕೆ ಹಚ್ಚಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಟೀ ಟ್ರಿ ಆಯಿಲ್‌

ಇದು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ. ಇದು ಮೊಡವೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಚಿಕಿತ್ಸೆ ನೀಡುವಲ್ಲಿ ಪರಿಣಾಮಕಾರಿಯಾಗಿದೆ. ಇದನ್ನು ತೆಂಗಿನೆಣ್ಣೆ ಅಥವಾ ಆಲಿವ್‌ ಎಣ್ಣೆಯೊಂದಿಗೆ ಮಿಶ್ರಣ ಮಾಡಿ, ಅಲರ್ಜಿ ಉಂಟಾಗಿರುವ ಜಾಗಕ್ಕೆ ಹಚ್ಚಿ. ಇದು ಶಿಲೀಂಧ್ರಗಳ ಸೋಂಕನ್ನು ಎದುರಿಸಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮಳೆಗಾಲದಲ್ಲಿ ಚರ್ಮದ ಸಮಸ್ಯೆಗಳನ್ನು ನಿವಾರಿಸಲು ಈ ಎಲ್ಲಾ ಮನೆಮದ್ದಿನ ಜೊತೆಗೆ ಉತ್ತಮ ನೈರ್ಮಲ್ಯ ಕಾಪಾಡಿಕೊಳ್ಳುವುದು, ಬಿಗಿಯಾದ ಅಥವಾ ಒದ್ದೆಯಾದ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸುವುದು ಅತ್ಯಗತ್ಯ ಎನ್ನುವುದನ್ನು ಮರೆಯಬೇಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ