logo
ಕನ್ನಡ ಸುದ್ದಿ  /  ಜೀವನಶೈಲಿ  /  Silent Heart Attack: ಭಾರತದಲ್ಲಿ ಹೆಚ್ಚುತ್ತಿದೆ ಸೈಲೆಂಟ್‌ ಹಾರ್ಟ್‌ ಅಟ್ಯಾಕ್‌ ಸಮಸ್ಯೆ; ಏನು ಹಾಗಂದ್ರೆ, ಕಾರಣಗಳೇನು?

Silent Heart Attack: ಭಾರತದಲ್ಲಿ ಹೆಚ್ಚುತ್ತಿದೆ ಸೈಲೆಂಟ್‌ ಹಾರ್ಟ್‌ ಅಟ್ಯಾಕ್‌ ಸಮಸ್ಯೆ; ಏನು ಹಾಗಂದ್ರೆ, ಕಾರಣಗಳೇನು?

HT Kannada Desk HT Kannada

Dec 07, 2023 11:06 PM IST

google News

ಸೈಲೆಂಟ್‌ ಹಾರ್ಟ್‌ ಅಟ್ಯಾಕ್‌ಗೆ ಕಾರಣಗಳು

  • Silent Heart Attack:  ಪಾಶ್ಚಿಮಾತ್ಯರಿಗೆ ಹೋಲಿಸಿದರೆ ಭಾರತೀಯರು/ದಕ್ಷಿಣ ಏಷ್ಯಾದವರು ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು ಎಂದು ಇಂಡಿಯನ್ ಹಾರ್ಟ್ ಅಸೋಸಿಯೇಷನ್ ಎಂಬ ಎನ್‌ಜಿಒ ವರದಿ ಮಾಡಿದೆ. ಸೈಲೆಂಟ್‌ ಹಾರ್ಟ್‌ ಅಟ್ಯಾಕ್‌ ಹೃದಯಾಘಾತದಂತೆ ಬಹಳ ಅಪಾಯಕಾರಿ. ಸಾಮಾನ್ಯ ಹೃದಯಾಘಾತದಂತೆ ಇವು ಸ್ಪಷ್ಟವಾದ ಲಕ್ಷಣಗಳೊಂದಿಗೆ ಬರುವುದಿಲ್ಲ.

ಸೈಲೆಂಟ್‌ ಹಾರ್ಟ್‌ ಅಟ್ಯಾಕ್‌ಗೆ ಕಾರಣಗಳು
ಸೈಲೆಂಟ್‌ ಹಾರ್ಟ್‌ ಅಟ್ಯಾಕ್‌ಗೆ ಕಾರಣಗಳು (PC: Pixabay)

Silent Heart Attack: 2023 ರಲ್ಲಿ ಭಾರತದಲ್ಲಿ ಹೃದಯ ಸಂಬಂಧಿ ಸಮಸ್ಯೆಗಳ ಸಂಖ್ಯೆ ಕಳೆದ ವರ್ಷಕ್ಕಿಂತ ಹೆಚ್ಚು ವರದಿಯಾಗಿದೆ. ಕೆಲವರಿಗೆ ಹೃದಯಾಘಾತ ಮೊದಲೇ ಮುನ್ಸೂಚನೆ ನೀಡಿದರೆ, ಕೆಲವರಿಗೆ ಯಾವುದೇ ಮುನ್ಸೂಚನೆ ಇಲ್ಲದೆ ಹೃದಯಾಘಾತವಾಗುತ್ತಿದೆ. ಇದನ್ನೇ ಸೈಲೆಂಟ್‌ ಹಾರ್ಟ್‌ ಅಟ್ಯಾಕ್‌ ಎಂದು ಕರೆಯಲಾಗುತ್ತದೆ. ಇದನ್ನು ಸೈಲೆಂಟ್‌ ಕಿಲ್ಲರ್‌ ಎಂದೂ ಕರೆಯಲಾಗುತ್ತದೆ.

ಚಳಿಗಾಲ ಆರಂಭವಾಗಿದೆ. ಈ ಸಮಯದಲ್ಲಿ ಸೈಲೆಂಟ್‌ ಹಾರ್ಟ್‌ ಅಟ್ಯಾಕ್‌ ಸೇರಿದಂತೆ ಹೃದಯ ರಕ್ತನಾಳದ ಕಾಯಿಲೆಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವುದು ಹೆಚ್ಚು ಅಗತ್ಯವಾಗಿದೆ. ಪಾಶ್ಚಿಮಾತ್ಯರಿಗೆ ಹೋಲಿಸಿದರೆ ಭಾರತೀಯರು/ದಕ್ಷಿಣ ಏಷ್ಯಾದವರು ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು ಎಂದು ಇಂಡಿಯನ್ ಹಾರ್ಟ್ ಅಸೋಸಿಯೇಷನ್ ಎಂಬ ಎನ್‌ಜಿಒ ವರದಿ ಮಾಡಿದೆ. ಸೈಲೆಂಟ್‌ ಹಾರ್ಟ್‌ ಅಟ್ಯಾಕ್‌ ಹೃದಯಾಘಾತದಂತೆ ಬಹಳ ಅಪಾಯಕಾರಿ. ಸಾಮಾನ್ಯ ಹೃದಯಾಘಾತದಂತೆ ಇವು ಸ್ಪಷ್ಟವಾದ ಲಕ್ಷಣಗಳೊಂದಿಗೆ ಬರುವುದಿಲ್ಲ. ಸೈಲೆಂಟ್‌ ಹಾರ್ಟ್‌ ಅಟ್ಯಾಕ್‌ ಆಗಲು 5 ಪ್ರಮುಖ ಕಾರಣಗಳನ್ನು ಹೀಗೆ ಪಟ್ಟಿ ಮಾಡಬಹುದು.

ಅಧಿಕ ರಕ್ತದೊತ್ತಡ

ಅಧಿಕ ರಕ್ತದೊತ್ತಡದಿಂದ ಕೂಡಾ ಸೈಲೆಂಟ್‌ ಹಾರ್ಟ್‌ ಅಟ್ಯಾಕ್‌ ಹೆಚ್ಚು ಕಾಡುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೈಲೆಂಟ್‌ ಹಾರ್ಟ್‌ ಅಟ್ಯಾಕ್‌ಗೆ ಒಳಗಾಗುವ ಲಕ್ಷಣಗಳು ಹೆಚ್ಚು. ಅಧಿಕ ರಕ್ತದೊತ್ತಡವು ನಿಮ್ಮ ಹೃದಯ, ಅಪಧಮನಿಗಳು ಮತ್ತು ಇತರ ಪ್ರಮುಖ ಅಂಗಗಳ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ, ಇದರಿಂದಾಗಿ ನಿಮಗೆ ಸೈಲೆಂಟ್‌ ಹಾರ್ಟ್‌ ಅಟ್ಯಾಕ್‌ ಸಮಸ್ಯೆ ಆಗುವ ಸಾಧ್ಯತೆ ಹೆಚ್ಚು.

ಅಧಿಕ ತೂಕ

ಹೆಚ್ಚು ತೂಕ ಹೊಂದಿರುವ ವ್ಯಕ್ತಿಗಳು ಸಾಮಾನ್ಯರಿಗೆ ಹೋಲಿಸಿದರೆ ಹೃದಯಾಘಾತವನ್ನು ಅನುಭವಿಸುವ ಸಾಧ್ಯತೆ ನಾಲ್ಕು ಪಟ್ಟು ಹೆಚ್ಚು ಎನ್ನಬಹುದು. ಅಧಿಕ ತೂಕದಿಂದ ಹೃದಯದ ಮೇಲೆ ಒತ್ತಡ ಹೆಚ್ಚಾಗುವ ಕಾರಣ ಈ ರೀತಿಯ ಹೃದಯಾಘಾತ ಸಂಭವಿಸುತ್ತದೆ. ಆದ್ದರಿಂದ ತೂಕ ನಿರ್ವಹಣೆಯತ್ತ ಗಮನ ಕೊಡಿ.

ಧೂಮಪಾನ

ಸಾಮಾನ್ಯರಿಗಿಂತ ಧೂಮಪಾನ ಮಾಡುವವರಲ್ಲಿ ಕೂಡಾ ಹೃದಯಾಘಾತ ಆಗುವ ಸಾಧ್ಯತೆ ಹೆಚ್ಚಾಗಿದೆ. ಧೂಮಪಾನ ಮಾಡುವುದರಿಂದ ಹೃದಯದ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ. ತಂಬಾಕು ಹೊಗೆಯಲ್ಲಿರುವ ವಿಷಕಾರಿ ಅಂಶಗಳು ರಕ್ತನಾಳಗಳನ್ನು ಹಾನಿಗೊಳಿಸುತ್ತವೆ, ಪ್ಲೇಕ್ ರಚನೆಯ ಸಾಧ್ಯತೆಯನ್ನು ಹೆಚ್ಚಿಸುತ್ತವೆ ಮತ್ತು ಸದ್ದಿಲ್ಲದ ಹೃದಯಾಘಾತಕ್ಕೆ ಅನುಕೂಲಕರವಾದ ಪರಿಸ್ಥಿತಿಯ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ.

ವಯಸ್ಸು

ದೇಹಕ್ಕೆ ವಯಸ್ಸಾದಂತೆ, ಹೃದಯ ಸಂಬಂಧಿ ತೊಡಕುಗಳಿಗೆ ಒಳಗಾಗುವ ಸಾಧ್ಯತೆಯು ಹೆಚ್ಚಾಗುತ್ತದೆ. ಇದು ಹೃದಯದ ಆರೋಗ್ಯಕ್ಕೆ ಪೂರ್ವಭಾವಿ ಕ್ರಮಗಳ ಅಗತ್ಯವನ್ನು ಒತ್ತಿ ಹೇಳುತ್ತದೆ.

ಹೃದ್ರೋಗದ ಇತಿಹಾಸ

ನಿಮ್ಮ ಕುಟುಂಬದದಲ್ಲಿ ಯಾರಿಗಾದರೂ ಹೃದಯಸಂಬಂಧಿ ಸಮಸ್ಯೆ ಇದ್ದರೆ ನಿಮಗೂ ಕೂಡಾ ಅದು ಉಂಟಾಗಬಹುದು. ಈ ರೀತಿ ಅನುವಂಶೀಯತೆ ಮೇಲೆ ಕೂಡಾ ಸೈಲೆಂಟ್‌ ಹಾರ್ಟ್‌ ಅಟ್ಯಾಕ್‌ ಅಪಾಯ ಹೆಚ್ಚಾಗುತ್ತದೆ. ಇದು ಹೃದಯದ ಆರೋಗ್ಯವನ್ನು ಕಾಪಾಡಲು ಮತ್ತು ಪೋಷಿಸಲು ನಿಯಮಿತ ಮೇಲ್ವಿಚಾರಣೆ ಮತ್ತು ಪೂರ್ವಭಾವಿ ಕ್ರಮಗಳ ನಿರ್ಣಾಯಕ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ.

ಸೈಲೆಂಟ್‌ ಹಾರ್ಟ್‌ ಅಟ್ಯಾಕ್‌ಗೆ ನಿಗದಿತ ರೋಗಲಕ್ಷಣಗಳು ಇಲ್ಲದಿದ್ದರೂ ಜ್ವರ, ಸುಸ್ತು, ಅಜೀರ್ಣ, ಉಸಿರಾಟದ ತೊಂದರೆ, ಎದೆ ನೋವು, ವಾಕರಿಕೆಯಂಥ ಸಮಸ್ಯೆ ಇದ್ದಲ್ಲಿ ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ಸಂಪರ್ಕಿಸಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ