logo
ಕನ್ನಡ ಸುದ್ದಿ  /  ಜೀವನಶೈಲಿ  /  Health Tips: ಕಣ್ಣಿನ ದೃಷ್ಟಿ ಸುಧಾರಿಸಲು ಸಹಾಯ ಮಾಡುವ 5 ಸೂಪರ್‌ ಫುಡ್‌ಗಳಿವು

Health Tips: ಕಣ್ಣಿನ ದೃಷ್ಟಿ ಸುಧಾರಿಸಲು ಸಹಾಯ ಮಾಡುವ 5 ಸೂಪರ್‌ ಫುಡ್‌ಗಳಿವು

HT Kannada Desk HT Kannada

Jan 09, 2024 07:30 AM IST

google News

ಕಣ್ಣಿನ ಆರೋಗ್ಯ ವೃದ್ಧಿಸುವ ಸೂಪರ್‌ ಫುಡ್‌ಗಳು

  • Health Tips: ದಿನ ಬೆಳಗಾದರೆ ನಾವು ಲ್ಯಾಪ್‌ಟಾಪ್‌, ಮೊಬೈಲನ್ನು ಹೆಚ್ಚು ಸಮಯ ಬಳಸುತ್ತೇವೆ. ಇದನ್ನು ಬಳಸುವ ಭರದಲ್ಲಿ ನಮ್ಮ ಕಣ್ಣಿನ ಆರೋಗ್ಯದತ್ತ ಗಮನ ನೀಡುವುದಿಲ್ಲ. ಆದ್ದರಿಂದ ಕಣ್ಣಿನ ಆರೋಗ್ಯ ಸುಧಾರಿಸಲು ಸಹಾಯ ಮಾಡುವ ಸೂಪರ್‌ ಫುಡ್‌ಗಳನ್ನು ಪ್ರತಿದಿನದ ಜೀವನದಲ್ಲಿ ಅಳವಡಿಸಿಕೊಳ್ಳುವುದು ಬಹಳ ಮುಖ್ಯ. 

ಕಣ್ಣಿನ ಆರೋಗ್ಯ ವೃದ್ಧಿಸುವ ಸೂಪರ್‌ ಫುಡ್‌ಗಳು
ಕಣ್ಣಿನ ಆರೋಗ್ಯ ವೃದ್ಧಿಸುವ ಸೂಪರ್‌ ಫುಡ್‌ಗಳು (PC: Freepik)

Health Tips: ಕಣ್ಣಿನ ಆರೋಗ್ಯ ಕಾಪಾಡಲು ಕೆಲವೊಂದು ಸೂಪರ್‌ಫುಡ್‌ಗಳು ಸಹಾಯ ಮಾಡುತ್ತದೆ. ಹಾನಿಕಾರಕ ಯುವಿ ಕಿರಣಗಳಿಂದ ಕಣ್ಣುಗಳನ್ನು ರಕ್ಷಿಸಲು, ಕಣ್ಣಿನ ಪೊರೆ ಮತ್ತು ಮ್ಯಾಕ್ಯುಲರ್ ಡಿಜೆನರೇಶನ್ ಅಪಾಯವನ್ನು ಕಡಿಮೆ ಮಾಡಲು ಮತ್ತು ಕಣ್ಣುಗಳಲ್ಲಿನ ಅಂಗಾಂಶಗಳು, ರಕ್ತನಾಳಗಳನ್ನು ಆರೋಗ್ಯಕರವಾಗಿಡಲು ಈ ಸೂಪರ್‌ ಫುಡ್‌ಗಳು ನಮಗೆ ಸಹಾಯ ಮಾಡುತ್ತದೆ.

  • ಕಣ್ಣುಗಳ ದೃಷ್ಟಿ ಸುಧಾರಿಸುವಲ್ಲಿ ಕ್ಯಾರೆಟ್‌ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿ ಬೀಟಾ-ಕ್ಯಾರೋಟಿನ್‌ ಸಮೃದ್ಧವಾಗಿದೆ. ಇದರಲ್ಲಿರುವ ವಿಟಮಿನ್ ಎ ರೆಟಿನಾ ಮತ್ತು ಕಣ್ಣಿನ ಇತರ ಭಾಗಗಳು ಸರಾಗವಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ. ಬೀಟಾ-ಕ್ಯಾರೋಟಿನ್‌ನ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಮ್ಯಾಕ್ಯುಲರ್ ಡಿಜೆನರೇಶನ್ ಹಾಗೂ ಕಣ್ಣಿನ ಪೊರೆಗಳಿಂದ ನಮ್ಮನ್ನು ರಕ್ಷಿಸುತ್ತದೆ.
  • ಪಾಲಕ್‌ನಲ್ಲಿರುವ ಪೋಷಕಾಂಶಗಳು ಕಣ್ಣಿನ ಆರೋಗ್ಯವನ್ನು ವೃದ್ಧಿಸುತ್ತದೆ. ಇವು ನೈಸರ್ಗಿಕ ಸನ್‌ಗ್ಲಾಸ್‌ಗಳಂತೆ ಕಾರ್ಯ ನಿರ್ವಹಿಸುತ್ತವೆ, ಬೆಳಕಿನ ಹಾನಿಕಾರಕ ಅಧಿಕ ಶಕ್ತಿಯ ತರಂಗಾಂತರಗಳನ್ನು ಶೋಧಿಸಿ, ಕಣ್ಣುಗಳನ್ನು ಹಾನಿಯಿಂದ ರಕ್ಷಿಸುತ್ತವೆ. ಪಾಲಕ್‌ ಸೊಪ್ಪನ್ನು ನಿಯಮಿತವಾಗಿ ಸೇವಿಸುವುದರಿಂದ ಮ್ಯಾಕ್ಯುಲರ್ ಡಿಜೆನರೇಶನ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  • ಒಮೆಗಾ-3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ಸಾಲ್ಮನ್, ಟ್ಯೂನ ಮತ್ತು ಮ್ಯಾಕೆರೆಲ್‌ನಂತಹ ಮೀನುಗಳು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಒಮೆಗಾ-3 ಗಳು ರೆಟಿನಾದ ಕೋಶಗಳ ರಚನಾತ್ಮಕ ಸಮಗ್ರತೆಗೆ ಕೊಡುಗೆ ನೀಡುತ್ತವೆ ಮತ್ತು ಕಣ್ಣುಗಳು ಡ್ರೈ ಆಗುವುದನ್ನು ತಡೆಯುತ್ತದೆ.
  • ಬಾದಾಮಿ, ಅಗಸೆ ಬೀಜಗಳು ಮತ್ತು ಸೂರ್ಯಕಾಂತಿ ಬೀಜಗಳು ವಿಟಮಿನ್ ಇ ಅತ್ಯುತ್ತಮ ಮೂಲಗಳಾಗಿವೆ. ಇದು ಉತ್ಕರ್ಷಣಾ ನಿರೋಧಕವಾಗಿದ್ದು ಕಣ್ಣಿನಲ್ಲಿರುವ ಜೀವಕೋಶಗಳನ್ನು ಸ್ವತಂತ್ರ ರಾಡಿಕಲ್‌ಗಳಿಂದ ರಕ್ಷಿಸುತ್ತದೆ. ವಯಸ್ಸಿಗೆ ಸಂಬಂಧಿಸಿದ ಕಣ್ಣಿನ ಸಮಸ್ಯೆಗಳನ್ನು ಕೂಡಾ ನಿಯಂತ್ರಿಸುತ್ತದೆ.
  • ನಿಂಬೆಹಣ್ಣು, ಮೂಸಂಬಿ, ಕಿತ್ತಳೆ ಹಣ್ಣಿನಂತ ಸಿಟ್ರಸ್ ಹಣ್ಣುಗಳಲ್ಲಿ ವಿಟಮಿನ್ ಸಿ ಅಧಿಕವಾಗಿದೆ, ಇದು ಮತ್ತೊಂದು ಪ್ರಬಲವಾದ ಉತ್ಕರ್ಷಣ ನಿರೋಧಕವಾಗಿದೆ. ವಿಟಮಿನ್ ಸಿ ಆರೋಗ್ಯದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ ಮತ್ತು ಕಣ್ಣುಗಳು ಸೇರಿದಂತೆ ಇತರ ಅಂಗಾಂಶಗಳನ್ನು ಸರಿಪಡಿಸುತ್ತದೆ. ಇದು ಕಣ್ಣಿನ ಪೊರೆ ಮತ್ತು ಮ್ಯಾಕ್ಯುಲರ್ ಡಿಜೆನರೇಶನ್ ಅನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಹದಿಹರೆಯದ ಹೆಣ್ಣುಮಕ್ಕಳು ಹಣ್ಣಿನ ಜ್ಯೂಸ್‌ ಕುಡಿಯುವುದರಿಂದಾಗುವ ಪ್ರಯೋಜನವೇನು? ಈ ಕುರಿತು ಅಧ್ಯಯನ ಏನು ಹೇಳುತ್ತೆ ನೋಡಿ

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ