Anushka Sharma: 35ರ ಹರೆಯದಲ್ಲೂ ಬಳಕುವ ಬಳ್ಳಿಯಂತಿರುವ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾರ ಫಿಟ್‌ನೆಸ್ ಸೀಕ್ರೆಟ್ ಇಲ್ಲಿದೆ
Feb 18, 2024 04:13 PM IST
35ರ ಹರೆಯದಲ್ಲೂ ಬಳಕುವ ಬಳ್ಳಿಯಂತಿರುವ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾರ ಫಿಟ್‌ನೆಸ್ ಸೀಕ್ರೆಟ್ ಇಲ್ಲಿದೆ
- ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ಫಿಟ್ನೆಸ್ಗೆ ಸಾಕಷ್ಟು ಪ್ರಾಮುಖ್ಯ ನೀಡುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಒಂದು ಮಗುವಿನ ತಾಯಿಯಾದ್ರೂ ಬಳಕುವ ಬಳ್ಳಿಯಂತಿರುವ ಅನುಷ್ಕಾ ಶರ್ಮಾರ ಫಿಟ್‌ನೆಟ್ ಸಿಕ್ರೇಟ್ ಏನು ಎನ್ನುವವರಿಗೆ ಇಲ್ಲಿದೆ ಉತ್ತರ.
35 ವರ್ಷದ ಬಾಲಿವುಡ್ನ ಸ್ಟಾರ್ ನಟಿ ಅನುಷ್ಕಾ ಶರ್ಮಾ ಮೂರು ವರ್ಷದ ಮಗುವಿನ ತಾಯಿ ಕೂಡ. ಮಗುವಿಗೆ ಜನ್ಮ ನೀಡಿದ ಬಳಿಕ ಮಹಿಳೆಯರ ದೇಹ ಬದಲಾಗುತ್ತೆ, ದಪ್ಪವಾಗುತ್ತಾರೆ ಎಂಬ ಮಾತಿಗೆ ವಿರುದ್ಧವಾಗಿ ನಿಂತಿರುವ ಅನುಷ್ಕಾ ಶರ್ಮಾ 40ರ ಸಮೀಪದಲ್ಲಿದ್ದರೂ ಸಹ 18ರ ಹರೆಯದವರಂತೆ ದೇಹ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ. ತಾಯ್ತನ ಹಾಗೂ ತಮ್ಮ ಆರೋಗ್ಯ ಎರಡರ ನಡುವಿನಲ್ಲೂ ಸಮತೋಲನ ಕಾಯ್ದುಕೊಂಡು ಬರುತ್ತಿರುವ ನಟಿ ಅನುಷ್ಕಾ ಶರ್ಮಾರ ಫಿಟ್‌ನೆಸ್ ಹಿಂದಿನ ರಹಸ್ಯ ಏನಿರಬಹುದು ಎಂದು ಎಂದಾದರೂ ಯೋಚಿಸಿದ್ದೀರೇ..?
ಕಠಿಣ ವ್ಯಾಯಾಮ: ಸೋಶಿಯಲ್ ಮೀಡಿಯಾದಲ್ಲಿ ಯಾರು ನಟಿ ಅನುಷ್ಕಾ ಶರ್ಮಾರನ್ನು ಫಾಲೋ ಮಾಡುತ್ತಾರೋ ಅವರಿಗೆಲ್ಲ ನಟಿ ಅನುಷ್ಕಾ ಶರ್ಮಾರ ಜೀವನದಲ್ಲಿ ವರ್ಕೌಟ್‌ಗೆ ಎಷ್ಟು ಪ್ರಾಮುಖ್ಯ ನೀಡುತ್ತಾರೆ ಎಂಬುದನ್ನು ವಿವರಿಸಿ ಹೇಳಬೇಕಾಗಿಲ್ಲ. ಕಾರ್ಡಿಯೋ, ದೇಹದ ಶಕ್ತಿ ಹೆಚ್ಚಿಸುವ ವ್ಯಾಯಾಮಗಳು ಹೀಗೆ ದೇಹದಂಡನೆಗೆ ಅನುಷ್ಕಾ ಹೆಚ್ಚಿನ ಪ್ರಾಮುಖ್ಯ ನೀಡುತ್ತಾರೆ.
ಯೋಗ: ಅನುಷ್ಕಾ ಶರ್ಮಾ ತಮ್ಮ ದಿನಚರಿಯಲ್ಲಿ ಶಿಸ್ತನ್ನು ಕಾಪಾಡಿಕೊಳ್ಳುತ್ತಾರೆ. ಪ್ರತಿನಿತ್ಯ ಯೋಗಾಭ್ಯಾಸ ಮಾಡುವುದು ಇವರ ನಿತ್ಯದ ದಿನಚರಿಗಳಲ್ಲೊಂದು. ಪ್ರತಿನಿತ್ಯ ಯೋಗಾಸನ ಮಾಡುವುದರಿಂದ ದೇಹದ ಆರೋಗ್ಯ ವೃದ್ಧಿಸುವುದರ ಜೊತೆಯಲ್ಲಿ ಮಾನಸಿಕವಾಗಿಯೂ ಚೈತನ್ಯ ಸಿಗುತ್ತದೆ. ಯೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನೂ ಅನುಷ್ಕಾ ಮಾಡುತ್ತಾರೆ.
ವರ್ಕೌಟ್ನಲ್ಲಿ ಬದಲಾವಣೆಗಳು: ಅನುಷ್ಕಾ ಶರ್ಮಾ ಒಂದೇ ರೀತಿಯ ವ್ಯಾಯಾಮಕ್ಕೆ ನಿಲ್ಲುವುದಿಲ್ಲ. ಇವರು ವಿಭಿನ್ನವಾದ ವ್ಯಾಯಾಮಗಳನ್ನು ಪ್ರಯತ್ನಿಸುತ್ತಲೇ ಇರುತ್ತಾರೆ. ಇದು ಇವರ ಒಟ್ಟಾರೆ ದೇಹದ ಆಕಾರದ ಮೇಲೆ ಪರಿಣಾಮ ಬೀರುತ್ತದೆ.
ಆರೋಗ್ಯಯುತ ಆಹಾರ: ಅನುಷ್ಕಾ ಶರ್ಮಾರಂತಹ ಸೆಲೆಬ್ರಿಟಿಗಳು ತಾವು ಸೇವಿಸುವ ಆಹಾರದ ಬಗ್ಗೆ ತೀವ್ರ ಕಾಳಜಿ ವಹಿಸುತ್ತಾರೆ. ಇವರು ಸೇವಿಸುವ ಆಹಾರದಲ್ಲಿ ಪ್ರೊಟೀನ್ಗಳು, ವಿಟಮಿನ್ಗಳು, ಫೈಬರ್, ಕ್ಯಾಲ್ಶಿಯಂ ಹಾಗೂ ಜಿಂಕ್ ಪ್ರಮಾಣ ಅಗಾಧವಾಗಿ ಇರುತ್ತದೆ. ಹಣ್ಣು, ತರಕಾರಿಗಳು ಹಾಗೂ ವಿವಿಧ ಧಾನ್ಯಗಳ ಸೇವನೆಗೆ ಇವರು ಪ್ರಾಮುಖ್ಯತೆ ನೀಡುತ್ತಾರೆ.
ಜಿಮ್ನ ಆಚೆಗೂ ದೇಹದಂಡನೆ: ಇವರು ದೇಹದಂಡಿಸಲು ಕೇವಲ ಜಿಮ್ ಮಾತ್ರ ಅವಲಂಬಿಸುವುದಿಲ್ಲ. ಅನುಷ್ಕಾ ಶರ್ಮಾ ಹೊರಾಂಗಣ ಚಟುವಟಿಕೆಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಸ್ಲೈಕ್ಲಿಂಗ್, ಹೈಕಿಂಗ್ ಹಾಗೂ ಹೊರಾಂಗಣದಲ್ಲಿ ದೇಹ ದಂಡಿಸಬಲ್ಲ ವಿವಿಧ ಕ್ರೀಡೆಗಳಲ್ಲಿ ಭಾಗಿಯಾಗುತ್ತಾರೆ.
ಸಂಸ್ಕರಿಸಿದ ಆಹಾರ ಸೇವನೆಯಿಲ್ಲ: ಈ ಹಿಂದೆ ಅನುಷ್ಕಾ ಶರ್ಮಾರ ವಿಡಿಯೊವೊಂದು ವೈರಲ್ ಆಗಿತ್ತು. ಅದರಲ್ಲಿ ಅವರು ಮನೆಯಲ್ಲಿಯೇ ಜಾಮ್ ತಯಾರಿಸುತ್ತಿದ್ದರು. ಇದು ಅವರಿಗೆ ಫಿಟ್‌ನೆಸ್ ಕಡೆಗೆ ಇರುವ ಶ್ರದ್ಧೆಯನ್ನು ತೋರಿಸುತ್ತದೆ. ಸಂಸ್ಕರಿಸಿದ ಆಹಾರಗಳನ್ನು ಸೇವಿಸದೇ ಮನೆಯಲ್ಲಿ ತಯಾರಿಸಿದ ಶುದ್ಧ ಆಹಾರಗಳನ್ನೇ ಸೇವಿಸುತ್ತಾರೆ.
ನೀರು ಕುಡಿಯುವುದು: ಉತ್ತಮ ಆರೋಗ್ಯಕ್ಕೆ ನೀರು ಕುಡಿಯುವುದು ತುಂಬಾನೇ ಮುಖ್ಯ. ಅನುಷ್ಕಾ ಶರ್ಮಾ ಶೂಟಿಂಗ್ ಸೆಟ್ಗಳಲ್ಲಿ ಹಾಗೂ ಜಿಮ್ನಲ್ಲಿ ಯಾವಾಗಲೂ ನೀರಿನ ಬಾಟಲಿಯೊಂದನ್ನು ಇಟ್ಟುಕೊಂಡಿರುವುದನ್ನು ನೀವೂ ಗಮನಿಸಿದ್ದಿರಬಹುದು. ಸರಿಯಾಗಿ ನೀರು ಕುಡಿಯುವುದು ಹಾಗೂ ಆಯಾ ಋತುಮಾನಗಳಲ್ಲಿ ಬೆಳೆಯುವ ಹಣ್ಣು ಹಾಗೂ ತರಕಾರಿಗಳನ್ನು ಸೇವಿಸುವುದು ಅನುಷ್ಕಾ ಶರ್ಮಾ ಫಿಟ್ನಸ್ನ ಮತ್ತೊಂದು ರಹಸ್ಯವಾಗಿದೆ.
(This copy first appeared in Hindustan Times Kannada website. To read more like this please logon to kannada.hindustantimes.com )