Health Tips: ನಿಮ್ಮ ವಯಸ್ಸು 30, ಅದಕ್ಕಿಂತ ಹೆಚ್ಚಾ? ಹಾಗಿದ್ರೆ ನಿಮ್ಮ ಆರೋಗ್ಯಕ್ಕೆ ಯಾವ ಆಹಾರಗಳು ಸೂಕ್ತ ಅನ್ನೋದನ್ನ ತಿಳಿಯಿರಿ
Feb 09, 2024 01:44 PM IST
30ರ ನಂತರ ಸೇವಿಸಬಹುದಾದ ಆಹಾರಗಳು
Food after 30: ವಯಸ್ಸು 30 ಆದ ನಂತರ ನಮ್ಮ ದೇಹಕ್ಕೆ ಕೆಲವೊಂದು ಆಹಾರಗಳು ಬಹಳ ಮುಖ್ಯವಾಗುತ್ತದೆ. ಅದರಲ್ಲಿ ಮೂಳೆಯನ್ನು ಬಲಪಡಿಸುವ ಆಹಾರಗಳು ಬಹಳ ಮುಖ್ಯವಾದವು. ಇದು ಮೂಳೆಗಳು ಬೇಗ ಸವೆಯುವುದನ್ನು ತಪ್ಪಿಸುತ್ತದೆ.
Food: ಹುಟ್ಟಿದ ಮಗುವಿನಿಂದ ವಯೋವೃದ್ದರವರೆಗೆ ಸೇವಿಸುವ ಆಹಾರ ಬಹಳ ವಿಭಿನ್ನವಾಗಿರುತ್ತದೆ. ವಯಸ್ಸಿಗೆ ಅನುಗುಣವಾಗಿ ಆಹಾರ ಸೇವಿಸುವುದು ಬಹಳ ಮುಖ್ಯ. ಇದರಿಂದ ಆರೋಗ್ಯ ಚೆನ್ನಾಗಿರುತ್ತದೆ. ಹಾಗೇ ವಯಸ್ಸು 30 ದಾಟಿದ ನಂತರ ಕೂಡಾ ನಮ್ಮ ಆಹಾರ ಪದ್ಧತಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡುವುದು ಬಹಳ ಅವಶ್ಯಕತೆಯಾಗಿದೆ.
30ರ ನಂತರ ದೇಹದಲ್ಲಿ ಬಹಳ ಬದಲಾವಣೆಗಳಾಗಲಿವೆ. ಒಂದು ವೇಳೆ ನೀವು ಗರ್ಭಿಣಿ ಆಗಿದ್ದಲ್ಲಿ ಅಥವಾ ಮಗುವಿಗೆ ಹಾಲುಣಿಸುತ್ತಿರುವ ತಾಯಿ ಆಗಿರಲಿ ನಿಮ್ಮ ದೇಹಕ್ಕೆ ಬಹಳ ಪೋಷಕಾಂಶದ ಅವಶ್ಯಕತೆ ಇದೆ. 30 ರ ನಂತರ ನೀವು ಏನು ಸೇವಿಸಬೇಕು, ಏನನ್ನು ಸೇವಿಸಬಾರದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
1. ಮೂಳೆಯನ್ನು ಬಲಪಡಿಸುವ ಆಹಾರಗಳು
30ರ ನಂತರ ಮೂಳೆಗಳು ಸವೆಯಲಾರಂಭಿಸುತ್ತದೆ. ಆದ್ದರಿಂದ ನೀವು ಮೂಳೆಯ ಆರೋಗ್ಯವನ್ನು ಬಲಪಡಿಸಲು ಸೂಕ್ತ ಆಹಾರಗಳನ್ನು ಸೇವಿಸಬೇಕು. ಹಾಲು ಮೊಸರು ಒಳಗೊಂಡಿರುವ ಡೈರಿ ಉತ್ಪನ್ನಗಳು, ಕಬ್ಬಿಣ ಇತರ ಜೀವಸತ್ವಗಳಿಂದ ತುಂಬಿರುವ ಹಸಿರು ತರಕಾರಿಗಳು, ಮೂಳೆಗಳು, ಸಾರ್ಡೀನ್‌ಗಳಂಥ ಮೀನುಗಳು, ಬಾದಾಮಿ ಸೇರಿವೆ.
2. ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರುವ ಆಹಾರಗಳು
ಸ್ವತಂತ್ರ ರಾಡಿಕಲ್‌ಗಳು ಅಂಗಾಂಶಗಳ ವಯಸ್ಸನ್ನು ಉತ್ತೇಜಿಸುತ್ತದೆ. ಉತ್ಕರ್ಷಣ ನಿರೋಧಕ ಭರಿತ ಆಹಾರಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಗ್ರೀನ್ ಟೀ, ಬ್ಲಾಕ್ ಕಾಫಿಗಳಲ್ಲಿ ಉತ್ಕರ್ಷಣಾ ನಿರೋಧಕಗಳು ಹೆಚ್ಚಾಗಿವೆ. ಇದರ ಜೊತೆಗೆ ಚೆರ್ರಿ ಹಣ್ಣುಗಳು ಉರಿಯೂತದ ಲಕ್ಷಣಗಳನ್ನು ಹೊಂದಿವೆ.
3. ಉತ್ತಮ ನಿದ್ರೆಗೆ ಸಹಾಯ ಮಾಡುವ ಆಹಾರಗಳು
ಎಷ್ಟೇ ಕೆಲಸದ ಒತ್ತಡ ಇದ್ದರೂ, ಎಷ್ಟೇ ಬ್ಯುಸಿ ಇದ್ದರೂ ನಿದ್ರೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳಬೇಡಿ. ನಿಮಗೆ ರಾತ್ರಿ ಒಳ್ಳೆ ನಿದ್ರೆ ಬರಬೇಕೆಂದರೆ ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲು, ಬಾದಾಮಿ, ವಾಲ್‌ನಟ್, ಫ್ಯಾಟಿ ಫಿಶ್ ಸೇವಿಸಿ.
4. ನಿಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುವ ಆಹಾರಗಳು
ಇತ್ತೀಚಿನ ದಿನಗಳಲ್ಲಂತೂ ಎಲ್ಲರಿಗೂ ಅಧಿಕ ರಕ್ತದೊತ್ತಡ ಹೆಚ್ಚಾಗಿದೆ. ಬಿಪಿಯನ್ನು ನಿಯಂತ್ರಣದಲ್ಲಿಡಲು ಆಹಾರ ಕ್ರಮದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಉಪ್ಪು, ಸಕ್ಕರೆ ಕಡಿಮೆ ಮಾಡಬೇಕು. ಸಂಸ್ಕರಿಸಿದ ಮತ್ತು ಪಿಷ್ಟ ಆಹಾರಗಳು, ಮದ್ಯಪಾನ ಮತ್ತು ಧೂಮಪಾನ ಕಡಿಮೆ ಮಾಡಬೇಕು.