Menstrual Cramps: ಮುಟ್ಟಿನ ದಿನಗಳಲ್ಲಿ ಕಾಡುವ ನೋವು ನಿವಾರಣೆಗೆ ಇಲ್ಲಿದೆ ಕೆಲವು ಸರಳ ಪರಿಹಾರ
Oct 05, 2023 12:49 PM IST
ಮುಟ್ಟಿನ ನೋವಿನ ನಿವಾರಣೆಗೆ ಪರಿಹಾರ
- ಮುಟ್ಟಿನ ಕೆಲವರು ನೋವು ನಿವಾರಣೆಗಾಗಿ ಮಾತ್ರೆ ನುಂಗುತ್ತಾರೆ. ಆದರೆ ಮಾತ್ರೆ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಖಂಡಿತಾ ಅಪಾಯ. ಅತಿಯಾಗಿ ನೋವು ನಿವಾರಕ ಮಾತ್ರೆಗಳನ್ನು ತಿನ್ನುವುದರಿಂದ ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗುತ್ತದೆ. ಆ ದಿನಗಳಲ್ಲಿ ಕಾಡುವ ನೋವು ನಿವಾರಣೆಗೆ ಈ ಸರಳ ಮಾರ್ಗಗಳನ್ನು ಅನುಸರಿಸಿ, ಖುಷಿಯಾಗಿರಿ.
ಹೆಣ್ಣುಮಕ್ಕಳಿಗೆ ಮುಟ್ಟಿನ ದಿನಗಳಲ್ಲಿ ಹೊಟ್ಟೆಯ ಕೆಳಭಾಗದಲ್ಲಿ ನೋವು ಕಾಡುವುದು ಸಹಜ. ಕೆಲವರಿಗೆ ಮುಟ್ಟಾಗುವ ಎರಡು ದಿನಗಳ ಮೊದಲೇ ನೋವು ಕಾಣಿಸುತ್ತದೆ. ವಿಪರೀತ ಕಾಡುವ ಈ ನೋವು ಹಿಂಸೆ ಅನ್ನಿಸುತ್ತದೆ. ಅಲ್ಲದೆ ಇದರ ನಿವಾರಣೆಗೆ ಮದ್ದಿಲ್ಲ ಎನ್ನುತ್ತಾರೆ. ಆದರೆ ಕೆಲವು ನೈಸರ್ಗಿಕ ವಿಧಾನಗಳನ್ನು ಅನುಸರಿಸುವ ಮೂಲಕ ಮುಟ್ಟಿನ ದಿನಗಳ ನೋವಿಗೆ ಪರಿಹಾರ ಕಂಡುಕೊಳ್ಳಬಹುದು.
ಕೆಲವರು ನೋವು ನಿವಾರಣೆಗಾಗಿ ಮಾತ್ರೆ ನುಂಗುತ್ತಾರೆ. ಆದರೆ ಮಾತ್ರೆ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಖಂಡಿತಾ ಅಪಾಯ. ಅತಿಯಾಗಿ ನೋವು ನಿವಾರಕ ಮಾತ್ರೆಗಳನ್ನು ತಿನ್ನುವುದರಿಂದ ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗುತ್ತದೆ. ಇದರಿಂದ ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರಬಹುದು. ಆ ಕಾರಣಕ್ಕೆ ನೈಸರ್ಗಿಕ ವಿಧಾನ ಅನುಸರಿಸಬೇಕು ಎನ್ನುತ್ತಾರೆ.
ಕೆಲವು ಮನೆಮದ್ದುಗಳು ಹಾಗೂ ಉಪಾಯಗಳು ಮುಟ್ಟಿನ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ಜೀವನಶೈಲಿಗೆ ಸಂಬಂಧಿಸಿದ ಲೇಖನಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ
ನೋವು ಕಡಿಮೆ ಮಾಡುವ ಔಷಧಿ
ನಾನ್‌ಸ್ಟೆರೊಯ್ಡೆಲ್ ಆಂಟಿ ಇನ್ಲ್ಫಾಮೇಟರಿ ಡ್ರಗ್ಸ್ ಮುಟ್ಟಿನ ನೋವು ಹಾಗೂ ಭಾರಿ ಮುಟ್ಟಿನ ರಕ್ತಸ್ರಾವವನ್ನು ತಡೆಯಲು ಶಿಫಾರಸು ಮಾಡಲಾದ ಪರಿಹಾರ ಮಾರ್ಗವಾಗಿದೆ. ಈ ಔಷಧಿಗಳು ನಿಮ್ಮ ದೇಹದ ಪ್ರೊಸ್ಟಗ್ಲಾಂಡಿನ್ ಉತ್ಪಾದನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಶಾಖ ನೀಡುವುದು
ಮುಟ್ಟಿನ ನೋವಿನ ನಿವಾರಣೆಗೆ ಹೀಟ್ ಪ್ಯಾಡ್‌ಗಳನ್ನು ಬಳಸುವುದು ಉತ್ತಮ ವಿಧಾನ. ಕಿಬ್ಬೊಟ್ಟೆ ಹಾಗೂ ಕೆಳ ಬೆನ್ನಿನ ಭಾಗಕ್ಕೆ ಹೀಟ್ ಪ್ಯಾಡ್‌ಗಳನ್ನು ಇರಿಸಿಕೊಳ್ಳುವುದರಿಂದ ನೋವನ್ನು ಕಡಿಮೆ ಮಾಡಿಕೊಳ್ಳಬಹುದು. ಬಿಸಿನೀರಿನ ಬಾಟಲ್, ಹೀಟ್ ಪ್ಯಾಡ್ ಅಥವಾ ನೀರಿನಲ್ಲಿ ಬಾತ್ ಟವಲ್ ಅನ್ನು ಅದ್ದಿ ಕೂಡ ಇರಿಸಿಕೊಳ್ಳಬಹುದು.
ಸಾರಭೂತ ತೈಲಗಳಿಂದ ಮಸಾಜ್ ಮಾಡಿಕೊಳ್ಳುವುದು
ಮುಟ್ಟಿನ ನೋವು ಅತಿಯಾದಾಗ 20 ನಿಮಿಷಗಳ ಕಾಲ ಕಿಬ್ಬೊಟ್ಟೆಯ ಭಾಗಕ್ಕೆ ಮಸಾಜ್ ಮಾಡುವುದರಿಂದ ಕೂಡ ನೋವು ಕಡಿಮೆಯಾಗುತ್ತದೆ. ಮಸಾಜ್ ಮಾಡುವ ಯಾವುದೋ ಒಂದು ನಿರ್ದಿಷ್ಟ ಜಾಗದಲ್ಲಿ ಮಾತ್ರ ಮಾಡಬೇಕು. ಇದನ್ನು ತಜ್ಞರಿಂದ ತಿಳಿದುಕೊಳ್ಳಬೇಕು. 2018ರ ಅಧ್ಯಯನವೊಂದರ ಪ್ರಕಾರ ಮಸಾಜ್ ಥೆರಪಿ, ಅರೋಮಾ ಥೆರಪಿ ನೋವು ಕಡಿಮೆ ಮಾಡಲು ಸಹಕಾರಿ. ಲ್ಯಾವೆಂಡರ್, ಪೆಪ್ಪರ್‌ಮಿಂಟ್, ರೋಸ್, ಸೋಂಪಿನ ಎಣ್ಣೆಯನ್ನು ಮಸಾಜ್‌ಗೆ ಬಳಸಬಹುದು.
ಈ ಆಹಾರಗಳನ್ನು ತ್ಯಜಿಸಿ
ಮುಟ್ಟಿನ ದಿನಗಳಲ್ಲಿ ಉಂಟಾಗುವ ನೋವು ಕಡಿಮೆ ಮಾಡಲು ಹೊಟ್ಟೆಯುಬ್ಬರಕ್ಕೆ ಕಾರಣವಾಗುವ ಆಹಾರಗಳಿಂದ ದೂರವಿರಬೇಕು. ಕೊಬ್ಬಿನಾಂಶ ಇರುವ ಆಹಾರ, ಆಲ್ಕೋಹಾಲ್, ಕಾರ್ಬನ್ ಅಂಶ ಇರುವ ಪಾನೀಯಗಳು, ಕೆಫಿನ್ ಉಪ್ಪಿನಾಂಶ ಇರುವ ಅವುಗಳ ಸೇವನೆಗೆ ಕಡಿವಾಣ ಹಾಕಬೇಕು. ಈ ಸಮಯದಲ್ಲಿ ಶುಂಠಿ, ಪುದಿನಾ ಟೀ, ಬಿಸಿ ನಿಂಬೆರಸದ ಸೇವನೆ ಉತ್ತಮ.
ನಿಮ್ಮ ಆಹಾರ ಕ್ರಮದಲ್ಲಿ ಗಿಡಮೂಲಿಕೆಗಳನ್ನು ಸೇರಿಸಿ
ಕ್ಯಾಮೊಮಯಿಲ್ ಟೀ, ಸೋಂಪು ಕಾಳು, ದಾಲ್ಚಿನ್ನಿ, ಶುಂಠಿ, ಸಬ್ಬಿಸ್ಸಿಗೆ ಇಂತಹವನ್ನು ನಿಮ್ಮ ಆಹಾರದಲ್ಲಿ ಸೇರಿಸಿ. ಇವು ನೋವು ಕಡಿಮೆ ಮಾಡುವ ಜೊತೆಗೆ ದೇಹದಲ್ಲಿ ಚೈತನ್ಯ ಮೂಡಲು ಸಹಾಯ ಮಾಡುತ್ತವೆ.
ವಿಭಾಗ