logo
ಕನ್ನಡ ಸುದ್ದಿ  /  ಜೀವನಶೈಲಿ  /  ಮಹಿಳೆಯರಲ್ಲೂ ಕಾಡುತ್ತಿದೆ ಹೃದಯಾಘಾತ ಸಮಸ್ಯೆ: ಪ್ರಾಣಾಪಾಯದಿಂದ ಪಾರಾಗಲು ಈ ರೋಗಲಕ್ಷಣಗಳನ್ನು ಕಡೆಗಣಿಸಲೇಬೇಡಿ

ಮಹಿಳೆಯರಲ್ಲೂ ಕಾಡುತ್ತಿದೆ ಹೃದಯಾಘಾತ ಸಮಸ್ಯೆ: ಪ್ರಾಣಾಪಾಯದಿಂದ ಪಾರಾಗಲು ಈ ರೋಗಲಕ್ಷಣಗಳನ್ನು ಕಡೆಗಣಿಸಲೇಬೇಡಿ

Priyanka Gowda HT Kannada

Sep 27, 2024 04:22 PM IST

google News

ಪುರುಷರಿಗಿಂತ ಭಿನ್ನವಾಗಿ, ಮಹಿಳೆಯರು ಹೃದ್ರೋಗದ ಚಿಹ್ನೆಗಳನ್ನು ಹೊಂದಿರುತ್ತಾರೆ.

  • ಇಂದಿನ ದಿನಗಳಲ್ಲಿ ಯುವಜನತೆ ಹೃದ್ರೋಗದ ಸಮಸ್ಯೆಗೆ ಒಳಗಾಗುತ್ತಿರುವುದು ಭಾರಿ ಕಳವಳ ಮೂಡಿಸಿದೆ. ಮಹಿಳೆಯರಿಗೆ ಹೃದ್ರೋಗದ ಸಮಸ್ಯೆ ಕಡಿಮೆ ಎಂದೇ ಹೇಳಲಾಗುತ್ತಿತ್ತು. ಆದರೀಗ ಮಹಿಳೆಯರೂ ಕೂಡ ಹೃದ್ರೋಗ ಸಂಬಂಧಿತ ಅಪಾಯವನ್ನು ಹೊಂದಿದ್ದು, ಪುರುಷರಿಗಿಂತ ಭಿನ್ನ ಲಕ್ಷಣಗಳನ್ನು ಹೊಂದಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ:

ಪುರುಷರಿಗಿಂತ ಭಿನ್ನವಾಗಿ, ಮಹಿಳೆಯರು ಹೃದ್ರೋಗದ ಚಿಹ್ನೆಗಳನ್ನು ಹೊಂದಿರುತ್ತಾರೆ.
ಪುರುಷರಿಗಿಂತ ಭಿನ್ನವಾಗಿ, ಮಹಿಳೆಯರು ಹೃದ್ರೋಗದ ಚಿಹ್ನೆಗಳನ್ನು ಹೊಂದಿರುತ್ತಾರೆ. (Shutterstock)

ಹೃದಯಾಘಾತದಿಂದ ಮೃತಪಡುವವರಲ್ಲಿ ಹೆಚ್ಚಾಗಿ ಪುರುಷರು ಎಂದೇ ಹೇಳಲಾಗುತ್ತದೆ. ಆದರೆ, ಮಹಿಳೆಯರಲ್ಲೂ ಹೃದ್ರೋಗದ ಅಪಾಯ ಅಧಿಕವಾಗಿದೆ. ಪ್ರಪಂಚದಲ್ಲಿ ಪ್ರತಿ ಮೂವರು ಮಹಿಳೆಯರಲ್ಲಿ ಒಬ್ಬರು ಹೃದಯಾಘಾತದಿಂದ ಮೃತಪಡುತ್ತಿದ್ದಾರೆ. ಅನೇಕ ಮಹಿಳೆಯರಿಗೆ ಅವರು ಅನುಭವಿಸಬಹುದಾದ ವಿಶಿಷ್ಟ ಮತ್ತು ಸಾಮಾನ್ಯವಾಗಿ ಸೂಕ್ಷ್ಮ ರೋಗಲಕ್ಷಣಗಳ ಬಗ್ಗೆ ತಿಳಿದಿರುವುದಿಲ್ಲ. ಪುರುಷರಿಗಿಂತ ಭಿನ್ನವಾಗಿ, ಮಹಿಳೆಯರು ಹೃದ್ರೋಗದ ಚಿಹ್ನೆಗಳನ್ನು ಹೊಂದಿರುತ್ತಾರೆ. ಈ ರೋಗಲಕ್ಷಣಗಳನ್ನು ಗುರುತಿಸುವುದರಿಂದ ಪ್ರಾಣಾಪಾಯದಿಂದ ಪಾರಾಗಬಹುದು.

ಆಯಾಸ, ಎಡಗೈಯಲ್ಲಿ ನೋವು ಮತ್ತು ಊತವು ಸಾಮಾನ್ಯವಾಗಿ ಕಡೆಗಣಿಸಲ್ಪಡುವ ಲಕ್ಷಣಗಳಾಗಿವೆ. ಇವು ಮಹಿಳೆಯರಲ್ಲಿ ಹೃದ್ರೋಗವನ್ನು ಸೂಚಿಸುತ್ತದೆ. ಮಹಿಳೆಯರು ಸಾಮಾನ್ಯವಾಗಿ ಒತ್ತಡ ಅಥವಾ ಆತಂಕಕ್ಕೆ ಒಳಗಾಗುವುದು ಸಹಜ. ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಸಮಯೋಚಿತ ವೈದ್ಯಕೀಯ ಆರೈಕೆಯನ್ನು ಪಡೆಯಲು ಈ ಚಿಹ್ನೆಗಳನ್ನು ಗುರುತಿಸುವುದು ಅತ್ಯಗತ್ಯ. ಹೃದಯದ ಆರೋಗ್ಯದ ಬಗ್ಗೆ ಜಾಗರೂಕರಾಗಿರಲು ಮತ್ತು ತೀವ್ರ ಪರಿಣಾಮಗಳನ್ನು ತಡೆಗಟ್ಟಲು ಈ ಕೆಳಗಿನ ಲಕ್ಷಣಗಳನ್ನು ಮೊದಲೇ ಗುರುತಿಸುವುದು ಅತ್ಯಗತ್ಯ. ಯಾವು ಯಾವ್ಯಾವು ಇಲ್ಲಿದೆ.

ಮಹಿಳೆಯರಲ್ಲಿ ಕಂಡುಬರುವ ಹೃದಯಾಘಾತದ ಸಾಮಾನ್ಯ ಸಮಸ್ಯೆಗಳು

ಎದೆ ನೋವು: ಎಲ್ಲಾ ಎದೆನೋವು ಕೂಡ ಹೃದಯಕ್ಕೆ ಸಂಬಂಧಿಸಿದ್ದು ಎಂದು ಹೇಳಲಾಗುವುದಿಲ್ಲ. ಸಾಮಾನ್ಯವಾಗಿ ಹೃದಯಾಘಾತಕ್ಕೆ ಸಂಬಂಧಿಸಿದ ತೀವ್ರವಾದ ಎದೆ ನೋವಿನಂತೆ, ಒತ್ತಡ ಅಥವಾ ಇನ್ನಿತರೆ ಲಕ್ಷಣಗಳನ್ನು ಅನುಭವಿಸಬಹುದು. ಕೆಲವೊಮ್ಮೆ ಇದು ಆಗಾಗ ಬರುತ್ತಿರಬಹುದು. ಇಲ್ಲವಾದಲ್ಲಿ ಒಂದೆರಡು ಬಾರಿ ಬಂದು ಕಡಿಮೆಯಾಗಬಹುದು. ಇದೇನು ಅಂಥ ಗಂಭೀರವಾದುದಲ್ಲ ಎಂದು ಕಡೆಗಣಿಸಬಾರದು.

ಉಸಿರಾಟದ ತೊಂದರೆ: ಮೆಟ್ಟಿಲುಗಳನ್ನು ಹತ್ತುವುದು ಅಥವಾ ನಡಿಗೆ ವೇಳೆ ಉಸಿರಾಟದ ತೊಂದರೆ ಉಂಟಾಗಬಹುದು. ಇದು ಕೂಡ ಹೃದ್ರೋಗದ ಅಪಾಯವನ್ನು ಸೂಚಿಸುತ್ತದೆ. ಈ ವೇಳೆ ನಿರಂತರವಾದ ಆಯಾಸ, ವಿಪರೀತ ಬಳಲಿಕೆ ಉಂಟಾಗಬಹುದು. ವಿಶೇಷವಾಗಿ ವಿಶ್ರಾಂತಿ ತೆಗೆದುಕೊಂಡ ನಂತರವೂ ಆಯಾಸವಾದರೆ ಹೃದ್ರೋಗದ ಅಪಾಯವನ್ನು ಸೂಚಿಸುತ್ತದೆ. ಈ ರೋಗಲಕ್ಷಣವನ್ನು ಸಾಮಾನ್ಯವಾಗಿ ಕಡೆಗಣಿಸಲಾಗುತ್ತದೆ. ಒತ್ತಡ ಅಥವಾ ನಿದ್ದೆಯ ಕೊರತೆಯಿಂದಲೂ ಈ ಸಮಸ್ಯೆ ಉಂಟಾಗಬಹುದು.

ಅಸಾಮಾನ್ಯ ಭಾಗಗಳಲ್ಲಿ ನೋವು: ಮಹಿಳೆಯರಲ್ಲಿ ಹೃದ್ರೋಗವು ಎದೆಯಲ್ಲಿ ಮಾತ್ರವಲ್ಲದೆ ಇನ್ನಿತರೆ ಭಾಗಗಳಲ್ಲಿಯೂ ನೋವು ಕಾಣಿಸಿಕೊಳ್ಳಬಹುದು. ತೋಳುಗಳು (ಎಡಗೈ), ದವಡೆ, ಕುತ್ತಿಗೆ, ಹೊಟ್ಟೆ ಇತ್ಯಾದಿ. ಈ ನೋವುಗಳು ಕಾಣಿಸಿಕೊಂಡರೂ ಕಡೆಗಣಿಸುವುದು ಒಳಿತಲ್ಲ. ಆದಷ್ಟೂ ಜಾಗರೂಕರಾಗಿರಿ.

ತಲೆತಿರುಗುವಿಕೆ: ನಿಂತಿರುವಾಗ ಅಥವಾ ಕುಳಿತಲ್ಲಿಂದ ನಿಲ್ಲುವಾಗ ಮೂರ್ಛೆ ತಪ್ಪುವುದು ಅಥವಾ ತಲೆತಿರುಗುವಿಕೆ ಉಂಟಾಗುವ ಲಕ್ಷಣಗಳು ಹೃದ್ರೋಗದ ಎಚ್ಚರಿಕೆಯ ಸಂಕೇತವಾಗಿದೆ. ಈ ರೋಗಲಕ್ಷಣವು ಉಸಿರಾಟದ ತೊಂದರೆ ಅಥವಾ ಎದೆಯ ಅಸ್ವಸ್ಥತೆಯ ಜೊತೆಗೆ ಸಂಭವಿಸಬಹುದು.

ಊತ ಮತ್ತು ದೌರ್ಬಲ್ಯ: ದೌರ್ಬಲ್ಯ ಅಥವಾ ಕಾಲುಗಳು ಮರಗಟ್ಟುವಿಕೆಯಂತಾಗುವುದು, ಪಾದಗಳಲ್ಲಿ ಊತವುಂಟಾಗಿ ನೋವು ಕಾಣಿಸಿಕೊಳ್ಳುವುದು ಕೂಡ ಹೃದ್ರೋಗದ ಅಪಾಯವನ್ನು ಸೂಚಿಸುತ್ತದೆ. ಈ ಲಕ್ಷಣಗಳು ಸಾಮಾನ್ಯವಾಗಿ ಗಮನಕ್ಕೆ ಬರುವುದಿಲ್ಲ. ಆದರೆ, ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಉತ್ತಮ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ