Nellikai Chutney: ನೆಲ್ಲಿಕಾಯಿಯ ಚಟ್ನಿ ಆರೋಗ್ಯಕ್ಕೆ ಒಳ್ಳೆಯದು, ನೆಲ್ಲಿಕಾಯಿ ಚಟ್ನಿ ಮಾಡುವ ವಿಧಾನ, ತರಿತರಿ ಇರುವಾಗ ಸವಿಯಿರಿ
Jul 29, 2023 04:14 PM IST
Nellikai Chutney: ನೆಲ್ಲಿಕಾಯಿಯ ಚಟ್ನಿ ಆರೋಗ್ಯಕ್ಕೆ ಒಳ್ಳೆಯದು, ನೆಲ್ಲಿಕಾಯಿ ಚಟ್ನಿ ಮಾಡುವ ವಿಧಾನ, ತರಿತರಿ ಇರುವಾಗ ಸವಿಯಿರಿ
- Nellikai Chutney in Kannada: ರುಚಿಕರ ನೆಲ್ಲಿಕಾಯಿ ಆರೋಗ್ಯಕಾರವೂ ಹೌದು. ನೆಲ್ಲಿಕಾಯಿ ಚಟ್ನಿಯು ಆರೋಗ್ಯಕರ. ಸರಳವಾಗಿ ನೆಲ್ಲಿಕಾಯಿ ಚಟ್ನಿ ಮಾಡುವ ವಿಧಾನ ಇಲ್ಲಿದೆ. (ರೆಸಿಪಿ: ಸತೀಶ್ ಎಚ್, ಬೆಂಗಳೂರು)
ನೆಲ್ಲಿಕಾಯಿಯ ವೈಜ್ಞಾನಿಕ ಹೆಸರು ಫಿಲಾಂತಸ್ ಎಂಬ್ಲಿಕಾ. ಇದನ್ನು ಧಾತ್ರಿಫಲ ಎಂದೂ ಕರೆಯುತ್ತಾರೆ. ಇದರಲ್ಲಿ ಕೆಳಕಂಡ ಆರೋಗ್ಯಕ್ಕೆ ಆವಶ್ಯಕವಾದ ಪೋಷಕಾಂಶಗಳು ಇರುತ್ತವೆ. ರುಚಿಕರ ನೆಲ್ಲಿಕಾಯಿ ಆರೋಗ್ಯಕಾರವೂ ಹೌದು. ನೆಲ್ಲಿಕಾಯಿ ಚಟ್ನಿಯು ಆರೋಗ್ಯಕರ. ಊಟದ ಜತೆಗೆ ನೆಲ್ಲಿಕಾಯಿ ಚಟ್ನಿ ಸವಿಯಲು ಬಯಸುವವರು ಪಟಾಪಟ್ ರೆಸಿಪಿ ತಯಾರಿಸಿಕೊಳ್ಳಬಹುದು.
ನೆಲ್ಲಿಕಾಯಿಯಲ್ಲಿರುವ ಪೋಷಕಾಂಶಗಳು
ನೆಲ್ಲಿಕಾಯಿಯು ಹಲವು ಪೋಷಕಾಂಶಗಳಿದ್ದು, ಅತ್ಯುತ್ತಮ ಆರೋಗ್ಯಕ್ಕೆ ಸಹಕರಿಸುತ್ತದೆ. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ, ಕಾರ್ಬೋಹೈಡ್ರೇಟ್, ನಾರಿನಾಂಶ, ಪ್ರೋಟೀನ್, ಕೊಬ್ಬು, ಕ್ಯಾಲ್ಸಿಯಂ, ಫಾಸ್ಫರಸ್, ನಿಕೋಟಿನಿಕ್ ಆಸಿಡ್ ಮತ್ತು ಕಬ್ಬಿಣ ಇತ್ಯಾದಿ ಪೋಷಕಾಂಶಗಳು ಇವೆ.
ಉತ್ತಮ ಆರೋಗ್ಯಕ್ಕೆ ನೆಲ್ಲಿಕಾಯಿ ಸೇವಿಸಿ
ರುಚಿಯನ್ನು ಬಯಸದೆ ಇರುವವರು ತಾಜಾ ಹಣ್ಣಿನ ರಸವನ್ನು ಕುಡಿಯಬಹುದು. ಇಲ್ಲವಾದರೆ ನೆಲ್ಲಿಕಾಯಿಯಿಂದ ರುಚಿಕರವಾದ ಚಟ್ನಿಯನ್ನು ತಯಾರಿಸಬಹುದು.
ನೆಲ್ಲಿಕಾಯಿಯನ್ನು ಬಳಸುವುದರಿಂದ ದೇಹದ ಉಷ್ಣತೆ ಸಮತೋಲದಲ್ಲಿ ಇರುತ್ತದೆ. ಹೊಟ್ಟೆಯ ಉರಿ ಕಡಿಮೆ ಆಗುತ್ತದೆ. ಅಜೀರ್ಣದ ತೊಂದರೆಯಿಂದ ಪಾರಾಗಬಹುದು. ಲಿವರ್ ದುರ್ಬಲವಾಗಿದ್ದರೆ ಈ ರಸದಿಂದ ಉತ್ತಮ ಫಲಿತಾಂಶಗಳನ್ನು ಪಡೆಯಾಬಹುದು.
ನಿಂಬೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಪುಡಿಮಾಡಿ, ನೆಲ್ಲಿಕಾಯಿಯ ರಸದೊಂದಿಗೆ ಬಳಸಿದಲ್ಲಿ ರಕ್ತವು ಶುದ್ದಿಯಾಗುತ್ತದೆ. ಇದರಿಂದ ಅಸಿಡಿಟಿ ಸಹ ಗುಣವಾಗುತ್ತದೆ.
ಮೆಣಸಿನ ಜೊತೆಯಲ್ಲಿ ಇದನ್ನು ಸೇವಿಸಿದಲ್ಲಿ ಕೊಲೆಸ್ಟ್ರಾಲ್ ಕಡಿಮೆ ಆಗುತ್ತದೆ ಮತ್ತು ರೋಗನಿರೋದಕ ಶಕ್ತಿಯು ಹೆಚ್ಚಿ ರಕ್ತದಲ್ಲಿನ ಹಿಮೋಗ್ಲೋಬಿನ ಮಟ್ಟವನ್ನು ಸರಿತೂಗಿಸುತ್ತದೆ. ಜೇನುತುಪ್ಪದೊಂದಿಗೆ ಬೆರೆಸಿ ಸಿಹಿಯನ್ನು ತಯಾರಿಸಿದಲ್ಲಿ ಕಣ್ಣಿನ ದೃಷ್ಠಿ ಉತ್ತಮಗೊಳ್ಳುತ್ತದೆ. ರಾತ್ರಿಯ ವೇಳೆ ಬೆಲ್ಲದಿಂದ ತಯಾರಿಸಿದ ರಸವನ್ನು ಸೇವಿಸಿದಲ್ಲಿ ಒಳ್ಳೆಯ ನಿದ್ದೆ ಬರುತ್ತದೆ.
ನೆಲ್ಲಿಕಾಯಿ ಚಟ್ನಿ ಮಾಡುವ ವಿಧಾನ
ಮೊದಲು ನೆಲ್ಲಿಕಾಯಿಯನ್ನು ತುರಿದುಕೊಳ್ಳಬೇಕು. ಕಡಲೆ ಬೇಳೆ,ಉದ್ದಿನ ಬೇಳೆ ಯನ್ನು ಕೆಂಪುಬಣ್ಣಕ್ಕೆ ಬರುವಂತೆ ಹುರಿದುಕೊಳ್ಳಬೇಕು. ಆನಂತರ ಇದರ ಜೊತೆಯಲ್ಲಿ ಉಳಿದೆಲ್ಲ ಪದಾರ್ಥಗಳನ್ನು ಬೆರೆಸಿ, ಮಿಕ್ಸಿಯಲ್ಲಿ ರುಬ್ಬಬೇಕು. ಬೇಕಾದಲ್ಲಿ ಸ್ವಲ್ಪ ನೀರನ್ನು ಬೆರಸಿಕೊಳ್ಳಬೇಕು. ಸ್ವಲ್ಪ ತರಿತರಿ ಇರುವಾಗ ಇದನ್ನು ಸವಿಯದರೆ ತುಂಬಾ ರುಚಿಕರವಾಗಿರುತ್ತದೆ. (ರೆಸಿಪಿ: ಸತೀಶ್ ಎಚ್, ಬೆಂಗಳೂರು)
ವಿಭಾಗ