logo
ಕನ್ನಡ ಸುದ್ದಿ  /  ಜೀವನಶೈಲಿ  /  ನವದುರ್ಗೆಯರ ಆರಾಧಿಸೋ ನವರಾತ್ರಿ ಬಗ್ಗೆ ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ; ದೇವಿ ಅವತಾರಗಳ ಕಥೆ ನಿಮ್ಮ ಮಕ್ಕಳಿಗೂ ತಿಳಿಸಿ

ನವದುರ್ಗೆಯರ ಆರಾಧಿಸೋ ನವರಾತ್ರಿ ಬಗ್ಗೆ ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ; ದೇವಿ ಅವತಾರಗಳ ಕಥೆ ನಿಮ್ಮ ಮಕ್ಕಳಿಗೂ ತಿಳಿಸಿ

Suma Gaonkar HT Kannada

Sep 20, 2024 01:07 PM IST

google News

ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ

    • Navratri 2024: ನವರಾತ್ರಿಯು ಸ್ತ್ರೀ ಶಕ್ತಿ ಮತ್ತು ಶಕ್ತಿಯ ಮೂರ್ತರೂಪವಾದ ದುರ್ಗಾ ದೇವಿಯನ್ನು ಪೂಜಿಸುವ ಸಲುವಾಗಿ ಆಚರಿಸುವ ಒಂದು ಹಬ್ಬವಾಗಿದೆ. ನವರಾತ್ರಿ ಹಬ್ಬದ ಕೊನೆಯ ದಿನ ಅಂದರೆ 10ನೇ ದಿನವನ್ನು ವಿಜಯ ದಶಮಿ ಎಂದು ಆಚರಿಸಲಾಗುತ್ತದೆ. 
ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ
ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ

ನವರಾತ್ರಿ, ಈ ಹಿಂದೂ ಹಬ್ಬವನ್ನು ಒಂಬತ್ತು ಪವಿತ್ರ ರಾತ್ರಿಗಳ ಕಾಲ ಆಚರಣೆ ಮಾಡಲಾಗುತ್ತದೆ. ನವರಾತ್ರಿ" ಎಂಬ ಪದವೇ ಸೂಚಿಸುವಂತೆ ಇದು ಒಂಬತ್ತು ದಿನಗಳ ಕಾಲ ದೇವಿಯನ್ನು ಆರಾಧಿಸುವ ದಿನವಾಗಿದೆ. ಎಲ್ಲರೂ ತುಂಬಾ ಶ್ರದ್ಧಾ ಭಕ್ತಿಯಿಂದ ಈ ದಿನಗಳಲ್ಲಿ ದೇವಿಯ ಆರಾಧನೆ ಮಾಡುತ್ತಾರೆ.

ದುರ್ಗಾ ಪೂಜೆಯನ್ನು ಏಕೆ ಮಾಡುತ್ತಾರೆ?

ನವರಾತ್ರಿಯು ಸ್ತ್ರೀ ಶಕ್ತಿ ಮತ್ತು ಶಕ್ತಿಯ ಮೂರ್ತರೂಪವಾದ ದುರ್ಗಾ ದೇವಿಯನ್ನು ಪೂಜಿಸುವ ಸಲುವಾಗಿ ಆಚರಿಸುವ ಒಂದು ಹಬ್ಬವಾಗಿದೆ. ಹಿಂದೂ ಪುರಾಣಗಳ ಪ್ರಕಾರ, ದುರ್ಗಾ ದೇವಿಯು ರಾಕ್ಷಸ ಮಹಿಷಾಸುರನನ್ನು ಕೊಂದಿದ್ದಾಳೆ. ಇದು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸಂಕೇತಿಸುತ್ತದೆ. ಈ ವಿಜಯವನ್ನು ನವರಾತ್ರಿಯಲ್ಲಿ ಆಚರಿಸಲಾಗುತ್ತದೆ. ವಿಜಯ ದಶಮಿ ಎಂದು ಹತ್ತನೇ ದಿನವನ್ನು ಆಚರಿಸಲಾಗುತ್ತದೆ.

ನವರಾತ್ರಿಯನ್ನು ಏಕೆ ಆಚರಣೆ ಮಾಡಲಾಗುತ್ತದೆ ಎನ್ನುವುದಕ್ಕೆ ಹಲವಾರು ಉದ್ದೇಶಗಳಿದೆ. ಅವುಗಳನ್ನು ನಾವಿಲ್ಲಿ ನೀಡಿದ್ದೇವೆ.

ದುರ್ಗಾ ದೇವಿಯನ್ನು ಪೂಜಿಸಲು ಮತ್ತು ಅವಳ ಆಶೀರ್ವಾದವನ್ನು ಪಡೆಯಲು. ಕೆಟ್ಟದ್ದರ ಮೇಲೆ ಒಳ್ಳೆಯ ವಿಜಯವನ್ನು ಸಂಕೇತಿಸಲು ಹಾಗೂ ದೇವಿಯ ಒಂಬತ್ತು ಅವತಾರಗಳ ಬಗ್ಗೆ ತಿಳಿದುಕೊಳ್ಳಲು ಈ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಸ್ತ್ರೀಯರು ಹೆಚ್ಚಾಗಿ ದೇವಿಯ ಆರಾಧನೆ ಹಾಗೂ ಪೂಜೆಯನ್ನು ಮಾಡುತ್ತಾರೆ.

ನೀವು ನವರಾತ್ರಿಯನ್ನು ಹೇಗೆ ಆಚರಿಸಬಹುದು ಎಂಬುದು ಇಲ್ಲಿದೆ:

ದೇವಸ್ಥಾನಗಳಿಗೆ ಭೇಟಿ ನೀಡಿ ಮತ್ತು ದುರ್ಗಾ ದೇವಿಗೆ ಪ್ರಾರ್ಥನೆ ಸಲ್ಲಿಸಿ. ಅಥವಾ ನಿಮ್ಮ ಮನೆಯಲ್ಲೇ ದೇವಿ ಮೂರ್ತಿಯನ್ನಿಟ್ಟು ಅದಕ್ಕೆ ದಿನವೂ ಪೂಜೆ ಮಾಡಿ. ಈ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಒಳ್ಳೆಯ ಅಂಶಗಳು ನೆಲೆಸುತ್ತದೆ. ಒಂಬತ್ತು ದಿನಗಳಲ್ಲಿ ಸಾಧ್ಯವಾದರೆ ಉಪವಾಸ ಮಾಡಿ ಅಥವಾ ಸಸ್ಯಾಹಾರಿ ಆಹಾರವನ್ನು ಸೇವನೆ ಮಾಡಿ. ಹಲವೆಡೆ ಜರುಗುವ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ ಮತ್ತು ನೃತ್ಯ ಪ್ರದರ್ಶನಗಳಿಗೆ ಹಾಜರಾಗಿ. ನಿಮ್ಮ ಮನೆಯನ್ನು ಹೂವುಗಳು, ದೀಪಗಳು ಮತ್ತು ವರ್ಣರಂಜಿತ ರಂಗೋಲಿಗಳಿಂದ ಅಲಂಕರಿಸಿ. ಮುತ್ತೈದೆಯರಿಗೆ ಬಾಗೀನ ಕೊಡಿ.

ದೇವಿ ಕಥನವನ್ನು ಶ್ರವಣ ಮಾಡಿ
ದುರ್ಗಾ ಸೂಕ್ತವು ದುರ್ಗಾ ದೇವಿಗೆ ಸಮರ್ಪಿತವಾದ ಪ್ರಬಲ ಹಿಂದೂ ಮಂತ್ರವಾಗಿದ್ದು, ಆಕೆಯ ಶಕ್ತಿ, ರಕ್ಷಣೆ ಮತ್ತು ದೈವಿಕ ಸ್ತ್ರೀ ಶಕ್ತಿಗಾಗಿ ಪೂಜಿಸಲ್ಪಟ್ಟಿದೆ. ಇದು ಮಾರ್ಕಂಡೇಯ ಪುರಾಣದ ಒಂದು ಭಾಗವಾಗಿದೆ ಮತ್ತು ಇದು ದುರ್ಗಾ ದೇವಿಗೆ ಅತ್ಯಂತ ಪವಿತ್ರ ಮತ್ತು ಪ್ರಬಲವಾದ ಪ್ರಾರ್ಥನೆಗಳಲ್ಲಿ ಒಂದಾಗಿದೆ. ಇದರಲ್ಲಿ ಸಂಸ್ಕೃತದಲ್ಲಿ ಎಲ್ಲವೂ ಇದೆ. ನೀವು ದೇವಿ ಕಥನವನ್ನು ಕನ್ನಡದಲ್ಲಿಯೂ ತಿಳಿದುಕೊಳ್ಳಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ