logo
ಕನ್ನಡ ಸುದ್ದಿ  /  ಜೀವನಶೈಲಿ  /  ಮಗನಿಗೆ E ಅಕ್ಷರದಿಂದ ಪ್ರಾರಂಭವಾಗುವ ಹೆಸರು ಇಡಬೇಕಾ? ನಿಮಗಿಷ್ಟವಾಗುವಂತಹ ಆಕರ್ಷಕ ಹೆಸರುಗಳು ಇಲ್ಲಿವೆ

ಮಗನಿಗೆ E ಅಕ್ಷರದಿಂದ ಪ್ರಾರಂಭವಾಗುವ ಹೆಸರು ಇಡಬೇಕಾ? ನಿಮಗಿಷ್ಟವಾಗುವಂತಹ ಆಕರ್ಷಕ ಹೆಸರುಗಳು ಇಲ್ಲಿವೆ

Raghavendra M Y HT Kannada

Jun 16, 2024 03:02 PM IST

google News

ಮಗನಿಗೆ E ಅಕ್ಷರದಿಂದ ಪ್ರಾರಂಭವಾಗುವ ಹೆಸರು ಇಡಬೇಕಾ? ನಿಮಗಿಷ್ಟವಾಗುವಂತಹ ಆಕರ್ಷಕ ಹೆಸರುಗಳು ಇಲ್ಲಿವೆ

    • ನಿಮ್ಮ ಮುದ್ದು ಮಗನಿಗೆ ‘ಈ (E)’ ಅಕ್ಷರದಿಂದ ಬರುವ ಹೆಸರನ್ನಿಡಬೇಕಾ? ಇಲ್ಲಿದೆ ನಿಮಗೆ ಇಷ್ಟವಾಗುವಂತಹ ಹೆಸರುಗಳು ಮತ್ತು ಅವುಗಳ ಅರ್ಥ. ಇವು ದೇವರ ಹೆಸರನ್ನು ಸೂಚಿಸುವುದರ ಜೊತೆಗೆ ವಿಶೇಷ ಗುಣಗಳನ್ನು ಹೊಂದಿವೆ. 
ಮಗನಿಗೆ E ಅಕ್ಷರದಿಂದ ಪ್ರಾರಂಭವಾಗುವ ಹೆಸರು ಇಡಬೇಕಾ? ನಿಮಗಿಷ್ಟವಾಗುವಂತಹ ಆಕರ್ಷಕ ಹೆಸರುಗಳು ಇಲ್ಲಿವೆ
ಮಗನಿಗೆ E ಅಕ್ಷರದಿಂದ ಪ್ರಾರಂಭವಾಗುವ ಹೆಸರು ಇಡಬೇಕಾ? ನಿಮಗಿಷ್ಟವಾಗುವಂತಹ ಆಕರ್ಷಕ ಹೆಸರುಗಳು ಇಲ್ಲಿವೆ

ಮಗುವಿಗೆ ಹೆಸರಿಡುವುದೆಂದರೆ ಪೋಷಕರಿಗೆ ಏನೋ ಸಂತೋಷ ಜೊತೆಗೆ ಉತ್ಸಾಹ ಕೂಡಾ. ಮಗು ಹುಟ್ಟಿದ ಕೂಡಲೇ ಮಗುನಿನ ರಾಶಿ, ನಕ್ಷತ್ರದ ಮೇಲೆ ಬರುವ ಅಕ್ಷರದಿಂದ ಹೆಸರುಗಳನ್ನು ಇಡುವುದು ಹಿಂದಿನಿಂದಲೂ ನಡೆದುಕೊಂಡ ಬಂದ ಪದ್ಧತಿಯಾಗಿದೆ. ಇತ್ತಿಚೆಗೆ ಮಗುವಿಗೆ ದೇವರ ಹೆಸರಿನ ಅರ್ಥ ಬರುವ ಟ್ರೆಂಡಿಯಾಗಿರುವ ಹೆಸುಗಳನ್ನೇ ಹೆಚ್ಚಾಗಿ ಆಯ್ದುಕೊಳ್ಳುತ್ತಿದ್ದಾರೆ. ಹಿಂದೂ ದೇವರುಗಳ ಹೆಸರಿನ ಜೊತೆಗೆ ಆ ಹೆಸರಿನ ವೈಶಿಷ್ಟ್ಯವನ್ನು ತಿಳಿದು ನಿಮ್ಮ ಪುಟ್ಟ ಮಗನಿಗೆ ಹೆಸರಿಟ್ಟರೆ ಅದು ಎಷ್ಟು ಸಂತೋಷಕೊಡುತ್ತದೆಯಲ್ಲವೇ? ನೀವು ನಿಮ್ಮ ಮುದ್ದು ಮಗನಿಗೆ ‘ಈ (E)’ ಅಕ್ಷರದಿಂದ ಬರುವ ಹೆಸರುಗಳನ್ನು ಹುಡುಕುತ್ತಿದ್ದರೆ ಇಲ್ಲಿದೆ ಒಂದಿಷ್ಟು ಆಕರ್ಷಕ ಹೆಸರುಗಳು.

ಏಕದಂತ: ಇದು ಗಣಪತಿಯ ಇನ್ನೊಂದು ಹೆಸರಾಗಿದೆ. ಇದರ ಅರ್ಥ ಒಂದು ದಂತವನ್ನು ಹೊಂದಿದವನು ಎಂದು. ಇದು ಗಣಪತಿಗೆ ಇರುವ ವೈಶಿಷ್ಟ್ಯವನ್ನು ತೋರಿಸುತ್ತದೆ. ಈ ಹೆಸರನ್ನಿಟ್ಟುಕೊಂಡವರು ಉತ್ತಮ ಬಾಯಿ ಮತ್ತು ವಸಡಿನ ಆರೋಗ್ಯವನ್ನು ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ.

ಏಕದೃಷ್ಟ: ಇದೂ ಕೂಡಾ ಗಣಪತಿಯ ಹೆಸರೇ ಆಗಿದೆ. ಗಣಪತಿಯನ್ನು ಏಕದಂತ ಎಂದು ಪೂಜಿಸಲಾಗುತ್ತದೆ. ಈ ಹೆಸರು ನಿಮ್ಮ ಮಗನಿಗೆ ಇಡುವುದರಿಂದ ಗಣಪತಿಯ ಆಶೀರ್ವಾದ ದೊರೆಯುತ್ತದೆ.

ಈಶಾನ್ಪುತ್ರ: ಇದು ಬಹಳ ಅಪರೂಪದ ಹೆಸರಾಗಿದೆ. ಇದರ ಅರ್ಥ ಭಗವಾನ್‌ ಶಿವನ ಮಗ ಎಂದು. ಇದನ್ನು ಮಗುವಿಗೆ ಇಡುವುದುರಿಂದ ಅಧ್ಯಾತ್ಮದ ಒಲವೂ ಅವನಲ್ಲಿರುತ್ತದೆ ಎಂದು ನಂಬಲಾಗಿದೆ.

ಏಕಾಂಬರ: ನೀವು ನಿಮ್ಮ ಮಗನಿಗೆ ಶಿವನ ಹೆಸರು ಹುಡುಕುತ್ತಿದ್ದರೆ ಏಕಾಂಬರ ಹೆಸರನ್ನು ಇಡಬಹುದು. ಇದರ ಅರ್ಥ ಆಕಾಶವನ್ನೇ ಬಟ್ಟೆಯನ್ನಾಗಿ ಧರಿಸಿರುವವನು ಎಂಬುದನ್ನು ಹೇಳುತ್ತದೆ. ಈ ಹೆಸರು ಶಿವನಂತೆ ಗಾಂಭೀರ್ಯ, ಶಕ್ತಿ ಮತ್ತು ಅನಂತವಾಗಿರುವುದನ್ನು ಸೂಚಿಸುತ್ತದೆ.

ಈಶ್ವರ: ಹಿಂದೂ ಧರ್ಮದಲ್ಲಿ ಸುಂದರವಾದ ಮತ್ತು ಅಷ್ಟೇ ಜನಪ್ರಿಯವಾದ ಹೆಸರು ಇದಾಗಿದೆ. ಇದು ಕೂಡಾ ಶಿವನ ಹೆಸರೇ ಆಗಿದೆ. ಇದು ಏಕಾಗ್ರತೆ ಮತ್ತು ತಾಳ್ಮೆಯ ಗುಣಗಳಿಗೆ ಸಂಬಂಧಿಸಿದೆ.

ಏಕಾಕ್ಷ: ಇದು ಶಿವನ್ನನು ಪ್ರತಿನಿಧಿಸುವ ಹೆಸರಾಗಿದೆ. ಒಂದು ಕಣ್ಣು ಎನ್ನುವುದು ಇದರ ಅರ್ಥ. ಕಲಾತ್ಮಕವಾದ ಈ ಹೆಸರನ್ನು ಇಡಬಹುದು. ಈ ಹೆಸರು ಇಟ್ಟುಕೊಂಡವರು ಪ್ರವಾಸ ಪ್ರಿಯರು ಎಂದು ಹೇಳಲಾಗುತ್ತದೆ.

ಈಶಾನ್‌: ಇದು ಶಿವನ ಜನಪ್ರಿಯ ಹೆಸರು. ಬಹಳಷ್ಟು ಜನರು ತಮ್ಮ ಮಗನಿಗೆ ಈ ಹೆಸರನ್ನು ಇಡಲು ಬಯಸುತ್ತಾರೆ. ಇದು ಭಗವಾನ್‌ ಶಿವನ ಶಕ್ತಿಯನ್ನು ಸೂಚಿಸುವ ಹೆಸರಾಗಿದೆ.

ಏಕಲವ್ಯ: ಈ ಹೆಸರು ಪ್ರಾಚೀನ ಮಹಾಕಾವ್ಯವಾದ ಮಹಾಭಾರತವನ್ನು ನೆನಪಿಸುತ್ತದೆ. ಇದು ದ್ರೋಣಾಚಾರ್ಯರ ಮಾರ್ಗದರ್ಶನದಲ್ಲಿ ಬಿಲ್ಲುಗಾರನಾಗಬೇಕೆಂದು ಬಯಸಿದ ರಾಜಕುಮಾರನ ಹೆಸರಾಗಿದೆ. ಈ ಹೆಸರು ಸಂಕಲ್ಪ, ಏಕಾಗ್ರತೆ, ಸ್ವಾಲಂಬನೆ ಮತ್ತು ಪರಿಸ್ಥಿತಿಗಳನ್ನು ಎದುರಿಸಬಲ್ಲ ಶ್ರೇಷ್ಠ ವ್ಯಕ್ತಿ ಎಂಬುದನ್ನು ಸೂಚಿಸುತ್ತದೆ.

ಏಕನಾಥ: ಈ ಹೆಸರು ಭಗವಾನ್ ವಿಠ್ಠಲನ ಭಕ್ತನ ಹೆಸರಾಗಿದೆ. ಪ್ರಮುಖ ಮರಾಠಿ ಸಂತರಾದ ಜ್ಞಾನೇಶ್ವರ್ ಮತ್ತು ನಾಮದೇವ್ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಯ ಹೆಸರಾಗಿದೆ. ಈ ಹೆಸರನ್ನು ನಿಮ್ಮ ಮಗನಿಗೆ ಇಡುವುದರಿಂದ ಅವನಿಗೆ ಸಂಗೀತ ಮತ್ತು ಉತ್ತಮ ಮಾತಿನಂತಹ ಕೌಶಲ್ಯಗಳ ಆಶೀರ್ವಾದ ದೊರೆಯುತ್ತದೆ ಎಂದು ಹೇಳಲಾಗುತ್ತದೆ.

ಏಕಂವೀರ್: ಇದು ಸ್ವಾವಲಂಬಿ ಮತ್ತು ಧೈರ್ಯಶಾಲಿ ಗುಣಗಳನ್ನು ಸೂಚಿಸುವ ಹೆಸರಾಗಿದೆ. ನಿಮ್ಮ ಮಗನನ್ನು ನೀವು ಬಲಿಷ್ಠ ಮತ್ತು ಅದ್ವಿತೀಯ ಹೋರಾಟಗಾರನನ್ನಾಗಿಸಬೇಕೆಂದು ಕೊಂಡಿದ್ದರೆ ಈ ಹೆಸರು ಇಡಬಹುದು.

ಏಕ್ವೀರ್‌: ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯದಲ್ಲಿ ಏಕವೀರ ಮಾತೆಯನ್ನು ಪೂಜಿಸುವವರು ಹೆಚ್ಚಾಗಿ ಬಳಸುವ ಹೆಸರು ಇದಾಗಿದೆ. ನಿಮ್ಮ ಮಗನಿಗೆ ಈ ಹೆಸರು ಇಡುವುದರಿಂದ ಅವನು ದೇವಿಯ ಪ್ರೇರಣೆಯ ಮಗು ಎಂದು ಹೇಳಬಹುದಾಗಿದೆ.

ಈಶಾಂತ್‌: ನಿಮ್ಮ ಮಗ ಜೀವನದಲ್ಲಿ ಪ್ರಶಾಂತತೆಯನ್ನು ಪ್ರೀತಿಸುವವನಾಗಬೇಕು ಎಂದು ನೀವು ಬಯಸಿದರೆ ಈ ಹೆಸರು ಹೆಚ್ಚು ಸೂಕ್ತವಾಗಿದೆ. ಈ ಹೆಸರಿನ ಅರ್ಥವೇ ಶಾಂತಿಯುತವಾದ ಅಥವಾ ಪ್ರಶಾಂತವಾದ ಮನಸ್ಸು ಎಂಬುದನ್ನು ಹೇಳುತ್ತದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ