logo
ಕನ್ನಡ ಸುದ್ದಿ  /  ಜೀವನಶೈಲಿ  /  Veda Vyasa Jayanti 2023: ಇಂದು ವೇದವ್ಯಾಸ ಜಯಂತಿ; ವೇದಗಳನ್ನು ನಾಲ್ಕು ಭಾಗಗಳನ್ನಾಗಿ ವಿಂಗಡಿಸಿದ ವ್ಯಾಸರ ಬಗ್ಗೆ ಒಂದಷ್ಟು ಮಾಹಿತಿ

Veda Vyasa Jayanti 2023: ಇಂದು ವೇದವ್ಯಾಸ ಜಯಂತಿ; ವೇದಗಳನ್ನು ನಾಲ್ಕು ಭಾಗಗಳನ್ನಾಗಿ ವಿಂಗಡಿಸಿದ ವ್ಯಾಸರ ಬಗ್ಗೆ ಒಂದಷ್ಟು ಮಾಹಿತಿ

Rakshitha Sowmya HT Kannada

May 03, 2023 06:30 AM IST

google News

ವೇದವ್ಯಾಸ ಜಯಂತಿ 2023

    • ಪರಾಶರ ಮುನಿ ಮತ್ತು ಸತ್ಯವತಿಯರೇ ಇವರ ತಂದೆ ತಾಯಿ. ಒಮ್ಮೆ ಸರ್ವ ಸಂಗ ಪರಿತ್ಯಾಗಿಗಳಾದ ಪರಾಶರರು ಮೀನುಗಾರ ಹುಡುಗಿಗೆ ಮೋಹಿತರಾಗುತ್ತಾರೆ. ಆಕೆಯಿಂದ ಮಗುವನ್ನು ಪಡೆಯಲು ಬಯಸುತ್ತಾರೆ. ಆದರೆ ಆಕೆ ಅದನ್ನು ತಿರಸ್ಕರಿಸುತ್ತಾಳೆ. ನಂತರ ಕೆಲವೊಂದು ಷರತ್ತುಗಳನ್ನು ವಿಧಿಸಿ ಅದೇ ದಿನ ಗರ್ಭವತಿಯಾಗಿ ಗಂಡು ಮಗುವಿಗೆ ಜನ್ಮ ನೀಡುತ್ತಾಳೆ.
ವೇದವ್ಯಾಸ ಜಯಂತಿ 2023
ವೇದವ್ಯಾಸ ಜಯಂತಿ 2023 (PC: @Indic_Vibhu Twitter)

ಹಿಂದೂ ಮಹಾಕಾವ್ಯ ಮಹಾಭಾರತದ ಕತೃ ವೇದವ್ಯಾಸರು ಶ್ರೀಕೃಷ್ಣನ ಅವತಾರ ಎಂಬ ನಂಬಿಕೆ ಇದೆ. ವ್ಯಾಸರು ವೈಶಾಖ ಮಾಸದ ಶುಕ್ಲಪಕ್ಷದ ತ್ರಯೋದಶಿಯಂದು ಜನಿಸಿದ್ದು ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ. ಆದ್ದರಿಂದ ಅದೇ ದಿನ ವಿಶ್ವಾದ್ಯಂತ ವೇದವ್ಯಾಸ ಜಯಂತಿಯನ್ನು ಆಚರಿಸುತ್ತಾ ಬರಲಾಗಿದೆ. ಈ ವರ್ಷ ಇಂದು (ಮೇ 3) ವೇದವ್ಯಾಸರ ಜಯಂತಿಯನ್ನು ಆಚರಿಸಲಾಗುತ್ತಿದೆ.

ವೇದ ವ್ಯಾಸರು ಭವ್ಯವಾದ ಹಿಂದೂ ತತ್ವಶಾಸ್ತ್ರ, ನಾಗರಿಕತೆ ಮತ್ತು ಸಂಸ್ಕೃತಿ ಉಳಿಯಲು ಬೆಳೆಯಲು ಕಾರಣರಾಗಿದ್ದಾರೆ. ಅವರ ರೀತಿ ನೀತಿಯನ್ನು ಅನುಸರಿಸಲು ಮಾಡುವ ಪ್ರಯತ್ನವೇ ಅವರಿಗೆ ನೀಡುವ ಗೌರವ. ಯಾವುದೇ ಧರ್ಮಗ್ರಂಥಗಳಲ್ಲಿ ಪೂಜಾವಿಧಾನದ ಬಗ್ಗೆ ವಿವರಣೆ ಇಲ್ಲ. ಆದ್ದರಿಂದ ಸಾಮಾನ್ಯ ಶೋಡಚೋಪಚಾರ ಪೂಜೆಯನ್ನು ಮಾಡಬೇಕು. ಸ್ವಯಂ ಶ್ರೀ ವಿಷ್ಣುಭಗವಾನರೇ ಭಗವದ್ಗೀತೆಯ ವಿಭೂತಿ ಯೋಗದಲ್ಲಿ ವ್ಯಾಸರ ಜನ್ಮದ ಬಗ್ಗೆ ಮಾತನಾಡುತ್ತಾರೆ.

ವೇದವ್ಯಾಸರ ಜನನ

ವ್ಯಾಸ ಋಷಿಗಳ ಆಶ್ರಮವು ಬದರಿ ಕ್ಷೇತ್ರದ ಯಮುನಾ ನದಿಯ ದಡದಲ್ಲಿ ಇದೆ. ಆರಂಭದಲ್ಲಿ ಒಂದೇ ವೇದವಿತ್ತು. ಅದನ್ನು ನಾಲ್ಕು ಭಾಗಗಳನ್ನಾಗಿ ಮಾಡಿದವರೇ ಈ ವೇದವ್ಯಾಸರು. ಇವರ ನಿಜವಾದ ಹೆಸರು ವಸಿಷ್ಠ ಕೃಷ್ಣ.

ಪರಾಶರ ಮುನಿ ಮತ್ತು ಸತ್ಯವತಿಯರೇ ಇವರ ತಂದೆ ತಾಯಿ. ಒಮ್ಮೆ ಸರ್ವ ಸಂಗ ಪರಿತ್ಯಾಗಿಗಳಾದ ಪರಾಶರರು ಮೀನುಗಾರ ಹುಡುಗಿಗೆ ಮೋಹಿತರಾಗುತ್ತಾರೆ. ಆಕೆಯಿಂದ ಮಗುವನ್ನು ಪಡೆಯಲು ಬಯಸುತ್ತಾರೆ. ಆದರೆ ಆಕೆ ಅದನ್ನು ತಿರಸ್ಕರಿಸುತ್ತಾಳೆ. ನಂತರ ಕೆಲವೊಂದು ಷರತ್ತುಗಳನ್ನು ವಿಧಿಸಿ ಅದೇ ದಿನ ಗರ್ಭವತಿಯಾಗಿ ಗಂಡು ಮಗುವಿಗೆ ಜನ್ಮ ನೀಡುತ್ತಾಳೆ. ಆದರೂ ಆ ಹುಡುಗಿಯು ಕನ್ಯೆಯಾಗಿಯೇ ಉಳಿಯುತ್ತಾಳೆ. ಈ ಸಂದರ್ಭದಲ್ಲಿ ಪರಾಶರರು ಈ ಮಗುವು ವಿಷ್ಣುವಿನ ಅಂಶವಾಗಿದ್ದು, ನಾಲ್ಕು ದಿಕ್ಕಿನಲ್ಲಿಯೂ ಪ್ರಸಿದ್ದಿಯನ್ನು ಪಡೆಯುತ್ತಾನೆ ಎಂದು ಹೇಳುತ್ತಾರೆ.

ವೇದಗಳನ್ನು ನಾಲ್ಕು ಭಾಗಗಳನ್ನಾಗಿ ವಿಂಗಡಿಸಿದ ವ್ಯಾಸರು

ಕಾಲ ಕಳೆದಂತೆ ವೇದವ್ಯಾಸರು ತಮ್ಮ ಅತೀಂದ್ರಿಯ ಶಕ್ತಿಯಿಂದಾಗಿ ಜಗತ್ತಿನ ಆಗುಹೋಗುಗಳನ್ನು ಅರ್ಥೈಸಿಕೊಳ್ಳುತ್ತಾರೆ. ವೇದಗಳನ್ನು ನಾಲ್ಕು ಭಾಗಗಳನ್ನಾಗಿ ಮಾಡುತ್ತಾರೆ. ಭಾಗವತವನ್ನು ಕೂಡಾ ರಚಿಸುತ್ತಾರೆ. ಹದಿನೆಂಟು ಪುರಾಣಗಳು, ಉಪಪುರಾಣಗಳು ಮತ್ತು 600 ವರ್ಷಗಳ ಮುಂಚೆಯೇ ಮಹಾಭಾರತವನ್ನು ರಚಿಸಿ ಜಗತ್ತಿನೆಲ್ಲೆಡೆ ಪಸರಿಸಿದ್ದರು. ವಿಷ್ಣುಸಹಸ್ರನಾಮ ರಚನೆಯಲ್ಲೂ ವೇದವ್ಯಾಸರ ಪಾತ್ರ ಮಹತ್ತರವಾಗಿದೆ. ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ವೇದವ್ಯಾಸ ಜಯಂತಿಯನ್ನು ಆಚರಿಸಲಾಗುತ್ತದೆ.

ವ್ಯಾಸ ಮಹರ್ಷಿಗಳ ಶ್ಲೋಕ

ನಮೋಸ್ತು ತೇ ವ್ಯಾಸ ವಿಶಾಲಬುದ್ಧೇ ಫುಲ್ಲಾವಿಂದಾಯತಪತ್ರನೇತ್ರ |

ಯೇನ ತ್ವಯಾ ಭಾರತತೈಲಪೂರ್ಣಃ ಪ್ರಜ್ಜ್ವಾಲಿತೋ ಜ್ಞಾನಮಯಪ್ರದೀಪಃ||

ವ್ಯಾಸಂ ವಸಿಷ್ಠನಪ್ತಾರಂ ಶಕ್ತೇಃ ಪೌತ್ರಮಕಲ್ಮಷಮ್ |

ಪರಾಶರಾತ್ಮಜಂ ವಂದೇ ಶುಕತಾತಂ ತಪೋನಿಧಿಮ್||

ವ್ಯಾಸಾಯ ವಿಷ್ಣುರೂಪಾಯ ವ್ಯಾಸರೂಪಾಯ ವಿಷ್ಣವೇ |

ನಮೋ ವೈ ಬ್ರಹ್ಮನಿಧಯೇ ವಾಸಿಷ್ಠಾಯ ನಮೋ ನಮ:||

ಅಚತುರ್ವದನೋ ಬ್ರಹ್ಮಾ ದ್ವಿಬಾಹುರಪರೋ ಹರಿ: |

ಅಭಾಲಲೋಚನ: ಶಂಭುಃ ಭಗವಾನ್ ಬಾದರಾಯಣ: ||

ಮುನಿಂ ಸ್ನಿಗ್ಧಾಮಂಬುಜಾಭಾಸಂ ವೇದವ್ಯಾಸಮಕಲ್ಮಷಮ್ |

ವೇದವ್ಯಾಸಂ ಸರಸ್ವತ್ಯಾವಾಸಂ ವ್ಯಾಸಂ ನಮಾಮ್ಯಹಮ್ ||

ಋಷಿರ್ನಾಮ್ನಾಂ ಸಹಸ್ರಸ್ಯ ವೇದವ್ಯಾಸೋ ಮಹಾಮುನಿಃ |

ವ್ಯಾಸೋಚ್ಛಿಷ್ಟಂ ಜಗತ್ಸರ್ವಮ್ ||

ವೇದವ್ಯಾಸಂ ಸ್ವಾತ್ಮರೂಪಂ ಸತ್ಯಸಂಧಂ ಪರಾಯಣಮ್ |

ಶಾಂತಂ ಜಿತೇಂದ್ರಿಯಕ್ರೋಧಂ ಸಶಿಷ್ಯಂ ಪ್ರಣಮಾಮ್ಯಹಮ್ ||

ಪಾರಾಶರ್ಯಂ ಪರಮಪುರುಷಂ ವಿಶ್ವದೇವೈಕಯೋನಿಂ

ವಿದ್ಯಾವಂತಂ ವಿಪುಲಮತಿದಂ ವೇದವೇದಾಙ್ಗವೇದ್ಯಮ್ |

ಶಶ್ವಚ್ಛಾತಾಂ ಶಮಿತವಿಷಯಂ ಶುದ್ಧತೇಜೋ ವಿಶಾಲಂ

ವೇದವ್ಯಾಸಂ ವಿಗತಶಮಲಂ ಸರ್ವದಾಹಂ ನಮಾಮಿ ||

ಶ್ರವಣಾಞ್ಜಲಿಪುಟಪೇಯಂ ವಿರಚಿತವಾಂಭಾರತಾಖ್ಯಮಮೃತಂ ಯಃ |

ತಮಹಮರಾಗಮಕೃಷ್ಣಂ ಕೃಷ್ಣದ್ವೈಪಾಯನಂ ವಂದೇ ||

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ