logo
ಕನ್ನಡ ಸುದ್ದಿ  /  ಜೀವನಶೈಲಿ  /  Holi And Diet: ಹೋಳಿ ಸಂಭ್ರಮ, ಸಿಹಿ ತಿನಿಸುಗಳ ಸವಿಯ ಜೊತೆಗೆ ಡಯೆಟ್, ವರ್ಕೌಟ್‌ ಮೇಲೂ ಇರಲಿ ಗಮನ

Holi and diet: ಹೋಳಿ ಸಂಭ್ರಮ, ಸಿಹಿ ತಿನಿಸುಗಳ ಸವಿಯ ಜೊತೆಗೆ ಡಯೆಟ್, ವರ್ಕೌಟ್‌ ಮೇಲೂ ಇರಲಿ ಗಮನ

HT Kannada Desk HT Kannada

Mar 04, 2023 02:45 PM IST

google News

ಹೋಳಿ ಹಬ್ಬದ ಸಿಹಿತಿನಿಸು

    • Holi and diet: ಹೋಳಿ ಸಂಭ್ರಮ ಎಲ್ಲೆಡೆ ಜೋರಾಗಿದೆ. ಹೋಳಿಯಲ್ಲಿ ಬಣ್ಣಗಳ ಜೊತೆ ಸಿಹಿ ತಿನಿಸುಗಳೂ ಜೊತೆಯಾಗುತ್ತವೆ. ಸಿಹಿ ಕಂಡಾಕ್ಷಣ ನಾಲಿಗೆ ಚಪಲ ತೋರಿದರೆ, ದೇಹ ಡಯೆಟ್‌ ಬಗ್ಗೆ ಎಚ್ಚರಿಸುತ್ತದೆ. ಆದರೆ ಈ ಸಮಯದಲ್ಲಿ ದೇಹ ಎಚ್ಚರಿಕೆಯ ಬಗ್ಗೆಯೂ ಗಮನ ಹರಿಸಬೇಕಾಗುತ್ತದೆ.
ಹೋಳಿ ಹಬ್ಬದ ಸಿಹಿತಿನಿಸು
ಹೋಳಿ ಹಬ್ಬದ ಸಿಹಿತಿನಿಸು

ಹೋಳಿ ಹಬ್ಬ ಹಾಗೂ ದೇಹ ತೂಕ ಎರಡೂ ಒಟ್ಟಿಗೆ ಜೊತೆಯಾಗಿಯೆ ಸಾಗುತ್ತವೆ. ಕಾರಣ ಹಬ್ಬಕ್ಕೆಂದು ತಯಾರಿಸುವ ಕರ್ಜಿಕಾಯಿ, ಮಾಲ್ಪುಪಾ, ಥಂಡೈ, ಜಹಂಗೀರ್‌, ಪಾಯಸ ಸೇರಿದಂತೆ ಇನ್ನೂ ಹಲವು ಬಗೆಯ ಸಿಹಿ ತಿನಿಸುಗಳು ಎದುರಿಗೇ ಇದ್ದರೂ ತಿನ್ನದೇ ಇರಲು ಹೇಗೆ ಸಾಧ್ಯ. ಇದರಿಂದ ತೂಕ ಹೆಚ್ಚುವುದು ಸತ್ಯ. ಆ ಕಾರಣಕ್ಕೆ ಈಗಲೇ ಆರೋಗ್ಯಕರ ಆಹಾರಪದ್ಧತಿಯನ್ನು ಪಾಲಿಸುವ ಮೂಲಕ ತೂಕ ಹೆಚ್ಚಳವಾಗುವುದನ್ನು ತಡೆಯಬಹುದು. ಸ್ನೇಹಿತರು ಹಾಗೂ ಕುಟುಂಬಸ್ಥರು ಹೋಳಿ ಸಂಭ್ರಮದಲ್ಲಿ ಭಾಗವಹಿಸಲು ನಿಮ್ಮನ್ನು ಕರೆದರೆ ಪೋಷಕಾಂಶ ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸುವುದನ್ನು ಮರೆಯದಿರಿ. ಇದರೊಂದಿಗೆ ಸಾಕಷ್ಟು ನೀರು ಕುಡಿಯುವುದು ಮುಖ್ಯವಾಗುತ್ತದೆ.

ವರ್ಕೌಟ್‌ ಮೂಲಕ ದಿನವನ್ನು ಆರಂಭಿಸುವುದು, ಹಣ್ಣು-ತರಕಾರಿ ಸೇವನೆ, ರಾತ್ರಿ ಊಟವನ್ನು ಬೇಗನೆ ಮಾಡುವುದು, ರಾತ್ರಿ ಮಲಗುವ ಮೊದಲು ಗಿಡಮೂಲಿಕೆಯ ಟೀ ಕುಡಿಯುವುದು ಹೀಗೆ ಕೆಲವು ಫಿಟ್‌ನೆಟ್‌ ತಂತ್ರಗಳ ಬಗ್ಗೆ ಪೌಷ್ಟಿಕ ತಜ್ಞರು ಮಾಹಿತಿ ನೀಡಿದ್ದು ಹೋಳಿ ಸಂಭ್ರಮದ ನಡುವೆ ಇದನ್ನು ಅನುಸರಿಸುವುದನ್ನು ಮರೆಯದಿರಿ.

ʼಹೋಳಿ ಎಂದರೆ ಒಂದೆಡೆ ವಸಂತಕಾಲದ ಆರಂಭ, ಇನ್ನೊಂದೆಡೆ ಬಣ್ಣಗಳ ಸಂಭ್ರಮ. ಈ ಸಮಯದಲ್ಲಿ ಬಣ್ಣಗಳೊಂದಿಗೆ ಆಟವಾಡುವುದು ಮನಸ್ಸಿಗೆ ಚೈತನ್ಯ ನೀಡುವ ಜೊತೆಗೆ ಹಬ್ಬದ ಉತ್ಸಾಹವನ್ನೂ ಹೆಚ್ಚಿಸುತ್ತದೆ. ಇದರೊಂದಿಗೆ ಹಬ್ಬದಲ್ಲಿ ಕ್ಯಾಲೊರಿ ಅಧಿಕವಾಗಿರುವ ಆಹಾರಗಳನ್ನು ಸೇವಿಸಿರುತ್ತೇವೆ. ಆ ಕಾರಣಕ್ಕೆ ಸಂಭ್ರಮದ ಮೇಲೆ ಗಮನ ಹರಿಸುವುದರ ಜೊತೆ ಜೊತೆಗೆ ತೂಕ ನಿಯಂತ್ರಣದ ಮೇಲೂ ಗಮನ ಹರಿಸುವುದು ಅವಶ್ಯʼ ಎನ್ನುತ್ತಾರೆ ಡಾ. ಮಿಕ್ಕಿ ಮೆಹ್ತಾ.

ಮಿಕ್ಕಿ ಅವರ ಪ್ರಕಾರ ಸರಿಯಾದ ಸಮಯಕ್ಕೆ ಮಲಗುವುದು, ಆರೋಗ್ಯಕರ ಆಹಾರ ಸೇವನೆ ಹಾಗೂ ದೇಹದಂಡನೆ ಇದರಿಂದ ನಾವು ಸೇವಿಸುವ ಅಧಿಕ ಕ್ಯಾಲೊರಿ ತಿನಿಸುಗಳ ಪರಿಣಾಮ ದೇಹದ ಬೀರದಂತೆ ತಡೆಯಬಹುದು.

ಹಬ್ಬದ ಆಚರಣೆಗೂ ಮೊದಲು ಆಹಾರದಲ್ಲಿ ಶಿಸ್ತುಕ್ರಮ ಪಾಲಿಸುವುದರಿಂದ ಹಬ್ಬದ ದಿನಗಳಲ್ಲಿ ಕ್ಯಾಲೊರಿ ಪ್ರಮಾಣ ಕೊಂಚ ಹೆಚ್ಚಾದರೂ ಸಮಸ್ಯೆಯಾಗುವುದಿಲ್ಲ ಎನ್ನುತ್ತಾರೆ ಡಾ ಮೆಹ್ತಾ. ಇದರೊಂದಿಗೆ ಅವರು ನೀಡಿದ ಕೆಲವೊಂದು ಫಿಟ್‌ನೆಟ್‌ ಟಿಪ್ಸ್‌ಗಳು ಹೀಗಿವೆ.

ಬೆಳಗಿನ ವರ್ಕೌಟ್‌ ತಪ್ಪಿಸಬೇಡಿ

ಬೆಳಗಿನ ಹೊತ್ತು ಯಾವುದೇ ಕಾರಣಕ್ಕೂ ವರ್ಕೌಟ್‌ ಮಾಡುವುದನ್ನು ನಿಲ್ಲಿಸಬೇಡಿ. ಬೆಳಗಿನ ಹೊತ್ತು ದೇಹವನ್ನು ದಂಡಿಸುವುದರಿಂದ ಚಯಾಪಚಯ ಕ್ರಿಯೆಯ ಮಟ್ಟ ಸುಧಾರಿಸುತ್ತದೆ. ಇದರಿಂದ ಹಬ್ಬದ ಸಮಯದಲ್ಲಿನ ತಿನಿಸುಗಳಿಂದ ತೂಕ ಹೆಚ್ಚುವುದನ್ನು ತಡೆಯಬಹುದು.

ರಾತ್ರಿಯೂಟ ಬೇಗನೆ ಸೇವಿಸಿ

ರಾತ್ರಿಯೂಟವನ್ನು ಬೇಗನೆ ಮಾಡುವುದು, ಗಿಡಮೂಲಿಕೆಗಳಿಂದ ತಯಾರಿಸಿದ ಟೀ ಕುಡಿಯುವುದು, ತರಕಾರಿಗಳಿಂದ ತಯಾರಿಸಿದ ಜ್ಯೂಸ್‌, ಹಣ್ಣು ಹಾಗೂ ತರಕಾರಿಗಳ ಸೇವನೆ, ಸಲಾಡ್‌ ಇವುಗಳ ಸೇವನೆ ಉತ್ತಮ. ಅಲ್ಲದೇ ತೂಕ ನಿಯಂತ್ರಣಕ್ಕೂ ಇವು ಸಹಾಯ ಮಾಡುತ್ತವೆ. ದೇಹಕ್ಕೆ ಬೇಕಾಗುವ ಪೋಷಕಾಂಶಗಳನ್ನು ಒದಗಿಸುವ ಜೊತೆಗೆ ದೇಹವನ್ನು ಹಬ್ಬಕ್ಕೆ ತಯಾರು ಮಾಡುತ್ತವೆ. ಆರೋಗ್ಯಕರ ಪೌಷ್ಟಿಕ ಆಹಾರ ದೇಹವನ್ನು ಶುದ್ಧೀಕರಿಸುತ್ತದೆ. ಅಲ್ಲದೇ ಕ್ಯಾಲೊರಿ ಮಟ್ಟ ಕಡಿಮೆಯಾಗಲು ಸಹಾಯ ಮಾಡುತ್ತದೆ.

ಗಿಡಮೂಲಿಕೆ ಚಹಾ

ಹಲವು ಬಗೆಯ ಗಿಡಮೂಲಿಕೆಯ ಟೀಗಳನ್ನು ಮನೆಯಲ್ಲೇ ತಯಾರಿಸಿ ಕುಡಿಯಬಹುದು. ಹಣ್ಣು, ತರಕಾರಿ ಹಾಗೂ ಸಲಾಡ್‌ ಸೇವನೆಯ ಜೊತೆಗೆ ಆರು ಕಪ್‌ನಷ್ಟು ಗಿಡಮೂಲಿಕೆಯ ಟೀ ಕುಡಿಯುವುದು ಉತ್ತಮ.

ವೆಜಿಟೇಬಲ್‌ ಸೂಪ್‌

ಊಟದ ಸಮಯದಲ್ಲಿ ಸೂಪ್‌ ಕುಡಿಯುವ ಅಭ್ಯಾಸ ಬಹಳ ಒಳ್ಳೆಯದು. ಸೋರೆಕಾಯಿ, ಟೊಮೆಟೊ, ಕ್ಯಾರೆಟ್‌, ಕುಂಬಳಕಾಯಿ, ಪಾಲಕ್‌ ಹೀಗೆ ಎಲ್ಲಾ ತರಕಾರಿಗಳಿಂದ ತಯಾರಿಸಿದ ಸೂಪ್‌ ಕುಡಿಯಬಹುದು, ಇದು ಸಹ್ಯವಾಗದವರು ನಿಮಗೆ ಇಷ್ಟವಾದ ತರಕಾರಿಯಿಂದ ಸೂಪ್‌ ತಯಾರಿಸಿ ಕುಡಿಯಬಹುದು. ಯಾಮ್‌, ಸಿಹಿಗೆಣಸು, ಮೆಂತೆ, ಪಾಲಕ್‌ನಂತಹ ಸೊಪ್ಪುಗಳು, ಬ್ರೊಕೊಲಿ, ಎಲೆಕೋಸು, ಹೂಕೋಸಿನಂತಹ ಕ್ರೂಸಿಫೆರಸ್ ತರಕಾರಿಗಳನ್ನು ನಿಮ್ಮ ಸೂಪ್‌ನೊಂದಿಗೆ ಸೇರಿಸಿಕೊಳ್ಳಬಹುದು. ಇದರೊಂದಿಗೆ ಮೊಳಕೆ ಬರಿಸಿದ ಧಾನ್ಯಗಳನ್ನು ಸೇರಿಸಿಕೊಳ್ಳಬಹುದು.

ಕಿಚಡಿ

ತರಕಾರಿ ಸೂಪ್‌ನೊಂದಿಗೆ ಊಟದ ಹೊತ್ತಿನಲ್ಲಿ ಕಿಚಡಿಯನ್ನು ಸೇವಿಸಬಹುದು. ಹೆಸರುಬೇಳೆಯೊಂದಿಗೆ ಬಟಾಣಿ, ಕ್ಯಾರೆಟ್‌, ಫ್ರೆಂಚ್‌ ಬೀನ್ಸ್‌, ಸೋರೆಕಾಯಿ ಹಾಗೂ ಹೂಕೋಸು ಹಾಕಿ ತಯಾರಿಸಿದ ಕಿಚಡಿ ಮಧ್ಯಾಹ್ನದ ಊಟದ ಸಮಯದಲ್ಲಿ, ಹೆಸರುಬೇಳೆ, ಜೀರಿಗೆ ಸೇರಿಸಿದ ಅನ್ನ ಹಾಗೂ ಶುಂಠಿ ಹಾಗೂ ಬೆಳ್ಳುಳ್ಳಿ ಹಾಕಿ ಮಾಡಿದ ಕಿಚಡಿಯನ್ನು ರಾತ್ರಿ ವೇಳೆ ತಿನ್ನಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ