logo
ಕನ್ನಡ ಸುದ್ದಿ  /  ಜೀವನಶೈಲಿ  /  Kitchen Tips: ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರಬಾರದು ಅಂದ್ರೆ ಈ ಟಿಪ್ಸ್‌ ಅನುಸರಿಸಿ

Kitchen Tips: ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರಬಾರದು ಅಂದ್ರೆ ಈ ಟಿಪ್ಸ್‌ ಅನುಸರಿಸಿ

Reshma HT Kannada

Sep 03, 2023 12:48 PM IST

google News

ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬಾರದಂತೆ ತಡೆಯಲು ಟಿಪ್ಸ್‌

    • Onion Cutting Tips: ಜೀವನದಲ್ಲಿ ದೊಡ್ಡ ಸವಾಲಿನ ಕೆಲಸ ಯಾವುದು ಎಂದು ಕೆಲವರ ಬಳಿ ಕೇಳಿದ್ರೆ ʼಈರುಳ್ಳಿ ಕಟ್‌ ಮಾಡೋದುʼ ಅಂತ ತಮಾಷೆಯಾಗಿ ಹೇಳ್ತಾರೆ. ಆ ಕ್ಷಣಕ್ಕೆ ಇದು ತಮಾಷೆ ಅನ್ನಿಸಬಹುದು. ಆದರೆ ಈ ಮಾತು ನಿಜ ಅನ್ನುವುದು ಸುಳ್ಳಲ್ಲ. ಹಾಗಾದ್ರೆ ಕಣ್ಣಲ್ಲಿ ನೀರು ಬಾರದೇ ಈರುಳ್ಳಿ ಕಟ್‌ ಮಾಡೋದು ಸಾಧ್ಯವಿಲ್ವಾ? ಖಂಡಿತ ಇದೆ. ಈ ಸಿಂಪಲ್‌ ಟಿಪ್ಸ್‌ ಅನುಸರಿಸಿ ನೋಡಿ.
 ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬಾರದಂತೆ ತಡೆಯಲು ಟಿಪ್ಸ್‌
ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬಾರದಂತೆ ತಡೆಯಲು ಟಿಪ್ಸ್‌

ಅಡುಗೆ ಮಾಡುವ ವಿಚಾರಕ್ಕೆ ಬಂದಾಗ ಈರುಳ್ಳಿ ಕತ್ತರಿಸುವುದೇ ಕೆಲವರಿಗೆ ಸವಾಲು ಎನ್ನಿಸುತ್ತದೆ. ʼಅಡುಗೆಯೇನೊ ಚಕ್‌ ಚಕ್‌ ಅಂತ ಮಾಡಬಹುದು, ಆದ್ರೆ ಈರುಳ್ಳಿ ಕಟ್‌ ಮಾಡೋದು ಇದ್ಯಾಯಲ್ಲ, ಭಗವಂತ ನನ್‌ ಕೈಲಿ ಆಗೊಲ್ಲʼ ಎಂದು ಗೋಳು ತೋಡಿಕೊಳ್ಳುತ್ತಾರೆ. ಒಂದು ಈರುಳ್ಳಿ ಕಟ್‌ ಮಾಡೋವಷ್ಟರಲ್ಲಿ ಸಾಕು ಸಾಕಾಗಿರುತ್ತೆ, ಒಂದು ಈರುಳ್ಳಿ ಕಟ್‌ ಮಾಡೋಕೆ ಕನಿಷ್ಠ 15 ನಿಮಿಷ ತೆಗೆದುಕೊಳ್ಳುವವರೂ ಇದ್ದಾರೆ.

ಸಾಮಾನ್ಯ ದಿನಗಳಲ್ಲಿ ಹೇಗೋ ಕಷ್ಟಪಟ್ಟು ಒಂದು ಈರುಳ್ಳಿ ಕತ್ತರಿಸಬಹುದು, ಆದರೆ ಮನೆಯಲ್ಲಿ ವಿಶೇಷ ಕಾರ್ಯಕ್ರಮಗಳು, ಹಬ್ಬಗಳು ಇದ್ದಾಗ ಏನು ಕಥೆ, ಆಗ ಹೆಚ್ಚು ಈರುಳ್ಳಿ ಹೆಚ್ಚಬೇಕಾಗುತ್ತದೆ. ಆಗ ನಿಮ್ಮ ಕಣ್ಣಿಂದ ಬಳ ಬಳ ನೀರು ಸುರಿಯೋದು ಖಂಡಿತ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಲೇಖನಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಹಾಗಂತ ಭಯ ಪಡುವ ಅಗತ್ಯವಿಲ್ಲ. ಈ ಕೆಲವು ಸಿಂಪಲ್‌ ಟಿಪ್ಸ್‌ ಅನುಸರಿಸಿದ್ರೆ ಈರುಳ್ಳಿ ಕತ್ತರಿಸುವಾಗ ಖಂಡಿತ ಕಣ್ಣೀರು ಬರುವುದಿಲ್ಲ. ಅಲ್ಲದೆ, ಕಣ್ಣುರಿಯೂ ಆಗುವುದಿಲ್ಲ. ಹಾಗಾದ್ರೆ ಏನು ಆ ಟಿಪ್ಸ್‌ ನೋಡಿ.

ಕತ್ತರಿಸುವ ಮೊದಲು ಪ್ರಿಜ್‌ನಲ್ಲಿಡಿ

ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರುವುದನ್ನು ತಡೆಯಲು ಈರುಳ್ಳಿ ಸಿಪ್ಪೆ ತೆಗೆದು ಅರ್ಧಗಂಟೆಗಳ ಕಾಲ ಈರುಳ್ಳಿಯನ್ನು ಫ್ರೀಜರ್‌ನಲ್ಲಿ ಇರಿಸಬೇಕು. ನಂತರ ಹೊರ ತೆಗೆದು ಹೆಚ್ಚಿಸಿದರೆ ಖಂಡಿತ ಕಣ್ಣೀರು ಬರುವುದಿಲ್ಲ ಮತ್ತು ಈರುಳ್ಳಿಯನ್ನು ಸುಲಭವಾಗಿ ಕತ್ತರಿಸಬಹುದು.

ತಣ್ಣೀರಿನಲ್ಲಿ ನೆನೆಸಿಡಿ

ಈರುಳ್ಳಿಯನ್ನು ಸಿಪ್ಪೆ ತೆಗೆದು ಒಂದರ್ಧ ಗಂಟೆ ಹೊತ್ತು ಈರುಳ್ಳಿಯನ್ನು ತಣ್ಣನೆಯ ನೀರಿನಲ್ಲಿ ನೆನೆಸಿಡಿ. ನಂತರ ನೀರಿನಿಂದ ಹೊರ ತೆಗೆದು ಚೆನ್ನಾಗಿ ಒರೆಸಿ ಕತ್ತರಿಸಿ. ಇದರಿಂದ ಕಣ್ಣೀರು ಬರುವುದಿಲ್ಲ. ಒರೆಸದೇ ಇದ್ದರೆ, ಕತ್ತರಿಸುವಾಗ ಕೈ ಜಾರಿ ಚಾಕು ಅಥವಾ ಕತ್ತಿ ಕೈಗೆ ತಾಕುವುದರಿಂದ ಗಾಯವಾಗಬಹುದು.

ಹರಿತವಾದ ಚಾಕು ಬಳಸಿ

ಈರುಳ್ಳಿ ಕತ್ತರಿಸುವಾಗ ಹರಿತವಾದ ಚಾಕು ಬಳಸುವುದು ಅವಶ್ಯ. ಇದರಿಂದ ನೀವು ಬೇಗ ಬೇಗ ಈರುಳ್ಳಿ ಹೆಚ್ಚಬಹುದು. ಆಗ ಕಣ್ಣುರಿ, ಕಣ್ಣೀರು ಬಾರದೇ ಕಣ್ಣು ಸುಲಭವಾಗಿ ಹಾಗೂ ಚುರುಕಾಗಿ ಈರುಳ್ಳಿ ಕತ್ತರಿಸಬಹುದು.

ಬ್ರೆಡ್‌ ತಿನ್ನಿ

ಇದೇನಪ್ಪಾ, ನಾವು ಕೇಳಿದ್ದು ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬಾರದೇ ಇರಲು ಏನು ಮಾಡಬಹುದು ಅಂತ, ಇವರು ನೋಡಿದ್ರೆ ಬ್ರೆಡ್‌ ತಿನ್ನಿ ಅಂತಾರಲ್ಲ ಅಂದಕೊಳ್ಳಬೇಡಿ. ಇದು ತಮಾಷೆ ಅನ್ನಿಸಿದ್ರೂ ನಿಜ. ಈ ಐಡಿಯಾ ಖಂಡಿತ ನಿಮಗೆ ಸಹಾಯವಾಗುತ್ತದೆ. ಈರುಳ್ಳಿ ಕತ್ತರಿಸುವಾಗ ಬ್ರೆಡ್‌ ತುಂಡನ್ನು ಬಾಯಲ್ಲಿ ಇರಿಸಿಕೊಳ್ಳಿ. ಬ್ರೆಡ್‌ ತುಂಡನ್ನು ಬಾಯಲ್ಲಿ ಇರಿಸಿಕೊಂಡು ಈರುಳ್ಳಿ ಕಟ್‌ ಮಾಡಿದ್ರೆ ಈರುಳ್ಳಿ ಅನಿಲವನ್ನು ಬ್ರೆಡ್‌ ಹೀರಿಕೊಂಡು ಕಣ್ಣುರಿ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ಇದನ್ನು ನೀವೂ ಒಮ್ಮೆ ಟ್ರೈ ಮಾಡಿ.

ಸನ್‌ಗ್ಲಾಸ್‌ ಹಾಕಿ

ಬಿಸಿಲಿಗೆ ಹೋಗುವಾಗ ಮಾತ್ರವಲ್ಲ, ಈರುಳ್ಳಿ ಕತ್ತರಿಸುವಾಗಲೂ ಸನ್ ಗ್ಲಾಸ್ ಹಾಕಿಕೊಂಡರೆ ಕಣ್ಣಿನ ಉರಿಯೂತ ಕಡಿಮೆಯಾಗುತ್ತದೆ. ಈರುಳ್ಳಿ ಕತ್ತರಿಸುವಾಗ ಈ ವಿಧಾನವು ತುಂಬಾ ಉಪಯುಕ್ತವಾಗಿದೆ. ಇದು ನಿಮಗೆ ಸಹಾಯವಾಗೋದು ಖಂಡಿತ.

ಬುಡದ ಭಾಗ ಮೇಲಿರಿಸಿ

ಸಾಮಾನ್ಯವಾಗಿ ಈರುಳ್ಳಿಯನ್ನು ಕತ್ತರಿಸುವಾಗ ಮೇಲ್ಭಾಗದಿಂದ ಕತ್ತರಿಸುತ್ತೇವೆ. ಆದರೆ ಅದನ್ನು ತಲೆಕೆಳಗಾಗಿಸಿ ಕತ್ತರಿಸುವುದರಿಂದ ಕಣ್ಣುಗಳ ಉರಿ ಉಂಟಾಗುವುದು ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ.

ಗ್ಯಾಸ್‌ ಅಥವಾ ಮೇಣದ ಬತ್ತಿ ಉರಿಸಿ

ಈರುಳ್ಳಿ ಕತ್ತರಿಸುವ ಸಂದರ್ಭ ಗ್ಯಾಸ್‌ ಆನ್‌ ಇರಿಸಿಕೊಳ್ಳಿ ಅಥವಾ ಮೇಣದಬತ್ತಿಯನ್ನು ಉರಿಸಿ. ಆಗ ಈರುಳ್ಳಿಯಲ್ಲಿ ಇರುವ ಗಂಧಕವು ಜ್ವಾಲೆಯಲ್ಲಿ ಹೀರಲ್ಪಡುತ್ತದೆ. ಇದರಿಂದ ಕಣ್ಣು ಉರಿಯುವುದು ಕಡಿಮೆಯಾಗಿ ಕಣ್ಣೀರು ಬರುವುದಿಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ