logo
ಕನ್ನಡ ಸುದ್ದಿ  /  ಜೀವನಶೈಲಿ  /  Kitchen Garden: ಟೊಮೆಟೊ ದರ ಏರಿಕೆ ಚಿಂತೆ ಬಿಡಿ, ಮನೆಯಲ್ಲೇ ಫಲವತ್ತಾದ ಟೊಮೆಟೊ ಬೆಳಿಯೋಕೆ ಈ ಟಿಪ್ಸ್‌ ಅನುಸರಿಸಿ

Kitchen Garden: ಟೊಮೆಟೊ ದರ ಏರಿಕೆ ಚಿಂತೆ ಬಿಡಿ, ಮನೆಯಲ್ಲೇ ಫಲವತ್ತಾದ ಟೊಮೆಟೊ ಬೆಳಿಯೋಕೆ ಈ ಟಿಪ್ಸ್‌ ಅನುಸರಿಸಿ

Reshma HT Kannada

Nov 16, 2023 08:00 PM IST

google News

ಮನೆಯಲ್ಲೇ ಫಲವತ್ತಾದ ಟೊಮೆಟೊ ಬೆಳಿಯೋಕೆ ಈ ಟಿಪ್ಸ್‌ ಅನುಸರಿಸಿ

    • ಟೊಮೆಟೊ ಇಲ್ದೆ ಅಡುಗೆ ಇಲ್ಲ ಅನ್ನೋವಷ್ಟು ಟೊಮೆಟೊ ನಾವು ಅಡಿಕ್ಟ್‌ ಆಗಿದ್ದೇವೆ. ಆದರೆ ಒಮ್ಮೊಮ್ಮೆ ಟೊಮೆಟೊ ದರ ಏರಿಕೆ ಆಗೋದು ನೋಡಿ, ಟೊಮೆಟೊ ಬಳಸೋಕೆ ಭಯ ಆಗುತ್ತೆ. ಅದಕ್ಕಾಗಿ ಮನೆಯಲ್ಲೇ ಸುಲಭವಾಗಿ ಟೊಮೆಟೊ ಬೆಳ್ಕೋಬಹುದು. ಮನೆಯ ಕಿಚನ್‌ ಗಾರ್ಡನ್‌ನಲ್ಲಿ ಸುಲಭವಾಗಿ ಬೆಳೆಯುವ ತರಕಾರಿ ಎಂದರೆ ಅದು ಟೊಮೆಟೊ.
ಮನೆಯಲ್ಲೇ ಫಲವತ್ತಾದ ಟೊಮೆಟೊ ಬೆಳಿಯೋಕೆ ಈ ಟಿಪ್ಸ್‌ ಅನುಸರಿಸಿ
ಮನೆಯಲ್ಲೇ ಫಲವತ್ತಾದ ಟೊಮೆಟೊ ಬೆಳಿಯೋಕೆ ಈ ಟಿಪ್ಸ್‌ ಅನುಸರಿಸಿ

ಭಾರತದಲ್ಲಿ ಬಹುತೇಕ ಅಡುಗೆ ಟೊಮೆಟೊ ಇಲ್ಲದೆ ಪರಿಪೂರ್ಣವಾಗುವುದಿಲ್ಲ. ಟೊಮೆಟೊದಲ್ಲಿನ ಹುಳಿ ರುಚಿಯು ಬಹುತೇಕ ಎಲ್ಲಾ ಖಾದ್ಯಗಳ ರುಚಿ ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ. ಟೊಮೆಟೊಗೆ ಯಾವ ಕಾಲದಲ್ಲೂ ಬೇಡಿಕೆ ಕಡಿಮೆಯಾಗುತ್ತದೆ ಅನ್ನುವುದೂ ಇರುವುದಿಲ್ಲ. ಇದನ್ನು ಸುಲಭವಾಗಿ ಅಡುಗೆಮನೆಯಲ್ಲೂ ಬೆಳೆದುಕೊಳ್ಳಬಹುದು. ನೀವು ಈ ಕೆಳಗಿನ ಟಿಪ್ಸ್‌ ಫಾಲೋ ಮಾಡುವ ಮೂಲಕ ಅಡುಗೆಮನೆಯಲ್ಲಿ ಜ್ಯೂಸಿ, ಟೇಸ್ಟಿ, ಫಲವತ್ತಾದ ಟೊಮೆಟೊಗಳನ್ನು ಬೆಳೆದುಕೊಳ್ಳಬಹುದು.

ಸೂರ್ಯನ ಬಿಸಿಲು ಬೀಳುವ ಜಾಗ ಆರಿಸಿಕೊಳ್ಳಿ

ಟೊಮೆಟೊವು ಬೆಚ್ಚಗಿನ ಹವಾಮಾನದಲ್ಲಿ ಬೆಳೆಯುತ್ತದೆ. ಆದರೆ ಇದಕ್ಕೆ ಸೂರ್ಯನ ಬೆಳಕು ಅವಶ್ಯ. ಹಾಗಾಗಿ ಟೊಮೆಟೊ ಗಿಡದ ಪಾಟ್‌ ಅನ್ನು ಸಾಕಷ್ಟು ಸೂರ್ಯನ ಬೆಳಕು ಬೀಳುವ ಜಾಗದಲ್ಲಿ ಇರಿಸಿ. ಟೊಮೆಟೊ ಸಸಿ ಚೆನ್ನಾಗಿ ಬೆಳೆಯಬೇಕು ಅಂದರೆ ಈ ಗಿಡವನ್ನು ಕನಿಷ್ಠ 6 ಗಂಟೆಗಳ ಕಾಲ ಬಿಸಿಲಿನಲ್ಲಿ ಇರಿಸಬೇಕು. ಒಂದು ಕಿಚನ್‌ ಗಾರ್ಡನ್‌ನಲ್ಲಿ ನೇರವಾಗಿ ಗಿಡ ನೆಡುವ ಅವಕಾಶ ಇದ್ದರೆ, ಈ ಜಾಗದಲ್ಲಿ ಸೂರ್ಯನ ಬೆಳಕು ಬೀಳುವುದೋ ಇಲ್ಲವೋ ಗಮನಿಸಿ.

ಮಣ್ಣನ್ನು ಗಮನಿಸಿ

ಟೊಮೆಟೊ ಹೆಚ್ಚು ತೇವಾಂಶ ಇಲ್ಲದ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ಆದ್ದರಿಂದ ಗಿಡ ನೆಡಲು ನೀವು ಬಳಸುತ್ತಿರುವ ಮಣ್ಣು ಒದ್ದೆಯಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಅತಿಯಾಗಿ ನೀರಿನಂಶ ಇದ್ದರೆ ಟೊಮೆಟೊ ಬೇರುಗಳು ಕೊಳೆಯಬಹುದು. ಆದರೆ ಆಗಾಗ ಗಿಡಗಳಿಗೆ ನೀರುಣಿಸಲು ಮರೆಯಬಾರದು. ಮಧ್ಯಮ ಪ್ರಮಾಣದಲ್ಲಿ ನೀರು ಹನಿಸುವುದರಿಂದ ಗಿಡಗಳಿಗೆ ತೊಂದರೆಯಾಗುವುದಿಲ್ಲ.

ರಸಗೊಬ್ಬರಗಳು ಅಗತ್ಯ

ಟೊಮೆಟೊ ಚೆನ್ನಾಗಿ ಬೆಳೆಯಲು ಉತ್ತಮ ಪೌಷ್ಟಿಕ ಮತ್ತು ಸಮತೋಲಿತ ಗೊಬ್ಬರದ ಅಗತ್ಯವಿದೆ. ಕೆಂಬಣ್ಣ, ರುಚಿಯಾದ ಫಲವತ್ತಾದ ಟೊಮೆಟೊ ಬೇಕು ಎಂದರೆ ಸಾರಜನಕ, ಪೊಟ್ಯಾಶಿಯಂ ಮತ್ತು ರಂಜಕದಿಂದ ಸಮೃದ್ಧವಾಗಿರು ರಸಗೊಬ್ಬರಗಳನ್ನು ನಿಯಮಿತವಾಗಿ ಬಳಸಬೇಕು.

ಗಿಡಗಳು ಬಾಗದಂತೆ ತಡೆಗೋಲು ಅಳವಡಿಸಿ

ಟೊಮೆಟೊ ಸಸಿಯ ಕಾಂಡಗಳು ಸೂಕ್ಷ್ಮವಾಗಿರುತ್ತವೆ. ಟೊಮೆಟೊ ಕಾಯಿಗಳು ಹೆಚ್ಚಾದಂತೆ ಭಾರದಿಂದ ಕಾಂಡಗಳು ಮುರಿಯಬಹುದು. ಇದರಿಂದ ಸಸಿಗೆ ತೊಂದರೆಯಾಗತ್ತದೆ. ಇದನ್ನು ತಪ್ಪಿಸಲು ಕಾಂಡಕ್ಕೆ ಕೋಲಿನಿಂದ ಒದೆ ಕೊಡಿ. ಗೋಡೆಗೂ ಒರಗಿಸಿ ಗಿಡವನ್ನು ರಕ್ಷಿಸಬಹುದು.

ನಿಯಮಿತ ತಪಾಸಣೆ

ಟೊಮೆಟೊ ಸಸಿಗಳು ರೋಗ ಮತ್ತು ಕೀಟಗಳಿಗೆ ಬೇಗನೆ ಗುರಿಯಾಗುತ್ತವೆ. ಆದ್ದರಿಂದ ಸಸ್ಯಗಳನ್ನು ಸೋಂಕಿನಿಂದ ರಕ್ಷಿಸಲು ನಿಯಮಿತವಾಗಿ ಮೇಲ್ವಿಚಾರಣೆ ಮಾಡುವುದು ಮುಖ್ಯ. ಕೀಟಗಳಿಂದ ಗಿಡವನ್ನು ರಕ್ಷಿಸಲು ಕೀಟ ನಿರೋಧಕ ರಾಸಾಯನಿಕಗಳನ್ನು ಸಿಂಪಡಿಸಬಹುದು.

ಇದನ್ನೂ ಓದಿ

Kitchen Tips: ತರಕಾರಿಗಳನ್ನು ಕೆಡದಂತೆ ಸಂಗ್ರಹಿಸಿಡಲು ಬೇಕು ಕೌಶಲ; ಉದ್ಯೋಗಸ್ಥ ಮಹಿಳೆಯರ ಬದುಕು ಸುಲಭಗೊಳಿಸುವ ಉಪಾಯಗಳಿವು

Kitchen tips for working women: ತರಕಾರಿಗಳನ್ನು ಬಹಳ ದಿನಗಳವರೆಗೆ ಕೆಡದಂತೆ ಫ್ರಿಜ್‌ನಲ್ಲಿಡುವುದು ಹೇಗೆ? ಆ ಕೌಶಲ ತಿಳಿದುಕೊಂಡರೆ, ಅದು ಉದ್ಯೋಗಸ್ಥ ಮಹಿಳೆಯರ ಸಮಯ ಉಳಿಸುತ್ತದೆ. ನಾವು ಹೇಳಿದ ಮೂರು ವಿಧಾನಗಳನ್ನು ಪಾಲಿಸಿ, ಅಡುಗೆಮನೆಯಲ್ಲಿ ವ್ಯರ್ಥವಾಗುವ ಸಮಯ ಉಳಿಸಿಕೊಳ್ಳಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ