Pressure Cooker: ಫಸ್ಟ್‌ಟೈಮ್ ಫ್ರೆಶರ್ ಕುಕ್ಕರ್ ಬಳಸ್ತಾ ಇದೀರಾ, ಚಿಂತೆ ಮಾಡ್ಬೇಡಿ; ನಿಮಗಾಗಿ ಇಲ್ಲಿದೆ 5 ಅಗತ್ಯ ಟಿಪ್ಸ್
Dec 08, 2023 04:35 PM IST
ಸಾಂಕೇತಿಕ ಚಿತ್ರ
- ಅಡುಗೆ ಮಾಡೋಕೆ ಕಲಿಬೇಕು ಅಂದ್ರೆ ಅಡುಗೆಮನೆಯಲ್ಲಿ ಬಳಸುವ ಪಾತ್ರೆಗಳ ಬಗ್ಗೆಯೂ ತಿಳಿದಿರಬೇಕು. ಈಗಿನ ಕಾಲದ ಅಡುಗೆ ಮನೆ ಅಂದ್ರೆ ಫ್ರೆಶರ್ ಕುಕ್ಕರ್ ಇದ್ದೇ ಇರುತ್ತೆ. ನೀವು ಮೊದಲ ಬಾರಿ ಫ್ರೆಶರ್ ಕುಕ್ಕರ್ ಬಳಕೆ ಮಾಡ್ತಾ ಇದೀರಾ ಅಂದ್ರೆ ನಿಮಗಾಗಿ ಇಲ್ಲಿದೆ 5 ಅಗತ್ಯ ಟಿಪ್ಸ್
ಅಡುಗೆ ಮಾಡುವವರಿಗೆ ರುಚಿ ರುಚಿಯಾದ ಖಾದ್ಯಗಳನ್ನು ತಯಾರಿಸುವುದು ಮಾತ್ರವಲ್ಲ, ಅಡುಗೆಮನೆಯಲ್ಲಿ ಬಳಕೆಯಾಗುವ ಪಾತ್ರೆಗಳು ಸೇರಿದಂತೆ ಸಕಲ ವಸ್ತುಗಳ ಬಳಕೆಯ ಬಗ್ಗೆಯೂ ಅರಿವಿರಬೇಕು. ಅಡುಗೆಮನೆ ಎಂದ ಮೇಲೆ ಕುಕ್ಕರ್ ಇದ್ದೇ ಇರುತ್ತದೆ. ಹಿಂದೆಲ್ಲಾ ಪಾತ್ರೆಗಳ ಬಳಕೆ ಇತ್ತು. ಆದರೆ ಈಗ ಫ್ರೆಶರ್ ಕುಕ್ಕರ್ ಆ ಜಾಗವನ್ನು ಆವರಿಸಿಕೊಂಡಿದೆ. ಫ್ರೆಶರ್ ಕುಕ್ಕರ್‌ನಲ್ಲಿ ಆಹಾರ ಬೇಯಿಸುವುದು ನಮ್ಮ ಸಮಯ ಹಾಗೂ ಶ್ರಮ ಎರಡನ್ನೂ ಉಳಿಸುತ್ತದೆ. ಎರಡು, ಮೂರು ಸೀಟಿ ಹೊಡೆದರೆ ಸಾಕು ಅಡುಗೆ ಸಿದ್ಧ.
ಆದರೆ ಸುಲಭವಾಗುತ್ತದೆ ಎಂಬ ಕಾರಣಕ್ಕೆ ಬಳಸುವ ಫ್ರೆಶರ್ ಕುಕ್ಕರ್ ನಿಜಕ್ಕೂ ಅಪಾಯಕಾರಿ. ಅದರಲ್ಲೂ ಮೊದ ಮೊದಲು ಫ್ರೆಶರ್ ಕುಕ್ಕರ್ ಬಳಕೆ ಮಾಡುವವರು ಒಂದಿಷ್ಟು ಅವಶ್ಯ ಟಿಪ್ಸ್ ಅನುಸರಿಸುವುದು ಮುಖ್ಯವಾಗುತ್ತದೆ.
ಮೊದಲ ಬಾರಿ ಫ್ರೆಶರ್ ಕುಕ್ಕರ್ ಬಳಸುವವರಿಗಾಗಿ ಇಲ್ಲಿದೆ ಒಂದಿಷ್ಟು ಟಿಪ್ಸ್
ಏನೆಲ್ಲಾ ಬೇಯಿಸಬಹುದು ತಿಳಿದಿರಲಿ
ಫ್ರೆಶರ್ ಕುಕ್ಕರ್‌ನಲ್ಲಿ ಹಲವನ್ನು ಬೇಯಿಸಬಹುದು. ಆದರೆ ನೀರು ಹಾಕುವುದು ಮುಖ್ಯವಾಗುತ್ತದೆ. ಅತಿ ಹೆಚ್ಚು ಬೇಯುವ ಪದಾರ್ಥಗಳನ್ನು ಸುಲಭದಲ್ಲಿ ಬೇಯಿಸುವ ಉದ್ದೇಶದಿಂದ ಫ್ರೆಶರ್ ಕುಕ್ಕರ್ ಅನ್ನು ಬಳಸಲಾಗುತ್ತದೆ. ಇದರಲ್ಲಿ ಮಾಂಸ, ತರಕಾರಿ, ರೈಸ್, ಕಾಳುಗಳು ಎಲ್ಲವನ್ನೂ ಬೇಯಿಸಬಹುದು.
ಬೇಯಿಸುವ ಮುನ್ನ ಪರಿಶೀಲಿಸಿ
ಫ್ರೆಶರ್ ಕುಕ್ಕರ್ ಬಳಕೆಗೂ ಮುನ್ನ ಸರಿಯಾಗಿ ಪರಿಶೀಲನೆ ಮಾಡುವುದು ಮುಖ್ಯವಾಗುತ್ತದೆ. ಕುಕ್ಕರ್‌ನಲ್ಲಿ ಎಲ್ಲಿಯಾದ್ರೂ ಬಿರುಕು ಬಂದಿದ್ಯಾ ಗಮನಿಸಿ. ಬಿರುಕು ಮೂಡಿದ ಅಥವಾ ಒಡೆದ ಫ್ರೆಶರ್ ಕುಕ್ಕರ್ ಸ್ಫೋಟಿಸಬಹುದು ಎಚ್ಚರ. ರಬ್ಬರ್ ಅಥವಾ ಸೀಟಿ ಸರಿಯಿಲ್ಲ ಎಂದರೆ ನೀರು ಹೊರಗೆ ಸೋರಿ ಕುಕ್ಕರ್‌ನಲ್ಲಿ ಇರಿಸಿ ವಸ್ತು ಬೇಯಿಸುವುದಿಲ್ಲ. ಇದು ಗಮನದಲ್ಲಿರಲಿ.
ಸಮ ಪ್ರಮಾಣದ ನೀರಿನ ಬಳಕೆ
ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಿದ ಪ್ರತಿಯೊಂದು ಖಾದ್ಯಕ್ಕೂ ಸರಿಯಾದ ಪ್ರಮಾಣದ ನೀರನ್ನು ಬಳಸಿ. ಬೇರೆ ಬೇರೆ ಖಾದ್ಯಗಳಿಗೆ ಬೇರೆ ಬೇರೆ ಪ್ರಮಾಣದಲ್ಲಿ ನೀರು ಬಳಸಬೇಕಾಗುತ್ತದೆ. ಕೆಲವೊಮ್ಮೆ ನೀರು ಅತಿಯಾಗಿಯೂ ನೀವು ಮಾಡಿದ ಖಾದ್ಯದ ರುಚಿ ಕೆಡಬಹುದು. ಸೀಟಿ ಹೊಡೆದಾಗ ನೀರು ಹೊರ ಚಿಮ್ಮಿ ಕೈಗೆ ತಾಕಿ ಗಾಯವಾಗಬಹುದು.
ಬಿಸಿ ಇರುವ ಕುಕ್ಕರ್ ಮುಚ್ಚಳ ತೆಗೆಯುವ ಪ್ರಯತ್ನ ಬೇಡ
ಅಡುಗೆ ಮಾಡಿದ ನಂತರ ಸ್ಟೌ ಆಫ್ ಮಾಡಿ. ಬಿಸಿ ಇರುವಾಗ ಫ್ರೆಶರ್ ಕುಕ್ಕರ್ ಮುಚ್ಚಳ ತೆರೆಯುವ ಪ್ರಯತ್ನ ಬೇಡ. ಸಂಪೂರ್ಣ ತಣ್ಣಗಾಗಲು ಬಿಡಿ. ನಂತರ ಮುಚ್ಚಳ ತೆರೆಯಿರಿ. ಬಿಸಿ ಇರುವಾಗ ತೆಗೆಯುವುದರಿಂದ ಸ್ಫೋಟವಾಗುವ ಸಾಧ್ಯತೆ ಇದೆ.
ರಬ್ಬರ್ ಗಮನಿಸುವುದು ಅವಶ್ಯ
ಆಹಾರ ಸರಿಯಾಗಿ ಬೇಯಲು ಕುಕ್ಕರ್ ಒಳಗೆ ಫ್ರೆಶರ್ ಇರುವಂತೆ ನೋಡಿಕೊಳ್ಳುವುದು ಮುಖ್ಯವಾಗುತ್ತದೆ. ಅದಕ್ಕಾಗಿ ಕುಕ್ಕರ್ ರಬ್ಬರ್ ಸರಿಯಾಗಿ ಇದೆಯೇ ಎಂಬುದನ್ನು ಪರಿಶೀಲಿಸುವುದು ಮುಖ್ಯವಾಗುತ್ತದೆ. ರಬ್ಬರ್ ಸರಿಯಿಲ್ಲ ಎಂದರೆ ಆಹಾರ ಸರಿಯಾಗಿ ಬೇಯುವುದಿಲ್ಲ. ಪ್ರತಿ ಮೂರು ತಿಂಗಳಿಗೊಮ್ಮೆ ಕುಕ್ಕರ್‌ನ ರಬ್ಬರ್ ಸೀಲ್ ಅನ್ನು ಬದಲಿಸಬೇಕು.
ವಿಭಾಗ