logo
ಕನ್ನಡ ಸುದ್ದಿ  /  ಜೀವನಶೈಲಿ  /  Carrot Kheer Recipe: ಕ್ಯಾರೆಟ್‌ ಹಲ್ವಾದಷ್ಟೇ ರುಚಿ, ಈ ಕ್ಯಾರೆಟ್‌ ಖೀರು..ನೀವು ಸಿಹಿಪ್ರಿಯರಾಗಿದ್ದರೆ ಟೇಸ್ಟ್‌ ಮಾಡಲೇಬೇಕು

Carrot Kheer Recipe: ಕ್ಯಾರೆಟ್‌ ಹಲ್ವಾದಷ್ಟೇ ರುಚಿ, ಈ ಕ್ಯಾರೆಟ್‌ ಖೀರು..ನೀವು ಸಿಹಿಪ್ರಿಯರಾಗಿದ್ದರೆ ಟೇಸ್ಟ್‌ ಮಾಡಲೇಬೇಕು

HT Kannada Desk HT Kannada

Jan 06, 2023 10:52 PM IST

google News

ಕ್ಯಾರೆಟ್‌ ಖೀರು

    • ಕ್ಯಾರೆಟ್‌ನಿಂದ ಪಲ್ಯ, ಸಾಂಬಾರ್‌ ಮಾತ್ರವಲ್ಲ ಸಾಕಷ್ಟು ರೀತಿಯ ಸಿಹಿಗಳನ್ನು ತಯಾರಿಸಬಹುದು ಎಂಬುದು ನಮಗೆ ಗೊತ್ತು. ಕ್ಯಾರೆಟ್‌ ಹಲ್ವಾ, ಕ್ಯಾರೆಟ್‌ ಒಬ್ಬಟ್ಟು ಹೀಗೆ ಸಿಹಿಪ್ರಿಯರ ಬಾಯಲ್ಲಿ ನೀರೂರುವಂತಹ ಅನೇಕ ರೆಸಿಪಿಗಳನ್ನು ತಯಾರಿಸಬಹುದು, ಆದರೆ ನೀವು ಎಂದಾದರೂ ಕ್ಯಾರೆಟ್‌ ಖೀರ್‌ ಟೇಸ್ಟ್‌ ಮಾಡಿದ್ದೀರಾ..?
ಕ್ಯಾರೆಟ್‌ ಖೀರು
ಕ್ಯಾರೆಟ್‌ ಖೀರು (PC: Twitter)

ಕ್ಯಾರೆಟ್‌ನಲ್ಲಿ ತಯಾರಿಸುವ ಸಿಹಿಗಳಲ್ಲಿ ಕ್ಯಾರೆಟ್‌ ಹಲ್ವಾ ಬಹಳ ಫೇಮಸ್‌. ಆದರೆ ಈ ಕ್ಯಾರೆಟ್‌ ಖೀರ್‌, ಹಲ್ವಾದಷ್ಟೇ ರುಚಿ ಇರುತ್ತದೆ. ಒಂದು ವೇಳೆ ನಿಮ್ಮ ಮನೆಗೆ ಯಾರಾದರೂ ಗೆಸ್ಟ್‌ ಬರುತ್ತಿದ್ದು ಹಲ್ವಾ ತಯಾರಿಸುವಷ್ಟು ಸಮಯ ಇಲ್ಲದಿದ್ದರೆ ನೀವು ಕ್ಯಾರೆಟ್‌ ಖೀರ್‌ ತಯಾರಿಸಬಹುದು. ಖಂಡಿತ ಇದು ಎಲ್ಲರಿಗೆ ಬಹಳ ಇಷ್ಟವಾಗುತ್ತದೆ. ಕ್ಯಾರೆಟ್‌ ಖೀರು ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನ ಹೇಗಿದೆ ನೋಡಿ.

ಕ್ಯಾರೆಟ್‌ ಖೀರ್‌ ತಯಾರಿಸಲು ಬೇಕಾಗುವ ಸಾಮಗ್ರಿಗಳು

ಕ್ಯಾರೆಟ್‌ - 1/4 ಕಿಲೋ

ಹಾಲು - 1 ಲೀಟರ್‌

ಸಕ್ಕರೆ - 1/2 ಕಪ್‌

ಏಲಕ್ಕಿ ಪುಡಿ - 1/4 ಟೀ ಸ್ಪೂನ್‌

ಗೋಡಂಬಿ - 10

ಬಾದಾಮಿ - 10

ಪಿಸ್ತಾ - 10

ಕೇಸರಿ ದಳ - ಚಿಟಿಕೆ

ಕ್ಯಾರೆಟ್‌ ಖೀರ್‌ ತಯಾರಿಸುವ ವಿಧಾನ

ಮೊದಲು ಕ್ಯಾರೆಟ್‌ ಸಿಪ್ಪೆ ತೆಗೆದು ಒಮ್ಮೆ ತೊಳೆಯಿರಿ.

ಕ್ಯಾರೆಟನ್ನು 4-5 ತುಂಡುಗಳನ್ನಾಗಿ ಕತ್ತರಿಸಿ ಅದನ್ನು ಕುಕ್ಕರ್‌ಗೆ ಸೇರಿಸಿ

ಕ್ಯಾರೆಟ್‌ ಮುಳುಗುವಷ್ಟು ನೀರು ಸೇರಿಸಿ ಮುಚ್ಚಳ ಮುಚ್ಚಿ 2 ಸೀಟಿ ಕೂಗಿಸಿಕೊಳ್ಳಿ

ಕ್ಯಾರೆಟ್‌ ತಣ್ಣಗಾದ ನಂತರ ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ಗ್ರೈಂಡ್‌ ಮಾಡಿ

ಒಂದು ಪಾತ್ರೆಯಲ್ಲಿ ಹಾಲು ಬಿಸಿ ಮಾಡಿಕೊಳ್ಳಿ, ನಂತರ ಕ್ಯಾರೆಟ್‌ ಪ್ಯೂರಿ ಸೇರಿಸಿ ಮಿಕ್ಸ್‌ ಮಾಡಿ

ಜೊತೆಗೆ ಸಕ್ಕರೆ, ಏಲಕ್ಕಿ ಪುಡಿ ಸೇರಿಸಿ ಮಧ್ಯಮ ಉರಿಯಲ್ಲಿ ಕುದಿಸಿ

ಗೋಡಂಬಿ, ಬಾದಾಮಿ, ಪಿಸ್ತಾಗಳನ್ನು ಸಣ್ಣಗೆ ಕತ್ತರಿಸಿಕೊಳ್ಳಿ

ಮಿಶ್ರಣ ಕುದಿಯಲು ಆರಂಭಿಸುತ್ತಿದ್ದಂತೆ ಕೇಸರಿ ದಳ, ನಟ್ಸ್‌ ಸೇರಿಸಿ ಒಂದೆರಡು ನಿಮಿಷದ ನಂತರ ಸ್ಟೋವ್‌ ಆಫ್‌ ಮಾಡಿ

ಈ ಡಿಲೀಶಿಯಸ್‌ ಕ್ಯಾರೆಟ್‌ ಖೀರನ್ನು ನೀವು ಬಿಸಿಯಾಗಿ ಸರ್ವ್‌ ಮಾಡಬಹುದು, ಅಥವಾ ಸ್ವಲ್ಪ ಸಮಯ ರೆಫ್ರಿಜರೇಟರ್‌ನಲ್ಲಿಟ್ಟು ತಣ್ಣಗಾದ ನಂತರ ಕೂಡಾ ಸೇವಿಸಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ