Food Recipe: ಯಾವಾಗಲೂ ಒಂದೇ ರೀತಿ ಅವಲಕ್ಕಿ ಮಾಡಿ ಅದೇ ರುಚಿ ನಿಮಗೆ ಬೋರಾಗಿದ್ದರೆ ಈಗ ಡಿಫರೆಂಟಾಗಿ ಮಾಡಿ, ಇಲ್ಲಿದೆ ಗ್ರೀನ್ ಅವಲಕ್ಕಿ ರೆಸಿಪಿ
Aug 31, 2024 08:01 AM IST
ಹಸಿರು ಅವಲಕ್ಕಿ
- ನೀವು ಶ್ರಾವಣ ಮಾಸದಲ್ಲಿ ಎಷ್ಟೋ ದಿನ ಅವಲಕ್ಕಿಯನ್ನೇ ಮಾಡಿ ತಿಂದಿರುತ್ತೀರಾ. ಆದರೆ ಈಗ ಬೇರೆ ರೀತಿ ಅಂದರೆ ರುಚಿಯಲ್ಲಿ ಭಿನ್ನವಾಗಿರುವ ಈ ರೀತಿ ಹಸಿರು ಅವಲಕ್ಕಿಯನ್ನು ಮಾಡಿ ತಿನ್ನಿ. ಹೀಗೆ ಮಾಡಿ ತಿಂದರೆ ನಿಮಗೆ ಅವಲಕ್ಕಿ ಬೋರಿಂಗ್ ಅನಿಸೋದಿಲ್ಲ.
ಅವಲಕ್ಕಿ ಎಂದರೆ ಟೊಮ್ಯಾಟೊ, ಈರುಳ್ಳಿ ಮತ್ತು ಆಲೂಗಡ್ಡೆ ಬಳಸಿ ನಾವು ಹೆಚ್ಚಾಗಿ ಮಾಡುತ್ತೇವೆ. ಆದರೆ ಈ ಹಸಿರು ಅವಲಕ್ಕಿ ಒಮ್ಮೆ ಪ್ರಯತ್ನಿಸಿ ನೋಡಿ. ರುಚಿಯಲ್ಲಿ ತುಂಬಾ ತಾಜಾ ಅನಿಸುತ್ತದೆ. ನೀವು ಹೊಸ ರೀತಿಯ ಅವಲಕ್ಕಿಯನ್ನು ಪ್ರಯತ್ನಿಸಲು ಬಯಸಿದರೆ ಇದನ್ನು ಪ್ರಯತ್ನಿಸಿ. ನೀವು ಎರಡು ನಿಮಿಷಗಳನ್ನು ಮೀಸಲಿಟ್ಟು ಒಂದು ಸರಳವಾದ ಮಸಾಲವನ್ನು ಬೆರೆಸಿದರೆ, ಅವಲಕ್ಕಿಯನ್ನು ತಕ್ಷಣವೇ ಸಿದ್ಧಮಾಡಬಹುದು. ಅವಲಕ್ಕಿಯನ್ನು ಹೇಗೆ ಮಾಡುವುದು ಎಂಬುದನ್ನು ವಿವರವಾಗಿ ನೋಡಿ.
ಬೇಕಾಗುವ ಸಾಮಾಗ್ರಿಗಳು:
ದಪ್ಪ ಅವಲಕ್ಕಿ
½ ಕಪ್ ಕತ್ತರಿಸಿದ ಈರುಳ್ಳಿ
ಸಾಸಿವೆ ಅರ್ಧ ಟೀಚಮಚ
ಜೀರಿಗೆ ಅರ್ಧ ಟೀಚಮಚ
1 ಕರಿಬೇವಿನ ಎಲೆ
ಸಾಕಷ್ಟು ಉಪ್ಪು
ಅರ್ಧ ಚಮಚ ಸಕ್ಕರೆ
ಕಾಲು ಚಮಚ ಅರಿಶಿನ
2 ಚಮಚ ಎಣ್ಣೆ
1 ಚಮಚ ನಿಂಬೆ ರಸ
ಮಸಾಲೆಗಾಗಿ:
ಕೊತ್ತಂಬರಿ ಸೊಪ್ಪು ಅರ್ಧ ಕಪ್
ಕಾಲು ಕಪ್ ಪುದೀನ ಎಲೆಗಳು
ಶುಂಠಿ ತುಂಡು
ಬೆಳ್ಳುಳ್ಳಿ 2 ಲವಂಗ
2 ಹಸಿರು ಮೆಣಸಿನಕಾಯಿ
ಅರ್ಧ ಚಮಚ ನಿಂಬೆ ರಸ
ತಯಾರಿಸುವ ವಿಧಾನ:
1. ಮೊದಲು ಮಿಕ್ಸಿಂಗ್ ಜಾರ್‌ನಲ್ಲಿ ಕೊತ್ತಂಬರಿ ಸೊಪ್ಪು , ಪುದೀನಾ, ಶುಂಠಿ, ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿ, ನಿಂಬೆ ರಸ ಮತ್ತು ಒಂದು ಚಮಚ ನೀರನ್ನು ಸೇರಿಸಿ ಮತ್ತು ನಿಧಾನವಾಗಿ ಮಿಶ್ರಣ ಮಾಡಿ.
2. ಈಗ ಅವಕ್ಕಿಯನ್ನು ಎರಡು ಬಾರಿ ತೊಳೆದು ನೀರು ಬಸಿದು ಸಂಪೂರ್ಣ ನೀರು ಕಮ್ಮಿ ಆಗಿದೆಯಾ ಎಂದು ಖಚಿತಪಡಿಸಿಕೊಳ್ಳಿ. ಇವುಗಳನ್ನು ಪಕ್ಕಕ್ಕೆ ಇರಿಸಿ.
3. ಒಂದು ಕಡಾಯಿಯಲ್ಲಿ ಎರಡು ಚಮಚ ಎಣ್ಣೆಯನ್ನು ಬಿಸಿ ಮಾಡಿ, ಸಾಸಿವೆ ಮತ್ತು ಜೀರಿಗೆ ಸೇರಿಸಿ. ಕರಿಬೇವಿನ ಸೊಪ್ಪು ಹಾಕಿ ಹುರಿಯಿರಿ.
4. ಈರುಳ್ಳಿ ತುಂಡುಗಳನ್ನು ಹಾಕಿ ಸ್ವಲ್ಪ ಬಣ್ಣ ಬದಲಾಗುವವರೆಗೆ ಹುರಿಯಿರಿ.
5. ಈ ಈರುಳ್ಳಿ ತುಂಡುಗಳಿಗೆ ಮಿಶ್ರಿತ ಮಸಾಲಾ ಮಿಶ್ರಣವನ್ನು ಸೇರಿಸಿ ಮತ್ತು ಕನಿಷ್ಠ ನಾಲ್ಕೈದು ನಿಮಿಷಗಳ ಕಾಲ ಫ್ರೈ ಮಾಡಿ. ಸ್ವಲ್ಪ ಸಮಯದ ನಂತರ, ಹಸಿರು ವಾಸನೆಯು ಹೋಗುತ್ತದೆ ಮತ್ತು ಮಸಾಲೆ ತುಂಬಾ ಚನಾಗಿರುತ್ತದೆ.
6. ಲಭ್ಯವಿದ್ದರೆ ಕೆಲವು ಹಸಿರು ಬಟಾಣಿಗಳನ್ನು ಕೂಡ ಸೇರಿಸಬಹುದು. ಇಲ್ಲದಿದ್ದರೆ, ನೀವು ಅದನ್ನು ಹಾಕಬೇಕೆಂದಿಲ್ಲ.
ಟೊಮ್ಯಾಟೊ, ಈರುಳ್ಳಿ ಮತ್ತು ಆಲೂಗಡ್ಡೆ ಪೀಸ್‌ಗಳನ್ನೂ ಹಾಕಬಹುದು. ನೀವೂ ಇದೆಲ್ಲವನ್ನೂ ಹಾಕಿ ರುಚಿ ಹೆಚ್ಚಿಸಿ. ನಡು ನಡುವೆ ತಕರಾರಿಗಳು ಸಿಕ್ಕಿದರೆ ಅದರ ರುಚಿ ಸೊಗಸಾಗಿರುತ್ತದೆ.
7. ಈಗ ಅರಿಶಿನ, ಉಪ್ಪು ಮತ್ತು ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
8. ಕವರ್ ಮಾಡಿ ಕನಿಷ್ಠ ಎರಡು ನಿಮಿಷಗಳ ಕಾಲ ಅದನ್ನು ಬೇಯಿಸಿ.
9. ಕೊನೆಯದಾಗಿ ನಿಂಬೆ ರಸವನ್ನು ಸಿಂಪಡಿಸಿ. ನೀವು ಮೊದಲೇ ಎಣ್ಣೆಯಲ್ಲಿ ಕೊತ್ತಂಬರಿ ಸೊಪ್ಪು ಉದುರಿಸಿದರೆ ಸಾಕು.
ವಿಭಾಗ