Maggi Powder Recipe: ನೀವು ಮ್ಯಾಗಿ ಪ್ರಿಯರಾ? ಹಾಗಿದ್ರೆ ಮನೆಯಲ್ಲಿಯೇ ಮಾಡಿಕೊಳ್ಳಿ ಮ್ಯಾಗಿ ಮಸಾಲಾ ಪೌಡರ್..
Dec 04, 2022 09:54 PM IST
ನೀವು ಮ್ಯಾಗಿ ಪ್ರಿಯರಾ? ಹಾಗಿದ್ರೆ ಮನೆಯಲ್ಲಿಯೇ ಮಾಡಿಕೊಳ್ಳಿ ಮ್ಯಾಗಿ ಮಸಾಲಾ ಪೌಡರ್..
- ಮ್ಯಾಗಿ ಮಾಡುವುದು ತುಂಬ ಸರಳ. ಆದರೆ ಅದಕ್ಕೆ ಬೇಕಿರುವ ಮಸಾಲಾ ಮಾಡುವುದೂ ಅಷ್ಟೇ ಈಸಿ. ಒಮ್ಮೆ ನೀವು ಮ್ಯಾಗಿ ಮಸಾಲಾ ರೆಡಿ ಮಾಡಿ ಇಟ್ಟುಕೊಂಡರೆ, ವರ್ಷಾನುಗಟ್ಟಲೆ ತಿನ್ನಬಹುದು. ಇಲ್ಲಿದೆ ನೋಡಿ ಆ ರೆಸಿಪಿ.
Maggi Powder Recipe: ಮ್ಯಾಗಿ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ಮಕ್ಕಳಿಗೆ ಮ್ಯಾಗಿ ಅಂದರೆ ಪಂಚಪ್ರಾಣ. ಆದರೆ, ಪದೇ ಪದೇ ಅಂಗಡಿಯಿಂದ ಮ್ಯಾಗಿ ತಂದು ಮಾಡಿಕೊಡುವುದು ಕಷ್ಟವಾಗುತ್ತಿದ್ದರೆ, ಮನೆಯಲ್ಲಿಯೇ ಮ್ಯಾಗಿ ಮಾಡಬಹುದು. ಅರೇ ಅದಕ್ಕೆ ಅದರದೇ ಆದ ಮಸಾಲಾ ಇರುತ್ತಲ್ವಾ? ಮನೆಯಲ್ಲಿಯೇ ಎಂಬ ಪ್ರಶ್ನೆ ಮೂಡಿದರೆ, ಅದಕ್ಕೂ ಇಲ್ಲಿ ಉತ್ತರವಿದೆ. ಹಾಗಾದರೆ ಮ್ಯಾಗಿ ಮಸಾಲಾ ಪೌಡರ್ ಮಾಡಲು ಏನೆಲ್ಲ ಬೇಕು? ಮಾಡುವ ವಿಧಾನ ಹೇಗೆ? ಇಲ್ಲಿದೆ ನೋಡಿ...
ಮ್ಯಾಗಿ ಮಸಾಲಾ ಮಾಡಲು ಬೇಕಾದ ಸಾಮಗ್ರಿಗಳು
ಧನಿಯಾ ಕಾಳು 3 ಟೀ ಸ್ಪೂನ್
ಜೀರಿಗೆ 1 ಟೀ ಸ್ಪೂನ್
ಸೋಂಪು 1 ಟೀಸ್ಪೂನ್
ಕಾಳು ಮೆಣಸು 1/2 ಟೀಸ್ಪೂನ್
ಏಲಕ್ಕಿ 4-5
ಲವಂಗ 3-4
ಮೆಂತ್ಯ ಕಾಳು 1/4 ಟೀ ಸ್ಪೂನ್
ಜಾಯಿಕಾಯಿ 1/2 ಇಂಚು
ದಾಲ್ಚಿನ್ನಿ 1 ಇಂಚಿನ ತುಂಡು
ಕೆಂಪು ಒಣ ಮೆಣಸಿನಕಾಯಿ 4-5
ತೇಜಪಟ್ಟಾ 1-2
ಉಪ್ಪು 1/2 ಟೀ ಸ್ಪೂನ್
ಅರಿಶಿನ 1/2 ಚಮಚ
ಸಕ್ಕರೆ 1 ಟೀ ಸ್ಪೂನ್
ಮೆಣಸಿನ ಪುಡಿ 1/2 ಟೀ ಸ್ಪೂನ್
ಶುಂಠಿ ಪುಡಿ 1/2 ಚಮಚ
ಈರುಳ್ಳಿ ಪುಡಿ 2 ಟೀಸ್ಪೂನ್
ಬೆಳ್ಳುಳ್ಳಿ ಪುಡಿ 1/2 ಟೀಸ್ಪೂನ್
ಆಮ್ಚೂರ್ ಪುಡಿ/ ಆಮಚೂರ್ -1 ಟೀಸ್ಪೂನ್
ಕಾರ್ನ್ ಫ್ಲೋರ್ 1 ಚಮಚ
ಟೊಮೆಟೊ ಪುಡಿ 3-4 ಚಮಚ
ಮಾಡುವ ವಿಧಾನ...
ಮೊದಲಿಗೆ ಗ್ಯಾಸ್ ಆನ್ ಮಾಡಿ ಅದರ ಮೇಲೊಂದು ಬಾಣಲೆ ಇಟ್ಟು, ಧನಿಯಾ ಕಾಳು,
ಜೀರಿಗೆ, ಸೋಂಪು, ಕಾಳು ಮೆಣಸು, ಏಲಕ್ಕಿ, ಲವಂಗ, ಮೆಂತ್ಯ ಕಾಳು, ಜಾಯಿಕಾಯಿ, ದಾಲ್ಚಿನ್ನಿ, ಕೆಂಪು ಒಣ ಮೆಣಸಿನಕಾಯಿ, ತೇಜಪತ್ತಾ ಹಾಕಿ ಬಿಸಿ ಆಗುವವರೆಗೂ ಹುರಿದುಕೊಳ್ಳಿ.
ಹೀಗೆ ಹುರಿದ ಮಿಶ್ರಣವನ್ನು ಮಿಕ್ಸರ್‌ನಲ್ಲಿ ನುಣ್ಣಗೆ ಪೌಡರ್ ಮಾಡಿಟ್ಟುಕೊಳ್ಳಿ.
ಈ ಮಿಶ್ರಣಕ್ಕೆ ಉಪ್ಪು, ಅರಿಶಿನ ಪುಡಿ, ಸಕ್ಕರೆ, ಮೆಣಸಿನ ಪುಡಿ, ಶುಂಠಿ ಪುಡಿ, ಈರುಳ್ಳಿ ಪುಡಿ, ಬೆಳ್ಳುಳ್ಳಿ ಪುಡಿ, ಆಮ್ಚೂರ್ ಪುಡಿ, ಕಾರ್ನ್ ಫ್ಲೋರ್ ಪೌಡರ್ ಹಾಕಿ ಮತ್ತೆ ಮಿಕ್ಸರ್‌ನಲ್ಲಿ ಗ್ರೈಂಡ್ ಮಾಡಿ.
ಈ ಎಲ್ಲ ಮಿಶ್ರಣ ಸಿದ್ಧವಾಗುತ್ತಿದ್ದಂತೆ, ಒಂದು ಬಟ್ಟಲಿಗೆ ಪುಡಿಯನ್ನು ತೆಗೆಯಿರಿ. ಕೊನೆಗೆ ಟೊಮೆಟೊ ಪೌಡರ್ ಮಿಶ್ರಣ ಮಾಡಿ..
ಈ ಮಿಶ್ರಣವನ್ನು ನೀವು ಗಾಜಿನ ಬಾಟಲ್‌ನಲ್ಲಿ ಶೇಖರಿಸಿಡಬಹುದು. ವರ್ಷದ ವರೆಗೂ ಇದನ್ನು ಶೇಖರಿಸಿ ಇಡಬಹುದು.
ನೆನೆಸಿದ ಅವಲಕ್ಕಿಯಿಂದ ಹೀಗೂ ಮಾಡಬಹುದು ಗರಿ ಗರಿ ದೋಸೆ!; ಕಡಿಮೆ ಸಮಯ, ಹೆಚ್ಚು ಟೇಸ್ಟ್.. ರೆಸಿಪಿ ಇಲ್ಲಿದೆ..
Instant Poha Dosa Recipe: ದೋಸೆ ಆಗಲಿ ಇಡ್ಲಿ ಆಗಲಿ.. ಇವೆಲ್ಲವನ್ನು ಮಾಡಲು ಒಂದು ದಿನ ಮುಂಚಿತವಾಗಿ ಅಕ್ಕಿಯನ್ನು ನೆನೆಹಾಕಿ, ರುಬ್ಬಿ ಮರುದಿನ ಬೆಳಗ್ಗೆ ತಯಾರಿಸಬೇಕು. ಅದು ಕೊಂಚ ಕಷ್ಟದ ಕೆಲಸ. ಆದರೆ, ಅದೇ ದೋಸೆಯನ್ನು ಸುಲಭವಾಗಿ, ಕೇವಲ 10 ನಿಮಿಷದಲ್ಲಿ ಮಾಡುಬಹುದಾದರೆ ಹೇಗಿರುತ್ತದೆ. ಹಾಗಾದರೆ, ಫಟಾಫಟ್ ಅಂತ ಕೆಲವೇ ನಿಮಿಷಗಳಲ್ಲಿ ಈ ಅವಲಕ್ಕಿ ದೋಸೆ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ನೋಡೋಣ.. (ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ)
ವಿಭಾಗ