logo
ಕನ್ನಡ ಸುದ್ದಿ  /  ಜೀವನಶೈಲಿ  /  ಸ್ವಾತಂತ್ರ್ಯೋತ್ಸವದಂದು ನಿಮ್ಮ ಆತ್ಮೀಯರಿಗೆ ಹೀಗೆ ಶುಭಾಶಯ ಕೋರಿ, ದೇಶಪ್ರೇಮ ಹೆಚ್ಚಿಸುವ ಈ ಸಂದೇಶಗಳನ್ನ ಕಳುಹಿಸಿ

ಸ್ವಾತಂತ್ರ್ಯೋತ್ಸವದಂದು ನಿಮ್ಮ ಆತ್ಮೀಯರಿಗೆ ಹೀಗೆ ಶುಭಾಶಯ ಕೋರಿ, ದೇಶಪ್ರೇಮ ಹೆಚ್ಚಿಸುವ ಈ ಸಂದೇಶಗಳನ್ನ ಕಳುಹಿಸಿ

Reshma HT Kannada

Aug 08, 2024 03:22 PM IST

google News

ಸ್ವಾತಂತ್ರ್ಯೋತ್ಸವದಂದು ನಿಮ್ಮ ಆತ್ಮೀಯರಿಗೆ ದೇಶಭಕ್ತಿಯ ಸಂದೇಶಗಳನ್ನ ಕಳುಹಿಸಲು, ಶುಭಾಶಯ ಕೋರಲು ಇಲ್ಲಿದೆ ಐಡಿಯಾಗಳು

    • ಭಾರತದಲ್ಲಿ ಪ್ರತಿವರ್ಷ ಆಗಸ್ಟ್‌ 15 ರಂದು ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ. ನಮ್ಮ ದೇಶವು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ 77 ಸಂವತ್ಸರಗಳು ಕಳೆದಿವೆ. ಈ ವರ್ಷ ಆಗಸ್ಟ್‌ 15 ರಂದು ನಿಮ್ಮ ಆತ್ಮೀಯರಿಗೆ ಶುಭ ಕೋರಲು, ದೇಶಭಕ್ತಿಯ ಸಂದೇಶಗಳನ್ನು ಕಳುಹಿಸಲು ಇಲ್ಲಿದೆ ಒಂದಿಷ್ಟು ಐಡಿಯಾಗಳು.
ಸ್ವಾತಂತ್ರ್ಯೋತ್ಸವದಂದು ನಿಮ್ಮ ಆತ್ಮೀಯರಿಗೆ ದೇಶಭಕ್ತಿಯ ಸಂದೇಶಗಳನ್ನ ಕಳುಹಿಸಲು, ಶುಭಾಶಯ ಕೋರಲು ಇಲ್ಲಿದೆ ಐಡಿಯಾಗಳು
ಸ್ವಾತಂತ್ರ್ಯೋತ್ಸವದಂದು ನಿಮ್ಮ ಆತ್ಮೀಯರಿಗೆ ದೇಶಭಕ್ತಿಯ ಸಂದೇಶಗಳನ್ನ ಕಳುಹಿಸಲು, ಶುಭಾಶಯ ಕೋರಲು ಇಲ್ಲಿದೆ ಐಡಿಯಾಗಳು

ಭಾರತವು ಹಲವು ವರ್ಷಗಳ ಕಾಲ ಬ್ರಿಟಿಷರ ಕಪಿಮುಷ್ಟಿಯಲ್ಲಿತ್ತು. ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ಕೆಚ್ಚೆದೆಯ ಹೋರಾಟವು ನಮ್ಮ ದೇಶವನ್ನು ಬಿಟ್ರಿಷರಿಂದ ಬಿಡುಗಡೆಯಾಗುವಂತೆ ಮಾಡಿತ್ತು. 1947 ಆಗಸ್ಟ್ 15 ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಈ ವರ್ಷ ನಮ್ಮ ದೇಶವು 78ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದೆ. ಹಾಗಾಗಿ ಪ್ರತಿವರ್ಷ ಈ ದಿನದಂದು ಸ್ವಾತಂತ್ರ್ಯ ಹೋರಾಟ, ಸ್ವಾತಂತ್ರ್ಯ ಗಳಿಸಲು ನಮ್ಮ ನಾಯಕರು ಮಾಡಿದ ತ್ಯಾಗ, ಪ್ರಾಣ ಕಳೆದುಕೊಂಡ ಸ್ವಾತಂತ್ರ್ಯ ಹೋರಾಟಗಾರರನ್ನು ನೆನೆಯುವ ಮೂಲಕ ಅವರ ದೇಶಪ್ರೇಮವನ್ನು ನಾಡಿಗೆ ತಿಳಿಸುವ ಕೆಲಸ ಮಾಡಲಾಗುತ್ತದೆ.

ಈ ದಿನದಂದು ವಿವಿಧ ಕಚೇರಿಗಳು, ಶಾಲಾ ಕಾಲೇಜುಗಳು, ಸಮುದಾಯಗಳು ಧ್ವಜಾರೋಹಣ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ, ಆ ಮೂಲಕ ದೇಶಪ್ರೇಮ ಮೆರೆಯುವಂತೆ ಮಾಡುತ್ತವೆ. ಈ ವರ್ಷ ಸ್ವಾತಂತ್ರ್ಯ ದಿನಾಚರಣೆಯಂದು ನಿಮ್ಮ ಪ್ರೀತಿಪಾತ್ರರಿಗೆ, ಆತ್ಮೀಯರಿಗೆ ಶುಭಾಶಯ ಕೋರುವ ಜೊತೆ ದೇಶಭಕ್ತಿಯ ಸಂದೇಶಗಳನ್ನು ಕಳುಹಿಸಲು ನಿಮಗಾಗಿ ಇಲ್ಲಿದೆ ಒಂದಿಷ್ಟು ಐಡಿಯಾಗಳು.

ಫೇಸ್‌ಬುಕ್‌, ವಾಟ್ಸ್‌ಆಪ್‌, ಇನ್‌ಸ್ಟಾಗ್ರಾಂನಂತಹ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲು ಈ ಐಡಿಯಾಗಳು ನಿಮಗೆ ಇಷ್ಟವಾಗಬಹುದು ನೋಡಿ.

ಸ್ವಾತಂತ್ರ್ಯದಿನದಂದು ವಿಶ್‌ ಮಾಡಲು ಐಡಿಯಾಗಳು 

* ದೇಶಭಕ್ತಿ ಮತ್ತು ದೇಶದ ಮೇಲಿನ ಪ್ರೀತಿ, ಅಭಿಮಾನವು ನಿಮ್ಮನ್ನು ಉಜ್ವಲ ಭವಿಷ್ಯದತ್ತ ಕೊಂಡ್ಯೊಯಲಿ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.

* ನಮ್ಮ ಪೂರ್ವಜರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದರು. ಅವರ ತ್ಯಾಗವನ್ನು ನಾವೆಂದೂ ಮರೆಯಬಾರದು. ಅವರ ಹೆಸರು ಸದಾ ಉಳಿಯುವಂತೆ ದೇಶವನ್ನು ಕಾಪಾಡೋಣ, ದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡೋಣ, ಸ್ವಾತಂತ್ರ್ಯೋತ್ಸವದ ಶುಭಾಶಯಗಳು.

* ರಾಷ್ಟ್ರದ ಮೇಲಿನ ನಿಮ್ಮ ಪ್ರೀತಿ ಮತ್ತು ಭಾವೋದ್ರೇಕದ ಸ್ವರಮೇಳ ಈ ಸ್ವಾತಂತ್ರ್ಯ ದಿನದಂದು ಪ್ರತಿಧ್ವನಿಸಲಿ. ದೇಶದ ಗರಿಮೆಯನ್ನು ಹೆಚ್ಚಿಸಲು. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.

* ನಾವು ನಮ್ಮ ಭೂತಕಾಲವನ್ನು ಗೌರವಿಸೋಣ, ವರ್ತಮಾನವನ್ನು ಆಚರಿಸೋಣ ಮತ್ತು ಭವಿಷ್ಯವನ್ನು ಬೆಳಗಿಸಲು ಸಿದ್ಧರಾಗೋಣ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

* ತ್ರಿವರ್ಣ ಧ್ವಜವು ಯಾವಾಗಲೂ ಎತ್ತರಕ್ಕೆ ಹಾರಲಿ ಮತ್ತು ನಮ್ಮ ರಾಷ್ಟ್ರವು ಸಮೃದ್ಧಿಯಾಗಲಿ. 78ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು

* ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ವೀರ ವೀರರನ್ನು ಸ್ಮರಿಸಿ, ಗೌರವಿಸೋಣ, ದೇಶಭಕ್ತಿಯಿಂದ ಸ್ವಾತಂತ್ರ್ಯ ದಿನವನ್ನು ಆಚರಿಸೋಣ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

* ಸ್ವಾತಂತ್ರ್ಯ ದಿನಾಚರಣೆಯ ಚೈತನ್ಯ ಸದಾ ನಮ್ಮೊಂದಿಗೆ ಇರಲಿ. ವೀರಯೋಧರನ್ನು ಸ್ಮರಿಸುತ್ತಾ ದೇಶಪ್ರೇಮ ಹರಡೋಣ. ಸ್ವಾತಂತ್ರ್ಯ ದಿನದ ಶುಭಾಶಯ

* ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ನಮ್ಮ ಸ್ವಾತಂತ್ರ್ಯ ಮತ್ತು ನಮ್ಮ ರಾಷ್ಟ್ರದ ವೈಭವವನ್ನು ಆಚರಿಸೋಣ. ದೇಶಪ್ರೇಮ ಮೆರೆಯೋಣ.

* ಭಾರತೀಯನೆಂಬ ಹೆಮ್ಮೆಯೊಂದಿಗೆ ತಲೆಎತ್ತಿ ನೆಡೆಯೋಣ, ದೇಶದ ಗೌರವವನ್ನು ಆಕಾಶದೆತ್ತರಕ್ಕೆ ಕೊಂಡ್ಯೋಯೋಣ. ಸ್ವಾತಂತ್ರ್ಯ ದಿನದ ಶುಭಾಶಯಗಳು

* ಈ ದಿನದಂದು, ನಮ್ಮ ಸ್ವಾತಂತ್ರ್ಯವನ್ನು ಸಾಧ್ಯವಾಗಿಸಿದ ತ್ಯಾಗಮಯಿಗಳನ್ನು ನೆನಪಿಸಿಕೊಳ್ಳೋಣ ಮತ್ತು ಗೌರವಿಸೋಣ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

* ನಮ್ಮ ರಾಷ್ಟ್ರದ ಸ್ವಾತಂತ್ರ್ಯ ಮತ್ತು ವೈಭವವನ್ನು ಹೆಮ್ಮೆಯಿಂದ ಆಚರಿಸುವ ಈ ಹೊತ್ತಿನಲ್ಲಿ ನಿಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

* ಸ್ವಾತಂತ್ರ್ಯವು ನಾವು ಕಷ್ಟಪಟ್ಟು ಗೆದ್ದ ಉಡುಗೊರೆಯಾಗಿದೆ. ಇದು ಭಾರತಾಂಬೆಯು ನಮಗೆ ನೀಡಿದ ಆಶೀರ್ವಾದ. ನಮ್ಮ ಸ್ವಾತಂತ್ರ್ಯವನ್ನು ಪ್ರಶಂಸಿಸೋಣ ಮತ್ತು ಆಚರಿಸೋಣ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

* ನಮ್ಮ ದೇಶವು ಸಮೃದ್ಧಿ ಮತ್ತು ಪ್ರವರ್ಧಮಾನದತ್ತ ಸಾಗಲಿ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

* ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರ ಸ್ಮರಣೆಯನ್ನು ಜೀವಂತವಾಗಿಡೋಣ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

* ಈ ಸ್ವಾತಂತ್ರ್ಯ ದಿನವು ಎಲ್ಲರಿಗೂ ಸಾಮರಸ್ಯ, ಸಂತೋಷ ಮತ್ತು ಸಮೃದ್ಧಿಯನ್ನು ತರಲಿ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

* ಭಾರತದ ಧ್ವಜ ಯಾವಾಗಲೂ ಎತ್ತರದಲ್ಲಿ ಹಾರುತ್ತಿರಲಿ. ನಿಮಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ