logo
ಕನ್ನಡ ಸುದ್ದಿ  /  ಜೀವನಶೈಲಿ  /  ನಿಮ್ಮ ಮಕ್ಕಳಿಗೆ ಭಾರತದ ಬಗ್ಗೆ ಎಷ್ಟು ಗೊತ್ತು? ಸ್ವಾತಂತ್ರ್ಯ ದಿನಾಚರಣೆಯಂದು ಈ ರಸಪ್ರಶ್ನೆಗಳನ್ನು ಕೇಳಿ ನೋಡಿ

ನಿಮ್ಮ ಮಕ್ಕಳಿಗೆ ಭಾರತದ ಬಗ್ಗೆ ಎಷ್ಟು ಗೊತ್ತು? ಸ್ವಾತಂತ್ರ್ಯ ದಿನಾಚರಣೆಯಂದು ಈ ರಸಪ್ರಶ್ನೆಗಳನ್ನು ಕೇಳಿ ನೋಡಿ

Reshma HT Kannada

Aug 14, 2024 05:47 PM IST

google News

ನಿಮ್ಮ ಮಕ್ಕಳಿಗೆ ಭಾರತದ ಬಗ್ಗೆ ಎಷ್ಟು ಗೊತ್ತು? ಸ್ವಾತಂತ್ರ್ಯ ದಿನಾಚರಣೆಯಂದು ಈ ರಸಪ್ರಶ್ನೆಗಳನ್ನು ಕೇಳಿ ನೋಡಿ

    • ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಕ್ಕೆ ಇನ್ನೊಂದೇ ದಿನ ಬಾಕಿ ಉಳಿದಿದೆ. ಈ ಸಂಭ್ರಮದ ದಿನದಂದು ಶಾಲೆಗಳಲ್ಲಿ ಆಯೋಜಿಸಲಾಗುವ ರಾಷ್ಟ್ರ ಸಂಬಂಧಿ ರಸಪ್ರಶ್ನೆ ಕಾರ್ಯಕ್ರಮಗಳಿಗೆ ಕೇಳಬಹುದಾದ ಪ್ರಶ್ನೆಗಳ ವಿವರ ಇಲ್ಲಿದೆ
ನಿಮ್ಮ ಮಕ್ಕಳಿಗೆ ಭಾರತದ ಬಗ್ಗೆ ಎಷ್ಟು ಗೊತ್ತು? ಸ್ವಾತಂತ್ರ್ಯ ದಿನಾಚರಣೆಯಂದು ಈ ರಸಪ್ರಶ್ನೆಗಳನ್ನು ಕೇಳಿ ನೋಡಿ
ನಿಮ್ಮ ಮಕ್ಕಳಿಗೆ ಭಾರತದ ಬಗ್ಗೆ ಎಷ್ಟು ಗೊತ್ತು? ಸ್ವಾತಂತ್ರ್ಯ ದಿನಾಚರಣೆಯಂದು ಈ ರಸಪ್ರಶ್ನೆಗಳನ್ನು ಕೇಳಿ ನೋಡಿ

ಭಾರತವು ಈ ಬಾರಿ 78ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ಸಂಭ್ರಮದಲ್ಲಿದೆ. ಸ್ವಾತಂತ್ರ್ಯ ದಿನಾಚರಣೆ ಎಂದಾಕ್ಷಣ ಪ್ರತಿಯೊಬ್ಬರಿಗೂ ತಮ್ಮ ಶಾಲಾ ದಿನಗಳೇ ನೆನಪಾಗುತ್ತದೆ. ಅದೇ ರೀತಿ ಈಗ ವಿದ್ಯಾರ್ಥಿ ಜೀವನದ ಘಟ್ಟದಲ್ಲಿರುವ ಪುಟಾಣಿಗಳು ಕೂಡ ನಾಳೆಯ ಸ್ವಾತಂತ್ರ್ಯ ದಿನಾಚರಣೆ ಸಂಬಂಧ ಶಾಲೆಗಳಲ್ಲಿ ಆಯೋಜಿಸಲಾಗುವ ಸಾಕಷ್ಟು ಸ್ಪರ್ಧೆಗಳಿಗೆ ಹೆಸರು ನೀಡಿ ಅದಕ್ಕೆ ತಕ್ಕುದಾದ ತಯಾರಿ ಮಾಡಿಕೊಳ್ಳುತ್ತಿರುತ್ತಾರೆ. ಹಾಗೆಯೇ ಶಾಲಾ ಶಿಕ್ಷಕರಿಗೂ ಕೂಡ ಈ ಚಟುವಟಿಕೆಗಳಿಗೆ ತಯಾರಿ ನಡೆಸುವುದು ಕೂಡ ಸುಲಭದ ಕೆಲಸವಲ್ಲ. ಒಂದು ವೇಳೆ ನೀವು ನಿಮ್ಮ ಶಾಲೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂಬಂಧ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಬೇಕು ಎಂದುಕೊಂಡಿದ್ದರೆ ನೀವು ಯಾವ ರೀತಿಯ ಪ್ರಶ್ನೆಗಳನ್ನು ಮಕ್ಕಳಿಗೆ ಕೇಳಬಹುದು ಎನ್ನುವುದಕ್ಕೆ ಮಾಹಿತಿ ಇಲ್ಲಿದೆ ನೋಡಿ :

ಶಾಲೆಗಳಲ್ಲಿ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲು ವಿದ್ಯಾರ್ಥಿಗಳಿಗೆ ಕೇಳಬಹುದಾದ ಸ್ವಾತಂತ್ರ್ಯ ದಿನಾಚರಣೆ ಸಂಬಂಧಿ ಸರಳ ಪ್ರಶ್ನೆಗಳ ವಿವರ ಇಲ್ಲಿದೆ :

1. ಭಾರತವು ಬ್ರಿಟೀಷರ ದಾಸ್ಯದಿಂದ ಮುಕ್ತಿ ಪಡೆದ ವರ್ಷ ಯಾವುದು..?

- a) 1945

- b) 1947

- c) 1950

- d) 1952

ಉತ್ತರ: b) 1947

2. ಸ್ವತಂತ್ರ ಭಾರತದ ಮೊದಲ ಪ್ರಧಾನಿ ಯಾರು..?

- a) ಮಹಾತ್ಮಾ ಗಾಂಧಿ

- b) ಜವಹರಲಾಲ ನೆಹರೂ

- c) ಸರ್ದಾರ್ ಪಟೇಲ್

- d) ಡಾ.ಬಿ.ಆರ್. ಅಂಬೇಡ್ಕರ್

ಉತ್ತರ: b) ಜವಹರಲಾಲ್ ನೆಹರೂ

3. ಸ್ವತಂತ್ರ ಭಾರತದ ಮೊದಲ ರಾಷ್ಟ್ರಪತಿ ಯಾರು..?

- a) ಡಾ.ರಾಜೇಂದ್ರ ಪ್ರಸಾದ್

- b) ಡಾ.ಎಸ್.ರಾಧಾಕೃಷ್ಣನ್

- c) ಝಾಕೀರ್ ಹುಸೇನ್

- d) ವಿ.ವಿ. ಗಿರಿ

ಉತ್ತರ: a) ಡಾ.ರಾಜೇಂದ್ರ ಪ್ರಸಾದ್

4. ಭಾರತವು ಯಾವ ದಿನದಂದು ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತದೆ.

ಎ) 26 ಜನವರಿ

ಬಿ) 15 ಆಗಸ್ಟ್

ಸಿ) 2 ನೇ ಅಕ್ಟೋಬರ್

ಡಿ) ನವೆಂಬರ್ 14

ಉತ್ತರ: ಬಿ) 15ನೇ ಆಗಸ್ಟ್

5. ಭಾರತದ ಉಕ್ಕಿನ ಮನುಷ್ಯ ಎಂದು ಯಾರನ್ನು ಕರೆಯಲಾಗುತ್ತಿತ್ತು?

- ಎ) ಭಗತ್ ಸಿಂಗ್

- ಬಿ) ಸುಭಾಷ್ ಚಂದ್ರ ಬೋಸ್

- ಸಿ) ಸರ್ದಾರ್ ವಲ್ಲಭಭಾಯಿ ಪಟೇಲ್

- ಡಿ) ಲಾಲಾ ಲಜಪತ್ ರಾಯ್

ಉತ್ತರ: ಸಿ) ಸರ್ದಾರ್ ವಲ್ಲಭಭಾಯಿ ಪಟೇಲ್

6."ಡೆಸ್ಟಿನಿ ಜೊತೆ ಒಂದು ಪ್ರಯತ್ನ" ಎಂಬ ಪ್ರಸಿದ್ಧ ಭಾಷಣವನ್ನು ನೀಡಿದ ಭಾರತೀಯ ನಾಯಕ ಯಾರು?

- ಎ) ಮಹಾತ್ಮ ಗಾಂಧಿ

- ಬಿ) ಜವಾಹರಲಾಲ್ ನೆಹರು

- ಸಿ) ಸರ್ದಾರ್ ಪಟೇಲ್

- ಡಿ) ಸುಭಾಷ್ ಚಂದ್ರ ಬೋಸ್

ಉತ್ತರ: ಬಿ) ಜವಾಹರಲಾಲ್ ನೆಹರು

7. ಸ್ವಾತಂತ್ರ್ಯದ ಸಮಯದಲ್ಲಿ ಭಾರತದ ಗವರ್ನರ್ ಜನರಲ್ ಯಾರಾಗಿದ್ದರು..?

- ಎ) ಲಾರ್ಡ್ ಮೌಂಟ್ ಬ್ಯಾಟನ್

- ಬಿ) ಲಾರ್ಡ್ ಕರ್ಜನ್

- ಸಿ) ಲಾರ್ಡ್ ಡಾಲ್ಹೌಸಿ

- ಡಿ) ಲಾರ್ಡ್ ವೇವೆಲ್

ಉತ್ತರ: a) ಲಾರ್ಡ್ ಮೌಂಟ್‌ಬ್ಯಾಟನ್

8. ಭಾರತೀಯ ರಾಷ್ಟ್ರಧ್ವಜವನ್ನು ವಿನ್ಯಾಸಗೊಳಿಸಿದವರು ಯಾರು..?

- ಎ) ರವೀಂದ್ರನಾಥ ಟ್ಯಾಗೋರ್

- ಬಿ) ಪಿಂಗಲಿ ವೆಂಕಯ್ಯ

- ಸಿ) ಮಹಾತ್ಮ ಗಾಂಧಿ

- ಡಿ) ಬಿ.ಆರ್. ಅಂಬೇಡ್ಕರ್

ಉತ್ತರ: ಬಿ) ಪಿಂಗಲಿ ವೆಂಕಯ್ಯ

9. ಭಾರತೀಯ ರಾಷ್ಟ್ರಧ್ವಜದ ಮೇಲ್ಭಾಗದಲ್ಲಿ ಯಾವ ಬಣ್ಣವಿದೆ?

- ಎ) ಹಸಿರು

- ಬಿ) ಬಿಳಿ

- ಸಿ) ಕೇಸರಿ

- ಡಿ) ನೀಲಿ

ಉತ್ತರ: ಸಿ) ಕೇಸರಿ

10. ಭಾರತದ ರಾಷ್ಟ್ರಪಿತ ಎಂದು ಯಾರು ಕರೆಯುತ್ತಾರೆ?

- ಎ) ಜವಾಹರಲಾಲ್ ನೆಹರು

- ಬಿ) ಮಹಾತ್ಮ ಗಾಂಧಿ

- ಸಿ ) ಡಾ.ರಾಜೇಂದ್ರ ಪ್ರಸಾದ್

- ಡಿ) ಭಗತ್ ಸಿಂಗ್

ಉತ್ತರ: ಬಿ) - ಬಿ) ಮಹಾತ್ಮ ಗಾಂಧಿ

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ