logo
ಕನ್ನಡ ಸುದ್ದಿ  /  ಜೀವನಶೈಲಿ  /  Success Story: 96ರ ಹರೆಯದಲ್ಲೂ ನವೋದ್ಯಮದಲ್ಲಿ ಯಶ ಕಂಡ ಹರ್ಭಜನ್ ಕೌರ್‌ರನ್ನು ಗೆಲ್ಲಿಸಿದ್ದು ಮನೋಸ್ಥೈರ್ಯ; ರಂಗಸ್ವಾಮಿ ಮೂಕನಹಳ್ಳಿ ಬರಹ

Success Story: 96ರ ಹರೆಯದಲ್ಲೂ ನವೋದ್ಯಮದಲ್ಲಿ ಯಶ ಕಂಡ ಹರ್ಭಜನ್ ಕೌರ್‌ರನ್ನು ಗೆಲ್ಲಿಸಿದ್ದು ಮನೋಸ್ಥೈರ್ಯ; ರಂಗಸ್ವಾಮಿ ಮೂಕನಹಳ್ಳಿ ಬರಹ

HT Kannada Desk HT Kannada

Aug 10, 2023 09:50 AM IST

google News

ಹರ್ಭಜನ್ ಕೌರ್

    • ಸಾಧನೆಗೆ ವಯಸ್ಸಿನ ಹಂಗಿಲ್ಲ ಎನ್ನುತ್ತಾರೆ. ಈ ಮಾತನ್ನು ನಿಜವಾಗಿಸಿದ್ದಾರೆ ಹರ್ಭಜನ್ ಕೌರ್. 90ನೇ ವಯಸ್ಸಿನಲ್ಲಿ ನವೋದ್ಯಮ ಆರಂಭಿಸಿ ಯಶಸ್ಸು ಕಂಡ ಆಕೆಯ ಜೀವನದ ದಾರಿ ಹಲವರಿಗೆ ಪಾಠ. ಇವರ ಯಶೋಗಾಥೆಯ ಕುರಿತ ರಂಗಸ್ವಾಮಿ ಮೂಕನಹಳ್ಳಿ ಅವರ ಬರಹ ಇಲ್ಲಿದೆ.
ಹರ್ಭಜನ್ ಕೌರ್
ಹರ್ಭಜನ್ ಕೌರ್ (Rangaswamy Mookanahalli/ Facebook)

ಸಾಧಿಸುವ ಮನಸ್ಸಿದ್ದರೆ ಸಬ್ಬಳವನ್ನೂ ನುಂಗಬಹುದು ಎಂಬ ಮಾತಿದೆ. ಸಾಧನೆಗೆ ವಯಸ್ಸು, ದೈಹಿಕ ಕೊರತೆ, ಹಣ ಇದ್ಯಾವುದೂ ಅಡ್ಡಿಯಾಗುವುದಿಲ್ಲ. ಆದರೆ ಸಾಧಿಸುವ ಮನೋಸ್ಥೈರ್ಯ ಅಥವಾ ಪ್ರಬಲ ಇಚ್ಛೆ ಇರಬೇಕು ಎನ್ನುವುದನ್ನು ಹಲವರು ಸಾಬೀತು ಮಾಡಿದ್ದಾರೆ.

ಇಲ್ಲೊಬ್ಬರು ವಿಶೇಷ ವ್ಯಕ್ತಿ ಇದ್ದಾರೆ. ಇವರಿಗೀಗ 96ರ ಆಜುಬಾಜು. ಆದರೆ ಆಕೆ ತನ್ನ 90ನೇ ವಯಸ್ಸಿನಲ್ಲಿ ನವೋದ್ಯಮ ಆರಂಭಿಸಿ ಯಶಸ್ಸು ಗಳಿಸುತ್ತಾರೆ. 'ಹರ್ಭಜನ್'ಸ್ ಮೇಡ್ ವಿಥ್ ಲವ್' ಹೆಸರಿನಲ್ಲಿ ನವೋದ್ಯಮ ಆರಂಭಿಸಿದ ಈಕೆಯ ಹೆಸರು ಹರ್ಭಜನ್ ಕೌರ್. ಇವರ ಕುರಿತು ರಂಗಸ್ವಾಮಿ ಮೂಕನಹಳ್ಳಿ ಅವರ ಬರಹ ಇಲ್ಲಿದೆ.

ರಂಗಸ್ವಾಮಿ ಅವರ ಫೇಸ್‌ಬುಕ್‌ ಬರಹ ಇಲ್ಲಿದೆ

ಈ ಚಿತ್ರದಲ್ಲಿ ನೀವು ನೋಡುತ್ತಿರುವ ಚಿರ ಯುವತಿಯ ಹೆಸರು ಹರ್ಭಜನ್ ಕೌರ್. ಜಾಸ್ತಿಯೇನು ಇಲ್ಲ, ಕೇವಲ 95 ಅಥವಾ 96ರ ಹರೆಯದವರು. ನಾವಿರುವ ಸ್ಥಳದಿಂದ, ನಾವಿರುವ ಸನ್ನಿವೇಶ, ಪರಿಸ್ಥಿತಿಯಲ್ಲಿ, ನಮ್ಮ ಕೈಲಿರುವ ಕೆಲಸದ ಮೂಲಕ ಜಗತ್ತಿನ ಜನ ನಿಬ್ಬೆರಗಾಗಿ ನಿಂತು ನೋಡುವಂತಹ ಸಾಧನೆ ಮಾಡಬಹುದು. ವಯಸ್ಸು ಎನ್ನುವುದು ಕೇವಲ ದೇಹಕ್ಕೆ, ಮನಸಿಗಲ್ಲ ಎನ್ನುವುದನ್ನ ಜಗತ್ತಿಗೆ ಸಾರುತ್ತಿರುವ ಈಕೆಯ ಕಥೆಯನ್ನ ಕೇಳುವ ಆಸೆಯಿದೆಯೇ? ಹೌದಾದರೆ ಮುಂದಿನ ಸಾಲುಗಳನ್ನು ಓದಿ.

ಹರ್ಭಜನ್ ಕೌರ್ ಬಹುಪಾಲು ಭಾರತೀಯ ಮಹಿಳೆಯರಂತೆ ತಮ್ಮನ್ನ ತಾವು ಮನೆಗೆ ಸೀಮಿತ ಮಾಡಿಕೊಂಡವರು. ಒಳ್ಳೆಯ ಪತಿ, ಮುದ್ದಾದ ಮೂರು ಮಕ್ಕಳು, ಸಿಹಿ ತಿಂಡಿಯಿಂದ ಹಿಡಿದು ಎಲ್ಲಾ ತರಹದ ತಿಂಡಿಗಳನ್ನ ಇಷ್ಟಪಟ್ಟು ತಿನ್ನುವ ಗಂಡ, ಒಟ್ಟಿನಲ್ಲಿ ಆಕೆಯದು ಸುಖಿ ಕುಟುಂಬ. ಜೀವನದ ಬಂಡಿ ಸಾಗಿರುತ್ತದೆ. ಗಂಡ ಒಂದು ದಿನ ಇಲ್ಲಿನ ಆಟಕ್ಕೆ ಟಾಟಾ ಬೈ ಬೈ ಹೇಳಿ ಹೊರಟು ಬಿಡುತ್ತಾರೆ. ದೀರ್ಘ ಕಾಲದ ಸಂಗಾತಿ ಇಲ್ಲದ ಸಮಯದಲ್ಲಿ ಮಕ್ಕಳು ಹೆಚ್ಚು ಅಮ್ಮನೊಡನೆ ಸಂಭಾಷಿಸಲು ತೊಡಗುತ್ತಾರೆ. ಹೀಗೆ ಒಂದು ದಿನ ಮಗಳೊಬ್ಬಳು ಅಮ್ಮ ನಿನ್ನ ಜೀವನದಲ್ಲಿ ಏನಾದರೂ ಕೊರತೆಯಿದೆಯೇ? ಅಥವಾ ಏನಾದರೂ ಮಾಡಬೇಕೆಂದು ಕೊಂಡು ಮಾಡಿಲ್ಲ ಎನ್ನುವ ಭಾವನೆಯಿದೆಯೇ? ಎಂದು ಸುಮ್ಮನೆ ಸಹಜ ಹರಟೆಯಲ್ಲಿ ಕೇಳುತ್ತಾಳೆ. ಅದಕ್ಕೆ ಹರ್ಭಜನ್ ನನ್ನ ಜೀವನ ತುಂಬಾ ಸಂತೋಷದಾಯಕವಾಗಿದೆ, ಆದರೆ ಯಾವಾಗಲೂ ನಾನು ನಿಮ್ಮ ಅಪ್ಪನ ಮೇಲೆ ಅವಲಂಬಿತೆಯಾಗಿದ್ದೆ, ನಾನು ನನ್ನ ಹಣವನ್ನ ಸಂಪಾದಿಸಬೇಕಾಗಿತ್ತು ಎನ್ನುವ ಕೊರಗೊಂದು ಹಾಗೆ ಉಳಿದಿದೆ ಎನ್ನುತ್ತಾರೆ.

ಮೂವರು ಮಕ್ಕಳು ಅಮ್ಮ ಮಾಡುತ್ತಿದ್ದ, ಫ್ಯಾಮಿಲಿಯಲ್ಲಿ ಬಹಳ ಪ್ರಸಿದ್ಧವಾಗಿದ್ದ ಬೇಸನ್ ಲಾಡು ಮತ್ತು ಉಪ್ಪಿನಕಾಯಿ ಮಾಡಿ ಮಾರಲು ಹೇಳುತ್ತಾರೆ. ಹರ್ಭಜನ್ ಮಾಡಿದ ಲಾಡು ಸೋಲ್ಡ್ ಔಟ್ ಆಗುತ್ತದೆ. ಇದರಿಂದ ಸ್ಪೂರ್ತಿಗೊಂಡು 'ಹರ್ಭಜನ್'ಸ್ ಮೇಡ್ ವಿಥ್ ಲವ್' ಎನ್ನುವ ಒಂದು ನವೋದ್ಯಮ ಶುರು ಮಾಡುತ್ತಾರೆ. ಹೀಗೆ ನವೋದ್ಧಿಮೆ ಶುರು ಮಾಡಿದಾಗ ಅವರ ವಯಸ್ಸು ಕೇವಲ ತೊಂಬತ್ತು. ಕಳೆದ ಆರು ವರ್ಷಗಳಿಂದ ಇದು ಚೆನ್ನಾಗಿ ನಡೆದುಕೊಂಡು ಬಂದಿದೆ. ಈ ವರ್ಷ ಎಂಟರ್ಪ್ರೀನಿಯರ್ ಆಫ್ ದಿ ಇಯರ್ ಎನ್ನುವ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಕೋವಿಡ್ ಸೋಂಕು ಇವರನ್ನ ಕೂಡ ಕಾಡಿತ್ತು. ಇವರ ಮನೋಬಲದ ಮುಂದೆ ಅದು ಮಂಡಿಯೂರಿತ್ತು.

ಪಂಜಾಬ್ ಮುಖ್ಯಮಂತ್ರಿ ಅಮರಿಂದರ್, ಆನಂದ ಮಹಿಂದ್ರ ಮುಂತಾದವರು ಈಕೆ ಮಾಡುವ ಲಾಡಿನ ಸವಿ ಸವಿದು ಫ್ಯಾನ್‌ಗಳಾಗಿದ್ದಾರೆ.

ವಯಸ್ಸು, ಅವಕಾಶವಿಲ್ಲ, ಪರಿಸ್ಥಿತಿ ಸರಿಯಿಲ್ಲ .., ಹೀಗೆ ಆಗದು ಎನ್ನಲು ಸಾವಿರ ಕಾರಣ ನೀಡಬಹುದು. ಮಾಡಬೇಕು ಎನ್ನುವುದಕ್ಕೆ 'ಪ್ರಬಲ ಇಚ್ಛೆ' ಇದ್ದರೆ ಸಾಕಲ್ಲ!

ಶುಭವಾಗಲಿ.ಡಬೇಕು ಎನ್ನುವುದಕ್ಕೆ 'ಪ್ರಬಲ ಇಚ್ಛೆ' ಇದ್ದರೆ ಸಾಕಲ್ಲ!

ಶುಭವಾಗಲಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ