logo
ಕನ್ನಡ ಸುದ್ದಿ  /  ಜೀವನಶೈಲಿ  /  Ayodhya: ರಾಮಮಂದಿರ ಉದ್ಘಾಟನೆಗೂ ಮೊದಲೇ ಅಯೋಧ್ಯೆಯಲ್ಲಿ ಮನೆಗಳನ್ನೇ ಹೋಂಸ್ಟೇಗಳನ್ನಾಗಿ ಬದಲಿಸುತ್ತಿದ್ದಾರೆ ಸ್ಥಳೀಯರು; ಕಾರಣ ಹೀಗಿದೆ

Ayodhya: ರಾಮಮಂದಿರ ಉದ್ಘಾಟನೆಗೂ ಮೊದಲೇ ಅಯೋಧ್ಯೆಯಲ್ಲಿ ಮನೆಗಳನ್ನೇ ಹೋಂಸ್ಟೇಗಳನ್ನಾಗಿ ಬದಲಿಸುತ್ತಿದ್ದಾರೆ ಸ್ಥಳೀಯರು; ಕಾರಣ ಹೀಗಿದೆ

Reshma HT Kannada

Jan 17, 2024 09:13 PM IST

google News

ರಾಮಮಂದಿರ

    • ಜನವರಿ 22 ರಂದು ಅಯೋಧ್ಯೆ ರಾಮಮಂದಿರ ಉದ್ಘಾಟನೆಯಾಗಲಿದೆ. ರಾಮಮಂದಿರ ಲೋಕಾರ್ಪಣೆಗೂ ಮೊದಲು ಅಯೋಧ್ಯೆ ಸ್ಥಳಿಯ ನಿವಾಸಿಗಳು ತಮ್ಮ ಮನೆಗಳನ್ನು ಹೋಂಸ್ಟೇಗಳಾಗಿ ಪರಿವರ್ತಿಸುತ್ತಿದ್ದಾರೆ. ಅಲ್ಲದೇ ಮನೆಯನ್ನೇ ಹೋಂ ಸ್ಟೇ ಎಂದು ರಿಜಿಸ್ಟರ್‌ ಮಾಡುತ್ತಿದ್ದಾರೆ.
ರಾಮಮಂದಿರ
ರಾಮಮಂದಿರ (HT)

ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯದ ಮೊದಲ ಹಂತ ಮುಕ್ತಾಯಗೊಂಡಿದ್ದು, ಜನವರಿ 22 ರಂದು ರಾಮಮಂದಿರ ಲೋಕಾರ್ಪಣೆಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ರಾಮಮಂದಿರವನ್ನು ಉದ್ಘಾಟನೆ ಮಾಡಲಿದ್ದಾರೆ. ಜನವರಿಯಲ್ಲಿ ರಾಮಮಂದಿರ ವೀಕ್ಷಣೆಗೆ ಹಲವರು ಆಯೋಧ್ಯೆಗೆ ಭೇಟಿ ನೀಡುವ ಸಾಧ್ಯತೆ ಇದೆ. ಅಯೋಧ್ಯೆಗೆ ಬರುವ ಪ್ರವಾಸಿಗರಿಗೆ ಉಳಿಯುವ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಹಲವಾರು ಸ್ಥಳೀಯ ನಿವಾಸಿಗಳು ತಮ್ಮ ಮನೆಯನ್ನೇ ಹೋಮ್‌ಸ್ಟೇಗಳನ್ನಾಗಿ ನೋಂದಾಯಿಸಿದ್ದಾರೆ. ಈಗಾಗಲೇ ಅಯೋಧ್ಯೆಯಲ್ಲಿ ರಿಯಲ್‌ ಎಸ್ಟೇಟ್‌ ದರ ಗಗನಕ್ಕೇರಿರುವುದನ್ನು ಈ ವೇಳೆ ಗಮನಿಸಬಹುದಾಗಿದೆ.

ಈ ನಡುವೆ ಜನವರಿ 22 ರಂದು ನಡೆಯಲಿರುವ ಅದ್ದೂರಿ ಸಮಾರಂಭಕ್ಕೆ 6000ಕ್ಕೂ ಹೆಚ್ಚು ಮಂದಿಗೆ ಆಹ್ವಾನಗಳನ್ನು ಕಳುಹಿಸಲಾಗಿದೆ. ಆ ಕಾರಣಕ್ಕೆ ಉತ್ತರಪ್ರದೇಶದ ನಿವಾಸಿಗಳು ಇಲ್ಲಿಯವರೆಗೆ 1,800 ಹೊಂದಿರುವ 500 ಹೋಂಸ್ಟೇಗಳನ್ನು ನೋಂದಾಯಿಸಿದ್ದಾರೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ: Ayodhya: ರಾಮಮಂದಿರ ಯಾತ್ರೆಗೆ ಅಡಿಪಾಯ ಹಾಕಿದ್ದ ಅಡ್ವಾಣಿ, ಎಂಎಂಜೋಶಿ ಅಯೋಧ್ಯೆ ಕಾರ್ಯಕ್ರಮಕ್ಕೆ ಬರೋಲ್ಲ: ಕಾರಣ ಏನಿರಬಹುದು

ಶ್ರೀ ರಾಮ ಜನ್ಮಭೂಮಿ ತೀರ್ಥ ಟ್ರಸ್ಟ್‌ ರಾಮ ಮಂದಿರದ ಉದ್ಘಾಟನಾ ಸಮಾರಂಭಕ್ಕಾಗಿ ಜನರಿಗೆ ಸಾವಿರಾರು ಆಹ್ವಾನ ಪತ್ರಿಕೆಗಳನ್ನು ಕಳುಹಿಸಿದೆ. ವರದಿಗಳ ಪ್ರಕಾರ ʼಪ್ರಾಣ ಪ್ರತಿಷ್ಠಾʼ ಸಮಾರಂಭಕ್ಕೆ ಆಹ್ವಾನಿತರ ಪಟ್ಟಿಯಲ್ಲಿ 3000 ವಿವಿಐಪಿಗಳು ಹಾಗೂ 4,000 ವೀಕ್ಷಕರು ಇರಲಿದ್ದಾರೆ ಎಂದು ಅಂದಾಜಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸೇರಿದಂತೆ ಹಲವು ಗಣ್ಯರು ಮಹಾಮಸ್ತಕಾಭಿಷೇಕ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಮಿತಾಬ್‌ ಬಚ್ಚನ್‌, ಸಚಿನ್‌ ತೆಂಡ್ಕೂಲರ್‌ ಹಾಗೂ ವಿರಾಟ್‌ ಕೊಹ್ಲಿ, ರಿಷಬ್‌ ಶೆಟ್ಟಿ ಸೇರಿದಂತೆ ಹಲವು ಸೆಲೆಬ್ರಿಟಿಗಳಿಗೂ ಆಹ್ವಾನ ನೀಡಲಾಗಿದೆ.

ʼಟ್ರಸ್ಟ್‌ 50 ವಿವಿಧ ದೇಶಗಳಿಂದ ತಲಾ ಒಬ್ಬೊಬ್ಬ ಪ್ರತಿನಿಧಿಯನ್ನು ಆಹ್ವಾನಿಸಲು ಪ್ರಯತ್ನಿಸುತ್ತಿದೆ ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರೈ ಹೇಳಿದ್ದಾಗಿ ಮನಿ ಕಂಟ್ರೋಲ್‌ ವರದಿ ಮಾಡಿದೆ. ಈ ಕಾರ್ಯಕ್ರಮಕ್ಕೆ ರಾಮಮಂದಿರ ಚಳವಳಿಯಲ್ಲಿ ಪ್ರಾಣ ಕಳೆದುಕೊಂಡು ಕರಸೇವಕರ ಕುಟುಂಬಗಳನ್ನು ಟ್ರಸ್ಟ್‌ ಆಹ್ವಾನಿಸಲಿದೆ. ವಿಜ್ಞಾನಿಗಳು, ಕವಿಗಳು, ನ್ಯಾಯಾಧೀಶರು ಹಾಗೂ ಬರಹಗಾರರಿಗೆ ಆಹ್ವಾನ ನೀಡಿದ್ದಾಗಿ ಚಂಪತ್‌ ರೈ ತಿಳಿಸಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಗೆ ಸಜ್ಜು; ರಾಮದೇಗುಲದಲ್ಲಿ ಭಕ್ತರು ಏನೆಲ್ಲಾ ನೋಡಬಹುದು; ವಿವರ

ವರದಿಗಳ ಪ್ರಕಾರ ಇಲ್ಲಿ ಮೂರು ರಾಮನ ವಿಗ್ರಹಗಳನ್ನು ಕೆತ್ತಲಾಗುತ್ತಿದೆ. ಇದಕ್ಕೆ ಎರಡು ಕಲ್ಲುಗಳನ್ನು ಕರ್ನಾಟಕದಿಂದ ತರಸಿದ್ದರೆ, ಇನ್ನೊಂದನ್ನು ರಾಜಸ್ಥಾನದಿಂದ ತರಲಾಗಿದೆ.

ʼ2024ರ ಜನವರಿ 22 ರಂದು ಪ್ರಧಾನಿಮೋದಿ ಅವರ ಕೈಯಿಂದ ರಾಮ್‌ ಲಲ್ಲಾನ ವಿಗ್ರಹವನ್ನು ಅದರ ಮೂಲ ಸ್ಥಳದಲ್ಲಿ ಸ್ಥಾಪಿಸಲಾಗುವುದು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಖಜಾಂಚಿ ಸ್ವಾಮಿ ಗೋವಿಂದ್‌ ದೇವ್‌ಗಿರಿ ಮಹಾರಾಜ್‌ ಹೇಳಿದ್ದಾಗಿ ಮನಿ ಕಂಟ್ರೋಲ್‌ ಉಲ್ಲೇಖಿಸಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ