logo
ಕನ್ನಡ ಸುದ್ದಿ  /  ಜೀವನಶೈಲಿ  /  Ganesh Chaturthi 2023: ಗೌರಿ ಗಣೇಶ ಹಬ್ಬಕ್ಕೆ ಊರಿಗೆ ಹೋಗ್ತಿರ, ಗಣೇಶ ಚತುರ್ಥಿಗೆ ರೈಲು ಟಿಕೆಟ್‌ ಮುಂಗಡ ಬುಕ್ಕಿಂಗ್‌ ಆರಂಭ, ಇಲ್ಲಿದೆ ವಿವರ

Ganesh Chaturthi 2023: ಗೌರಿ ಗಣೇಶ ಹಬ್ಬಕ್ಕೆ ಊರಿಗೆ ಹೋಗ್ತಿರ, ಗಣೇಶ ಚತುರ್ಥಿಗೆ ರೈಲು ಟಿಕೆಟ್‌ ಮುಂಗಡ ಬುಕ್ಕಿಂಗ್‌ ಆರಂಭ, ಇಲ್ಲಿದೆ ವಿವರ

Praveen Chandra B HT Kannada

Jul 29, 2023 11:34 AM IST

google News

Ganesh Chaturthi 2023: ಗೌರಿ ಗಣೇಶ ಹಬ್ಬಕ್ಕೆ ಊರಿಗೆ ಹೋಗ್ತಿರ, ಗಣೇಶ ಚತುರ್ಥಿಗೆ ರೈಲು ಟಿಕೆಟ್‌ ಮುಂಗಡ ಬುಕ್ಕಿಂಗ್‌ ಆರಂಭ

    • Ganesh Chaturthi 2023 Special Trains: ಭಾರತೀಯ ರೈಲ್ವೆ ಗಣೇಶ ಹಬ್ಬಕ್ಕಾಗಿ ನೂರಾರು ವಿಶೇಷ ರೈಲುಗಳನ್ನು ಮೀಸಲಿಟ್ಟಿದೆ. ಈ ವರ್ಷ ಗಣೇಶ ಚತುರ್ಥಿ ಹಬ್ಬ ಸೆಪ್ಟೆಂಬರ್‌ 19ರಂದು ಇರಲಿದ್ದು, ಹಬ್ಬಕ್ಕೆ ಊರಿಗೆ ಹೋಗಲು ಬಯಸುವವರು ಈಗಲೇ ರೈಲು ಟಿಕೆಟ್‌ ಬುಕ್ಕಿಂಗ್‌ ಮಾಡಿಕೊಳ್ಳಬಹುದು. 
Ganesh Chaturthi 2023: ಗೌರಿ ಗಣೇಶ ಹಬ್ಬಕ್ಕೆ ಊರಿಗೆ ಹೋಗ್ತಿರ, ಗಣೇಶ ಚತುರ್ಥಿಗೆ ರೈಲು ಟಿಕೆಟ್‌ ಮುಂಗಡ ಬುಕ್ಕಿಂಗ್‌ ಆರಂಭ
Ganesh Chaturthi 2023: ಗೌರಿ ಗಣೇಶ ಹಬ್ಬಕ್ಕೆ ಊರಿಗೆ ಹೋಗ್ತಿರ, ಗಣೇಶ ಚತುರ್ಥಿಗೆ ರೈಲು ಟಿಕೆಟ್‌ ಮುಂಗಡ ಬುಕ್ಕಿಂಗ್‌ ಆರಂಭ

ಈ ವರ್ಷ ಗಣೇಶ ಚತುರ್ಥಿ ಸೆಪ್ಟೆಂಬರ್‌ 29ರಂದು ನಡೆಯಲಿದೆ. ದೇಶಾದ್ಯಂತ ಲಕ್ಷಾಂತರ ಜನರು ಈ ಹಬ್ಬದ ಸಂಭ್ರಮಕ್ಕೆ ವಿವಿಧ ಊರುಗಳಿಗೆ ತೆರಳಲಿದ್ದಾರೆ. ಈ ಸಂದರ್ಭದಲ್ಲಿ ಬಸ್‌, ರೈಲು ಇತ್ಯಾದಿಗಳಲ್ಲಿ ಪ್ರಯಾಣ ಮಾಡುವವರಿಗೆ ಅನುಕೂಲವಾಗುವಂತೆ ಭಾರತೀಯ ರೈಲ್ವೆಯು ಈಗಾಗಲೇ ವಿಶೇಷ ರೈಲುಗಳನ್ನು ಬಿಡುಗಡೆ ಮಾಡಿದೆ. ವಿಶೇಷವಾಗಿ ಮುಂಬೈಯಿಂದ ಕೊಂಕಣ್‌ ರೈಲು ವಿಶೇಷ ರೈಲುಗಳನ್ನು ಬಿಡುಗಡೆ ಮಾಡಲಾಗಿದೆ. ಕರ್ನಾಟಕದಿಂದ ಪ್ರಯಾಣಿಸುವರಿಗೂ ಈಗಲೇ ರೈಲು ಟಿಕೆಟ್‌ ಬುಕ್ಕಿಂಗ್‌ ಮಾಡುವ ಅವಕಾಶವಿದೆ.

ಗಣೇಶ ಚತುರ್ಥಿಗೆ ರೈಲು ಮುಂಗಡ ಟಿಕೆಟ್‌ ಬುಕ್ಕಿಂಗ್‌

ಕರ್ನಾಟಕ ಅಥವಾ ಇತರೆ ರಾಜ್ಯದವರು ಊರಿಗೆ ಬರುವುದಿದ್ದರೂ ಈಗ ರೈಲು ಬುಕ್ಕಿಂಗ್‌ ಮಾಡಬಹುದು. ಏಕೆಂದರೆ, ಭಾರತೀಯ ರೈಲ್ವೆಯು 120 ದಿನದೊಳಗೆ ರೈಲು ಟಿಕೆಟ್‌ ಮುಂಗಡ ಬುಕ್ಕಿಂಗ್‌ ಮಾಡುವ ಅವಕಾಶ ನೀಡಿದೆ. ಗಣೇಶನ ಹಬ್ಬವು ಸೆಪ್ಟೆಂಬರ್‌ 18/19ಕ್ಕೆ ಆರಂಭಗಾಗುತ್ತದೆ. ಮಂಗಳವಾರ ಹಬ್ಬ ಆರಂಭವಾವಾಗುವುದರಿಂದ ಸೋಮವಾರ ರಜೆ ಮಾಡಲು ಅವಕಾಶ ಇರುವವರು ಹಿಂದಿನ ಶುಕ್ರವಾರ ರಾತ್ರಿಯೇ ರೈಲು ಪ್ರಯಾಣ ಹೊರಡಬಹುದು. ಶನಿವಾರ, ಭಾನುವಾರ, ಸೋಮವಾರ ಸೇರಿದಂತೆ ಹೆಚ್ಚುವರಿ ರಜೆಯ ಸದುಪಯೋಗ ಮಾಡಿಕೊಳ್ಳಬಹುದು.

ಕರ್ನಾಟಕದ ಬಾಗಲಕೋಟೆ,, ಬೆಳಗಾವಿ, ಬಳ್ಳಾರಿ, ಬೀದರ್‌, ಬಿಜಾಪುರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಮಂಗಳೂರು, ಗದಗ, ಧಾರವಾಡ, ಕಲಬುರಗಿ, ಹಾಸನ, ಹಾವೇರಿ, ಕೋಲಾರ, ಕೊಪ್ಪಳ, ಮೈಸೂರು, ರಾಯಚೂರು, ಶಿವಮೊಗ್ಗ, ತುಮಕೂರು, ಉತ್ತರ ಕನ್ನಡ ಸೇರಿದಂತೆ ವಿವಿಧ ಊರುಗಳಿಗೆ ತೆರಳುವವರು ಈಗಲೇ ರೈಲು ಟಿಕೇಟ್‌ ಬುಕ್ಕಿಂಗ್‌ ಮಾಡಬಹುದು.

ರೈಲು ಟಿಕೆಟ್‌ ಮುಂಗಡ ಬುಕ್ಕಿಂಗ್‌ ಹೇಗೆ

  • ಭಾರತೀಯ ರೈಲ್ವೆಯ ವೆಬ್‌ಸೈಟ್‌ ಮೂಲಕ ಬುಕ್ಕಿಂಗ್‌ ಮಾಡಬಹುದು. ಬುಕ್ಕಿಂಗ್‌ ಮಾಡಲು ವೆಬ್‌ ವಿಳಾಸ: www.irctc.co.in
  • ಇಲ್ಲಿ ಎಲ್ಲಿಂದ ಎಲ್ಲಿಗೆ ಎಂದು ಹುಡುಕಿ. ನಿಮಗೆ ಬೇಕಾದ ಸ್ಲೀಪರ್‌, ಏಸಿ ಇತ್ಯಾದಿ ಸೀಟುಗಳ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಿ
  • ಲಭ್ಯವಿರುವ ರೈಲುಗಳಲ್ಲಿ ಟಿಕೆಟ್‌ ಬುಕ್ಕಿಂಗ್‌ ಮಾಡಿಕೊಳ್ಳಿ.

ಐಆರ್‌ಸಿಟಿಸಿ ಆಪ್‌ ಮೂಲಕ ಟಿಕೆಟ್‌ ಬುಕ್ಕಿಂಗ್‌

  • ಗೂಗಲ್‌ ಪ್ಲೇ ಸ್ಟೋರ್‌ ಅಥವಾ ಆಪಲ್‌ ಸ್ಟೋರ್‌ನಿಂದ ಐಆರ್‌ಸಿಟಿಸಿ ಮೊಬೈಲ್‌ ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಿ.
  • ಫೋನ್‌ ನಂಬರ್‌, ಇಮೇಲ್‌ ನೀಡಿ ಆಪ್‌ ಲಾಗಿನ್‌ ಆಗಿ
  • ಇಲ್ಲಿ ಗೆಸ್ಟ್‌ ಆಗಿ ಅಥವಾ ಲಾಗಿನ್‌ ಐಡಿ ಮೂಲಕ ಬುಕ್ಕಿಂಗ್‌ ಮಾಡಬಹುದು.

ಅಂದಹಾಗೆ ಈ ವರ್ಷ ಗಣೇಶ ಚತುರ್ಥಿ ಹಬ್ಬ ನಡೆಯುವ ದಿನಾಂಕ ಯಾವುದು, ಗಣೇಶ ಚತುರ್ಥಿ ತಿಥಿ, ಗಣೇಶ ಹಬ್ಬ ಪೂಜಾ ಸಮಯ, ಗಣೇಶನ ಮೂರ್ತಿ ವಿಸರ್ಜನೆ ಇತ್ಯಾದಿ ಮಾಹಿತಿ ಪಡೆಯಲು ನೀವು ಬಯಸಬಹುದು. ಗಣೇಶ ಹಬ್ಬ 10 ದಿನಗಳ ಕಾಲ ನಡೆಯಲಿದೆ. ಸೆಪ್ಟೆಂಬರ್‌ 19ರಿಂದ ಸೆಪ್ಟೆಂಬರ್‌ 28ರವರೆಗೆ ಕಾರ್ಯಕ್ರಮಗಳು ನಡೆಯಲಿವೆ. ಸೆಪ್ಟೆಂಬರ್‌ 28ರಂದು ಗಣೇಶನ ವಿಸರ್ಜನೆ ನಡೆಯಲಿದೆ. ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ"ಗಣೇಶ ಚತುರ್ಥಿ ಹಬ್ಬ ಯಾವಾಗ, ವಿನಾಯಕನ ಹಬ್ಬ ದಿನಾಂಕ, ಪೂಜಾ ಸಮಯ, ಮೂರ್ತಿ ವಿಸರ್ಜನೆ ವಿವರ" ಎಂಬ ಲೇಖನ ಓದಿ.

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ