logo
ಕನ್ನಡ ಸುದ್ದಿ  /  ಜೀವನಶೈಲಿ  /  Success Story: ಉದ್ಯೋಗ ತೊರೆದು ‌ನವೋದ್ಯಮ ಆರಂಭಿಸಿದ ಉಪಾಸನಾ ಟಕು ಈಗ 5000 ಕೋಟಿಯ ಒಡತಿ; ಮೊಬಿಕ್ವಿಕ್‌ ಸ್ಥಾಪಕಿಯ ಯಶೋಗಾಥೆಯಿದು

Success Story: ಉದ್ಯೋಗ ತೊರೆದು ‌ನವೋದ್ಯಮ ಆರಂಭಿಸಿದ ಉಪಾಸನಾ ಟಕು ಈಗ 5000 ಕೋಟಿಯ ಒಡತಿ; ಮೊಬಿಕ್ವಿಕ್‌ ಸ್ಥಾಪಕಿಯ ಯಶೋಗಾಥೆಯಿದು

Reshma HT Kannada

Dec 11, 2023 09:50 PM IST

google News

ಉಪಾಸನಾ ಟಕು

    • ಅಮೆರಿಕ ಮೂಲದ ಖ್ಯಾತ ಸಂಸ್ಥೆ ಪೇಪಾಲ್‌ನಲ್ಲಿ ಪ್ರಾಡಕ್ಟ್‌ ಮ್ಯಾನೇಜರ್‌ ಆಗಿ ಕೈ ತುಂಬ ಸಂಬಳ ಪಡೆಯುತ್ತಿದ್ದ ಆಕೆ, ಭಾರತದಲ್ಲಿ ಏನನ್ನಾದರೂ ಮಾಡಬೇಕು ಎಂಬ ಕನಸಿನೊಂದಿಗೆ ತಾಯ್ನಾಡಿಗೆ ಮರಳುತ್ತಾರೆ. ಮೊದಲು ಎನ್‌ಜಿಒವೊಂದನ್ನು ಸ್ಥಾಪಿಸಿ ಕೆಲಸ ಮಾಡಿದ್ದ ಆಕೆ, ನಂತರ ಪತಿಯೊಂದಿಗೆ ಸೇರಿ ಮೊಬಿಕ್ವಿಕ್‌ ಕಂಪನಿ ಆರಂಭಿಸುತ್ತಾರೆ. ಆಕೆ ಬದುಕಿನ ಕಥೆ ಇಲ್ಲಿದೆ. 
ಉಪಾಸನಾ ಟಕು
ಉಪಾಸನಾ ಟಕು (DNA)

ಉದ್ಯಮ ಅಥವಾ ವ್ಯವಹಾರ ರಂಗ ಎಂದರೆ ಗಂಡುಮಕ್ಕಳಿಗೆ ಮಾತ್ರ ಸೀಮಿತ ಎಂಬ ಕಾಲವೊಂದಿತ್ತು. ಆದರೆ ಈಗ ಎಲ್ಲವೂ ಬದಲಾಗಿದೆ. ಎಲ್ಲರೂ ಎಲ್ಲಾ ಕ್ಷೇತ್ರದಲ್ಲೂ ದುಡಿಯುತ್ತಾರೆ. ವ್ಯವಹಾರದ ವಿಚಾರಕ್ಕೆ ಬಂದರೆ ಹೆಣ್ಣುಮಕ್ಕಳು ಕೂಡ ಸಾಧಿಸಿ ತೋರಿಸಿದ್ದಾರೆ. ಭಾರತದಲ್ಲಿ ಯಶಸ್ವಿ ಉದ್ಯಮ ನಡೆಸುತ್ತಿರುವ ಹಲವು ಮಹಿಳಾ ಉದ್ಯಮಿಗಳಿದ್ದಾರೆ. ಫಲ್ಗುಣಿ ನಾಯರಿ, ವಿನೀತಾ ಸಿಂಗ್‌, ಇಶಾ ಅಂಬಾನಿ, ಜಯಂತಿ ಚೌಧರಿ ಸೇರಿದಂತೆ ಹಲವು ಉದ್ಯಮಿಗಳು ಯಶ ಕಂಡಿದ್ದಾರೆ. ಇದು ವ್ಯವಹಾರ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆಯನ್ನು ಎತ್ತಿ ತೋರಿಸುತ್ತದೆ. ಫ್ಯಾಷನ್‌ನಿಂದ ತಂತ್ರಜ್ಞಾನದವರೆಗೆ ಮಹಿಳೆಯರ ಬುದ್ಧಿವಂತಿಕೆ ಹಾಗೂ ಪ್ರತಿಭೆಯು ಎಲ್ಲೂ ಹಿಂದೆ ಉಳಿದಿಲ್ಲ.

ಭಾರತದ ಮಹತ್ವಾಕಾಂಕ್ಷಿ ಮಹಿಳಾ ಉದ್ಯಮಿಗಳ ಪೈಕಿ ಉಪಾಸನಾ ಟಕು ಅವರ ಹೆಸರು ಪದೇ ಪದೇ ಮುನ್ನೆಲೆಗೆ ಬರುತ್ತಿರುತ್ತದೆ. ಪ್ರಸ್ತುತ ಫಿನ್‌ಟೆಕ್‌ ವಲಯದಲ್ಲಿ ಪ್ರಾಬಲ್ಯ ಹೊಂದಿರುವ ಮೊದಲ ಮಹಿಳಾ ಉದ್ಯಮಿ ಎನ್ನಿಸಿಕೊಂಡಿದ್ದಾರೆ ಉಪಾಸನಾ ಟಾಕು.

ಯಾರೀಕೆ ಉಪಾಸನಾ ಟಕು

ಉಪಾಸನಾ ಅವರು ಅವರ ಪತಿ ಸ್ಥಾಪಿಸಿರುವ ಮೊಬಿಕ್ವಿಕ್‌ ಕಂಪನಿಯ ಸಿಇಒ ಹಾಗೂ ಮಂಡಳಿಯ ಅಧ್ಯಕ್ಷರಾಗಿದ್ದಾರೆ. ಇವರು ಪಂಜಾಬ್‌ ತಾಂತ್ರಿಕ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್‌ ಪದವಿ ಪಡೆದಿದ್ದಾರೆ. ನಂತರ ಸ್ಟ್ಯಾನ್‌ಪೋರ್ಡ್‌ ವಿಶ್ವವಿದ್ಯಾಲಯದಿಂದ ಮ್ಯಾನೇಜ್‌ಮೆಂಟ್‌ ಸೈನ್ಸ್‌ ಮತ್ತು ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಇವರು 17 ವರ್ಷಕ್ಕೂ ಹೆಚ್ಚು ಕಾಲ ಸಂಬಂಧಿತ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರು. ಅವರು ತಮ್ಮ ಸ್ವಂತ ವ್ಯವಹಾರ ಆರಂಭಿಸುವ ಮೊದಲು ಅಮೆರಿಕನ್‌ ಪೇಮೆಂಟ್‌ ಫರ್ಮ್‌ ಪೇಪಾಲ್‌ಗೆ ಪ್ರಾಡಕ್ಟ್‌ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದರು. ಆಕೆ ಎಚ್‌ಎಸ್‌ಬಿಸಿಯಲ್ಲೂ ಕೆಲ ಕಾಲ ಕೆಲಸ ಮಾಡಿದ್ದರು. ಅಮೆರಿಕದಲ್ಲಿ ನೆಲೆಸಿದ್ದ ಆಕೆ 2008ರಲ್ಲಿ ತಮ್ಮ ಬ್ಯುಸಿನೆಸ್‌ ವಿಸ್ತರಿಸುವ ಉದ್ದೇಶದಿಂದ ಭಾರತಕ್ಕೆ ಮರಳಿದರು. ʼನನ್ನ ಕುಟುಂಬಕ್ಕೆ ನಾನು ಭಾರತಕ್ಕೆ ಬರುವುದು ಇಷ್ಟವಿರಲಿಲ್ಲ. ಅಮೆರಿಕ ಬಿಟ್ಟು ಭಾರತಕ್ಕೆ ಬರುವುದು ಮೂರ್ಖತನದ ಕ್ರಮ ಎಂದಿದ್ದರು. ಆದರೆ ನನಗೆ ಭಾರತದಲ್ಲೇ ಉದ್ಯಮವನ್ನು ವಿಸ್ತರಿಸುವ ಹಂಬಲವಿತ್ತುʼ ಎಂದು ಈ ಹಿಂದೆ ಪೋರ್ಬ್ಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಉಪಾಸನಾ ಅವರ ತಂದೆ ಏಟ್ರಿಯಾದ ಅಸ್ಮಾರಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಪ್ರಾದ್ಯಾಪಕರಾಗಿದ್ದರು. ತಾಯಿ ಮ್ಯೂಸಿಷಿಯನ್‌ ಆಗಿದ್ದರು. ಮೊದಲು ಅವರು ಆಫ್ರಿಕಾದಲ್ಲಿ ವಾಸವಿದ್ದರು. 2009ರಲ್ಲಿ ಭಾರತಕ್ಕೆ ಮರಳುತ್ತಾರೆ.

ಆಫ್ರಿಕಾದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ಅವರು, ಭಾರತಕ್ಕೆ ಮರಳುವ ಕನಸಿನೊಂದಿಗೆ ಎಲ್ಲವನ್ನೂ ತೊರೆದಿದ್ದರು. ಬಹುದೊಡ್ಡ ರಿಸ್ಕ್‌ನೊಂದಿಗೆ ಭಾರತಕ್ಕೆ ಬಂದ ಅವರು ರೂರಲ್‌ ಬಿಹಾರ ಮತ್ತು ಉತ್ತರಪ್ರದೇಶದ ಗ್ರಾಮೀಣ ಭಾಗಗಳಲ್ಲಿ ಮೈಕ್ರೋಫೈನಾನ್ಸ್ ಎನ್‌ಜಿಒವೊಂದನ್ನು ತೆರೆದು, ಅಲ್ಲಿಂದ ಕೆಲಸ ಆರಂಭಿಸುತ್ತಾರೆ.

ಮೊಬಿಕ್ವಿಕ್‌ ಆರಂಭ 

ನಾಟಕ ನೋಡಲು ಹೋದಾಗ ಈಕೆ ಬಿಪಿನ್‌ ಪ್ರೀತ್‌ ಸಿಂಗ್‌ ಅವರನ್ನು ಭೇಟಿಯಾಗುತ್ತಾರೆ. 2008ರಲ್ಲಿ ಭೇಟಿಯಾದ ಇವರು 2011ರಲ್ಲಿ ಮದುವೆಯಾಗುತ್ತಾರೆ. 2008 ರಲ್ಲಿ ಮೊಬಿಕ್ವಿಕ್‌ ಸಹ ಸಂಸ್ಥಾಪಕರಾಗಿರುವ ಸಿಂಗ್‌ ಒಂದು ಉದ್ಯಮ ವೇದಿಕೆಯನ್ನು ಅಭಿವೃದ್ಧಿಪಡಿಸುತ್ತಾರೆ. ವೃತ್ತಿಯಲ್ಲಿ ಅಸಮಾಧಾನ ಹೊಂದಿದ್ದ ಸಿಂಗ್‌ ಕುಟುಂಬ ನಿರ್ವಹಣೆಯ ಉದ್ದೇಶದಿಂದ ಅನಿವಾರ್ಯವಾಗಿ ಕೆಲಸ ಮಾಡುತ್ತಿದ್ದರು. ಆದರೆ ಉಪಾಸನಾ ಇವರಿಗೆ ಕೆಲಸ ರಾಜೀನಾಮೆ ನೀಡಿ ಸ್ಟಾರ್ಟ್‌ಆಪ್‌ ಆರಂಭಿಸಲು ಹುರಿದುಂಬಿಸಿದ್ದರು. 2022-2023ರ ವರ್ಷದ ಮೂರನೇ ತ್ರೈಮಾಸಿನದಲ್ಲಿ ಕಂಪನಿಯು ಲಾಭ ಗಳಿಸಲು ಪ್ರಾರಂಭಿಸಿದೆ ಎಂದು ಉಪಾಸನಾ ಟಕು ಹೇಳಿದ್ದಾರೆ.

ಇತ್ತೀಚಿನ ಆರ್ಥಿಕ ವರ್ಷದಲ್ಲಿ ಪ್ಲಾಟ್‌ಫಾರ್ಮ್ 560 ಕೋಟಿ ಆದಾಯವನ್ನು ಗಳಿಸಿದೆ. ಅವರ ಪ್ರಕಾರ 'ಬೈ ನೌ ಪೇ ಲೇಟರ್' ಕಾರ್ಯಕ್ರಮವು ಕ್ರೆಡಿಟ್ ಕಾರ್ಡ್ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಲು ವ್ಯಾಪಾರಕ್ಕೆ ಸಹಾಯ ಮಾಡಿತು. 2021 ಡಿಸೆಂಬರ್‌ ಪ್ರಕಾರ ಉಪಾಸನಾ ಟಕು 5,723 ಕೋಟಿಯ ಆಸ್ತಿಯ ಉದ್ಯಮಿಯಾಗಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ