logo
ಕನ್ನಡ ಸುದ್ದಿ  /  ಜೀವನಶೈಲಿ  /  Top Restaurants 2023: ವಿಶ್ವದ ಟಾಪ್‌ ರೆಸ್ಟೋರೆಂಟ್‌ಗಳಲ್ಲಿ ಭಾರತದ ಮೂರಕ್ಕೆ ಸ್ಥಾನ: ಕರ್ನಾಟಕದ ಯಾವ ರೆಸ್ಟೋರೆಂಟ್‌ಗೆ ಸಿಕ್ಕಿದೆ ಗೌರವ

Top Restaurants 2023: ವಿಶ್ವದ ಟಾಪ್‌ ರೆಸ್ಟೋರೆಂಟ್‌ಗಳಲ್ಲಿ ಭಾರತದ ಮೂರಕ್ಕೆ ಸ್ಥಾನ: ಕರ್ನಾಟಕದ ಯಾವ ರೆಸ್ಟೋರೆಂಟ್‌ಗೆ ಸಿಕ್ಕಿದೆ ಗೌರವ

Umesha Bhatta P H HT Kannada

Jan 03, 2024 07:14 PM IST

google News

ವಿಶ್ವದ ಟಾಪ್‌ ರೆಸ್ಟೋರೆಂಟ್‌ಗಳ ಪಟ್ಟಿಯಲ್ಲಿ ಬೆಂಗಳೂರಿನ ಎಂಟಿಆರ್‌ಗೂ(MTR) ಸ್ಥಾನ ಲಭಿಸಿದೆ.

    • Top Restaurants ವಿಶ್ವದ ಅತ್ಯುತ್ತಮ ರೆಸ್ಟೋರೆಂಟ್‌ಗಳ ಪಟ್ಟಿಯನ್ನುಟೇಸ್ಟ್‌ ಅಟ್ಲಾಸ್‌ ಸಂಸ್ಥೆ ಬಿಡುಗಡೆ ಮಾಡಿದ್ದು ಇದರಲ್ಲಿ ಭಾರತದ ಆರು ಹಾಗೂ ಕರ್ನಾಟಕದ ಒಂದು ರೆಸ್ಟೋರೆಂಟ್‌ ಸ್ಥಾನ ಪಡೆದುಕೊಂಡಿವೆ. ಅದರ ವಿವರ ಇಲ್ಲಿದೆ….
ವಿಶ್ವದ ಟಾಪ್‌ ರೆಸ್ಟೋರೆಂಟ್‌ಗಳ ಪಟ್ಟಿಯಲ್ಲಿ ಬೆಂಗಳೂರಿನ ಎಂಟಿಆರ್‌ಗೂ(MTR) ಸ್ಥಾನ ಲಭಿಸಿದೆ.
ವಿಶ್ವದ ಟಾಪ್‌ ರೆಸ್ಟೋರೆಂಟ್‌ಗಳ ಪಟ್ಟಿಯಲ್ಲಿ ಬೆಂಗಳೂರಿನ ಎಂಟಿಆರ್‌ಗೂ(MTR) ಸ್ಥಾನ ಲಭಿಸಿದೆ.

ರುಚಿಯಾದ ಊಟ- ಉಪಹಾರ ಎಂದರೆ ಯಾರಿಗೆ ಇಷ್ಟವಿಲ್ಲ. ಮನುಷ್ಯ ಅತಿ ಹೆಚ್ಚು ಇಷ್ಟಪಡುವಂತಹದ್ದು ಉಡುಗೆ ಹಾಗೂ ಆಹಾರ. ಅದರಲ್ಲೂ ಆಹಾರ ರುಚಿಕರವಾಗಿದ್ದರೆ ಮುಗಿದೇ ಹೋಯಿತು. ರುಚಿಕರವಾಗಿ ಮನೆಯಲ್ಲಿ ಅಡುಗೆ ಮಾಡುವುದು ಬೇರೆ. ಹೊರಗಡೆಯೂ ಹತ್ತಾರು ಹೊಟೇಲ್‌, ರೆಸ್ಟೋರೆಂಟ್‌ಗಳು ರುಚಿಕರ ಊಟ, ತಿಂಡಿ ನೀಡುವ ಮೂಲಕ ಲಕ್ಷಾಂತರ ಮಂದಿಗೆ ಎರಡನೇ ಮನೆಯೇ ಆಗಿವೆ. ಹೀಗೆ ರುಚಿಕರ ಊಟ, ತಿಂಡಿ ನೀಡುವ ವಿಶ್ವದ ಹತ್ತು ಅತ್ಯುತ್ತಮ ರೆಸ್ಟೋರೆಂಟ್‌ಗಳಲ್ಲಿ ಭಾರತದ ಮೂರು ರೆಸ್ಟೋರೆಂಟ್‌ಗಳು ಸ್ಥಾನ ಪಡೆದಿವೆ.

ವಿಶ್ವದ ಪ್ರಮುಖ ಪ್ರವಾಸಿ ಆನ್‌ಲೈನ್‌ ಗೈಡ್‌ ಸಂಸ್ಥೆ ಟೇಸ್ಟ್‌ ಅಟ್ಲಾಸ್‌( Taste Atlas) ಸಮೀಕ್ಷೆ ನಡೆಸಿ 2023 ರ ಟಾಪ್‌ ಹತ್ತು ರೆಸ್ಟೋರೆಂಟ್‌ಗಳ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಕೇರಳ, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳದ ಒಂದೊಂದು ರೆಸ್ಟೋರೆಂಟ್‌ ಸ್ಥಾನ ಪಡೆದುಕೊಂಡಿವೆ. ಇದೇ ಸಂಸ್ಥೆಯು ಬರೀ ರೆಸ್ಟೋರೆಂಟ್‌ಗಳ ಪಟ್ಟಿ ಮಾತ್ರವಲ್ಲದೇ ವಿಶ್ವದ ಅತ್ಯುತ್ತಮ ಮ್ಯೂಸಿಯಂ, ಗ್ಯಾಲರಿಗಳು ಹಾಗೂ ಸ್ಮಾರಕಗಳ ಪಟ್ಟಿಯನ್ನೂ ಬಿಡುಗಡೆ ಮಾಡಿದೆ.

ಕೇರಳದ ಕೋಯಿಕೋಡ್‌ನಲ್ಲಿರುವ ಪರಗೋನ್‌( paragon) ಅತ್ತುತ್ತಮ ಮಲಬಾರ್‌ ಅಡುಗೆಗಳಿಗೆ ಪ್ರಸಿದ್ದಿ. ಇಲ್ಲಿ ಸಿಗುವ ಪರೋಟವಂತೂ ಬಲುರುಚಿ. ಇಲ್ಲಿನ ಬಿರ್ಯಾನಿ ಬಲು ಹೆಸರುವಾಸಿ. ಕೇರಳಕ್ಕೆ ಹೋದವರು ಪರಗೋನ್‌ ಬಿರ್ಯಾನಿ, ಪರೋಟ ತಿನ್ನದವರೇ ಇಲ್ಲ. ಸುದೀರ್ಘ ಇತಿಹಾಸ ಇರುವ ಈ ಮಲಬಾರ್‌ ರೆಸ್ಟೋರೆಂಟ್‌ಗೆ ವಿಶ್ವದ ಟಾಪ್‌ ಪಟ್ಟಿಯಲ್ಲಿ ಐದನೇ ಸ್ಥಾನ

ಉತ್ತರ ಪ್ರದೇಶದ ಲಕ್ನೋದಲ್ಲಿರುವ ತುಂಡೇ ಕಬಾಬಿ ಕೂಡ ರುಚಿಯಲ್ಲಿ ಬಲು ಜನಪ್ರಿಯ. ಭಾರತದ ಅಡುಗೆ ತಯಾರಿಕೆಯಲ್ಲಿನ ಮುಕುಟ ಎಂದು ಇದನ್ನು ಕೆಲವರು ಬಣ್ಣಿಸುತ್ತಾರೆ. ಮೊಗಲ್‌ ಶೈಲಿಯ ಅಡುಗೆ ಇಲ್ಲಿ ಬಹು ರುಚಿಕರ. ಅದರಲ್ಲೂ ಗಲೌಟಿ ಕಬಾಬ್‌ ತಿನ್ನದವರಿಲ್ಲ. ಮಾಂಸದ ಅಡುಗೆಗೆ ಬಳಸುವ ಹಿತಕರ ಮಸಾಲೆ, ಜತೆಗೆ ನೀಡುವ ಹಣ್ಣುಗಳ ಪೇಯಗಳೂ ಆಕರ್ಷಿಸುತ್ತವೆ. ಇದಕ್ಕೆ ಆರನೇ ಸ್ಥಾನ ಲಭಿಸಿದೆ

ಪಶ್ಚಿಮ ಬಂಗಾಲದ ರಾಜಧಾನಿ ಕೋಲ್ಕತ್ತಾದ ಪ್ರಮುಖ ರೆಸ್ಟೋರೆಂಟ್‌ಗಳಲ್ಲಿ ಪೀಟರ್‌ ಕ್ಯಾಟ್‌ಗೆ ಉನ್ನತ ಸ್ಥಾನ. 1975ರಲ್ಲಿ ಆರಂಭಗೊಂಡ ಈ ರೆಸ್ಟೋರೆಂಟ್‌ನಲ್ಲಿ ಚೆಲೋ ಕಬಾಬ್‌ಗಳು ಬಲು ರುಚಿಕರ. ವಿಭಿನ್ನ ಅಡುಗೆಗಳ ಮೂಲಕವೇ ಗಮನ ಸೆಳೆದ ಪೀಟರ್‌ ಕ್ಯಾಟ್‌ಗೆ ಹತ್ತನೇ ಸ್ಥಾನ ಲಭಿಸಿದೆ.

ಇದೇ ಸಂಸ್ಥೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ 100ರ ಒಳಗೆ ಭಾರತದ ಇನ್ನೂ ಹಲವು ರೆಸ್ಟೋರೆಂಟ್‌ಗಳು ಸ್ಥಾನ ಪಡೆದಿವೆ.

ದೆಹಲಿಯ ಮುರ್ತಾಲ್‌ ಅಮ್ರಿಕ್‌ ಸುಖದೇವ್‌ ಡಾಬಾಗೆ 16ನೇ ಸ್ಥಾನ ಸಿಕ್ಕಿದೆ. ಬೆಂಗಳೂರಿನ ಮಾವಳ್ಳಿ ಟಿಫಿನ್‌ ರೂಂ( MTR) ಗೆ 32ನೇ ಸ್ಥಾನ ದೊರೆತಿದೆ. ಅದೇ ರೀತಿ ದೆಹಲಿಯ ಕರೀಂಸ್‌ ರೆಸ್ಟೋರೆಂಟ್‌ಗೆ 84ನೇ ಸ್ಥಾನ ಲಭಿಸಿದೆ.

ವಿಯೆನ್ನಾದ ಫಿಗ್‌ ಮುಲ್ಲರ್‌ ಮೊದಲನೇ ಸ್ಥಾನ, ನಾಪೆಲ್ಸ್‌ನ ಫಿಜೇರಿಯಾ ಡ ಮಿಷೆಲೆ ಎರಡು ಹಾಗೂ ಮುನಿಚ್‌ನ ಹಾಫ್‌ಬ್ರಹುತಾಸ್‌ ಮುಂಚೇನ್‌ ಮೂರನೇ ಸ್ಥಾನವನ್ನು ಪಡೆದುಕೊಂಡಿವೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ