logo
ಕನ್ನಡ ಸುದ್ದಿ  /  ಜೀವನಶೈಲಿ  /  Suicide Prevention Day: ಆತ್ಮಹತ್ಯೆ ಮೂಲಕ ಬದುಕು ತ್ಯಜಿಸುವ ಮುನ್ನ ಕ್ಷಣ ಯೋಚಿಸಿ, ವಿಶ್ವ ಆತ್ಮಹತ್ಯೆ ತಡೆ ದಿನದ ಮಹತ್ವ ಅರಿಯಿರಿ

Suicide Prevention Day: ಆತ್ಮಹತ್ಯೆ ಮೂಲಕ ಬದುಕು ತ್ಯಜಿಸುವ ಮುನ್ನ ಕ್ಷಣ ಯೋಚಿಸಿ, ವಿಶ್ವ ಆತ್ಮಹತ್ಯೆ ತಡೆ ದಿನದ ಮಹತ್ವ ಅರಿಯಿರಿ

Reshma HT Kannada

Sep 10, 2023 08:59 AM IST

google News

ವಿಶ್ವ ಆತ್ಮಹತ್ಯೆ ತಡೆ ದಿನ

    • ಇತ್ತೀಚೆಗೆ ಆತ್ಮಹತ್ಯೆಗೆ ಶರಣಾಗುವವರ ಸಂಖ್ಯೆ ಹೆಚ್ಚುತ್ತಿದೆ. ಯುವಜನರಲ್ಲಿ ಆತ್ಮಹತ್ಯೆಯ ಪ್ರಮಾಣ ಹೆಚ್ಚುತ್ತಿರುವುದು ಆತಂಕಕಾರಿ. ಆತ್ಮಹತ್ಯೆಯ ಮೂಲಕ ಬದುಕನ್ನು ಕೊನೆಗೊಳಿಸಿಕೊಳ್ಳುವ ಮುನ್ನ ಕ್ಷಣ ಯೋಚಿಸಿ. ಸಕಲ ಸಮಸ್ಯೆಗಳಿಗೂ ಆತ್ಮಹತ್ಯೆಯೇ ಪರಿಹಾರವಲ್ಲ. ನಿಮ್ಮ ಒಂದು ಕ್ಷಣದ ನಿರ್ಧಾರದಿಂದ ಹಿಂದೆ ಸರಿದರೆ ಬದುಕು ಪವಾಡವನ್ನೇ ಸೃಷ್ಟಿಸಬಹುದು, ತಾಳ್ಮೆ ಇರಲಿ.
ವಿಶ್ವ ಆತ್ಮಹತ್ಯೆ ತಡೆ ದಿನ
ವಿಶ್ವ ಆತ್ಮಹತ್ಯೆ ತಡೆ ದಿನ

ಪ್ರಪಂಚದಾದ್ಯಂತ ಇತ್ತೀಚೆಗೆ ಆತ್ಮಹತ್ಯೆಯ ಪ್ರಕರಣಗಳು ಹೆಚ್ಚುತ್ತಿವೆ. ಸಾಮಾನ್ಯ ಸಮಸ್ಯೆಗಳನ್ನೂ ಎದುರಿಸಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆತ್ಮಹತ್ಯೆ ಎನ್ನುವುದು ವ್ಯಕ್ತಿಗಳು ತಮ್ಮ ಜೀವನವನ್ನು ಕೊನೆಗೊಳಿಸಲು ತೆಗೆದುಕೊಳ್ಳುವ ಒಂದು ಗಂಭೀರ ನಿರ್ಧಾರ. ಆತ್ಮಹತ್ಯೆಗೆ ಕಾರಣಗಳು ಹಲವಿರಬಹುದು. ಮಾನಸಿಕ ಆಘಾತ, ಆರ್ಥಿಕ ಪರಿಸ್ಥಿತಿ, ಬಡತನ, ಸೋಲು, ಪ್ರೇಮ ವೈಫಲ್ಯ ಈ ಹಲವು ಕಾರಣಗಳಿಂದ ಆತ್ಮಹತ್ಯೆಯ ಪ್ರಮಾಣ ಹೆಚ್ಚುತ್ತಿದೆ.

ಆದರೆ ಜನರಲ್ಲಿ ಎಲ್ಲದ್ದಕ್ಕೂ ಸಾವೇ ಪರಿಹಾರವಲ್ಲ, ನಿನಗಿಂತಲೂ ಹೆಚ್ಚು ಸಮಸ್ಯೆ ಇರುವವರು ಈ ಜಗತ್ತಿನಲ್ಲಿ ಇದ್ದಾರೆ, ಬದುಕಿನಲ್ಲಿ ಹೋರಾಡಿ ಗೆಲ್ಲಬೇಕು ಎಂದು ಜಾಗೃತಿ ಮೂಡಿಸುವುದು ಮುಖ್ಯವಾಗಿದೆ ಮತ್ತು ಆತ್ಮಹತ್ಯಾ ಮನೋಭಾವದಿಂದ ಜನರನ್ನು ಹೊರ ತರುವುದು ಬಹಳ ಮುಖ್ಯವಾಗಿದೆ.

ಸುಸೈಡ್‌ ಅಥವಾ ಆತ್ಮಹತ್ಯೆ ಎನ್ನುವುದು ಗಂಭೀರ ಆರೋಗ್ಯ ಸಮಸ್ಯೆಯಾಗಿದೆ. ಇದನ್ನು ಮೂಲದಿಂದಲೇ ಪರಿಹರಿಸುವುದು ಕೂಡ ಮುಖ್ಯವಾಗುತ್ತದೆ. ಅಂದ ಹಾಗೆ ಇಂದು ವಿಶ್ವ ಆತ್ಮಹತ್ಯೆ ತಡೆ ದಿನ. ಈ ದಿನ ಇತಿಹಾಸ ಮಹತ್ವ ಹಾಗೂ ಹಿನ್ನೆಲೆ ಅರಿಯಿರಿ.

ದಿನಾಂಕ

ಪ್ರತಿವರ್ಷ ಸೆಪ್ಟೆಂಬರ್‌ 10 ರಂದು ವಿಶ್ವ ಆತ್ಮಹತ್ಯಾ ತಡೆ ದಿನವನ್ನು ಆಚರಿಸಲಾಗುತ್ತದೆ. ಈ ದಿನ ವಿಶ್ವ ಆತ್ಮಹತ್ಯಾ ತಡೆ ದಿನದ ಆಚರಣೆ ಇದೆ.

ಇತಿಹಾಸ

ಇಂಟರ್‌ನ್ಯಾಷನಲ್‌ ಅಸೋಸಿಯೇಷನ್‌ ಫಾರ್‌ ಸುಸೈಡ್‌ ವಿಶ್ವ ಆರೋಗ್ಯ ಸಂಸ್ಥೆಯ ಜೊತೆಗೂಡಿ ಪ್ರತಿವರ್ಷ ಸೆಪ್ಟೆಂಬರ್‌ 10 ರಂದು ಆತ್ಮಹತ್ಯೆ ತಡೆಗಟ್ಟುವ ಹಾಗೂ ಈ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ಆತ್ಮಹತ್ಯೆ ತಡೆ ದಿನವನ್ನು ಆಚರಿಸಲು ಕರೆ ಕೊಟ್ಟಿತ್ತು. 2003ರಲ್ಲಿ ಮೊದಲ ಬಾರಿ ಈ ಆಚರಣೆಗೆ ಚಾಲನೆ ಸಿಕ್ಕಿತು.

ʼಈ ದಿನ ಆತ್ಮಹತ್ಯೆಯ ಬಗ್ಗೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯಲು ಮತ್ತು ಆತ್ಮಹತ್ಯೆಗಳನ್ನು ತಡೆಗಟ್ಟಲು ಸಾಧ್ಯ ಎಂಬ ಸಂದೇಶವನ್ನು ಪ್ರಸಾರ ಮಾಡಲು ʼಕ್ರಿಯೇಟ್‌ ಹೋಪ್‌ ಥ್ರೂ ಆಕ್ಷನ್‌ʼ ಮೂಲಕ ಪ್ರೋತ್ಸಾಹಿಸುವ ಕೆಲಸವನ್ನು ನಾವು ಮಾಡುತ್ತೇವೆ. ತಿಳುವಳಿಕೆ ಮೂಡಿಸುವುದು, ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಜನರನ್ನು ತಲುಪುವುದು ಈ ಕೆಲಸಗಳನ್ನು ಮಾಡುತ್ತೇವೆ. ʼಕ್ರಿಯೇಟ್‌ ಹೋಪ್‌ ಥ್ರೂ ಆಕ್ಷನ್‌ʼ‌ ಈ ಥೀಮ್‌ ಜನರಲ್ಲಿ ವಿಶ್ವಾಸವನ್ನು ಮೂಡಿಸುತ್ತದೆ. ಇದು ಜನರಲ್ಲಿ ಆತ್ಮಹತ್ಯೆಗೂ ಮೀರಿದ ದಾರಿ ಇದೆ ಎಂಬ ಆತ್ಮವಿಶ್ವಾಸ ಮೂಡಿಸುತ್ತದೆ ಮತ್ತು ಆ ದಾರಿಯ ಮೇಲೆ ಬೆಳಕನ್ನು ಚೆಲ್ಲುವ ಹಾಗೂ ಬದುಕಿನಲ್ಲಿ ಮುನ್ನೆಡೆಯುವ ದಾರಿ ತೋರಿಸುವ ಕೆಲಸವನ್ನು ನಾವು ಮಾಡುತ್ತೇವೆʼ ಎನ್ನುತ್ತದೆ ಇಂಟರ್‌ನ್ಯಾಷನಲ್‌ ಅಸೋಸಿಯೇಷನ್‌ ಫಾರ್‌ ಸೂಸೈಡ್‌ ಪ್ರಿವೆಂಷನ್‌.

ಮಹತ್ವ

ಜನರಲ್ಲಿ ಬದುಕಿನ ಬಗ್ಗೆ ವಿಶ್ವಾಸ ಮೂಡಿಸಿ ಆತ್ಮಹತ್ಯೆಯನ್ನು ತಡೆಯುವುದು ಹಾಗೂ ಆತ್ಮಹತ್ಯೆಯ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಪ್ರಮುಖ ಉದ್ದೇಶ. ಆತ್ಮಹತ್ಯೆಯ ಸುತ್ತಲಿನ ಕಳಂಕವನ್ನು ಪರಿಹರಿಸಿದಾಗ ಜನರು ಈ ಕೆಟ್ಟ ನಿರ್ಧಾರದಿಂದ ಹಿಂದೆ ಸರಿಯುತ್ತಾರೆ. ಅವರ ಸಮಸ್ಯೆಗಳಿಗೆ ದನಿಯಾಗುವುದು ಮುಖ್ಯವಾಗುತ್ತದೆ. ಅವರ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಅರ್ಥಮಾಡಿಕೊಳ್ಳಲು ನಾವು ಮನಸ್ಸು ಮಾಡಬೇಕು. ಅವರಿಗೆ ಸ್ವಾಂತನ ಹೇಳಿ, ಧೈರ್ಯ ತುಂಬಿ, ವಿಶ್ವಾಸ ಮೂಡಿಸುವ ಮೂಲಕ ಆತ್ಮಹತ್ಯೆಯ ಯೋಚನೆಯಿಂದ ದೂರ ಮಾಡಬಹುದು. ಆ ಮೂಲಕ ಆತ್ಮಹತ್ಯೆಯ ಬಗ್ಗೆ ಜಾಗೃತಿ ಮೂಡಿಸಬಹುದು ಮತ್ತು ಅದನ್ನು ತಡೆಯಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ