logo
ಕನ್ನಡ ಸುದ್ದಿ  /  ಜೀವನಶೈಲಿ  /  Womens Day: ಈ ವರ್ಷ ಮಹಿಳಾ ದಿನದಂದು ನಿಮ್ಮ ಪ್ರೀತಿಪಾತ್ರರಿಗೆ ಸ್ಪೆಷಲ್‌ ಗಿಫ್ಟ್‌ ಕೊಡ್ಬೇಕು ಅಂತಿದ್ರೆ ಇಲ್ಲಿದೆ ಐಡಿಯಾ

Womens Day: ಈ ವರ್ಷ ಮಹಿಳಾ ದಿನದಂದು ನಿಮ್ಮ ಪ್ರೀತಿಪಾತ್ರರಿಗೆ ಸ್ಪೆಷಲ್‌ ಗಿಫ್ಟ್‌ ಕೊಡ್ಬೇಕು ಅಂತಿದ್ರೆ ಇಲ್ಲಿದೆ ಐಡಿಯಾ

Reshma HT Kannada

Feb 24, 2024 07:00 AM IST

google News

ಈ ವರ್ಷ ಮಹಿಳಾ ದಿನದಂದು ನಿಮ್ಮ ಪ್ರೀತಿಪಾತ್ರರಿಗೆ ಸ್ಪೆಷಲ್‌ ಗಿಫ್ಟ್‌ ಕೊಡ್ಬೇಕು ಅಂತಿದ್ರೆ ಇಲ್ಲಿದೆ ಐಡಿಯಾ

    • ಹೆಣ್ಣುಮಕ್ಕಳ ಅಸ್ಮಿತೆಯನ್ನು ಗುರುತಿಸುವ ಉದ್ದೇಶದಿಂದ ಪ್ರತಿ ವರ್ಷ ಮಾರ್ಚ್‌ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ಮಹಿಳಾ ದಿನದಂದು ನಿಮ್ಮ ನೆಚ್ಚಿನ ಅಮ್ಮ, ಅಕ್ಕ-ತಂಗಿ, ಗೆಳತಿ, ಸಂಗಾತಿ, ಪ್ರೇಮಿಗೆ ಸ್ಪೆಷಲ್‌ ಹಾಗೂ ಯುನಿಕ್‌ ಆಗಿರೋ ಗಿಫ್ಟ್‌ ಕೊಡಬೇಕು ಅಂತಿದ್ರೆ ಇಲ್ಲಿದೆ ನಿಮಗಾಗಿ ಒಂದಿಷ್ಟು ಐಡಿಯಾ.
ಈ ವರ್ಷ ಮಹಿಳಾ ದಿನದಂದು ನಿಮ್ಮ ಪ್ರೀತಿಪಾತ್ರರಿಗೆ ಸ್ಪೆಷಲ್‌ ಗಿಫ್ಟ್‌ ಕೊಡ್ಬೇಕು ಅಂತಿದ್ರೆ ಇಲ್ಲಿದೆ ಐಡಿಯಾ
ಈ ವರ್ಷ ಮಹಿಳಾ ದಿನದಂದು ನಿಮ್ಮ ಪ್ರೀತಿಪಾತ್ರರಿಗೆ ಸ್ಪೆಷಲ್‌ ಗಿಫ್ಟ್‌ ಕೊಡ್ಬೇಕು ಅಂತಿದ್ರೆ ಇಲ್ಲಿದೆ ಐಡಿಯಾ

ಪ್ರತಿಯೊಬ್ಬರ ಜೀವನದಲ್ಲೂ ಹೆಣ್ಣು ಬಹಳ ಮುಖ್ಯ. ಹೆಣ್ಣಿಲ್ಲದೇ ಸೃಷ್ಟಿಯಿಲ್ಲ. ಸೃಷ್ಟಿಯ ಮೂಲವೇ ಹೆಣ್ಣು. ತಾಯಿಯಿಂದ ಆರಂಭವಾಗುವ ಹೆಣ್ಣಿನ ಬಂಧ ಸಹೋದರಿ, ಗೆಳತಿ, ಪ್ರೇಮಿ, ಸಂಗಾತಿ, ಮಡದಿ ಹೀಗೆ ಮುಂದುವರಿಯುತ್ತದೆ. ಇಂತಹ ಹೆಣ್ಣುಮಕ್ಕಳ ಅಸ್ಮಿತೆಯನ್ನು ಸಂಭ್ರಮಿಸುವ ಸಲುವಾಗಿ ಪ್ರತಿವರ್ಷ ಮಾರ್ಚ್‌ 8 ರಂದು ಹೆಣ್ಣುಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ಪ್ರತಿಬಾರಿಯೂ ನ್ಯೂಸ್‌ ಪೇಪರ್‌ ಅಥವಾ ಟಿವಿ ನೋಡಿದಾಕ್ಷಣ ʼಅಯ್ಯೋ, ಇವತ್ತು ಹೆಣ್ಣುಮಕ್ಕಳ ದಿನ. ನಮ್ಮ ಅಮ್ಮನಿಗೆ ಏನಾದ್ರೂ ಗಿಫ್ಟ್‌ ಕೊಡಬಹುದಿತ್ತು, ಅಯ್ಯೋ ವುಮೆನ್ಸ್‌ ಡೇ ಅನ್ನೋದು ಮರೆತೇ ಹೋಯ್ತು ಇಲ್ಲಾಂದ್ರೆ ನನ್ನ ಹೆಂಡತಿಗೆ ಏನಾದ್ರೂ ಸ್ಪೆಷಲ್‌ ಗಿಫ್ಟ್‌ ಕೊಡಬೇಕು ಅಂದ್ಕೊಂಡಿದ್ದೆ ಅಂತೆಲ್ಲಾ ಆ ದಿನ ಯೋಚನೆ ಮಾಡುವವರೇ ಹೆಚ್ಚು. ಅಲ್ಲದೇ ಕೆಲವರು ಪ್ರತಿವರ್ಷವೂ ಈ ವರ್ಷ ಏನಪ್ಪಾ ಗಿಫ್ಟ್‌ ಕೊಡ್ಲಿ, ಈ ಸಲ ಏನಾದ್ರೂ ಡಿಫ್ರೆಂಟಾಗಿ ಯೋಚನೆ ಮಾಡ್ಬೇಕು ಅಂತ ಮನಸ್ಸಲ್ಲೇ ಮಂಡಿಗೆ ತಿಂತಾ ಇರ್ತಾರೆ. ಹಾಗಂತ ಖಂಡಿತ ಯೋಚಿಸುವ ಅಗತ್ಯವಿಲ್ಲ.

ನಿಮ್ಮ ಪ್ರೀತಿಪಾತ್ರರಿಗೆ ಯುನಿಕ್‌ ಗಿಫ್ಟ್‌ ನೀಡಲು ನಾವು ನಿಮಗೆ ಐಡಿಯಾ ಕೊಡ್ತೀವಿ. ಈಗಂತೂ ಆನ್‌ಲೈನ್‌ ಯುಗ. ನೀವು ಅಂದೊಂಡಿದ್ದೇಲ್ಲವೂ ನಿಮ್ಮ ಮನೆ ಬಾಗಿಲಿಗೆ ಬರುವ ಕಾಲ. ಹಾಗಂತ ಆನ್‌ಲೈನ್‌ ಸಿಗುವ ಉಡುಗೊರೆಗಳನ್ನು ನಿಮ್ಮ ಸಂಗಾತಿ ಮೆಚ್ಚಬೇಕು ಅಂತೇನಿಲ್ಲ. ಅದೇನೇ ಇರ್ಲಿ, ಆನ್‌ಲೈನ್‌ವೋ ಅಥವಾ ಆಫ್‌ಲೈನ್‌ವೋ ಒಟ್ಟು ನಿಮ್ಮ ಬದುಕಿನ ಆತ್ಮೀಯ ಮಹಿಳೆಗೆ ನೀವು ಭಿನ್ನವಾಗಿ ಉಡುಗೊರೆ ಕೊಡಬೇಕು ಅಂತಿದ್ರೆ ಈ ಐಡಿಯಾಗಳನ್ನು ಫಾಲೋ ಮಾಡಿ.

ಆಭರಣಗಳು

ಒಡವೆಗಳ ಮೇಲೆ ಹೆಣ್ಣುಮಕ್ಕಳಿಗೆ ಒಲವು ಕಡಿಮೆಯಾಗುವ ಮಾತಿಲ್ಲ. ನಿಜ ಹೇಳಬೇಕು ಎಂದರೆ ಒಡವೆಗಳು ಹೆಣ್ಣುಮಕ್ಕಳ ಮೊದಲ ಪ್ರೀತಿ ಎಂದರೂ ತಪ್ಪಾಗಲಿಕ್ಕಿಲ್ಲ. ಆದರೆ ಒಡವೆಯಲ್ಲೂ ಕೆಲವರಿಗೆ ಚೈನ್‌ ಇಷ್ಟ ಆದ್ರೆ ಕೆಲವರಿಗೆ ಕಿವಿಯೋಲೆ ಇಷ್ಟವಾಗುತ್ತದೆ, ಇನ್ನೂ ಕೆಲವರಿಗೆ ರಿಂಗ್‌ ಎಂದರೆ ಪಂಚಪ್ರಾಣ. ಯಾನಪ್ಪಾ ಗಿಫ್ಟ್‌ ಕೊಡೋದು ಅಂತ ನಿಮಗೆ ಗೊಂದಲ ಆದ್ರೆ ನೀವು ಡಿಫ್ರೆಂಟ್‌ ಆಗಿ ಯೋಚಿಸಿ. ಸಖತ್‌ ಡಿಸೈನ್‌ ಇರೋ ಪೆಂಡೆಂಟ್‌, ಲೇಟೆಸ್ಟ್‌ ಟ್ರೆಂಡ್‌ ರಿಂಗ್‌ಗಳನ್ನು ಗಿಫ್ಟ್‌ ನೀಡಬಹುದು. ಬೆಳ್ಳಿಯ ಆಕ್ಸಿಡೈಸ್ಡ್‌ ನೆಕ್ಲೇಸ್‌, ಬ್ಯಾಂಗಲ್‌ ಕೂಡ ಗಿಫ್ಟ್‌ ಮಾಡಬಹುದು. ಈ ರೀತಿಯ ಒಡವೆಗಳನ್ನು ಗಿಫ್ಟ್‌ ಮಾಡುವುದರ ಪ್ರಯೋಜನ ಏನೆಂದರೆ ಅವರು ಇದನ್ನು ಬಹಳ ದಿನಗಳವರೆಗೆ ಧರಿಸುತ್ತಾರೆ. ಶಾಶ್ವತವಾಗಿ ತಮ್ಮೊಂದಿಗೆ ಇರಿಸಿಕೊಂಡಿರುತ್ತಾರೆ. ಅಲ್ಲದೇ ಕೆಲವು ಆಭರಣ ಮಳಿಗೆಗಳು ಮಹಿಳಾ ದಿನಕ್ಕಾಗಿ ವಿಶೇಷ ಆಫರ್‌ಗಳನ್ನು ಕೂಡ ನೀಡುತ್ತವೆ.

ಸ್ಪಾ ಗಿಫ್ಟ್‌ ಬಾಸ್ಕೆಟ್‌

ಸೌಂದರ್ಯ ವರ್ಧಿಸಿಕೊಳ್ಳುವ ವಿಚಾರದಲ್ಲಿ ಹೆಣ್ಣುಮಕ್ಕಳಿಗೆ ಸಾಟಿ ಇಲ್ಲ. ಸದಾ ತಮ್ಮ ಕೈ ಕಾಲು, ಮುಖ, ಚರ್ಮ ಅಂದ- ಆರೋಗ್ಯವನ್ನು ಕಾಪಾಡಿಕೊಳ್ಳಲು ಹೆಚ್ಚಿನ ಮಹತ್ವ ನೀಡುತ್ತಾರೆ. ಅದಕ್ಕಾಗಿ ಸಾಕಷ್ಟು ಖರ್ಚು ಕೂಡ ಮಾಡುತ್ತಾರೆ. ಈ ಬಾರಿ ಮಹಿಳಾ ದಿನಾಚರಣೆಗೆ ಸ್ಪಾ ಕಿಟ್‌ ಬಾಸ್ಕೆಟ್‌ ನೀಡುವ ಮೂಲಕ ಅವರನ್ನು ಖುಷಿ ಪಡಿಸಬಹುದು. ಶವರ್‌ ಜಲ್‌, ಸ್ಕ್ರಬರ್‌, ಬಾಡಿ ಸ್ಕ್ರಬ್‌, ಫೇಶ್‌ವಾಶ್‌, ಶಾಂಪೂ, ಫೇಸ್‌ಕ್ರೀಮ್‌ನಂತರ ಉತ್ಪನ್ನಗಳಿಂದ ತುಂಬಿರುವ ಸ್ಪಾ ಕಿಟ್‌ ಬಾಸ್ಕೆಟ್‌ ನಿಮ್ಮ ಪ್ರೀತಿಪಾತ್ರರು ಮೆಚ್ಚುವುದು ಖಂಡಿತ. ಆದರೆ ಇಂತಹ ಉತ್ಪನ್ನಗಳನ್ನ ನೀಡುವ ಮುನ್ನ ಗುಣಮಟ್ಟ ಪರೀಕ್ಷಿಸುವುದು ಬಹಳ ಮುಖ್ಯ. ಯಾಕೆಂದರೆ ಎಲ್ಲಾ ರೀತಿಯ ಉತ್ಪನ್ನಗಳು ಎಲ್ಲರಿಗೂ ಹೊಂದಿಕೆಯಾಗುವುದಿಲ್ಲ. ಚರ್ಮ ಬಹಳ ಸೂಕ್ಷ್ಮವಾದ ಕಾರಣ ಎಚ್ಚರ ಅವಶ್ಯ.

ವಾಚ್

ಒಡವೆಯಂತೆ ಹೆಣ್ಣುಮಕ್ಕಳಿಗೆ ವಾಚ್‌ ಮೇಲೂ ವಿಶೇಷ ಪ್ರೀತಿ. ಸಹಜವಾಗಿ ಇತ್ತೀಚಿನ ದಿನಗಳಲ್ಲಿ ಎಲ್ಲರೂ ಸ್ಮಾರ್ಟ್‌ವಾಚ್‌ಗಳನ್ನು ಗಿಫ್ಟ್‌ ನೀಡುತ್ತಾರೆ. ಆದರೆ ನೀವು ಸ್ಪೆಷಲ್‌ ಆಗಿ ಚೈನ್‌ ವಾಚ್‌ಗಳನ್ನು ಗಿಫ್ಟ್‌ ಮಾಡಬಹುದು. ಸೊಗಸಾದ ವಿನ್ಯಾಸ ಡಯಲ್‌ ಹೊಂದಿರುವ ವಾಚ್‌ ಅನ್ನು ಆಯ್ಕೆ ಮಾಡಬಹುದು. ಇದನ್ನು ನೀವು ಆನ್‌ಲೈನ್‌ನಲ್ಲೂ ಖರೀದಿಸಬಹುದು. ಆನ್‌ಲೈನ್‌ನಲ್ಲಿ ವಾಚ್‌ಗಳಿಗೆ ವಿಶೇಷ ಆಫರ್‌ ಇರುತ್ತದೆ.

ಗೃಹಬಳಕೆಯ ವಸ್ತುಗಳು

ಗೃಹಬಳಕೆಯ ವಸ್ತುಗಳಿಗೂ ಹೆಣ್ಣುಮಕ್ಕಳಿಗೂ ಅವಿನಾಭಾವ ಸಂಬಂಧ. ಅದಕ್ಕೂ ಇವರಿಗೂ ಬಿಡದ ನಂಟು. ಲೇಟೆಸ್ಟ್‌ ಟ್ರೆಂಡ್‌ನ ಹೆಚ್ಚು ಉಪಯೋಗಕ್ಕೆ ಬರುವ ಗೃಹಬಳಕೆಯ ವಸ್ತುಗಳನ್ನು ನೀವು ಈ ಮಹಿಳಾ ದಿನಾಚರಣೆಗೆ ಗಿಫ್ಟ್‌ ನೀಡಬಹುದು. ಓವೆನ್‌, ಮೈಕ್ರೊವೇವ್‌, ಏರ್‌ ಫ್ರೈಯರ್‌, ಬ್ಲೆಂಡರ್‌, ಕಾಫಿ ಮೇಕರ್‌, ಸ್ಯಾಂಡ್‌ವಿಚ್‌ ಮೇಕರ್‌, ಟೋಸ್ಟರ್‌ಗಳು ಅವರಿಗೆ ಹೆಚ್ಚು ಉಪಯುಕ್ತ ಎನ್ನಿಸಬಹುದು. ಇವುಗಳನ್ನು ನೀವು ಅಮೆಜಾನ್‌, ಫ್ಲಿಪ್‌ಕಾರ್ಟ್‌ನಂತಹ ಆನ್‌ಲೈನ್‌ ಜಾಲತಾಣಗಳಲ್ಲೂ ಖರೀದಿ ಮಾಡಬಹುದು.

ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳು

ಏರ್‌ಪಾಡ್ಸ್‌, ಇಯರ್‌ ಫೋನ್‌, ಬ್ಲೂಟೂತ್‌ ಸ್ಪೀಕರ್‌, ಮೊಬೈಲ್‌ ಫೋನ್‌ ಇಂತಹ ಗಿಫ್ಟ್‌ಗಳು ಕೂಡ ಅವರಿಗೆ ಇಷ್ಟವಾಗಬಹುದು.

ಡ್ರೆಸ್‌

ಹೆಣ್ಣುಮಕ್ಕಳಿಗೆ ಬಗೆ ಬಗೆಯ ಉಡುಪು ತೊಡುವುದೆಂದರೆ ಪಂಚಪ್ರಾಣ. ಎಷ್ಟೇ ಡ್ರೆಸ್‌ ಇದ್ದರೂ ನನಗೆ ಸಾಲುವುದಿಲ್ಲ ಎಂಬ ಭಾವನೆ ಇರುವ ಹೆಣ್ಣುಮಕ್ಕಳೇ ಹೆಚ್ಚು. ನೀವು ಈ ಬಾರಿ ಮಹಿಳಾ ದಿನಾಚರಣೆಗೆ ನಿಮ್ಮ ಒಲವಿನ ಮಹಿಳೆಗೆ ಸೀರೆ, ಚೂಡಿದಾರ್‌, ಕುರ್ತಾ ಟಾಪ್‌, ಜೀನ್ಸ್‌ ಟಾಪ್‌ ಹೀಗೆ ಅವರು ಇಷ್ಟ ಪಡುವ ರೀತಿಯ ಉಡುಪುಗಳನ್ನು ಗಿಫ್ಟ್‌ ಮಾಡಬಹುದು.

ಇಷ್ಟೇ ಅಲ್ಲದೇ ರೋಸ್‌ ಬೊಕೆ, ಹೋಟೆಲ್‌ನಲ್ಲಿ ಒಂದೊಳ್ಳೆ ಡಿನ್ನರ್‌, ಟ್ರಿಪ್‌ಗೆ ಕರೆದುಕೊಂಡು ಹೋಗುವುದು ಈ ಮೂಲಕವೂ ನೀವು ಅವರನ್ನು ಖುಷಿ ಪಡಿಬಹುದು. ಒಟ್ಟಾರೆ ಈ ರೀತಿ ಸ್ಪೆಷಲ್‌ ಗಿಫ್ಟ್‌ ನೀಡುವ ಮೂಲಕ ಹೆಣ್ಣುಮಕ್ಕಳ ದಿನವನ್ನ ನೀವೂ ಸಂಭ್ರಮಿಸಿ, ಅವರೂ ಖುಷಿ ಪಡುವಂತೆ ಮಾಡಬಹುದು.

(This copy first appeared in Hindustan Times Kannada website. To read more like this please logon to kannada.hindustantimes.com)

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ