logo
ಕನ್ನಡ ಸುದ್ದಿ  /  ಜೀವನಶೈಲಿ  /  ಫ್ರಿಜ್ ಕ್ಲೀನ್ ಮಾಡುವಾಗ ಈ ಟಿಪ್ಸ್ ಗಮನದಲ್ಲಿರಲಿ; ಬಾಗಿಲು ತೆಗೆದಾಗ ದುರ್ವಾಸನೆ ದೂರವಾಗಿ ರೆಫ್ರಿಜರೇಟರ್ ಪರಿಮಳ ಬರುತ್ತೆ

ಫ್ರಿಜ್ ಕ್ಲೀನ್ ಮಾಡುವಾಗ ಈ ಟಿಪ್ಸ್ ಗಮನದಲ್ಲಿರಲಿ; ಬಾಗಿಲು ತೆಗೆದಾಗ ದುರ್ವಾಸನೆ ದೂರವಾಗಿ ರೆಫ್ರಿಜರೇಟರ್ ಪರಿಮಳ ಬರುತ್ತೆ

Jayaraj HT Kannada

Jul 17, 2024 02:04 PM IST

google News

ಫ್ರಿಜ್ ಕ್ಲೀನ್ ಮಾಡುವಾಗ ಈ ಟಿಪ್ಸ್ ಗಮನದಲ್ಲಿರಲಿ; ಬಾಗಿಲು ತೆಗೆದಾಗ ದುರ್ವಾಸನೆ ದೂರವಾಗಿ ರೆಫ್ರಿಜರೇಟರ್ ಪರಿಮಳ ಬರುತ್ತೆ

    • ಹಣ್ಣು, ತರಕಾರಿಗಳು ಸೇರಿದಂತೆ ಉಳಿದಿರುವ ಆಹಾರವನ್ನು ಕೆಡದಂತೆ ಫ್ರಿಡ್ಜ್‌ನಲ್ಲಿ ಇರಿಸಲಾಗುತ್ತದೆ. ಸಿಕ್ಕ-ಸಿಕ್ಕ ಆಹಾರವನ್ನು ರೆಫ್ರಿಜರೇಟರ್‌ನಲ್ಲಿಟ್ಟು, ಏನಿಟ್ಟಿದ್ದೇವೆ ಎಂಬುದೇ ಬಹುತೇಕರಿಗೆ ಮರೆತು ಹೋಗಿರುತ್ತದೆ. ಇದರಿಂದ ಫ್ರಿಡ್ಜ್ ದುರ್ವಾಸನೆ ಬರುತ್ತದೆ. ಇದನ್ನು ಹೋಗಲಾಡಿಸುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಸಲಹೆ.
ಫ್ರಿಜ್ ಕ್ಲೀನ್ ಮಾಡುವಾಗ ಈ ಟಿಪ್ಸ್ ಗಮನದಲ್ಲಿರಲಿ; ಬಾಗಿಲು ತೆಗೆದಾಗ ದುರ್ವಾಸನೆ ದೂರವಾಗಿ ರೆಫ್ರಿಜರೇಟರ್ ಪರಿಮಳ ಬರುತ್ತೆ
ಫ್ರಿಜ್ ಕ್ಲೀನ್ ಮಾಡುವಾಗ ಈ ಟಿಪ್ಸ್ ಗಮನದಲ್ಲಿರಲಿ; ಬಾಗಿಲು ತೆಗೆದಾಗ ದುರ್ವಾಸನೆ ದೂರವಾಗಿ ರೆಫ್ರಿಜರೇಟರ್ ಪರಿಮಳ ಬರುತ್ತೆ (shutterstock)

ನಿಮ್ಮ ಫ್ರಿಡ್ಜ್‌ನಿಂದ ಕೆಟ್ಟ ವಾಸನೆ ಬರುತ್ತಿದೆಯೇ? ಕರೆಂಟ್ ಹೋಗಿದ್ದಾಗ ಅಥವಾ ಬಹಳ ದಿನಗಳಿಂದ ಆಹಾರ ಅದರಲ್ಲೇ ಉಳಿದುಕೊಂಡಿದ್ದರೆ, ರೆಫ್ರಿಜರೇಟರ್‌ನಿಂದ ಕೆಟ್ಟ ವಾಸನೆ ಬರಲು ಆರಂಭವಾಗುತ್ತದೆ. ಹೀಗಾಗಿ ನಿಮ್ಮ ರೆಫ್ರಿಜರೇಟರ್ ಅನ್ನು ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಫ್ರಿಡ್ಜ್‌ನಲ್ಲಿ ಕೊಳೆಯುತ್ತಿರುವ ಆಹಾರವನ್ನು ಮೊದಲು ತೆಗೆಯಬೇಕು. ರೆಫ್ರಿಜರೇಟರ್‌ನ ಎಲ್ಲಾ ಭಾಗಗಳಲ್ಲೂ ತಾಪಮಾನ ಸಮನಾಗಿರುವುದಿಲ್ಲ. ವಿಭಿನ್ನ ವಿಭಾಗಗಳು ತಂಪಾಗಿಸುವ ಮಟ್ಟವನ್ನು ಬೇರೆ-ಬೇರೆ ರೀತಿಯಲ್ಲಿ ಹೊಂದಿರುತ್ತವೆ. ಹೀಗಾಗಿ ನೀವು ಸರಿಯಾದ ಕಂಪಾರ್ಟ್‌ಮೆಂಟ್‌ನಲ್ಲಿ ಸರಿಯಾದ ಆಹಾರವನ್ನು ಇಟ್ಟಿರುವಿರಿ ಎಂಬುದರತ್ತ ಗಮನಹರಿಸಿ.

ಫ್ರಿಡ್ಜ್ ಡೋರ್ ತೆರೆದಾಗ ಒಳ್ಳೆಯ ಸುವಾಸನೆ ಬೀರುತ್ತಿದ್ದರೆ ಉತ್ತಮ. ಒಂದು ವೇಳೆ ಕೆಟ್ಟ ವಾಸನೆ ಬೀರಿದರೆ, ಆದಷ್ಟು ಶೀಘ್ರದಲ್ಲಿ ನೀವು ನಿಮ್ಮ ರೆಫ್ರಿಜರೇಟರ್ ಅನ್ನು ಸ್ವಚ್ಛಗೊಳಿಸುವುದು ಮುಖ್ಯ. ಫ್ರಿಡ್ಜ್ ವಾಸನೆ ಬರುತ್ತಿದ್ದರೆ ಆಹಾರ ಹಾಳಾಗಿರುವುದು ಮಾತ್ರವಲ್ಲದೆ, ಸೋರಿಕೆಯ ಸಂಕೇತವೂ ಆಗಿರಬಹುದು. ಇದರಿಂದ ಬ್ಯಾಕ್ಟೀರಿಯಾಗಳು ಉಂಟಾಗಿ, ಅದು ಫಿಡ್ಜ್‌ನಲ್ಲಿರುವ ಇತರ ಆಹಾರದ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು.

ಫ್ರಿಡ್ಜ್ ಅನ್ನು ವಾಸನೆಯಿಂದ ದೂರ ಇಡುವುದು ಹೇಗೆ?

ಪ್ರತಿ ಮೂರರಿಂದ ನಾಲ್ಕು ತಿಂಗಳಿಗೊಮ್ಮೆ ಫ್ರಿಡ್ಜ್ ಅನ್ನು ಸಂಪೂರ್ಣವಾಗಿ ಶುಚಿಗೊಳಿಸುತ್ತಿರಿ. ಅವಧಿ ಮೀರಿದ ತರಕಾರಿಗಳು, ಸೊಪ್ಪುಗಳು ಅಥವಾ ಹಲವು ದಿನಗಳಿಂದ ಹಾಗೆಯೇ ಇಟ್ಟಿರುವ ಆಹಾರ ಪದಾರ್ಥ ಮುಂತಾದವುಗಳನ್ನು ತೆಗೆದುಹಾಕಿ. ಆಹಾರ ಇಟ್ಟಾಗ ಚೆಲ್ಲಿದ್ದರೆ, ಕೂಡಲೇ ಅದನ್ನು ಸ್ವಚ್ಛಗೊಳಿಸಿ. ರೆಫ್ರಿಜರೇಟರ್‌ನಲ್ಲಿರುವ ಎಲ್ಲಾ ಕಂಪಾರ್ಟ್ಮೆಂಟ್‌ಗಳನ್ನು ತೆಗೆದು ಸ್ವಚ್ಛಗೊಳಿಸಿ ಅದರ ತೇವವನ್ನು ಒರೆಸಿದ ಬಳಿಕ ಮತ್ತೆ ಇರಿಸಿ.

ಫ್ರಿಡ್ಜ್‌ನಿಂದ ಕೆಟ್ಟ ವಾಸನೆ ಹೋಗಲಾಡಿಸಲು ಸಹಾಯ ಮಾಡುವ ನೈಸರ್ಗಿಕ ಮನೆಮದ್ದುಗಳು ಹೀಗಿವೆ

ಕಾಫಿ ಬೀನ್

ರೆಫ್ರಿಜರೇಟರ್‌ನಿಂದ ವಾಸನೆ ಹೀರಿಕೊಳ್ಳುವಲ್ಲಿ ಕಾಫಿ ಬೀನ್ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ತಾಜಾ ರುಬ್ಬಿದ ಕಾಫಿ ಬೀನ್ ಅನ್ನು ಪ್ಲೇಟ್‌ನಲ್ಲಿ ಹಾಕಿ, ಅದನ್ನು ನಿಮ್ಮ ರೆಫ್ರಿಜರೇಟರ್‌ನಲ್ಲಿ 24 ಗಂಟೆಗಳ ಕಾಲ ಇರಿಸಿ. ಇದರಿಂದ ದುರ್ವಾಸನೆ ಹೋಗಿ, ಪರಿಮಳ ಬೀರುತ್ತದೆ.

ಟೀ ಬ್ಯಾಗ್

ಬಳಸಿದ ಟೀ ಬ್ಯಾಗ್‌ಗಳನ್ನು ತೆರೆದ ಕಂಟೇನರ್ ಅಥವಾ ಸಣ್ಣ ಬಟ್ಟಲಿನಲ್ಲಿ ತುಂಬಿಸಿ, ಅದನ್ನು ನಿಮ್ಮ ರೆಫ್ರಿಜರೇಟರ್‌ನಲ್ಲಿ ಇರಿಸಿ. ಚಹಾ ಎಲೆಗಳು ಕೆಟ್ಟ ವಾಸನೆಯನ್ನು ಹೀರಿಕೊಳ್ಳುತ್ತವೆ. ಇದರಿಂದ ನಿಮ್ಮ ಫ್ರಿಡ್ಜ್ ಅನ್ನು ತಾಜಾ ಪರಿಮಳಯುಕ್ತವಾಗಿರಿಸುವಲ್ಲಿ ಸಹಾಯಕವಾಗಿದೆ. ಪ್ರತಿ 3 ರಿಂದ 4 ದಿನಗಳಿಗೊಮ್ಮೆ ಟೀ ಬ್ಯಾಗ್‌ಗಳನ್ನು ಬದಲಾಯಿಸುತ್ತಿರಿ.

ಅಡುಗೆ ಸೋಡಾ

ಅಡುಗೆ ಸೋಡಾವನ್ನು ನೈಸರ್ಗಿಕ ರೆಫ್ರಿಜರೇಟರ್ ಡಿಯೋಡರೈಸರ್ ಎಂದು ಕರೆಯಲಾಗುತ್ತದೆ. ಅಡುಗೆ ಸೋಡಾವನ್ನು ತೆರೆದ ಕಂಟೇನರ್‌ನಲ್ಲಿ 24 ಗಂಟೆಗಳ ಕಾಲ ಇರಿಸಿ. ಇದರಿಂದ ನಿಮ್ಮ ಫ್ರಿಡ್ಜ್‌ನಿಂದ ಬರುವ ದುರ್ವಾಸನೆಯನ್ನು ಹೀರಿಕೊಳ್ಳುತ್ತದೆ.

ನಿಂಬೆ (ಅಡುಗೆ ಸೋಡಾ ಮತ್ತು ಉಪ್ಪನ್ನು ಸೇರಿಸಿ)

ನಿಂಬೆ, ಅಡುಗೆ ಸೋಡಾ ಹಾಗೂ ಉಪ್ಪಿನ ಸಂಯೋಜನೆಯು ನಿಮ್ಮ ರೆಫ್ರಿಜಿರೇಟರ್‌ನ ವಾಸನೆಯನ್ನು ತೆಗೆದುಹಾಕುತ್ತದೆ. ಇದರಿಂದ ತ್ವರಿತ ಪರಿಹಾರ ಸಿಗುತ್ತದೆ. ಇದಕ್ಕಾಗಿ, ನಿಂಬೆಹಣ್ಣನ್ನು 2-3 ಸೆಂಟಿಮೀಟರ್ ದಪ್ಪದ ತುಂಡುಗಳಾಗಿ ಕತ್ತರಿಸಿ. ಇದಕ್ಕೆ 2-3 ಟೀ ಚಮಚ ಅಡುಗೆ ಸೋಡಾ ಮತ್ತು ಉಪ್ಪನ್ನು ಸೇರಿಸಿ. 6 ದಿನಗಳವರೆಗೆ ಫ್ರಿಡ್ಜ್ ನಲ್ಲಿ ಇರಿಸಿ. ನಿಂಬೆಗೆ ಪರ್ಯಾಯವಾಗಿ ಕಿತ್ತಳೆ ಹಣ್ಣನ್ನು ಸಹ ಇದೇ ರೀತಿ ಬಳಸಬಹುದು.

ಓಟ್ಮೀಲ್

ಓಟ್ಸ್ ವಾಸನೆ, ತೈಲ ಮತ್ತು ದ್ರವವನ್ನು ಪರಿಣಾಮಕಾರಿಯಾಗಿ ಹೀರಿಕೊಳ್ಳುತ್ತವೆ. ಇದಕ್ಕಾಗಿ ಸ್ವಲ್ಪ ಬೇಯಿಸಿದ ಓಟ್ಸ್ ಅನ್ನು ಮುಚ್ಚದ ಪಾತ್ರೆಯಲ್ಲಿ ಹಾಕಿ, ಅದನ್ನು ನಿಮ್ಮ ಫ್ರಿಡ್ಜ್ ಒಳಗೆ ಇರಿಸಿ.

ವೆನಿಲ್ಲಾ ಎಸೆನ್ಸ್

ಹತ್ತಿ ಉಂಡೆ ಮಾಡಿ ಅದನ್ನು ಸ್ವಲ್ಪ ವೆನಿಲ್ಲಾ ಎಸೆನ್ಸ್ ಹನಿಗಳಲ್ಲಿ ಅದ್ದಿ ರೆಫ್ರಿಜರೇಟರ್ನ ಹಿಂಭಾಗದಲ್ಲಿ ಇರಿಸಿ. ಇದರಿಂದ ಫ್ರಿಡ್ಜ್ ಪರಿಮಳಯುಕ್ತವಾಗುತ್ತದೆ.

ವಿನೆಗರ್

ಸಣ್ಣ ಕಾಗದದ ಚೂರು ಅಥವಾ ಬಟ್ಟೆಗೆ ಸ್ವಲ್ಪ ವಿನೆಗರ್ ಸೇರಿಸಿ ಕನಿಷ್ಟ 24 ಗಂಟೆಗಳ ಕಾಲ ಅದನ್ನು ನಿಮ್ಮ ಫ್ರಿಡ್ಜ್‌ನಲ್ಲಿ ಬಿಡಿ. ಪ್ರತಿ ಬಾರಿ ಅದು ಒಣಗಿದಾಗ ಕಾಗದ ಅಥವಾ ಬಟ್ಟೆಯನ್ನು ಬದಲಿಸಿ.

ಆಲೂಗಡ್ಡೆ

ಆಲೂಗಡ್ಡೆಗಳು ಓಟ್ ಮೀಲ್‌ನಂಥ ವಾಸನೆಯನ್ನು ಹೀರಿಕೊಳ್ಳುವ ವಸ್ತುವಾಗಿ ಕಾರ್ಯನಿರ್ವಹಿಸುತ್ತವೆ. ಆಲೂಗಡ್ಡೆಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ಇರಿಸಿ. ಕೆಲವು ದಿನಗಳಿಗೊಮ್ಮೆ ಬದಲಾಯಿಸುತ್ತಿರಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ