logo
ಕನ್ನಡ ಸುದ್ದಿ  /  ಜೀವನಶೈಲಿ  /  Kitchen Tips: ಅಡುಗೆಮನೆಯ ಚಾಕುವನ್ನು ಈ ರೀತಿಯಾಗಿ ಸ್ವಚ್ಛಗೊಳಿಸಿ; ಪದೇ ಪದೇ ಶಾರ್ಪ್‌ ಮಾಡಿಸುವ ಚಿಂತೆ ಬಿಡಿ

Kitchen Tips: ಅಡುಗೆಮನೆಯ ಚಾಕುವನ್ನು ಈ ರೀತಿಯಾಗಿ ಸ್ವಚ್ಛಗೊಳಿಸಿ; ಪದೇ ಪದೇ ಶಾರ್ಪ್‌ ಮಾಡಿಸುವ ಚಿಂತೆ ಬಿಡಿ

HT Kannada Desk HT Kannada

Nov 16, 2023 03:33 PM IST

google News

Kitchen Tips: ಅಡುಗೆಮನೆಯ ಚಾಕುವನ್ನು ಈ ರೀತಿಯಾಗಿ ಸ್ವಚ್ಛಗೊಳಿಸಿ; ಪದೇ ಪದೇ ಶಾರ್ಪ್‌ ಮಾಡಿಸುವ ಚಿಂತೆ ಬಿಡಿ. (PC: WikiHow)

    • Kitchen Knife Cleaning Tips: ಚಾಕುಗಳು ಪ್ರತಿಯೊಬ್ಬರ ಅಡುಗೆಮನೆಯಲ್ಲೂ ಬಳಕೆಯಾಗುವ ಅಗತ್ಯ ವಸ್ತುಗಳಲ್ಲೊಂದು. ಚಾಕುಗಳನ್ನು ಬಳಸಿದ ನಂತರ ಸರಿಯಾಗಿ ಸ್ವಚ್ಛಗೊಳಿಸುವುದರಿಂದ ಅದರ ಬಾಳಿಕೆ ಹೆಚ್ಚುತ್ತದೆ ಮತ್ತು ಬಹಳ ದಿನಗಳವರೆಗೆ ಹರಿತವಾಗಿರುತ್ತದೆ. ಅಡುಗೆಮನೆಯ ಚಾಕುಗಳನ್ನು ಸರಿಯಾದ ರೀತಿಯಲ್ಲಿ ಸ್ವಚ್ಛಗೊಳಿಸುವುದು ಹೇಗೆ? ಈ ಗೊಂದಲಕ್ಕೆ ಪರಿಹಾರ ಇಲ್ಲಿದೆ.
Kitchen Tips: ಅಡುಗೆಮನೆಯ ಚಾಕುವನ್ನು ಈ ರೀತಿಯಾಗಿ ಸ್ವಚ್ಛಗೊಳಿಸಿ; ಪದೇ ಪದೇ ಶಾರ್ಪ್‌ ಮಾಡಿಸುವ ಚಿಂತೆ ಬಿಡಿ. (PC: WikiHow)
Kitchen Tips: ಅಡುಗೆಮನೆಯ ಚಾಕುವನ್ನು ಈ ರೀತಿಯಾಗಿ ಸ್ವಚ್ಛಗೊಳಿಸಿ; ಪದೇ ಪದೇ ಶಾರ್ಪ್‌ ಮಾಡಿಸುವ ಚಿಂತೆ ಬಿಡಿ. (PC: WikiHow)

ಚಾಕುಗಳು ಪ್ರತಿಯೊಬ್ಬರ ಅಡುಗೆಮನೆಯಲ್ಲೂ ಬಳಕೆಯಾಗುವ ಅಗತ್ಯ ವಸ್ತುಗಳಲ್ಲೊಂದು. ಅಡುಗೆಮನೆಯ ಚಾಕುವನ್ನು ಸರಿಯಾದ ರೀತಿಯಲ್ಲಿ ಸ್ವಚ್ಛಗೊಳಿಸುವುದು ಅದರ ಬಾಳಿಕೆ ಮತ್ತು ಹರಿತವಾಗಿರುವುದನ್ನು ಕಾಪಾಡಿಕೊಳ್ಳಲು ಅಗತ್ಯವಾಗಿದೆ. ಕೊಳಕಾದ ಮತ್ತು ತುಕ್ಕು ಹಿಡಿದ ಚಾಕುಗಳು ನೀವು ತಯಾರಿಸುವ ಆಹಾರದ ಮೇಲೂ ಪರಿಣಾಮ ಬೀರುತ್ತವೆ. ಸರಿಯಾಗಿ ತೊಳೆಯದ ಚಾಕುಗಳ ಮೇಲೆ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗಿ, ಆಹಾರದ ಮೂಲಕ ನಿಮ್ಮ ದೇಹ ಸೇರಿದಾಗ, ಅವು ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರತ್ತವೆ. ಅದಕ್ಕಾಗಿಯೇ ಅಡುಗೆಗೆ ಬಳಸಿದ ಚಾಕುವನ್ನು ಸರಿಯಾದ ರೀತಿಯಲ್ಲಿ ಸ್ವಚ್ಛಗೊಳಿಸಿಡುವುದು ಅತ್ಯಗತ್ಯವಾಗಿದೆ. ಇಲ್ಲಿ ನಿಮ್ಮ ಅಡುಗೆಮನೆಯಲ್ಲಿ ಬಳಕೆಯಾಗುವ ಚಾಕುಗಳನ್ನು ಸ್ವಚ್ಛವಾಗಿಡಲು ಮತ್ತು ಹರಿತವಾಗಿರುವಂತೆ ನೋಡಿಕೊಳ್ಳಲು ಸಹಾಯವಾಗುವ ಕೆಲವು ಸಲಹೆಗಳನ್ನು ನೀಡಿದ್ದೇವೆ. ಅವುಗಳನ್ನು ಪಾಲಿಸಿ, ನಿಮ್ಮ ಚಾಕುಗಳಿಗೆ ಪದೇ ಪದೇ ಸಾಣೆ ಹಿಡಿಯುವುದನ್ನು ತಪ್ಪಿಸಿ, ಜೊತೆಗೆ ಬಹಳ ದಿನಗಳವರೆಗೆ ಬಾಳಿಕೆ ಬರುವುದನ್ನು ಗಮನಿಸಿ.

ಅಡುಗೆಗೆ ಬಳಸಿದ ಚಾಕುಗಳನ್ನು ಸರಿಯಾಗಿ ಸ್ವಚ್ಛಗೊಳಿಸುವುದು ಹೇಗೆ

ಚಾಕುವನ್ನು ನೀರಿನಿಂದ ತೊಳೆಯಿರಿ

ಅಡುಗೆಗೆ ಬಳಸಿದ ನಂತರ ತಕ್ಷಣ ಚಾಕುವನ್ನು ನೀರಿನಿಂದ ತೊಳೆಯಿರಿ. ಅದರ ಮೇಲಿರುವ ಆಹಾರದ ಕಣಗಳು ಅಂದರೆ ಸೊಪ್ಪು, ಈರುಳ್ಳಿ ಮುಂತಾದವುಗಳು ಚಾಕುವಿನ ಮೇಲೆ ಗಟ್ಟಿಯಾಗಿ ಹಿಡಿದುಕೊಂಡಿರುತ್ತದೆ. ಚಾಕುಗಳನ್ನು ಸ್ವಚ್ಛಗೊಳಿಸುವಾಗ ಮುನ್ನೆಚ್ಚರಿಕೆಗಾಗಿ ನೀವು ಗ್ಲೌಸ್‌ಗಳನ್ನು ಬಳಸಬಹುದು.

ಡಿಶ್‌ ಸೋಪ್‌ ಬಳಸಿ

ಒಂದು ಪಾತ್ರೆಯಲ್ಲಿ ಸ್ವಲ್ಪ ಬೆಚ್ಚಗಿನ ನೀರು ತೆಗೆದುಕೊಳ್ಳಿ. ಅದಕ್ಕೆ ನೀವು ಪಾತ್ರೆ ತೊಳೆಯಲು ಬಳಸುವ ಡಿಶ್‌ ಸೋಪ್‌ ಅಥವಾ ಲಿಕ್ವಿಡ್‌ ಸೇರಿಸಿ. ಅದರಲ್ಲಿ ಚಾಕು ಹಾಕಿ, ಸ್ವಲ್ಪ ಸಮಯ ಬಿಡಿ. ಹೀಗೆ ಮಾಡುವುದರಿಂದ ಚಾಕುವಿನ ಮೇಲಿರುವ ಕೊಳಕು ಮತ್ತು ತೀಕ್ಷ್ಣ ಪರಿಮಳ ಬೇಗ ಬಿಡುತ್ತದೆ.

ಬ್ಲೇಡ್‌ ಸ್ವಚ್ಛಗೊಳಿಸಿ

ಈಗ ಮೃದುವಾದ ಸ್ಪೋಂಜ್‌ ತೆಗೆದುಕೊಳ್ಳಿ, ಹಿಡಿಕೆಯಿಂದ ಪ್ರಾರಂಭಿಸಿ, ಬ್ಲೇಡ್‌ನ ತುದಿಯವರೆಗೂ ನಿಧಾನಕ್ಕೆ ಉಜ್ಜಿ. ಸ್ಟೀಲ್‌ ವೂಲ್‌ (ಜರಿ ಬ್ರೆಶ್‌) ಅನ್ನು ಯಾವುದೇ ಕಾರಣಕ್ಕೂ ಬಳಸಬೇಡಿ. ಅದು ಬ್ಲೇಡ್ ಅನ್ನು ಬಹಳ ಬೇಗ ಮೊಂಡಾಗಿಸುತ್ತದೆ.

ಸ್ವಚ್ಛ ನೀರಿನಿಂದ ಮತ್ತೆ ತೊಳೆಯಿರಿ

ಈಗ ಚಾಕುವಿನ ಮೇಲಿರುವ ಸೋಪ್‌ ವಾಟರ್‌ ಹೋಗುವಂತೆ ಚೆನ್ನಾಗಿ ತೊಳೆಯಿರಿ. ತೊಳೆಯುವಾಗ ನಿಮ್ಮ ಕೈಗಳಿಗೆ ತಾಗದಂತೆ ಎಚ್ಚರದಿಂದಿರಿ. ನಂತರ ಸ್ವಚ್ಛ ಬಟ್ಟೆಯಲ್ಲಿ ಒರೆಸಿ. ಹಾಗೆ ಮಾಡುವುದರಿಂದ ಚಾಕು ತುಕ್ಕು ಹಿಡಿಯುವುದನ್ನು ತಪ್ಪಿಸಬಹುದು.

ಚಾಕುಗಳ ಸರಿಯಾದ ನಿರ್ವಹಣೆ ಹೀಗಿರಲಿ

  • ಕಿಚನ್‌ ಸಿಂಕ್‌ನಲ್ಲಿ ಚಾಕುಗಳನ್ನು ಹಾಕಬೇಡಿ. ಸುರಕ್ಷತಾ ದೃಷ್ಟಿಯಿಂದ ಇದು ಒಳ್ಳೆಯದಲ್ಲ. ಹೆಚ್ಚಿನ ಸಮಯ ಚಾಕುವನ್ನು ನೀರಿನಲ್ಲಿಟ್ಟರೆ ಅದು ಬಹು ಬೇಗನೆ ತುಕ್ಕು ಹಿಡಿದು ಹಾಳಾಗುತ್ತದೆ.
  • ಚಾಕುಗಳನ್ನು ಸ್ವಚ್ಛಗೊಳಿಸಿದ ತಕ್ಷಣ ಸ್ವಚ್ಛ ಬಟ್ಟೆಯಿಂದ ಒರೆಸಿ, ಒಣಗಿಸಿ.
  • ಡಿಶ್‌ವಾಶರ್‌ಗಳಲ್ಲಿ ಹಾಕಿ ತೊಳೆಯಬೇಡಿ. ಡಿಶ್‌ವಾಶರ್‌ನಲ್ಲಿರುವ ಚಕ್ರಕ್ಕೆ ಬ್ಲೇಡ್‌ ತಾಗಿ ಹಾನಿಯುಂಟುಮಾಡಬಹುದು. ಡಿಶ್‌ವಾಶರ್‌ನ ಡಿಟರ್ಜಂಟ್‌ ಹೆಚ್ಚು ಆಮ್ಲೀಯವಾಗಿರುವುದರಿಂದ ಚಾಕು ಬೇಗನೆ ತುಕ್ಕು ಹಿಡಿದು ಹಾಳಾಗಬಹುದು.
  • ಚಾಕುಗಳನ್ನು ಪಾತ್ರೆಗಳಿಡುವ ಡ್ರಾಯರ್‌ನಲ್ಲಿ ಇಡದೇ ಪ್ರತ್ಯೇಕವಾದ ಅದರ ಸ್ಟ್ಯಾಂಡ್‌ನಲ್ಲಿಡಿ. ಪಾತ್ರೆಗಳನ್ನು ತೆಗೆಯುವಾಗ ಚಾಕು ತಗಲಿ ಗಾಯವಾಗುವುದನ್ನು ತಡೆಯಬಹುದು ಮತ್ತು ಇತರ ಬೆಲೆಬಾಳುವ ಅಥವಾ ಸುಂದರ ಪಾತ್ರೆಗಳಿಗೆ ಚಾಕು ತಗಲಿ ಗೀರುಗಳಾಗುವುದನ್ನು ತಪ್ಪಿಸಬಹುದು.

ಹೀಗೆ ಅಡುಗೆಮನೆಯ ಅತಿ ಮುಖ್ಯ ವಸ್ತುವಾದ ಚಾಕುವನ್ನು ತೊಳೆದು ಸರಿಯಾಗಿ ನಿರ್ವಹಣೆ ಮಾಡಿ. ಬಹಳ ದಿನಗಳವರೆಗೆ ಚಾಕು ಬಾಳಿಕೆ ಬರುವುದನ್ನು ನೀವೇ ನೋಡಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ