logo
ಕನ್ನಡ ಸುದ್ದಿ  /  ಜೀವನಶೈಲಿ  /  Kitchen Tips: ಗ್ಯಾಸ್‌ ಲೈಟರ್‌ ಕೆಲಸ ಮಾಡ್ತಿಲ್ಲ ಅಂತ ಹೊಸತು ಖರೀದಿಸುವ ಮೊದಲು ಈ ಟ್ರಿಕ್ಸ್‌ ಟ್ರೈ ಮಾಡಿ, ಪಕ್ಕಾ ವರ್ಕ್‌ ಆಗುತ್ತೆ

Kitchen Tips: ಗ್ಯಾಸ್‌ ಲೈಟರ್‌ ಕೆಲಸ ಮಾಡ್ತಿಲ್ಲ ಅಂತ ಹೊಸತು ಖರೀದಿಸುವ ಮೊದಲು ಈ ಟ್ರಿಕ್ಸ್‌ ಟ್ರೈ ಮಾಡಿ, ಪಕ್ಕಾ ವರ್ಕ್‌ ಆಗುತ್ತೆ

Reshma HT Kannada

Jul 29, 2024 02:02 PM IST

google News

ಗ್ಯಾಸ್‌ ಲೈಟರ್‌ ಕೆಲಸ ಮಾಡ್ತಿಲ್ಲ ಅಂತ ಹೊಸತು ಖರೀದಿಸುವ ಮೊದಲು ಈ ಟ್ರಿಕ್ಸ್‌ ಟ್ರೈ ಮಾಡಿ, ಪಕ್ಕಾ ವರ್ಕ್‌ ಆಗುತ್ತೆ

  • Tips to fix gas stove lighter: ಇತ್ತೀಚಿನ ದಿನಗಳಲ್ಲಿ ಗ್ಯಾಸ್‌ ಲೈಟರ್‌ಗಳು ಪದೇ ಪದೇ ಕೈ ಕೊಡುತ್ತವೆ. ಎಷ್ಟೇ ಉತ್ತಮ ಕ್ವಾಲಿಟಿಯ ಗ್ಯಾಸ್‌ ಲೈಟರ್‌ ತಂದರೂ ಕೆಲವೊಮ್ಮೆ ಅವು ವರ್ಕ್‌ ಆಗುವುದಿಲ್ಲ. ಗ್ಯಾಸ್‌ ಹಿಡಿಸಲು ಆಗದೇ ಪರಾಡುವಂತೆ ಮಾಡುತ್ತವೆ. ಗ್ಯಾಸ್‌ ಲೈಟರ್‌ ಎಸೆಯುವ ಬದಲು ಅದು ವರ್ಕ್‌ ಆಗುವಂತೆ ಮಾಡಲು ಇಲ್ಲಿದೆ ಸಿಂಪಲ್‌ ಟಿಪ್ಸ್‌.

ಗ್ಯಾಸ್‌ ಲೈಟರ್‌ ಕೆಲಸ ಮಾಡ್ತಿಲ್ಲ ಅಂತ ಹೊಸತು ಖರೀದಿಸುವ ಮೊದಲು ಈ ಟ್ರಿಕ್ಸ್‌ ಟ್ರೈ ಮಾಡಿ, ಪಕ್ಕಾ ವರ್ಕ್‌ ಆಗುತ್ತೆ
ಗ್ಯಾಸ್‌ ಲೈಟರ್‌ ಕೆಲಸ ಮಾಡ್ತಿಲ್ಲ ಅಂತ ಹೊಸತು ಖರೀದಿಸುವ ಮೊದಲು ಈ ಟ್ರಿಕ್ಸ್‌ ಟ್ರೈ ಮಾಡಿ, ಪಕ್ಕಾ ವರ್ಕ್‌ ಆಗುತ್ತೆ

Tips to fix gas stove lighter that won't light: ಅಡುಗೆಮನೆಯಲ್ಲಿ ಗ್ಯಾಸ್‌ ಇಲ್ಲ ಎನ್ನುವುದನ್ನು ಊಹಿಸಲು ಆಗುವುದಿಲ್ಲ. ಗ್ಯಾಸ್‌ನಷ್ಟೇ ಮುಖ್ಯವಾದ ಇನ್ನೊಂದು ವಸ್ತು ಗ್ಯಾಸ್‌ ಲೈಟರ್‌. ಗ್ಯಾಸ್‌ ಹಚ್ಚಲು ಗ್ಯಾಸ್‌ ಲೈಟರ್‌ ಬೇಕೇ ಬೇಕು. ಅಪರೂಪಕ್ಕೊಮ್ಮೆ ಬೆಂಕಿಕಡ್ಡಿ ಗೀರಿ ಗ್ಯಾಸ್‌ ಹಚ್ಚಬಹುದು. ಹಾಗಂತ ಪ್ರತಿದಿನ ಅದನ್ನೇ ಮಾಡಲು ಸಾಧ್ಯವಿಲ್ಲ. ಆದ್ರೆ ಈ ಗ್ಯಾಸ್‌ ಲೈಟರ್‌ಗಳು ಪದೇ ಪದೇ ಕೈ ಕೊಡುತ್ತವೆ. ಎಷ್ಟೆ ಉತ್ತಮ ಗುಣಮಟ್ಟದ ಲೈಟರ್‌ ತಂದರೂ ಬೆಂಕಿ ಹಿಡಿಯುವುದಿಲ್ಲ.

ಗ್ಯಾಸ್‌ ಲೈಟರ್‌ ಹಾಳಾಗಲು ಕಾರಣಗಳು ಹಲವು. ಕೆಲವೊಮ್ಮೆ ಸರಿಯಾಗಿ ನಿರ್ವಹಣೆ ಮಾಡದೇ ನೀರು ಸೇರುವುದು ಕೂಡ ಗ್ಯಾಸ್‌ ಲೈಟರ್‌ ಕೆಲಸ ಮಾಡದೇ ಇರಲು ಕಾರಣವಾಗಬಹುದು. ಒಂದೆರಡು ಬಾರಿ ಇದನ್ನು ಸರಿಪಡಿಸಲು ಪ್ರಯತ್ನಿಸಿ ನಂತರ ಕಸದ ಬುಟ್ಟಿಗೆ ಎಸೆಯುತ್ತಾರೆ. ಆದರೆ ಮುಂದಿನ ಸಲ ಗ್ಯಾಸ್‌ ಲೈಟರ್‌ ಹಾಳಾದರೆ ಅದನ್ನು ಎಸೆಯುವ ಬದಲು ಈ ಟ್ರಿಕ್ಸ್‌ಗಳನ್ನ ಬಳಸಿ ನೋಡಿ. ಖಂಡಿತ ನಿಮ್ಮ ಗ್ಯಾಸ್‌ ಲೈಟರ್‌ ವರ್ಕ್‌ ಆಗುತ್ತೆ.

ಲೈಟರ್‌ಗೆ ಶಾಖ ನೀಡಿ

ಹಲವು ಬಾರಿ ಗ್ಯಾಸ್‌ ಲೈಟರ್‌ ಶೀತ ಮತ್ತು ತೇವಾಂಶದ ಕಾರಣದಿಂದ ಸರಿಯಾಗಿ ಕೆಲಸ ಮಾಡುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಲೈಟರ್ ಅನ್ನು ಕಸಕ್ಕೆ ಎಸೆಯುವ ಮೊದಲು, ಅದನ್ನು ಸ್ವಲ್ಪ ಸಮಯದವರೆಗೆ ಬಿಸಿಲಿನಲ್ಲಿ ಇರಿಸಿ. ಆದರೆ ಯಾವುದೇ ಕಾರಣಕ್ಕೂ ಬೆಂಕಿ ಹಿಡಿಯುವುದು ಮಾಡಬೇಡಿ. ಇದರಿಂದ ಸಂಪೂರ್ಣ ಹಾಳಾಗುತ್ತದೆ ನೆನಪಿರಲಿ.

ಲೈಟರ್ ಸ್ವಚ್ಛ ಮಾಡಿ

ಲೈಟರ್ ಅನ್ನು ಕೆಲವು ತಿಂಗಳುಗಳವರೆಗೆ ಬಳಸಿದ ನಂತರ ಅದರೊಳಗೆ ಕೊಳಕು ಸಂಗ್ರಹಗೊಳ್ಳಲು ಪ್ರಾರಂಭವಾಗುತ್ತದೆ. ಇದರಿಂದಾಗಿ ಲೈಟರ್ ಕೆಲವೊಮ್ಮೆ ಸರಿಯಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಲೈಟರ್ ಅನ್ನು ಎಸೆಯುವ ಮೊದಲು, ಅದನ್ನು ಒಳಗಿನಿಂದ ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ಇದಕ್ಕಾಗಿ ನೀವು ಇಯರ್‌ಬಡ್ಸ್ ಅಥವಾ ಸ್ಕ್ರೂಡ್ರೈವರ್ ಅನ್ನು ಬಳಸಬಹುದು.

ಪೆಟ್ರೋಲ್ ಅಥವಾ ಸೀಮೆ ಎಣ್ಣೆಯನ್ನು ಬಳಸಿ

ಗ್ಯಾಸ್ ಲೈಟರ್ ಒಳಗೆ ಸಂಗ್ರಹವಾದ ಕೊಳೆಯನ್ನು ಸ್ವಚ್ಛಗೊಳಿಸಲು, ಹಿಂಭಾಗದಲ್ಲಿ ರಬ್ಬರ್ ಹ್ಯಾಂಡಲ್ ಅನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳುವ ಮೂಲಕ ನೀವು ಅದನ್ನು ಎಳೆಯಬಹುದು. ಇದಾದ ನಂತರ ಲೈಟರ್‌ನಲ್ಲಿರುವ ಸ್ಪ್ರಿಂಗ್ ಕೂಡ ಹೊರಬರುತ್ತದೆ. ಎಲ್ಲಾ ವಸ್ತುಗಳನ್ನು ಹೊರತೆಗೆದು ಅದರಲ್ಲಿ ಎರಡು-ನಾಲ್ಕು ಹನಿ ಸೀಮೆಎಣ್ಣೆ ಅಥವಾ ಪೆಟ್ರೋಲ್ ಸೇರಿಸಿ ಮತ್ತು ಸ್ಕ್ರೂಡ್ರೈವರ್ ಮತ್ತು ಒಣ ಹತ್ತಿ ಬಟ್ಟೆಯ ಸಹಾಯದಿಂದ ತಿರುಗಿಸುವ ಮೂಲಕ ಲೈಟರ್‌ನ ಪೈಪ್ ಅನ್ನು ಸ್ವಚ್ಛಗೊಳಿಸಿ. ಇದರ ನಂತರ, ಲೈಟರ್‌ನ ಎಲ್ಲಾ ಘಟಕಗಳನ್ನು ಮೊದಲಿನ ರೀತಿಯಲ್ಲಿಯೇ ಜೋಡಿಸಿ. ಆದರೆ ಸ್ಪಿಂಗ್‌ ಕಟ್‌ ಆದರೆ ಲೈಟರ್‌ ವರ್ಕ್‌ ಆಗುವುದಿಲ್ಲ ನೆನಪಿರಲಿ.

ಒಣ ಬಟ್ಟೆಯಿಂದ ಸ್ವಚ್ಛ ಮಾಡಿ

ಲೈಟರ್ ಎಷ್ಟು ಸಮಯ ಚೆನ್ನಾಗಿ ಕೆಲಸ ಮಾಡುತ್ತದೆ ಎಂಬುದು ಅದರ ನಿರ್ವಹಣೆಯ ಮೇಲೆ ಅವಲಂಬಿತವಾಗಿರುತ್ತದೆ. ಅಡುಗೆಮನೆಯ ಮುಖ್ಯ ವಸ್ತುವಾಗಿರುವ ಲೈಟರ್‌ ತುಂಬಾ ಸಮಯ ಬಾಳಿಕೆ ಬರಬೇಕು ಅಂದ್ರೆ ಪ್ರತಿ ಬಳಕೆಯ ನಂತರ ಅದನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಿ. ನೀರು ತಾಕದಂತೆ ನೋಡಿಕೊಳ್ಳಿ. ಇದಲ್ಲದೇ ಲೈಟರ್ ಬಳಸಿದ ನಂತರ ಒಣ ಬಟ್ಟೆಯಿಂದ ಸ್ವಚ್ಛಗೊಳಿಸಿ.

ಈ ಮೇಲಿನ ಸರಳ ಟ್ರಿಕ್ಸ್‌ಗಳನ್ನು ಅನುಸರಿಸುವ ಮೂಲಕ ಗ್ಯಾಸ್‌ ಲೈಟರ್‌ ಹಾಳಾಗದಂತೆ ತುಂಬಾ ದಿನಗಳವರೆಗೆ ಬಳಸಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ