logo
ಕನ್ನಡ ಸುದ್ದಿ  /  ಜೀವನಶೈಲಿ  /  ನವರಾತ್ರಿ ಪೂಜೆಗೆ ಬಳಸಿದ್ದ ಬೆಳ್ಳಿ, ಹಿತ್ತಾಳೆ, ಕಂಚು ಪಾತ್ರೆಗಳನ್ನು ಕ್ಲೀನ್ ಮಾಡುವುದು ಹೇಗೆ? ಇಲ್ಲಿದೆ ಸುಲಭ ವಿಧಾನ

ನವರಾತ್ರಿ ಪೂಜೆಗೆ ಬಳಸಿದ್ದ ಬೆಳ್ಳಿ, ಹಿತ್ತಾಳೆ, ಕಂಚು ಪಾತ್ರೆಗಳನ್ನು ಕ್ಲೀನ್ ಮಾಡುವುದು ಹೇಗೆ? ಇಲ್ಲಿದೆ ಸುಲಭ ವಿಧಾನ

Raghavendra M Y HT Kannada

Oct 14, 2024 11:23 AM IST

google News

ಯಾವುದೇ ರಾಸಾಯನಿಕಗಳನ್ನು ಬಳಸದೆ ಪೂಜೆಗೆ ಬಳಿಸಿದ್ದ ಪಾತ್ರೆಗಳನ್ನು ಕ್ಲೀನ್ ಮಾಡುವುದು ಹೇಗೆ ಎಂಬುದನ್ನ ತಿಳಿಯಿರಿ

    • ನವರಾತ್ರಿ ಹಬ್ಬ ಮುಗೀತು ದೇವರ ಮನೆಯಲ್ಲಿರುವ ಪೂಜಾ ವಸ್ತುಗಳನ್ನು ಸ್ವಚ್ಛ ಮಾಡುವುದು ಹೇಗೆ ಅಂತ ಯೋಚಿಸುತ್ತಿದ್ದೀರಾ? ಯಾವುದೇ ರಾಸಾಯನಿಕ ಆಧಾರಿದ ಲಿಕ್ವಿಡ್ ಬಳಸದೆ ಮನೆಯಲ್ಲೇ ಇರುವ ಪದಾರ್ಥಗಳಿಂದ ಪೂಜೆಗೆ ಬಳಸಿದ್ದ ಬೆಳ್ಳಿ, ಹಿತ್ತಾಳೆ ಹಾಗೂ ಕಂಚು ಪಾತ್ರೆಗಳನ್ನು ಸ್ವಚ್ಛಗೊಳಿಸುವ ವಿಧಾನವನ್ನು ಇಲ್ಲಿ ನೀಡಲಾಗಿದೆ.
ಯಾವುದೇ ರಾಸಾಯನಿಕಗಳನ್ನು  ಬಳಸದೆ ಪೂಜೆಗೆ ಬಳಿಸಿದ್ದ ಪಾತ್ರೆಗಳನ್ನು ಕ್ಲೀನ್ ಮಾಡುವುದು ಹೇಗೆ ಎಂಬುದನ್ನ ತಿಳಿಯಿರಿ
ಯಾವುದೇ ರಾಸಾಯನಿಕಗಳನ್ನು ಬಳಸದೆ ಪೂಜೆಗೆ ಬಳಿಸಿದ್ದ ಪಾತ್ರೆಗಳನ್ನು ಕ್ಲೀನ್ ಮಾಡುವುದು ಹೇಗೆ ಎಂಬುದನ್ನ ತಿಳಿಯಿರಿ

ನವರಾತ್ರಿ, ದಸರಾ ಹಬ್ಬ ಮುಗೀತು. ಇನ್ನೇನಿದ್ದರೂ ದೇವರ ಪೂಜೆಗೆ ಬಳಸಿದ್ದ ವಸ್ತುಗಳನ್ನು ಕ್ಲೀನ್ ಮಾಡುವ ಕೆಲಸ. ಪಾತ್ರೆಗಳನ್ನು ಕ್ಲೀನ್ ಮಾಡುವ ಕೆಲಸವೆಂದರೆ ಕೆಲವರಿಗೆ ದೊಡ್ಡ ಟಾಸ್ಕ್ ಆಗಿರುತ್ತದೆ. ಹೇಗಪ್ಪಾ ಸ್ವಚ್ಛಗೊಳಿಸೋದು ಎಂಬ ಚಿಂತೆ ಕಾಡುತ್ತೆ. ಹಬ್ಬದಲ್ಲಿ ದೇವರ ಪೂಜೆಗೆ ಬಳಸಿದ್ದ ಬೆಳ್ಳಿ, ಕಂಚು ಹಾಗೂ ಹಿತ್ತಾಳೆ ಪಾತ್ರೆಗಳನ್ನು ಕ್ಲೀನ್ ಮಾಡುವ ವಿಧಾನವನ್ನು ಇಲ್ಲಿ ನೀಡಲಾಗಿದೆ. ಈ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಯಾವುದೇ ರೀತಿಯ ರಾಸಾಯನಿಕ ಆಧರಿತ ಲಿಕ್ವಿಡ್ ಬೇಕಿಲ್ಲ. ಮನೆಯಲ್ಲೇ ಸಿಗುವ ಕೆಲವೊಂದು ಪದಾರ್ಥಗಳನ್ನು ಬಳಸಿಕೊಂಡು ಪಾತ್ರೆಗಳನ್ನು ಹೊಸ ಪಾತ್ರೆಗಳಂತೆ ಸ್ವಚ್ಛಗೊಳಿಸಬಹುದು.

ಪೂಜೆಗೆ ಬಳಸಿದ್ದ ಕಂಚು, ಹಿತ್ತಾಳೆ ಪಾತ್ರೆಗಳನ್ನು ಸ್ವಚ್ಛ ಮಾಡುವ ವಿಧಾನ

  • ಮೊದಲು ಸ್ವಚ್ಛ ಮಾಡಬೇಕಾಗಿರುವ ಪಾತ್ರೆಗಳನ್ನು ಒಂದು ಕಡೆ ತೆಗೆದಿಡಿ
  • ನಂತರ ಬೆಳ್ಳಿ ಪಾತ್ರೆಗಳು, ಕಂಚಿನ ಪಾತ್ರೆಗಳು ಹಾಗೂ ಹಿತ್ತಾಳೆ ಪಾತ್ರೆಗಳನ್ನು ಪ್ರತ್ಯೇಕ ಮಾಡಿ
  • ಸ್ಟೌವ್ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಸ್ವಲ್ಪ ಹುಣಸೆ ಹಣ್ಣು ಹಾಕಿ ಅದು ಮುಳುಗುವಷ್ಟು ನೀರು ಹಾಕಿ ಚೆನ್ನಾಗಿ ಕುದಿಸಿ.
  • ಹುಣುಸೆ ಹಣ್ಣು ತುಂಬಾ ಮೃದುವಾಗುವವರಿಗೆ ಬಿಟ್ಟು ನಂತರ ಕೆಳಕ್ಕೆ ಇಳಿಸಿಕೊಳ್ಳಿ
  • ನಂತರ ಉಗುರುಬೆಚ್ಚಗೆ ಆಗುವವರೆಗೆ ಕಾಯಿರಿ. ಆ ಬಳಿಕ ಪಾತ್ರೆಗೆ ಒಂದು ಚಮಚ ಉಪ್ಪು ಮತ್ತು ಒಂದು ಚಮಚ ಅಡುಗೆ ಸೋಡಾ ಹಾಕಿಕೊಳ್ಳಿ
  • ಸೋಡಾ ಮತ್ತು ಉಪ್ಪು ಹಾಕಿಕೊಂಡ ನಂತರ ಚಮಚದ ಮೂಲಕ ಚೆನ್ನಾಗಿ ಮಿಶ್ರಣ ಮಾಡಿ
  • ನಂತರ ಪಾತ್ರೆ ತೊಳೆಯುವ ನಾರಿನಿಂದ ಪಾತ್ರೆಗಳನ್ನು ತೊಳೆಯಿರಿ
  • ಎಷ್ಟೇ ಕಲೆಗಳು ಇದ್ದರೂ ತಕ್ಷಣವೇ ಸ್ವಚ್ಛವಾಗುತ್ತದೆ
  • ನೀರಿನಲ್ಲಿ ತೊಳೆದ ನಂತರ ಬಟ್ಟೆಯಿಂದ ಒರೆಸಿದರೆ ಪಾತ್ರೆಗಳಲ್ಲಿನ ಕಲೆಗಳು ಸಂಪೂರ್ಣವಾಗಿ ಮಾಯವಾಗುತ್ತವೆ

ಬೆಳ್ಳಿ ಪಾತ್ರೆಗಳನ್ನು ಕ್ಲೀನ್ ಮಾಡುವುದು ಹೇಗೆ?

  • ಮೊದಲು 2 ಚಮಚದಷ್ಟು ಸಬೀನಾ ಪುಡಿ ತಗೊಳ್ಳಿ
  • ಎರಡು ಚಮಚ ವಿಭೂತಿ ಪುಡಿ (ವಿಭೂತಿ ಪುಡಿ ಇಲ್ಲದಿದ್ದರೆ ಹಲ್ಲು ತೊಳೆಯುವ ಪೌಡರ್‌ ಬಳಸಬಹುದು) ತಗೊಳ್ಳಿ
  • ಸಬೀನಾ ಮತ್ತು ವಿಭೂತಿ ಪುಡಿ ಎರಡನ್ನೂ ಒಂದು ತಟ್ಟೆ ಅಥವಾ ಪಾತ್ರೆಯಲ್ಲಿ ಹಾಕಿ ಅದಕ್ಕೆ ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ
  • ಮೊದಲು ಬೆಳ್ಳಿ ಪಾತ್ರೆಗಳಲ್ಲಿ ಇರುವ ಧೂಳು, ಅರಿಶಿನ, ಕುಂಕುಮ, ಇತರೆ ಸಣ್ಣಪುಟ್ಟ ಪದಾರ್ಥಗಳನ್ನು ಒಂದು ಬಟ್ಟೆಯಿಂದ ಕ್ಲೀನ್ ಮಾಡಿ
  • ನಂತರ ವಿಭೂತಿ ಪುಡಿ ಮತ್ತು ಸಬೀನಾ ಪುಡಿ ಮಿಶ್ರಿತ ಲಿಕ್ವಿಡ್‌ನಿಂದ ಬೆಳ್ಳಿ ಪಾತ್ರೆಗಳನ್ನು ನಾರಿನಿಂದ ತೊಳೆಯಿರಿ
  • ತುಪ್ಪ, ಬೆಣ್ಣೆ, ಕರ್ಪೂರ ಸೇರಿದಂತೆ ಯಾವುದೇ ರೀತಿಯ ಕಲೆಗಳು ಇದ್ದರೂ ಕ್ಷಣ ಮಾತ್ರದಲ್ಲಿ ಮಾಯವಾಗುತ್ತವೆ

ಈ ರೀತಿ ದೇವರ ಮನೆಯಲ್ಲಿನ ಪಾತ್ರೆಗಳನ್ನು ಕ್ಲೀನ್ ಮಾಡುವುದರಿಂದ ನಿಮಗೆ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಜೊತೆಗೆ ಕೈಯಗಳಿಗೂ ಯಾವುದೇ ರೀತಿಯ ಸಮಸ್ಯೆಯಾಗುವುದಿಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ