logo
ಕನ್ನಡ ಸುದ್ದಿ  /  ಜೀವನಶೈಲಿ  /  Kitchen Tips: ನಿಮ್ಮ ಅಡುಗೆಮನೆ ಜಿರಳೆಗಳ ಸಾಮ್ರಾಜ್ಯವಾಗಿದ್ಯಾ? ಜಿರಳೆ ಕಾಟದಿಂದ ಮುಕ್ತಿ ಪಡೆಯಲು ಇಲ್ಲಿದೆ ಸಿಂಪಲ್‌ ಟಿಪ್ಸ್‌

Kitchen Tips: ನಿಮ್ಮ ಅಡುಗೆಮನೆ ಜಿರಳೆಗಳ ಸಾಮ್ರಾಜ್ಯವಾಗಿದ್ಯಾ? ಜಿರಳೆ ಕಾಟದಿಂದ ಮುಕ್ತಿ ಪಡೆಯಲು ಇಲ್ಲಿದೆ ಸಿಂಪಲ್‌ ಟಿಪ್ಸ್‌

Reshma HT Kannada

May 21, 2024 06:15 PM IST

google News

ನಿಮ್ಮ ಅಡುಗೆಮನೆ ಜಿರಳೆಗಳ ಸಾಮ್ರಾಜ್ಯವಾಗಿದೆಯೇ? ಜಿರಳೆ ಕಾಟದಿಂದ ಮುಕ್ತಿ ಪಡೆಯಲು ಇಲ್ಲಿದೆ ಸರಳ ವಿಧಾನ

    • ಅಡುಗೆಮನೆ ಶುಚಿಯಾಗಿದ್ದಷ್ಟೂ ಮನೆ ಸದಸ್ಯರ ಆರೋಗ್ಯ ಉತ್ತಮವಾಗಿರುತ್ತದೆ. ಆದರೆ ಕೆಲವರ ಅಡುಗೆ ಮನೆಯಲ್ಲಿ ಜಿರಳೆಗಳು ಪಾರುಪಥ್ಯ ಸಾಧಿಸಿಬಿಟ್ಟಿರುತ್ತವೆ. ಎಷ್ಟೇ ರಾಸಾಯನಿಕಗಳನ್ನು ಸಿಂಪಡಿಸಿದ್ರು ಜಿರಳೆ ಕಡಿಮೆಯಾಗುವುದಿಲ್ಲ. ಇಂಥ ಸಂದರ್ಭಗಳಲ್ಲಿ ಜಿರಳೆಗಳಿಂದ ಮುಕ್ತಿ ಪಡೆಯಲು ಏನು ಮಾಡಬೇಕು? ಇಲ್ಲಿದೆ ಉತ್ತರ.
ನಿಮ್ಮ ಅಡುಗೆಮನೆ ಜಿರಳೆಗಳ ಸಾಮ್ರಾಜ್ಯವಾಗಿದೆಯೇ? ಜಿರಳೆ ಕಾಟದಿಂದ ಮುಕ್ತಿ ಪಡೆಯಲು ಇಲ್ಲಿದೆ ಸರಳ ವಿಧಾನ
ನಿಮ್ಮ ಅಡುಗೆಮನೆ ಜಿರಳೆಗಳ ಸಾಮ್ರಾಜ್ಯವಾಗಿದೆಯೇ? ಜಿರಳೆ ಕಾಟದಿಂದ ಮುಕ್ತಿ ಪಡೆಯಲು ಇಲ್ಲಿದೆ ಸರಳ ವಿಧಾನ

ಬಿಸಿಲಿನ ಧಗೆ ಹೆಚ್ಚಿದಂತೆಲ್ಲ ಅಡುಗೆ ಮನೆಯೊಳಗೆ ಅನಿರೀಕ್ಷಿತ ಅತಿಥಿ ಎಂಬಂತೆ ಜಿರಳೆಗಳ ಹಾವಳಿ ಜೋರಾಗುತ್ತದೆ. ನಿಮ್ಮ ಅಡುಗೆಮನೆಯನ್ನು ತಮ್ಮ ಮನೆಯನ್ನಾಗಿ ಮಾಡಿಕೊಂಡುಬಿಡುತ್ತವೆ. ಅಡುಗೆಮನೆಯ ಕಪಾಟುಗಳಲ್ಲಿ, ಗೋಡೆಯ ಸಂದುಗಳಲ್ಲಿ ಎಲ್ಲಿ ನೋಡಿದರೂ ಜಿರಳೆಗಳು ತುಂಬಿಕೊಂಡಿರುತ್ತವೆ.

ಜಿರಳೆಗಳು ಅನೈರ್ಮಲ್ಯ ಮಾತ್ರವಲ್ಲದೇ ಅಡುಗೆಮನೆಯಲ್ಲಿರುವ ಆಹಾರವನ್ನೂ ಕಲುಷಿತಗೊಳಿಸುತ್ತವೆ. ಜಿರಳೆಗಳು ಸ್ಪರ್ಶಿಸಿದ ಆಹಾರವನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಜಿರಳೆಗಳಿಂದ ಮುಕ್ತಿಪಡೆಯಲು ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಉತ್ಪನ್ನಗಳನ್ನು ನೀವು ಖಂಡಿತವಾಗಿ ಬಳಕೆ ಮಾಡಬಹುದು. ಆದರೆ ಇದಕ್ಕೂ ಮುನ್ನ ಅಡುಗೆ ಮನೆಯು ಜಿರಳೆಗಳ ವಾಸಸ್ಥಾನವಾಗದಂತೆ ತಡೆಯಲು ನೀವು ಏನು ಮಾಡಬೇಕು ಎನ್ನುವುದಕ್ಕೆ ಕೆಲವು ಸಲಹೆಗಳು ಇಲ್ಲಿವೆ ನೋಡಿ.

ನಿಮ್ಮ ಅಡುಗೆ ಮನೆಯಲ್ಲಿ ಶುಚಿತ್ವವನ್ನು ನೀವು ಕಾಪಾಡಿಕೊಳ್ಳದೇ ಹೋದಲ್ಲಿ ಜಿರಳೆಗಳು ಬೇಗನೇ ನಿಮ್ಮ ಅಡುಗೆಮನೆಯತ್ತ ಆಕರ್ಷಿತಗೊಳ್ಳುತ್ತದೆ. ಹೀಗಾಗಿ ಜಿರಳೆಗಳನ್ನು ತಡೆಗಟ್ಟಲು ನೀವು ಮೊದಲನೆಯದಾಗಿ ಅಡುಗೆಮನೆಯ ಕಪಾಟುಗಳು, ಡ್ರಾಯರ್‌ಗಳು, ಕ್ಯಾಬಿನೇಟ್‌ಗಳು ಹಾಗೂ ಅಡುಗೆಮನೆಯ ಎಲ್ಲಾ ಮೂಲೆ ಮೂಲೆಗಳನ್ನು ಸ್ವಚ್ಛಗೊಳಿಸಬೇಕು. ಅಡುಗೆಮನೆಯಲ್ಲಿ ಅವಧಿ ಮೀರಿದ ಯಾವುದೇ ಪದಾರ್ಥಗಳನ್ನು ತೆಗೆದು ಹಾಕಬೇಕು. ಗಾಳಿಯಾಡದ ಬಾಟಲಿಗಳನ್ನು ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಇಡಬೇಕು.

ಅಡುಗೆಮನೆಯ ಸ್ವಚ್ಛಗೊಳಿಸಿ

ಅಡುಗೆಮನೆಯಲ್ಲಿ ಜಿರಳೆಗಳ ಕಾಟ ಮಿತಿ ಮೀರಿದ್ದರೆ ನೀವು ಮಾಡಬೇಕಾದ ಮೊಟ್ಟ ಮೊದಲ ಕೆಲಸವೆಂದರೆ ಅಡುಗೆಮನೆಯನ್ನು ಗಾಢವಾಗಿ ಸ್ವಚ್ಛಗೊಳಿಸುವುದಾಗಿದೆ. ಯಾವುದೇ ಕಾರಣಕ್ಕೂ ಅಡುಗೆ ಮನೆಯಲ್ಲಿ ಸಣ್ಣ ಕೊಳಕಿಗೂ ಜಾಗವಿದರಂತೆ ಮೂಲೆ ಮೂಲೆಯನ್ನು ಶುಚಿಗೊಳಿಸಬೇಕು. ಆಹಾರ ಚೆಲ್ಲಿದ್ದರೆ, ಬ್ರೆಡ್‌ನಂತಹ ಪದಾರ್ಥಗಳು ಅಲ್ಲಲ್ಲಿಯೇ ಬಿದ್ದಿದ್ದರೆ ಯಾವುದನ್ನೂ ಬಿಡದೇ ಪ್ರತಿಯೊಂದನ್ನೂ ಶುಚಿಗೊಳಿಸಬೇಕು. ಅಡುಗೆ ಮನೆಯ ಶುಚಿತ್ವ ಕಾಪಾಡಿಕೊಂಡಲ್ಲಿ ಮಾತ್ರ ಜಿರಳೆಯಿಂದ ಮುಕ್ತಿ ಹೊಂದಲು ಸಾಧ್ಯವಿದೆ.

ಜಿರಳೆಗಳು ಅಡುಗೆಮನೆಗೆ ಎಂಟ್ರಿ ಕೊಡುವ ಜಾಗಗಳನ್ನು ಮುಚ್ಚಿ:

ಪೈಪ್, ಬಾಗೊಲು, ಕಿಟಕಿಗಳು ಹೀಗೆ ಅಡುಗೆಮನೆಯ ಯಾವುದೇ ಜಾಗದಲ್ಲಿ ರಂಧ್ರಗಳಿದ್ದರೂ ಸಹ ಅವುಗಳನ್ನು ಮುಚ್ಚಿಬಿಡಿ. ಜಿರಳೆಗಳಿಗೆ ನಿಮ್ಮ ಮನೆಗೆ ಬರಲು ಜಾಗವೇ ನೀಡಿಲ್ಲವೆಂದರೆ ಅವುಗಳು ಹಾವಳಿ ನಡೆಸಲು ಸಾಧ್ಯವಿಲ್ಲ. ಸಿಂಕ್‌ಗಳನ್ನು ಪ್ರತಿನಿತ್ಯ ತೊಳೆಯಬೇಕು.

ನೈಸರ್ಗಿಕ ಕೀಟನಾಶಕಗಳ ಬಳಕೆ

ಜಿರಳೆಗಳ ಕಾಟಗಳಿಂದ ಪಾರಾಗಲು ನೀವು ನೈಸರ್ಗಿಕ ಕೀಟನಾಶಕಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಪುದೀನಾ ಎಣ್ಣೆ ಹಾಗೂ ಬೇವಿನ ಎಣ್ಣೆಗಳಲ್ಲಿ ಹತ್ತಿಯನ್ನು ಅದ್ದಿ ಅಡುಗೆ ಕೋಣೆಯ ಮೂಲೆ ಮೂಲೆಗಳಲ್ಲಿ ಇಡುವ ಮೂಲಕ ಜಿರಳೆಗಳಿಂದ ಅಂತರ ಕಾಯ್ದುಕೊಳ್ಳಬಹುದಾಗಿದೆ.

ಅಡುಗೆಮನೆಯ ಕಸವನ್ನು ನಿತ್ಯ ಶುಚಿಗೊಳಿಸಿ

ಅಡುಗೆಮನೆಯಲ್ಲಿ ಪ್ರತಿನಿತ್ಯ ಏನಿಲ್ಲವೆಂದರೂ ತರಕಾರಿ ಹಾಗೂ ಹಣ್ಣಿನ ಸಿಪ್ಪೆಗಳು, ಚಾ ಪುಡಿ, ಹಳಸಿದ ಆಹಾರ ಕಸದ ಬುಟ್ಟಿ ಸೇರುತ್ತದೆ. ಈ ಕಸವನ್ನು ನೀವು ಪ್ರತಿದಿನ ವಿಲೇವಾರಿ ಮಾಡಬೇಕು. ಕಸದಬುಟ್ಟಿಯನ್ನು ಶುಚಿಗೊಳಿಸದೇ ಮಲಗುವಂತಿಲ್ಲ. ಜಿರಳೆಗಳು ಕಸದಬುಟ್ಟಿಯ ದುರ್ವಾಸನೆಯಿಂದಲೂ ಆಕರ್ಷಿತಗೊಳ್ಳುತ್ತದೆ ಎಂಬುದು ನಿಮ್ಮ ಗಮನದಲ್ಲಿ ಇರಲಿ.

ನೀರು ನಿಲ್ಲಲು ಬಿಡಬೇಡಿ

ನಿಂತ ನೀರಿನಲ್ಲಿ ಸೊಳ್ಳೆಗಳು ಹಾಗೂ ಕೀಟಗಳು ಸಂತಾನೋತ್ಪತ್ತಿ ನಡೆಸುತ್ತವೆ ಎಂಬುದು ತಿಳಿದಿರುವ ವಿಚಾರ. ಅಡುಗೆಮನೆಯ ಸಿಂಕ್‌ ಪೈಪ್‌ಗಳಲ್ಲಿ ಸಣ್ಣ ಸೋರಿಕೆ ಇದ್ದರೂ ಸಹ ಅವುಗಳನ್ನು ಕೂಡಲೇ ಸರಿಪಡಿಸಬೇಕು. ಸಿಂಕ್‌ನಲ್ಲಿ ಕಲುಷಿತ ನೀರಿದ್ದರೆ ತಕ್ಷಣವೇ ಅದನ್ನು ಶುಚಿಗೊಳಿಸಿ.

ಆಹಾರ ಪದಾರ್ಥಗಳನ್ನು ಸರಿಯಾದ ರೀತಿಯಲ್ಲಿ ಸಂರಕ್ಷಿಸಿ

ಆಹಾರ ಪದಾರ್ಥಗಳನ್ನು ಎಂದಿಗೂ ಗಾಳಿಯಾಡದ ಕಂಟೇನರ್‌ಗಳಲ್ಲಿಯೇ ಸಂಗ್ರಹಿಸಿ ಇಡಬೇಕು. ಗಾಜಿನ ಕಂಟೇನರ್‌ಗಳನ್ನು ನೀವು ಇದಕ್ಕಾಗಿ ಬಳಕೆ ಮಾಡಿಕೊಳ್ಳಬಹುದು. ಆಗ ಜಿರಳೆಗಳಿಗೆ ಆಹಾರ ಪದಾರ್ಥಗಳನ್ನು ಸ್ಪರ್ಶಿಸಲು ಸಾಧ್ಯವಾಗುವುದಿಲ್ಲ. ಈ ರೀತಿಯಲ್ಲಿ ನೀವು ನಿಮ್ಮ ಆಹಾರ ಪದಾರ್ಥಗಳು ಜಿರಳೆ ಪಾಲಾಗುವುದನ್ನು ತಪ್ಪಿಸಬಹುದಾಗಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ