ಜೀವನದ ಅರ್ಥ ತಿಳಿಯುವ ಸಾಧನವೇ ಧ್ಯಾನ.. ಇದನ್ನು ಹೀಗೆ ಅಭ್ಯಾಸ ಮಾಡಿ!
May 22, 2022 08:29 AM IST
ಧ್ಯಾನ
- ಧ್ಯಾನ ಮತ್ತು ಯೋಗದ ನಡುವಿನ ವ್ಯತ್ಯಾಸವೇನು? ಧ್ಯಾನದಲ್ಲಿ ವಿಧಗಳಿವೆಯೇ? ಅವುಗಳನ್ನು ಅಭ್ಯಾಸ ಮಾಡುವುದು ಹೇಗೆ? ಇದರ ಬಗ್ಗೆ ನಾವು ನಿಮಗೆ ಮಾಹಿತಿ ನೀಡುತ್ತೇವೆ.
ತೀವ್ರ ಗೊಂದಲವಿದ್ದರೂ ಮೆದುಳಿನಲ್ಲಿ ಏಕಾಗ್ರತೆ, ಪರಿಪೂರ್ಣ ವ್ಯಕ್ತಿತ್ವ, ವ್ಯಕ್ತಿಯಲ್ಲಿ ಪರಿಪೂರ್ಣ ಯೋಗಕ್ಷೇಮಕ್ಕೆ ಧ್ಯಾನವೊಂದೇ ಪರಿಹಾರ. ಯೋಗ ಮತ್ತು ಧ್ಯಾನ ಈ ಎರಡೂ ಬಹಳ ಮುಖ್ಯ. ಯೋಗ ಒಂದು ಅಭ್ಯಾಸ ಆದರೆ ಧ್ಯಾನ ಒಂದು ಸ್ಫೂರ್ತಿ.
ಯೋಗಾಸನಗಳು ದೇಹಕ್ಕೆ ಸ್ಥಿರತೆಯನ್ನು ನೀಡಿದರೆ, ಧ್ಯಾನವು ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. ಯೋಗದಲ್ಲಿ ಧ್ಯಾನಕ್ಕೆ ವಿಶೇಷ ಸ್ಥಾನವಿದೆ. ಜನರು ತಮ್ಮ ದುಃಖವನ್ನು ಹೋಗಲಾಡಿಸಲು, ಜೀವನದಲ್ಲಿ ಆಳವಾದ ಅರ್ಥವನ್ನು ಕಂಡುಕೊಳ್ಳಲು ಮತ್ತು ವಾಸ್ತವದೊಂದಿಗೆ ಸಂಪರ್ಕ ಸಾಧಿಸಲು ಧ್ಯಾನವು ಒಂದು ಅಸ್ತ್ರವಾಗಿ ಕಾರ್ಯನಿರ್ವಹಿಸುತ್ತದೆ.
ಹಿಂದೂಸ್ತಾನ್ ಟೈಮ್ಸ್ ಡಿಜಿಟಲ್‌ಗೆ ನೀಡಿದ ಸಂದರ್ಶನದಲ್ಲಿ, ಡಾ. ಚೌಧರಿ ವಿವಿಧ ರೀತಿಯ ಧ್ಯಾನ ಮತ್ತು ಅವುಗಳನ್ನು ಅಭ್ಯಾಸ ಮಾಡುವ ಹಂತಗಳ ಬಗ್ಗೆ ಮಾತನಾಡಿದರು.
ಮಾನಸಿಕ ಧ್ಯಾನ
- ಇದು ವಾಸ್ತವವನ್ನು ಸೂಚಿಸುತ್ತದೆ. ಇದು ನಿಮ್ಮ ದೇಹವನ್ನು ತಿಳಿದುಕೊಳ್ಳುವುದರೊಂದಿಗೆ ಪ್ರಾರಂಭವಾಗುತ್ತದೆ. ನಿಮ್ಮ ಆಲೋಚನೆಗಳು ಮೇಲೆ ಅವಲಂಭಿತವಾಗಿರುತ್ತದೆ.
- ನಿಮ್ಮ ಆಲೋಚನೆಗಳನ್ನು ಗಮನಿಸಿ. ನಿಮ್ಮಲ್ಲಿ ಬರುವ ಪ್ರತಿಯೊಂದು ಆಲೋಚನೆಯನ್ನು ಗುರುತಿಸಿ, ಅದು ಒಳ್ಳೆಯದಾ ಅಥವಾ ಕೆಟ್ಟದ್ದಾ ಎಂದು ತಿಳಿಯಿರಿ.
- ಉಸಿರಾಡಿ ಮತ್ತು ವಿಶ್ರಾಂತಿ ಪಡೆಯಿರಿ. ಎಲ್ಲವನ್ನೂ ಮರೆತು ಪ್ರಸ್ತುತ ಕ್ಷಣವನ್ನು ಆನಂದಿಸಿ.
ಮಂತ್ರ ಧ್ಯಾನ
ಮಂತ್ರ ಧ್ಯಾನ ಅಥವಾ ಜಪ ನಮ್ಮ ಭಾರತೀಯ ಸಂಸ್ಕೃತಿ-ಸಂಪ್ರದಾಯಗಳಲ್ಲಿ ಯಾವಾಗಲೂ ಇದೆ. ಈ ಅಭ್ಯಾಸದಲ್ಲಿ ಶಬ್ದಗಳು ಮತ್ತು ಪದಗಳನ್ನು ಸರಿಯಾದ ಆರೋಹಣ ಕ್ರಮದಲ್ಲಿ ಗಟ್ಟಿಯಾಗಿ ಜಪಿಸಬೇಕು. ಧ್ವನಿ ಮತ್ತು ರಾಗದ ಮೇಲೆ ಮನಸ್ಸನ್ನು ಕೇಂದ್ರೀಕರಿಸಬೇಕು.
- ಆರಾಮವಾಗಿ ಕುಳಿತುಕೊಳ್ಳಿ, ನಿಮ್ಮ ಬೆನ್ನನ್ನು ನೇರವಾಗಿ ಇರಿಸಿ ಮತ್ತು ನಿಮ್ಮ ಮುಂದೆ ತೋಳುಗಳನ್ನು ಸಡಿಲಗೊಳಿಸಿ.
- ನಿಮ್ಮ ಮನಸ್ಸನ್ನು ಮಂತ್ರದ ಪದಗಳ ಮೇಲೆ ಕೇಂದ್ರೀಕರಿಸಿ ಮತ್ತು ಮತ್ತೆ ಮತ್ತೆ ಪಠಿಸಿ.
- ಈ ಅಭ್ಯಾಸ ಮಾಡುವಾಗ ಬೇರೆ ಯಾವುದೇ ಆಲೋಚನೆಗಳು ಬರಬಾರದು. ಪೂರ್ಣ ಏಕಾಗ್ರತೆಯಿಂದ ಜಪಿಸಬೇಕು.
ತ್ರಾಟಕ ಧ್ಯಾನ
ಈ ರೀತಿಯ ಧ್ಯಾನವು ನಿಮ್ಮ ಮನಸ್ಸನ್ನು ಕಲ್ಪನೆಯಿಂದ ನೈಜ ಪ್ರಪಂಚಕ್ಕೆ ತರಲು ಸಹಾಯ ಮಾಡುತ್ತದೆ. ನೈಜ ಪ್ರಪಂಚದ ಮೇಲೆ ಹೇಗೆ ಗಮನಹರಿಸಬೇಕು ಎಂಬುದರ ಮೇಲೆ ಕೇಂದ್ರೀಕರಿಸುತ್ತದೆ. ಕಣ್ಣಿನ ಸ್ನಾಯುಗಳನ್ನು ಬಲಪಡಿಸುತ್ತದೆ.
- ಮೇಣದಬತ್ತಿಯನ್ನು ಹಚ್ಚಿ ಮತ್ತು ಅದನ್ನು ನಿಮಗೆ ಸರಿಯಾಗಿ ಕಾಣುವ ಮಟ್ಟದಲ್ಲಿ ಇರಿಸಿ.
- ಆರಾಮದಾಯಕವಾದ ಧ್ಯಾನ ಭಂಗಿಯಲ್ಲಿ ಕುಳಿತುಕೊಳ್ಳಿ, ತೊಡೆಯ ಮೇಲೆ ತೋಳುಗಳನ್ನು ಇಟ್ಟು ವಿಶ್ರಾಂತಿ ಮಾಡಿ. ಮೇಣದಬತ್ತಿ ಉರಿಯುವ ಬೆಳಕಿನ ಮಧ್ಯದಲ್ಲಿ ನೋಡಿ.
- ಕಣ್ಣು ಮಿಟುಕಿಸದೆ ಸ್ಥಿರವಾಗಿರಲು ಪ್ರಯತ್ನಿಸಿ. ಸಾಧ್ಯವಾದಷ್ಟು ಕಾಲ ನೋಡಿ, ತದನಂತರ ನಿಮಗೆ ಅಗತ್ಯವಿರುವಾಗ ನಿಮ್ಮ ಕಣ್ಣುಗಳನ್ನು ಮುಚ್ಚಿ. ಹೀಗೆ ಮಾಡಿದರೆ ಫಲಿತಾಂಶ ತಿಳಿಯುತ್ತದೆ.
ಧ್ಯಾನದಲ್ಲಿ ಇನ್ನೂ ಹಲವು ವಿಧಗಳಿದ್ದು, ಇದರ ನಿರಂತರ ಅಭ್ಯಾಸವು ಅನೇಕ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.
ವಿಭಾಗ