logo
ಕನ್ನಡ ಸುದ್ದಿ  /  ಜೀವನಶೈಲಿ  /  Lifestyle And Cancer: ಕ್ಯಾನ್ಸರ್‌ನಿಂದ ದೂರ ಉಳಿಯಲು ಜೀವನಶೈಲಿಯ ಬದಲಾವಣೆಯೂ ಅಗತ್ಯ

lifestyle and cancer: ಕ್ಯಾನ್ಸರ್‌ನಿಂದ ದೂರ ಉಳಿಯಲು ಜೀವನಶೈಲಿಯ ಬದಲಾವಣೆಯೂ ಅಗತ್ಯ

HT Kannada Desk HT Kannada

Feb 17, 2023 06:19 PM IST

google News

ವ್ಯಾಯಾಮ

    • ಕ್ಯಾನ್ಸರ್‌ಗೆ ಕಾರಣ ಏನು ಎಂಬುದು ಇಲ್ಲಿಯವರೆಗೂ ನಿಖರವಾಗಿ ತಿಳಿದಿಲ್ಲ. ಪರಿಸರ ಹಾಗೂ ಜೀವನಶೈಲಿಯೂ ಕ್ಯಾನ್ಸರ್‌ಗೆ ಕಾರಣ ಎನ್ನಲಾಗುತ್ತಿದೆ. ಆದರೆ ನಮ್ಮ ಜೀವನಶೈಲಿಯಲ್ಲಿನ ಕೆಲವು ಬದಲಾವಣೆಗಳು ಕ್ಯಾನ್ಸರ್‌ ರೋಗದಿಂದ ದೂರ ಉಳಿಯಲು ಸಹಾಯ ಮಾಡಬಲ್ಲವು. ಹಾಗಾದರೆ ಇದಕ್ಕೆ ನಾವೇನು ಮಾಡಬೇಕು?
ವ್ಯಾಯಾಮ
ವ್ಯಾಯಾಮ

ಇತ್ತೀಚೆಗೆ ಬಹಳಷ್ಟು ಮಂದಿ ಕ್ಯಾನ್ಸರ್‌ ರೋಗಕ್ಕೆ ತುತ್ತಾಗುತ್ತಿದ್ದಾರೆ. ಡಬ್ಲ್ಯೂಎಚ್‌ಒ ಪ್ರಕಾರ ಕ್ಯಾನ್ಸರ್‌ ರೋಗಕ್ಕೆ ಜಗತ್ತಿನಲ್ಲಿ ಅತಿ ಹೆಚ್ಚು ಜನರು ಮರಣ ಹೊಂದುತ್ತಿದ್ದಾರೆ. ಭಾರತದಲ್ಲಿ ಕ್ಯಾನ್ಸರ್‌ ರೋಗಕ್ಕೆ ತುತ್ತಾಗುತ್ತಿರುವವರ ಸಂಖ್ಯೆ ದಿನ ದಿನಕ್ಕೆ, ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. ಮಕ್ಕಳು, ವಯಸ್ಸಾದವರು, ಯುವಕರು ಎನ್ನದೆ ಇದರಿಂದ ಬಳಲುತ್ತಿದ್ದಾರೆ.

ಕ್ಯಾನ್ಸರ್‌ಗೆ ಕಾರಣ ಏನು ಎಂಬುದು ಇಲ್ಲಿಯವರೆಗೂ ನಿಖರವಾಗಿ ತಿಳಿದಿಲ್ಲ. ಆದರೆ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾದಾಗ ಕ್ಯಾನ್ಸರ್‌ ಗಡ್ಡೆ ಬೆಳವಣಿಗೆ ಹೊಂದುತ್ತದೆ ಎನ್ನುತ್ತದೆ ಒಂದು ಸಂಶೋಧನೆ. ಅಧ್ಯಯನಗಳ ಪ್ರಕಾರ ಶೇ 10ರಷ್ಟು ಮಾತ್ರ ಅನುವಂಶಿಕವಾಗಿ ಕ್ಯಾನ್ಸರ್‌ ಹರಡುತ್ತದೆ. ಉಳಿದ ಸಂದರ್ಭಗಳಲ್ಲಿ ಪರಿಸರ ಹಾಗೂ ಜೀವನಶೈಲಿಯೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಆದರೆ ನಮ್ಮ ಜೀವನಶೈಲಿಯಲ್ಲಿನ ಕೆಲವು ಬದಲಾವಣೆಗಳುಈ ರೋಗದಿಂದ ದೂರ ಉಳಿಯಲು ಸಹಾಯ ಮಾಡಬಲ್ಲವು. ಹಾಗಾದರೆ ಇದಕ್ಕೆ ನಾವೇನು ಮಾಡಬೇಕು?

ನಿರಂತರ ದೈಹಿಕ ಚಟುವಟಿಕೆ

ನಿರಂತರವಾಗಿ ದೇಹವನ್ನು ಚಟುವಟಿಕೆಯಿಂದ ಇರುವಂತೆ ನೋಡಿಕೊಂಡರೆ ಕ್ಯಾನ್ಸರ್‌ನ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಬಹುದು. ವ್ಯಾಯಾಮದಿಂದ ಸ್ತನ, ಕರುಳು ಮುಂತಾದ ಕ್ಯಾನ್ಸರ್‌ ಅಪಾಯವನ್ನು ಕಡಿಮೆ ಮಾಡಬಹುದು ಎಂಬುದು ಸಾಬೀತಾಗಿದೆ. ಇದು ಒಟ್ಟಾರೆ ನಮ್ಮ ಯೋಗಕ್ಷೇಮವನ್ನು ಕಾಪಾಡುತ್ತದೆ. ಕನಿಷ್ಠ 40 ನಿಮಿಷಗಳ ಕಾಲ ಸೈಕ್ಲಿಂಗ್‌, ವಾಕಿಂಗ್‌, ಈಜುವುದು, ಯೋಗಾಭ್ಯಾಸದಂತಹ ದೈಹಿಕ ಚಟುವಟಿಕೆ ಮಾಡುವುದರಿಂದ ಕ್ಯಾನ್ಸರ್‌ನಿಂದ ದೂರ ಇರಬಹುದು. ಸಾಧ್ಯವಾದಷ್ಟು ಬೆಳಗಿನ ವೇಳೆಯಲ್ಲಿ ಹೊರಗಡೆ ಚಟುವಟಿಕೆ ನಡೆಸುವುದು ಉತ್ತಮ.

ಆರೋಗ್ಯಕರ ಆಹಾರಕ್ರಮ

ಇಂದು ಬಹಳಷ್ಟು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿರುವ ಅಸಮರ್ಪಕ ಆಹಾರಕ್ರಮ. ಫಾಸ್ಟ್‌ಫುಡ್‌, ಜಂಕ್‌ಫುಡ್‌ ಸೇವನೆಯಿಂದ ಇಲ್ಲ ಸಲ್ಲದ ಕಾಯಿಲೆಗಳು ಮನುಷ್ಯನ ಸುತ್ತಲೂ ಸುತ್ತುತ್ತಿವೆ. ಕ್ಯಾನ್ಸರ್‌ನ ಅಪಾಯವನ್ನು ತಡೆಗಟ್ಟಲು ಸಮರ್ಪಕ ಆಹಾರಕ್ರಮ ಬಹಳ ಮುಖ್ಯ. ವಿಟಮಿನ್‌, ಖನಿಜ, ಲವಣಾಂಶಗಳಿರುವ ಆಹಾರಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು. ಕೋಸು, ಬ್ರೊಕೋಲಿಯಂತಹ ಸೊಪ್ಪು, ತರಕಾರಿಗಳಲ್ಲಿ ಕ್ಯಾನ್ಸರ್‌ ವಿರುದ್ಧ ಹೋರಾಡುವ ಗುಣಗಳಿವೆ. ಪ್ರತಿದಿನ ವಿವಿಧ ಬಗೆಯ ಹಣ್ಣು ಹಾಗೂ ತರಕಾರಿ ಸೇವನೆ ಬಹಳ ಅಗತ್ಯ.

ತಾಂಬಾಕು ಸೇವನೆಗೆ ಬ್ರೇಕ್‌ ಹಾಕಿ

ಅಧ್ಯಯನವೊಂದರ ಪ್ರಕಾರ ಕ್ಯಾನ್ಸರ್‌ ರೋಗದಿಂದ ಸಾವನ್ನಪ್ಪುವ ಮೂರನೇ ಒಂದು ಭಾಗದಷ್ಟು ಮಂದಿ ತಾಂಬಾಕು ಸೇವನೆ ಮಾಡುವವರಾಗಿದ್ದಾರೆ. ಸೀಗರೇಟು ಸೇದುವವರಲ್ಲಿ ಶ್ವಾಸಕೋಸದ ಕ್ಯಾನ್ಸರ್‌ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ದೂಮಪಾನದಿಂದ ಬಾಯಿ, ಶ್ವಾಸಕೋಸ, ಮೂತ್ರಕೋಶ, ಗಂಟಲು ಹಾಗೂ ಮೇಧೋಜೀರಕ ಗಂಥ್ರಿಯ ಕ್ಯಾನ್ಸರ್‌ಗಳು ಬರುವ ಸಾಧ್ಯತೆ ಇದ್ದು, ಈ ಅಪಾಯದಿಂದ ಪಾರಾಗಲು ದೂಮಪಾನ ನಿಷೇದಿಸುವುದು ಉತ್ತಮ ದಾರಿ. ದೂಮಪಾನದಿಂದ ದೂಮಪಾನ ಮಾಡಿದವರು ಮಾತ್ರವಲ್ಲ, ಅದರ ಹೊಗೆ ತಾಕಿದವರು ಪರಿಣಾಮ ಎದುರಿಸುವ ಸಾಧ್ಯತೆ ಇದೆ.

ಮದ್ಯಪಾನ ಮಾಡದಿರಿ

ಅತಿಯಾಗಿ ಅಲ್ಕೋಹಾಲ್‌ ಅಥವಾ ಮದ್ಯಪಾನ ಮಾಡುವುದು ಕೂಡ ಕರುಳು, ಯಕೃತ್ತು ಹಾಗೂ ಸ್ತನ ಕ್ಯಾನ್ಸರ್‌ಗೆ ಕಾರಣವಾಗಬಹುದು. ನಿರ್ದಿಷ್ಟ ಪ್ರಮಾಣದಲ್ಲಿ ದೇಹಕ್ಕೆ ಮದ್ಯಪಾನ ಸೇರುವುದರಿಂದ ತೊಂದರೆಯಿಲ್ಲ ಎಂದು ಸಂಶೋಧಕರು ತಿಳಿಸಿದ್ದರೂ ಕೂಡ ಇದರಿಂದ ಸಂಪೂರ್ಣವಾಗಿ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಮದ್ಯಪಾನ ಸೇವನೆಯಿಂದ ಕ್ಯಾನ್ಸರ್‌ ಮಾತ್ರವಲ್ಲದೆ ಮೂತ್ರಕೋಶ, ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ