logo
ಕನ್ನಡ ಸುದ್ದಿ  /  ಜೀವನಶೈಲಿ  /  ಕನ್ನಡ ರಾಜ್ಯೋತ್ಸವ ಪ್ರಬಂಧ ಬರೆಯಲು ವಿಷಯ ಹುಡುಕಾಟದಲ್ಲಿದ್ದೀರಾ? ಇಲ್ಲೇ ಇದೆ ನೋಡಿ ಉತ್ತಮ ಮಾಹಿತಿ

ಕನ್ನಡ ರಾಜ್ಯೋತ್ಸವ ಪ್ರಬಂಧ ಬರೆಯಲು ವಿಷಯ ಹುಡುಕಾಟದಲ್ಲಿದ್ದೀರಾ? ಇಲ್ಲೇ ಇದೆ ನೋಡಿ ಉತ್ತಮ ಮಾಹಿತಿ

Suma Gaonkar HT Kannada

Sep 19, 2024 04:16 PM IST

google News

ಕನ್ನಡ ರಾಜ್ಯೋತ್ಸವ ಪ್ರಬಂಧ

    • Kannada Rajyotsava: ನೀವು ಈ ಬಾರಿ ಕನ್ನಡ ರಾಜ್ಯೋತ್ಸವದಂದು ಪ್ರಬಂಧ ಬರೆಯಲು ವಿಷಯ ಹುಡುಕಾಡುತ್ತಿದ್ದರೆ. ನಾವು ನಿಮಗಿಲ್ಲಿ ಕೆಲಸ ಸಂಗತಿಗಳನ್ನು ನೀಡಿದ್ದೇವೆ ಗಮನಿಸಿ. ಈ ವಿಷಯವನ್ನು ಇಟ್ಟುಕೊಂಡು ನೀವು ನಿಮ್ಮ ಪ್ರಬಂಧವನ್ನು ಬರೆಯಬಹುದು. ಈಗಿನಿಂದಲೇ ಓದಿಕೊಂಡರೆ ಮುಂದೆ ಸುಲಭವಾಗುತ್ತದೆ. 
ಕನ್ನಡ ರಾಜ್ಯೋತ್ಸವ ಪ್ರಬಂಧ
ಕನ್ನಡ ರಾಜ್ಯೋತ್ಸವ ಪ್ರಬಂಧ

ಕನ್ನಡ ಕಂಪು ಎಂಬ ಹೆಸರಿನಲ್ಲಿ, ಈ ಭಾಷೆಯ ಸಮೃದ್ಧಿ ಅಡಗಿದೆ. ಸಾಹಿತ್ಯ, ಕಲೆ ಮತ್ತು ವಾಸ್ತುಶಿಲ್ಪವನ್ನು ಕನ್ನಡದಲ್ಲಿ ಕಂಡರೆ ಮನ ಪುಳಕಿತವಾಗುತ್ತದೆ. ಕನ್ನಡದಲ್ಲಿ ಮಾತನಾಡುವಾಗ, ನಮ್ಮ ಭಾಷೆಯ ಶ್ರೇಷ್ಠತೆಯನ್ನು, ಶ್ರುತಿ ಮತ್ತು ರಾಗವನ್ನು ನಾವು ಅನುಭವಿಸುತ್ತೇವೆ. ಇದು ಕೇವಲ ಒಂದು ಭಾಷೆ ಅಲ್ಲ ಇದೊಂದು ಭಾವ. ನಮ್ಮ ಪರಂಪರೆ, ಐತಿಹಾಸಿಕ ಹೆಜ್ಜೆಗಳು, ಮತ್ತು ಸುಂದರ ಕೃತಿಗಳನ್ನು ಓದುತ್ತಾ ಹೋದರೆ ನಮ್ಮ ಇಡೀ ಜೀವನ ಅದರಲ್ಲೇ ಕಳೆಯಬಹುದು ಅಷ್ಟೊಂದು ಸಾಹಿತ್ಯ ಸಮೃದ್ದಿಯನ್ನು ನಮ್ಮ ಕನ್ನಡ ಹೊಂದಿದೆ.

ಸಾಹಿತ್ಯ ಸಮೃದ್ಧಿ

ಕನ್ನಡದಲ್ಲಿ ಮಾತನಾಡುವಾಗ, ನಮ್ಮ ಭಾಷೆಯ ಶ್ರೇಷ್ಠತೆಯನ್ನು, ಶ್ರುತಿ ಮತ್ತು ರಾಗವನ್ನು ನಾವು ಅನುಭವಿಸುತ್ತೇವೆ. ಯಾರೊಂದಿಗೇ ನೀವು ಕನ್ನಡದಲ್ಲಿ ಮಾತನಾಡಿದರೂ ಅದರ ಆತ್ಮೀಯತೆಯೇ ಬೇರೆ. ಕವಿತೆಗಳು, ದಾಸೋಹದ ಪರಂಪರೆ, ಮತ್ತು ಮೌಲಿಕ ವಿಚಾರಗಳನ್ನು ಹೊಂದಿರುವ ನಮ್ಮ ಕನ್ನಡ ನಮ್ಮ ಹೆಮ್ಮೆ. ವಚನ ಸಾಹಿತ್ಯದಿಂದ ಹಿಡಿದು ಎಲ್ಲ ಮೌಲ್ಯಗಳನ್ನು ನಮ್ಮ ಕನ್ನಡ ಹೊಂದಿದೆ.

ಕವಿಶ್ರೇಷ್ಠರು ಹೇಳಿದ ಎಲ್ಲ ವಿಷಯಗಳು ನಮ್ಮ ಕನ್ನಡದಲ್ಲಿ ಕಾಲಕಾಲಕ್ಕೂ ಹೊಂದುವಂತಿದೆ. ಕವಿಗಳು ತಮ್ಮ ಸಾಹಿತ್ಯದಿಂದ ಕನ್ನಡವನ್ನು ಸಮೃದ್ಧಗೊಳಿಸಿದ್ದಾರೆ. ನಾವು ಅದನ್ನು ಉಳಿಸಿಕೊಂಡು ಹೋದರೂ ಸಾಕು ನಮ್ಮಲ್ಲಿ ಸಾಕಷ್ಟಿದೆ ಕನ್ನಡದ ಆಸ್ತಿ. ಭಾರತೀಯ ಶಾಸ್ತ್ರೀಯ ನೃತ್ಯ, ಸಂಗೀತ, ಮತ್ತು ಹಬ್ಬಗಳು ಕನ್ನಡದ ಪರಂಪರೆಯ ಸಂಪೂರ್ಣ ಭಾಗವಾಗಿವೆ.

ಇಂದು, ಕನ್ನಡವನ್ನು ಉಳಿಸುವುದು ಮತ್ತು ಅಭಿವೃದ್ಧಿಪಡಿಸುವುದು ನಮ್ಮೆಲ್ಲರ ಹೊಣೆಗಾರಿಕೆ. ಇತರ ಭಾಷೆಗಳಿಗೆ ಬೆಂಬಲ ನೀಡಿದಂತೆ, ಕನ್ನಡಕ್ಕೆ ಸಹ ಪ್ರೀತಿ ಮತ್ತು ಗೌರವವನ್ನು ನೀಡುವುದು ಮುಖ್ಯವಾಗಿದೆ. ಕನ್ನಡವನ್ನು ಮುಂದಿನ ತಲೆಮಾರಿಗೆ ಶ್ರೇಷ್ಠವಾಗಿ ಹಿರಿಯರು ನಮಗೆ ಹೇಗೆ ನೀಡಿದ್ದರೋ ಹಾಗೇ ನಾವು ನೀಡುವುದು ತುಂಬಾ ಮುಖ್ಯ. ಹಳೆಗನ್ನಡದ ಸೊಗಡನ್ನು ನಾವು ನಿತ್ಯ ಜೀವನದಲ್ಲಿ ಹೇಗೆ ಕಳೆದುಕೊಂಡಿದ್ದೇವೆ. ಅದೇ ರೀತಿ ಈಗಿನ ಆಡುಭಾಷೆ ಕನ್ನಡವನ್ನಾದರೂ ಮುಂದಿನ ಪೀಳೀಗೆಗೆ ಉಳಿಸಬೇಕು ಎಂಬುದನ್ನು ಮನದಟ್ಟು ಮಾಡಿಕೊಳ್ಳಿ.

ಒಂದು ಬೇರೆ ಭಾಷೆ ಪದ ಬಳಕೆ ಇಲ್ಲದ ಕಲೆ ಯಕ್ಷಗಾನ

ಕವಿಗಳು, ಲೇಖಕರು, ಮತ್ತು ಕಲಾವಿದರು - ಹಾಡು, ನೃತ್ಯ ಕಲಾ ಪ್ರಕಾರಗಳಲ್ಲೂ ಇನ್ನು ತುಂಬಾ ಜೀವಂತವಾಗಿಟ್ಟಿದ್ದಾರೆ. ಒಂದು ಬೇರೆ ಭಾಷೆ ಪದ ಬಳಕೆ ಇಲ್ಲದ ಕಲೆ ಯಕ್ಷಗಾನವಾಗಿದೆ. ಕನ್ನಡದ ಉಳಿವಿಗಾಗಿ ಈ ರೀತಿಯ ಕಲೆಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವ ನಮ್ಮ ಕರ್ತವ್ಯವನ್ನು ನಾವು ಮಾಡಬೇಕಿದೆ. ಇನ್ನು ಜನಪದವು ಕನ್ನಡಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಿದೆ.

ಜನಪದ ಕನ್ನಡ ಸಾಹಿತ್ಯವು ಭಾರತೀಯ ಸಾಹಿತ್ಯದ ಒಂದು ವಿಶಿಷ್ಟ ಅಂಗವಾಗಿದೆ.ಹಳ್ಳಿಗಳಲ್ಲಿನ ಜನರ ಸಾಂಸ್ಕೃತಿಕ ಜೀವನ, ನಾಡಿನ ಪರಂಪರೆ, ಮತ್ತು ಪ್ರಾಕೃತಿಕ ಸೌಂದರ್ಯವನ್ನು ಪದಗಳಲ್ಲಿ ಪೋಣಿಸಿ ಬಾಯಿಂದ ಬಾಯಿಗೆ ಹಾಡಿಕೊಂಡು ಬರಲಾದ ಕನ್ನಡದ ಹಾಡುಗಳು ಎಷ್ಟೋ ಇದೆ. ಇವೆಲ್ಲವೂ ನಮ್ಮ ನಾಡಿನ ಮತ್ತು ನಮ್ಮ ಭಾಷೆಯನ್ನು ತುಂಬಾ ಶ್ರೀಮಂತಗೊಳಿಸುತ್ತದೆ.

"ಕನ್ನಡ ಎನೆ ಕುಣಿದಾಡುವುದೆನ್ನೆದೆ, ಕನ್ನಡ ಎನೆ ಕಿವಿ ನಿಮಿರುವುದು" ಕುವೆಂಪು ಅವರು ಬರೆದ ಈ ಸಾಲುಗಳು ಎಷ್ಟು ಅರ್ಥಗರ್ಭಿತವಾಗಿದೆ ಗಮನಿಸಿ. ಎಲ್ಲರೂ ಮೊದಲ ಸಾಲೊಂದನ್ನೇ ನೆನಪಿಸಿಕೊಳ್ಳುತ್ತಾರೆ. ಆದರೆ ಪೂರ್ತಿಯಾಗಿ ಓದಿದರೆ ಎಷ್ಟು ಆನಂದ ಸಿಗುತ್ತದೆ ನೋಡಿ.

ಕುವೆಂಪು ಕನ್ನಡ ಕಂಪು

ಕನ್ನಡ ಎನೆ ಕುಣಿದಾಡುವುದೆನ್ನೆದೆ

ಕನ್ನಡ ಎನೆ ಕಿವಿ ನಿಮಿರುವುದು ||

ಕಾಮನ ಬಿಲ್ಲನು ಕಾಣುವ ಕವಿಯೊಳು

ತೆಕ್ಕನೆ ಮನ ಮೈ ಮರೆಯುವುದು

ಕನ್ನಡ ಕನ್ನಡ ಹ! ಸವಿಗನ್ನಡ

ಕನ್ನಡದಲಿ ಹರಿ ಬರೆಯುವನು

ಕನ್ನಡದಲಿ ಹರ ತಿರಿಯುವನು

ಕನ್ನಡದಲ್ಲಿಯೇ ಬಿನ್ನಹ ಗೈದೊಡೆ

ಹರಿ ವರಗಳ ಮಳೆ ಕರೆಯುವನು

ಹರ ಮುರಿಯದೆ ತಾ ಪೊರೆಯುವನು

ಬಾಳುಹುದೇತಕೆ ? ನುಡಿ, ಎಲೆ ಜೀವ

ಸಿರಿಗನ್ನದದಲಿ ಕವಿತೆಯ ಹಾಡೆ

ಸಿರಿಗನ್ನಡದೇಳಿಗೆಯನು ನೋಡೆ

ಕನ್ನಡ ತಾಯಿಯ ಸೇವೆಯ ಮಾಡೆ

-ಕುವೆಂಪು

ಬೇರೆ ಭಾಷೆಗಳನ್ನು ದ್ವೇಷಿಸುವುದು ಬೇಡ. ಆದರೆ ನಮ್ಮ ಭಾಷೆಯನ್ನು ಪ್ರೀತಿಸೋಣ

ಇದನ್ನೂ ಓದಿ: ರಾಮಾಯಣ ಕಥೆಗಳು: ಮಹರ್ಷಿ ವಾಲ್ಮೀಕಿ ವ್ಯಾಧನನ್ನು ಶಪಿಸಿದ್ದು ಏಕೆ? ರಾಮಾಯಣ ಕುರಿತಂತೆ ವಾಲ್ಮೀಕಿಗೆ ಬ್ರಹ್ಮನು ಹೇಳಿದ್ದೇನು?

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ