logo
ಕನ್ನಡ ಸುದ್ದಿ  /  ಜೀವನಶೈಲಿ  /  Maha Lakshmi Vrata Puja Time : ಇಂದಿನಿಂದ ಮಹಾಲಕ್ಷ್ಮಿ ವ್ರತ; ಪೂಜಾ ಸಮಯ, ಕಥೆ ಇಲ್ಲಿದೆ

Maha Lakshmi Vrata Puja Time : ಇಂದಿನಿಂದ ಮಹಾಲಕ್ಷ್ಮಿ ವ್ರತ; ಪೂಜಾ ಸಮಯ, ಕಥೆ ಇಲ್ಲಿದೆ

HT Kannada Desk HT Kannada

Sep 03, 2022 03:38 PM IST

google News

ಮಹಾಲಕ್ಷ್ಮಿ

    • Maha Lakshmi Vrata 2022 ಶ್ರೀ ಮಹಾಲಕ್ಷ್ಮಿ ವ್ರತವು ಭಾದ್ರಪದ ಶುಕ್ಲ ಅಷ್ಟಮಿಯ ದಿನದಿಂದ ಪ್ರಾರಂಭವಾಗುತ್ತದೆ. ಇದು ಹದಿನಾರು ದಿನಗಳ ಆಚರಣೆ. ಈ ಉಪವಾಸ ವ್ರತಾಚರಣೆಯಲ್ಲಿ ತಾಯಿ ಲಕ್ಷ್ಮಿ ದೇವಿಯನ್ನು ಶಾಸ್ತ್ರೋಕ್ತವಾಗಿ ಪೂಜಿಸಲಾಗುತ್ತದೆ.
ಮಹಾಲಕ್ಷ್ಮಿ
ಮಹಾಲಕ್ಷ್ಮಿ (Livehindustan)

ಶ್ರೀ ಮಹಾಲಕ್ಷ್ಮಿ ವ್ರತವು ಭಾದ್ರಪದ ಶುಕ್ಲ ಅಷ್ಟಮಿಯ ದಿನದಿಂದ ಪ್ರಾರಂಭವಾಗುತ್ತದೆ. ಇದು ಹದಿನಾರು ದಿನಗಳ ವ್ರತಾಚರಣೆ. ಈ ಉಪವಾಸ ವ್ರತಾಚರಣೆಯಲ್ಲಿ ಲಕ್ಷ್ಮಿ ದೇವಿಯನ್ನು ಶಾಸ್ತ್ರೋಕ್ತವಾಗಿ ಪೂಜಿಸಲಾಗುತ್ತದೆ.

ಶಾಸ್ತ್ರಗಳ ಪ್ರಕಾರ ಈ ಉಪವಾಸಕ್ಕೆ ವಿಶೇಷ ಮಹತ್ವವಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಮಹಾಲಕ್ಷ್ಮಿ ವ್ರತವನ್ನು ಆಚರಿಸುವುದರಿಂದ ತಾಯಿ ಮಹಾಲಕ್ಷ್ಮಿಯ ಕೃಪೆಯಿಂದ ಎಲ್ಲ ಇಷ್ಟಾರ್ಥಗಳು ಈಡೇರುತ್ತವೆ. ಮಹಾಲಕ್ಷ್ಮಿ ಉಪವಾಸವು ಜೀವನದ ಎಲ್ಲ ಸಮಸ್ಯೆಗಳನ್ನು, ಸಂಕಷ್ಟಗಳನ್ನು ದೂರ ಮಾಡುತ್ತದೆ.

ಈ ಉಪವಾಸದ ಅವಧಿಯಲ್ಲಿ ವ್ರತಾನುಷ್ಠಾನದಲ್ಲಿರುವವರು ಆಹಾರವನ್ನು ತೆಗೆದುಕೊಳ್ಳುವುದಿಲ್ಲ. ಮಹಾಲಕ್ಷ್ಮಿ ವ್ರತವನ್ನು 16 ನೇ ದಿನದಂದು ಆಚರಿಸಲಾಗುತ್ತದೆ. ಈ ಉಪವಾಸವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.

ಶಾಸ್ತ್ರೋಕ್ತವಾಗಿ ಮತ್ತು ಸುವ್ಯವಸ್ಥಿತವಾಗಿ ಪೂಜೆ ಮಾಡುವುದರಿಂದ ಸುಖ, ಸಮೃದ್ಧಿ ಮತ್ತು ಸಂಪತ್ತು ದೊರೆಯುತ್ತದೆ ಎಂಬುದು ನಂಬಿಕೆ. ಮಹಿಳೆಯರು ಈ ಉಪವಾಸವನ್ನು ಆಚರಿಸುವ ಮನೆಯಲ್ಲಿ ಕುಟುಂಬ ಶಾಂತಿ ಯಾವಾಗಲೂ ಇರುತ್ತದೆ. ನೆಮ್ಮದಿಯೂ ನೆಲೆಸುವುದೆಂಬ ನಂಬಿಕೆ ಇದೆ.

ಮಹಾಲಕ್ಷ್ಮಿ ಉಪವಾಸದ ದಿನಾಂಕ ಮತ್ತು ಮಂಗಳಕರ ಸಮಯ-

ಶನಿವಾರ, ಸೆಪ್ಟೆಂಬರ್ 3 ರಂದು

ಚಂದ್ರೋದಯ ಸಮಯ - 12:35 PM

ಮಹಾಲಕ್ಷ್ಮಿ ವ್ರತವು ಶನಿವಾರ, ಸೆಪ್ಟೆಂಬರ್ 3 ರಂದು ಪ್ರಾರಂಭ

ಶನಿವಾರ, ಸೆಪ್ಟೆಂಬರ್ 17 ರಂದು ಮಹಾಲಕ್ಷ್ಮಿ ವ್ರತ ಪೂರ್ಣ

ಸಂಪೂರ್ಣ ಮಹಾಲಕ್ಷ್ಮಿ ವ್ರತದ ದಿನಗಳು - 15

ಅಷ್ಟಮಿ ತಿಥಿಯಂದು ಮಹಾಲಕ್ಷ್ಮಿ ವ್ರತ ಪ್ರಾರಂಭವಾಗುತ್ತದೆ - ಅಂದರೆ ಸೆಪ್ಟೆಂಬರ್ 03ರ ಮಧ್ಯಾಹ್ನ 12:28 ಕ್ಕೆ

ಅಷ್ಟಮಿ ತಿಥಿ ಕೊನೆಗೊಳ್ಳುವುದು- ಸೆಪ್ಟೆಂಬರ್ 04, 2022 ಬೆಳಗ್ಗೆ 10:39 ಕ್ಕೆ

ಮಹಾಲಕ್ಷ್ಮಿ ಉಪವಾಸದ ಕಥೆ ಹೀಗಿದೆ ಗಮನಿಸಿ

ಒಂದು ಹಳ್ಳಿಯಲ್ಲಿ ಒಬ್ಬ ಬಡ ಬ್ರಾಹ್ಮಣ ವಾಸಿಸುತ್ತಿದ್ದ. ಆತ ಪ್ರತಿದಿನ ವಿಷ್ಣುವನ್ನು ಶಾಸ್ತ್ರೋಕ್ತವಾಗಿ ಪೂಜಿಸುತ್ತಿದ್ದರು. ಒಂದು ದಿನ ಆತನ ಭಕ್ತಿಯಿಂದ ಪ್ರಸನ್ನನಾದ ವಿಷ್ಣುವು ಆತನಿಗೆ ಕಾಣಿಸಿಕೊಂಡನು. ವರವನ್ನು ಕೇಳುವಂತೆ ಬ್ರಾಹ್ಮಣನಿಗೆ ಹೇಳಿದ. ಆಗ ಬ್ರಾಹ್ಮಣನು ತನ್ನ ಮನೆಯು ತಾಯಿ ಲಕ್ಷ್ಮಿಯ ವಾಸಸ್ಥಾನವಾಗಬೇಕೆಂಬ ಬಯಕೆಯನ್ನು ವ್ಯಕ್ತಪಡಿಸಿದನು.

ಆಗ ಮಹಾವಿಷ್ಣುವು ಬ್ರಾಹ್ಮಣನಿಗೆ ಲಕ್ಷ್ಮಿಯನ್ನು ಒಲಿಸುವ ಮಾರ್ಗೋಪಾಯವನ್ನು ಹೇಳಿದ. ಒಬ್ಬ ಮಹಿಳೆ ದೇವಸ್ಥಾನದ ಮುಂದೆ ಬರುತ್ತಾಳೆ. ಆಕೆ ಅಲ್ಲಿಗೆ ಬಂದು ಬಾಗಿಲನ್ನು ತಟ್ಟುತ್ತಾಳೆ. ನೀವು ಆಕೆಯನ್ನು ನಿಮ್ಮ ಮನೆಗೆ ಬರಲು ಆಹ್ವಾನಿಸಬೇಕು. ಆಕೆಯೇ ತಾಯು ಲಕ್ಷ್ಮಿ ಎಂದು ವಿಷ್ಣು ಹೇಳಿದನು.

ತಾಯಿ ಲಕ್ಷ್ಮಿಯು ನಿನ್ನ ಮನೆಗೆ ಬಂದಾಗ, ಆಗ ಮನೆಯು ಹಣ ಮತ್ತು ಧಾನ್ಯಗಳಿಂದ ತುಂಬಿರುತ್ತದೆ ಎಂದು ಹೇಳುತ್ತಾ ಮಹಾವಿಷ್ಣುವು ಅಂತರ್ದಾನನಾದನು. ಮರುದಿನ ಬ್ರಾಹ್ಮಣನು ಮುಂಜಾನೆ ದೇವಸ್ಥಾನದ ಬಳಿ ಕುಳಿತನು. ತಾಯಿ ಲಕ್ಷ್ಮಿ ಆಹಾರ ಸೇವನೆಗೆ ಬಂದಾಗ, ಬ್ರಾಹ್ಮಣ ಅವಳನ್ನು ಮನೆಗೆ ಬರುವಂತೆ ವಿನಂತಿಸಿದನು. ಬ್ರಾಹ್ಮಣನ ಮಾತನ್ನು ಕೇಳಿದ ನಂತರ ಮಾತಾ ಲಕ್ಷ್ಮಿಯು ವಿಷ್ಣುವಿನ ಆಜ್ಞೆಯ ಮೇರೆಗೆ ಇದು ಸಂಭವಿಸಿತು ಎಂದು ಅರ್ಥಮಾಡಿಕೊಂಡಳು.

ನಾನು ನಿನ್ನೊಂದಿಗೆ ಬರುತ್ತೇನೆ. ಆದರೆ ನೀನು ಮೊದಲು ಮಹಾಲಕ್ಷ್ಮಿ ವ್ರತವನ್ನು ಆಚರಿಸಬೇಕು ಎಂದು ತಾಯಿ ಲಕ್ಷ್ಮಿ ಬ್ರಾಹ್ಮಣನಿಗೆ ಹೇಳಿದಳು. 16 ದಿನ ಉಪವಾಸ ಮಾಡಿ 16ನೇ ದಿನ ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸಿದರೆ ನಿಮ್ಮ ಇಷ್ಟಾರ್ಥ ಸಿದ್ಧಿಸುತ್ತದೆ ಎಂದು ಹೇಳಿದಳು.

ಬ್ರಾಹ್ಮಣನು ತಾಯಿ ಲಕ್ಷ್ಮಿ ಹೇಳಿದಂತೆಯೇ ವ್ರತವನ್ನು ಮಾಡಿದನು. ಉತ್ತರಾಭಿಮುಖವಾಗಿ ಮಾ ಲಕ್ಷ್ಮಿಯನ್ನು ಕರೆದನು. ಇದಾದ ನಂತರ ತಾಯಿ ಲಕ್ಷ್ಮಿಯು ತನ್ನ ಭರವಸೆಯನ್ನು ಈಡೇರಿಸಿದಳು. ಅಂದಿನಿಂದ ಮಹಾಲಕ್ಷ್ಮಿ ವ್ರತದ ಸಂಪ್ರದಾಯ ಪ್ರಾರಂಭವಾಯಿತು ಎಂಬುದು ನಂಬಿಕೆ.

ಮಹಾಲಕ್ಷ್ಮಿ ವ್ರತಾಚರಣೆ ಅನುಷ್ಠಾನದ ವಿಚಾರವಾಗಿ ಪ್ರಾಥಮಿಕ ಮಾಹಿತಿಯನ್ನಷ್ಟೆ ಇಲ್ಲಿ ಒದಗಿಸಲಾಗಿದೆ. ಶಾಸ್ತ್ರೋಕ್ತವಾದ ಆಚರಣೆಗೆ ಧರ್ಮಕರ್ಮ ವಿಭಾಗದ ಪರಿಣತರನ್ನು ಸಂಪರ್ಕಿಸಿ, ಅವರ ಮಾರ್ಗದರ್ಶನ ಪಡೆಯಿರಿ.

ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್‌ ಮತ್ತು ಟ್ವಿಟರ್‌ ನಲ್ಲಿ ಫಾಲೋಮಾಡಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ