logo
ಕನ್ನಡ ಸುದ್ದಿ  /  ಜೀವನಶೈಲಿ  /   History Behind Udupi Food:ಉಡುಪಿ ದೇವಸ್ಥಾನದ ಊಟ ಏಕಿಷ್ಟು ರುಚಿ, ಫೇಮಸ್‌..ಇದರ ಹಿಂದಿದೆ ಮಹಾಭಾರತದ ಕಥೆ...!

History Behind Udupi Food:ಉಡುಪಿ ದೇವಸ್ಥಾನದ ಊಟ ಏಕಿಷ್ಟು ರುಚಿ, ಫೇಮಸ್‌..ಇದರ ಹಿಂದಿದೆ ಮಹಾಭಾರತದ ಕಥೆ...!

Rakshitha Sowmya HT Kannada

Sep 29, 2022 01:22 PM IST

google News

ಉಡುಪಿ ದೇವಸ್ಥಾನದ ಊಟದ ಹಿಂದಿನ ಕಥೆ

    • ನರೇಶ ಮಹಾರಾಜನ ಮಾತುಗಳನ್ನು ಕೇಳಿದ ಶ್ರೀಕೃಷ್ಣ, ಎರಡೂ ಕಡೆಯಿಂದ ಸುಮಾರು 50 ಲಕ್ಷಕ್ಕೂ ಹೆಚ್ಚು ಸೈನಿಕರು ಭಾಗಿಯಾಗುತ್ತಾರೆ. ಯಾರಿಗೂ ಸಮಸ್ಯೆ ಆಗದಂತೆ ಊಟದ ವ್ಯವಸ್ಥೆ ಮಾಡುವಂತೆ ಸಲಹೆ ನೀಡುತ್ತಾರೆ. ಕುರುಕ್ಷೇತ್ರ ಯುದ್ಧ ಆರಂಭವಾಗುತ್ತಿದ್ದಂತೆ ನರೇಶ ಮಹಾರಾಜ ತಾನು ಶ್ರೀಕೃಷ್ಣನಿಗೆ ಮಾತು ನೀಡದಂತೆ ಸೈನಿಕರಿಗೆ ಊಟದ ವ್ಯವಸ್ಥೆ ಮಾಡುತ್ತಾನೆ.
ಉಡುಪಿ ದೇವಸ್ಥಾನದ ಊಟದ ಹಿಂದಿನ ಕಥೆ
ಉಡುಪಿ ದೇವಸ್ಥಾನದ ಊಟದ ಹಿಂದಿನ ಕಥೆ

ದೇವಸ್ಥಾನಕ್ಕೆ ಹೋದರೆ, ಅಲ್ಲಿ ಸ್ವಲ್ಪವಾದ್ರೂ ಪ್ರಸಾದ ದೊರೆತರೆ ಸಾಕು ಎಂದುಕೊಳ್ಳುತ್ತೇವೆ. ಬಹುತೇಕ ದೇವಸ್ಥಾನಗಳಲ್ಲಿ ಈಗ ಭಕ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಆದರೆ ದೊಡ್ಡ ದೊಡ್ಡ ದೇವಸ್ಥಾನಗಳಲ್ಲಿ ಬಹಳ ಹಿಂದಿನಿಂದಲೂ ಊಟದ ವ್ಯವಸ್ಥೆ ಮಾಡುತ್ತಾ ಬರಲಾಗಿದೆ. ಅದರಲ್ಲೂ ದೇವಸ್ಥಾನದ ಊಟ ಸೇವಿಸಿದರೆ ನಮ್ಮ ಜೀವನ ಎಷ್ಟು ಧನ್ಯ ಅನ್ನಿಸದೆ ಇರದು.

ಸಾಮಾನ್ಯವಾಗಿ ದೇವಸ್ಥಾನಗಳ ಊಟ ಬಹಳ ರುಚಿಯಾಗಿರುತ್ತದೆ. ದೇವರ ಆಶಿರ್ವಾದ, ಆ ಸ್ಥಳದ ಮಹಿಮೆಯಿಂದ ಊಟಕ್ಕೆ ಅಷ್ಟು ರುಚಿ ಇರುತ್ತದೆ ಎಂದು ಹೇಳಿದರೂ ತಪ್ಪಾಗುವುದಿಲ್ಲ. ಒಂದೊಂದು ದೇವಸ್ಥಾನದ ಬಗ್ಗೆ ಒಂದೊಂದು ರೋಚಕ ಕಥೆ ಇದೆ. ಹಾಗೇ ಉಡುಪಿ ದೇವಸ್ಥಾನದ ಊಟದ ಹಿಂದೆ ಕೂಡಾ ಒಂದು ಸ್ವಾರಸ್ಯಕರ ಕಥೆ ಇದೆ. ಪ್ರಪಂಚ ಈಗಾಗಲೇ 2 ಮಹಾಯುದ್ಧಗಳನ್ನು ನೋಡಿದೆ. ಆದರೆ ಇವೆಲ್ಲಕ್ಕಿಂತ ನಡೆದ ಮಹಾಭಾರತ ಯುದ್ಧವು ವಿಶ್ವದ ಮೊದಲ ಯುದ್ಧವಾಗಿದೆ.

ಇನ್ನು ಆಗಿನ ರಾಜರೆಲ್ಲಾ ಪಾಂಡವರು ಅಥವಾ ಕೌರವರಿಗೆ ತಮ್ಮ ಸೈನ್ಯದ ಮೂಲಕ ಬೆಂಬಲ ನೀಡುತ್ತಿದ್ದರು. ಆದರೆ ಉಡುಪಿಯ ನರೇಶ ಮಹಾರಾಜ ಮಾತ್ರ ಯಾರಿಗೂ ಬೆಂಬಲ ನೀಡದಿರಲು ನಿರ್ಧರಿಸುತ್ತಾನೆ. ಆತನ ಆಲೋಚನೆಯೇ ಬೇರೆ ಆಗಿತ್ತು. ಭಗವಾನ್‌ ಶ್ರೀಕೃಷ್ಣನನ್ನು ಭೇಟಿ ಮಾಡಿದ ನರೇಶ ಮಹಾರಾಜ, ಎರಡೂ ಕಡೆಯವರೂ ತಾವು ಗೆಲ್ಲಬೇಕೆಂದು ಯೋಚನೆ ಮಾಡುತ್ತಿದ್ದಾರೆಯೇ ಹೊರತು, ಯಾರೊಬ್ಬರೂ ಯುದ್ಧದಲ್ಲಿ ಭಾಗಿಯಾಗುವ ಸೈನಿಕರಿಗೆ ಊಟದ ವ್ಯವಸ್ಥೆ ಮಾಡುತ್ತಿಲ್ಲ, ನೀವು ಅಪ್ಪಣೆ ನೀಡುವುದಾದರೆ ನಾನು ನನ್ನ ಸೈನ್ಯದ ಕಡೆಯಿಂದ ಕೌರವರು ಹಾಗೂ ಪಾಂಡವರ ಕಡೆಯ ಸೈನಿಕರಿಗೆ ಊಟದ ವ್ಯವಸ್ಥೆ ಮಾಡುತ್ತೇನೆ ಎನ್ನುತ್ತಾನೆ.

<p>ಉಡುಪಿ ಮಠ</p>

ನರೇಶ ಮಹಾರಾಜನ ಮಾತುಗಳನ್ನು ಕೇಳಿದ ಶ್ರೀಕೃಷ್ಣ, ಎರಡೂ ಕಡೆಯಿಂದ ಸುಮಾರು 50 ಲಕ್ಷಕ್ಕೂ ಹೆಚ್ಚು ಸೈನಿಕರು ಭಾಗಿಯಾಗುತ್ತಾರೆ. ಯಾರಿಗೂ ಸಮಸ್ಯೆ ಆಗದಂತೆ ಊಟದ ವ್ಯವಸ್ಥೆ ಮಾಡುವಂತೆ ಸಲಹೆ ನೀಡುತ್ತಾರೆ. ಕುರುಕ್ಷೇತ್ರ ಯುದ್ಧ ಆರಂಭವಾಗುತ್ತಿದ್ದಂತೆ ನರೇಶ ಮಹಾರಾಜ ತಾನು ಶ್ರೀಕೃಷ್ಣನಿಗೆ ಮಾತು ನೀಡದಂತೆ ಸೈನಿಕರಿಗೆ ಊಟದ ವ್ಯವಸ್ಥೆ ಮಾಡುತ್ತಾನೆ. ಪ್ರತಿದಿನವೂ ಊಟ ಹೆಚ್ಚು-ಕಡಿಮೆ ಆಗದಂತೆ ತಾನೇ ಮುಂದೆ ನಿಂತು ಊಟದ ವ್ಯವಸ್ಥೆ ಮಾಡುತ್ತಿದ್ದನು. ಸೈನಿಕರು ಯುದ್ಧದಲ್ಲಿ ಮರಣ ಅಪ್ಪುತ್ತಿದ್ದರಿಂದ ದಿನ ಕಳೆದಂತೆ ಸೈನಿಕರು ಕಡಿಮೆಯಾಗುತ್ತಿದ್ದರು.

ಕುರುಕ್ಷೇತ್ರ ಯುದ್ಧ ಮುಗಿದು 18ನೇ ದಿನ ಪಾಂಡವರು ಪಟ್ಟಕ್ಕೆ ಬರುತ್ತಾರೆ. ಅಷ್ಟೂ ದಿನಗಳ ಕಾಲ ಪಾಂಡವರಿಗೆ, ಸೈನಿಕರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದ ವಿಚಾರವಾಗಿ ಬಹಳ ಕುತೂಹಲ ಕಾಡುತ್ತಿತ್ತು. ಕೊನೆಗೂ ಯುದಿಷ್ಠಿರ, ನರೇಶ ಮಹಾರಾಜನ ಬಳಿ ಹೋಗಿ ಇಷ್ಟೂ ದಿನಗಳ ಕಾಲ ಒಂದು ಅಗುಳು ಕಡಿಮೆ ಆಗದಂತೆ, ಹೆಚ್ಚೂ ಆಗದಂತೆ ಹೇಗೆ ನಿಭಾಯಿಸಿದಿರಿ..? ಎಂದು ಪ್ರಶ್ನಿಸುತ್ತಾನೆ. ಇದಕ್ಕೆ ನರೇಶ ಮಹಾರಾಜ ನೀಡಿದ ಉತ್ತರ ಕೇಳಿ ಪಾಂಡವರಿಗೆ ಆಶ್ಚರ್ಯ ಆಗುತ್ತದೆ.

ನಿಮ್ಮ ಗೆಲುವಿನ ಹಿಂದೆ ಶ್ರೀಕೃಷ್ಣ ಇರುವಂತೆ ನಾನು ಮಾಡುತ್ತಿದ್ದ ಊಟದ ವ್ಯವಸ್ಥೆಗೂ ಶ್ರೀಕೃಷ್ಣನೇ ಕಾರಣ. ಪ್ರತಿದಿನ ನಾವು ಶ್ರೀಕೃಷ್ಣನಿಗೆ ಕಡಲೆಬೀಜ ನೀಡುತ್ತಿದ್ದೆವು. ಅದನ್ನು ಕೊಡುವ ಮುನ್ನ, ಹಾಗೂ ಶ್ರೀಕೃಷ್ಣ ಅದನ್ನು ತಿಂದ ನಂತರ ಎಷ್ಟು ತಿಂದಿದ್ದಾರೆ ಎಂದು ಎಣಿಸುತ್ತಿದ್ದೆವು. ಶ್ರೀಕೃಷ್ಣ ತಿಂದ ಕಡಲೆಬೀಜದ ಸಾವಿರ ಪಟ್ಟು ಸೈನಿಕರು ಮರುದಿನ ಯುದ್ಧದಲ್ಲಿ ಸಾಯುತ್ತಿದ್ದರು. ನಾವು ಪ್ರತಿ ಬಾರಿ ಕೃಷ್ಣ ತಿಂದ ಕಡಲೆಬೀಜದ ಸಾವಿರ ಪಟ್ಟು ಸೈನಿಕರಿಗೆ ಕಡಿಮೆಯಾಗಿ ಅಡುಗೆ ತಯಾರಿಸುತ್ತಿದ್ದೆವು ಎಂದು ನರೇಶ ಮಹಾರಾಜ ಹೇಳುತ್ತಾನೆ. ಶ್ರೀಕೃಷ್ಣನ ಚಮತ್ಕಾರ, ನರೇಶ ಮಹಾರಾಜನ ಬುದ್ಧಿವಂತಿಕೆ ಕಂಡು ಪಾಂಡವರು ಬೆರಗಾಗುತ್ತಾರೆ.

ಅಂದಿನಿಂದ ಇಲ್ಲವರೆಗೂ ಉಡುಪಿ ದೇವಸ್ಥಾನ, ಹೋಟೆಲ್‌ಗಳಲ್ಲಿ ಊಟ ಬಹಳ ರುಚಿಯಾಗಿರುತ್ತದೆ. ಉಡುಪಿ ಊಟ ಕೂಡಾ ಬಹಳ ರುಚಿಯಾಗಿರುತ್ತದೆ. ಎಲ್ಲಿಯಾದರೂ ಉಡುಪಿ ಹೋಟೆಲ್‌ ಎಂಬ ಬೋರ್ಡ್‌ ನೋಡಿದರೆ, ಒಂದು ಕಪ್‌ ಕಾಫಿ ಹೀರಿ ಬರೋಣ ಎಂದು ಅನಿಸದೆ ಇರದು. ಆದರೆ ಕೆಲವರು ಹೆಸರಿಗೆ ಮಾತ್ರವಷ್ಟೇ, ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಉಡುಪಿ ಹೋಟೆಲ್‌ ಎಂಬ ಹೆಸರಿಟ್ಟು ಬ್ಯುಸ್ನೆಸ್‌ ಮಾಡಲು ಆರಂಭಿಸಿರುವುದು ಬೇಸರದ ವಿಚಾರ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ