Snacks Recipe: ಇದು ಮಹಾರಾಷ್ಟ್ರದ ಫೇಮಸ್ ಸ್ನಾಕ್ಸ್; ಕೊತ್ತಂಬರಿ ಸೊಪ್ಪು, ಕಡ್ಲೆಹಿಟ್ಟು ಜೊತೆಗೆ ಕೆಲವೇ ಕೆಲವು ಸಾಮಗ್ರಿಗಳು ಸಾಕು
Jul 30, 2023 08:00 PM IST
ಕೊತಿಂಬಿರ್ ವಡಿ ರೆಸಿಪಿ
ಬಹುತೇಕ ಮಂದಿ ಒಂದೇ ರೀತಿಯ ಅಡುಗೆಗೆ ಸ್ಟಿಕ್ ಆನ್ ಆಗಿರುತ್ತಾರೆ. ಆದರೆ ನೀವು ಬೇರೆ ಬೇರೆ ರೆಸಿಪಿಗಳನ್ನು ಕಲಿತುಕೊಂಡರೆ ಆಯಾ ಪ್ರಾಂತ್ಯದ ಆಹಾರ ಪದ್ಧತಿಯನ್ನು ಪರಿಚಯ ಮಾಡಿಕೊಂಡಂತೆ ಆಗುತ್ತದೆ. ಹೊಸ ರುಚಿ ಟೇಸ್ಟ್ ಮಾಡಿದಂತೆ ಕೂಡಾ ಆಗುತ್ತದೆ.
ಕೊತಿಂಬಿರ್ ವಡಿ, ಇದು ಮಹಾರಾಷ್ಟ್ರದ ಸ್ನಾಕ್ಸ್ ರೆಸಿಪಿ. ಕೊತ್ತಂಬರಿ ಸೊಪ್ಪು ಇದಕ್ಕೆ ಬೇಕಾಗಿರುವ ಪ್ರಮುಖ ಇಂಗ್ರೀಡಿಯಂಟ್ಸ್. ಇದರ ಜೊತೆ ಕಡ್ಲೆಹಿಟ್ಟು ಹಾಗೂ ಇನ್ನಿತರ ಸಾಮಗ್ರಿಗಳನ್ನು ಸೇರಿಸಿ ಶ್ಯಾಲೋ ಫ್ರೈ ಮಾಡಿದರೆ ಮುಗಿಯಿತು. ಇದನ್ನು ನೀವು ಪುದೀನಾ ಚಟ್ನಿ ಅಥವಾ ಸಾಸ್‌ನೊಂದಿಗೆ ಸವಿಯಬಹುದು. ಕೊತಿಂಬಿರ್ ವಡಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನ ಹೇಗೆ ನೋಡೋಣ ಬನ್ನಿ.
ಕೊತಿಂಬಿರ್ ವಡಿ ತಯಾರಿಸಲು ಬೇಕಾಗುವ ಸಾಮಗ್ರಿಗಳು
ಕೊತ್ತಂಬರಿ ಸೊಪ್ಪು - 2 ಕಟ್ಟು
ಕಡ್ಲೆಹಿಟ್ಟು - 1 ಕಪ್
ಅಕ್ಕಿ ಹಿಟ್ಟು - 2 ಟೇಬಲ್ ಸ್ಪೂನ್
ಅಚ್ಚ ಖಾರದ ಪುಡಿ - 1 ಟೀ ಸ್ಪೂನ್
ಅರಿಶಿನ - 1/2 ಟೀ ಸ್ಪೂನ್
ಗರಂ ಮಸಾಲೆ - 1/2 ಟೀ ಸ್ಪೂನ್
ಹಸಿಮೆಣಸಿನ ಕಾಯಿ - 2
ಬಿಳಿ ಎಳ್ಳು - 2 ಟೇಬಲ್ ಸ್ಪೂನ್
ನಿಂಬೆ ರಸ - 1 ಟೇಬಲ್ ಸ್ಪೂನ್
ಜೀರ್ಗೆ ಪುಡಿ - 2 ಟೀ ಸ್ಪೂನ್
ಹಿಂಗು - 1/2 ಟೀ ಸ್ಪೂನ್
ಎಣ್ಣೆ - ಕರಿಯಲು
ಉಪ್ಪು - ರುಚಿಗೆ ತಕ್ಕಷ್ಟು
ಕೊತಿಂಬಿರ್ ವಡಿ ತಯಾರಿಸುವ ವಿಧಾನ
ಒಂದು ಪ್ಲೇಟ್‌ನಲ್ಲಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ, ಇದಕ್ಕೆ ಕಡ್ಲೆಹಿಟ್ಟು, ಉಪ್ಪು, ಅಚ್ಚ ಖಾರದ ಪುಡಿ, ಅರಿಶಿನ ಸೇರಿಸಿ
ನಂತರ ಗರಂ ಮಸಾಲೆ, ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ಜೀರ್ಗೆ ಪುಡಿ ಸೇರಿಸಿ ಎಲ್ಲವನ್ನೂ ಮಿಕ್ಸ್ ಮಾಡಿ
ಜೊತೆಗೆ ನಿಂಬೆರಸ, ಹಿಂಗು, ಬಿಳಿ ಎಳ್ಳು , ಅಕ್ಕಿ ಹಿಟ್ಟು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ
ನಂತರ 4-5 ಸ್ಪೂನ್ ಮಾತ್ರ ನೀರು ಸೇರಿಸಿ ಚೆನ್ನಾಗಿ ನಾದಿಕೊಳ್ಳಿ (ಹೆಚ್ಚಿಗೆ ನೀರು ಸೇರಿಸಬೇಡಿ)
1 ಸ್ಪೂನ್ ಎಣ್ಣೆ ಸೇರಿಸಿ ಈ ಮಿಶ್ರಣ ಹಿಟ್ಟಿನ ಹದಕ್ಕೆ ಬರುವರೆಗೂ ನಾದಿಕೊಳ್ಳಿ
ಒಂದು ಪಾತ್ರೆಗೆ ಎಣ್ಣೆ ಸವರಿ ಹಿಟ್ಟಿನ ಮಿಶ್ರಣ ಇಡಿ, ಇದನ್ನು 10 ನಿಮಿಷ ಹಬೆಯಲ್ಲಿ ಬೇಯಿಸಿ
ನಂತರ ಹೊರ ತೆಗೆದು ನಿಮಗಿಷ್ಟವಾದ ಆಕಾರಕ್ಕೆ ಮಾಡಿ ಎಣ್ಣೆಯಲ್ಲಿ ಶ್ಯಾಲೋ ಫ್ರೈ ಮಾಡಿ ಬೇಕಿದ್ದರೆ ಡೀಪ್ ಫ್ರೈ ಕೂಡಾ ಮಾಡಬಹುದು.
ಫ್ರೈ ಆದ ಕೊತಿಂಬಿರ್ ವಡಿಯನ್ನು ಪುದೀನಾ ಚಟ್ನಿ, ಸಾಸ್ ಅಥವಾ ಕೆಚಪ್ ಜೊತೆ ತಿನ್ನಬಹುದು
ವಿಭಾಗ