logo
ಕನ್ನಡ ಸುದ್ದಿ  /  ಜೀವನಶೈಲಿ  /  Ravi Yoga: ಮಕರ ಸಂಕ್ರಾಂತಿಯಂದೇ ರವಿಯೋಗ; ಈ ದಿನ ಸೂರ್ಯನ ಆರಾಧನೆ ಮಾಡಿದ್ರೆ ಇಷ್ಟೆಲ್ಲಾ ಪ್ರಯೋಜನ

Ravi Yoga: ಮಕರ ಸಂಕ್ರಾಂತಿಯಂದೇ ರವಿಯೋಗ; ಈ ದಿನ ಸೂರ್ಯನ ಆರಾಧನೆ ಮಾಡಿದ್ರೆ ಇಷ್ಟೆಲ್ಲಾ ಪ್ರಯೋಜನ

Meghana B HT Kannada

Jan 11, 2024 12:17 PM IST

google News

ಸೂರ್ಯನ ಆರಾಧನೆ (ಸಾಂಧರ್ಬಿಕ ಚಿತ್ರ-pixabay)

    • Ravi Yoga on Makar Sankranti 2024: ಮಕರ ಸಂಕ್ರಾಂತಿಯ ದಿನದಂದು ರವಿಯೋಗವು ಯಾವ ಸಮಯದಲ್ಲಿ ರೂಪುಗೊಳ್ಳುತ್ತದೆ? ಅಂದು ಸ್ನಾನ ಮತ್ತು ದಾನ ಮಾಡಲು ಶುಭ ಸಮಯ ಯಾವುದು? ಈ ದಿನ ಸೂರ್ಯನ ಆರಾಧನೆಯನ್ನು ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ತಿಳಿಯೋಣ..
ಸೂರ್ಯನ ಆರಾಧನೆ (ಸಾಂಧರ್ಬಿಕ ಚಿತ್ರ-pixabay)
ಸೂರ್ಯನ ಆರಾಧನೆ (ಸಾಂಧರ್ಬಿಕ ಚಿತ್ರ-pixabay)

ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಮಕರ ಸಂಕ್ರಾಂತಿ ಹಬ್ಬ ಕೂಡ ಒಂದು. ಈ ಬಾರಿ ಇನ್ನೊಂದು ವಿಶೇಷವೇನೆಂದರೆ ಮಕರ ಸಂಕ್ರಾಂತಿಯಂದು ರವಿ ಯೋಗವು ರೂಪುಗೊಳ್ಳುತ್ತಿದೆ. ಈ ದಿನ ಸೂರ್ಯನ ಆರಾಧನೆಯನ್ನು ಮಾಡುವುದರಿಂದ ನೀವು ಪ್ರಯೋಜನಗಳನ್ನು ಪಡೆಯಬಹುದಾಗಿದೆ.

ಹಿಂದೂ ಪಂಚಾಂಗದ ಪ್ರಕಾರ ಸಂಕ್ರಾಂತಿ ಹಬ್ಬವನ್ನು ಪ್ರತಿ ವರ್ಷ ಪುಷ್ಯ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಆಚರಿಸುತ್ತಾ ಬರಲಾಗಿದೆ. ಹೆಚ್ಚಿನದಾಗಿ ಪ್ರತಿವರ್ಷ ಜನವರಿ 14 ರಂದು ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಬಾರಿ ಸಂಕ್ರಾಂತಿ ಹಬ್ಬ ಜನವರಿ 14 ರ ಬದಲು ಜನವರಿ 15 ರಂದು (ಸೋಮವಾರ) ಬಂದಿದೆ. ಏಕೆಂದರೆ ಜನವರಿ 14 ರಂದು ಮಧ್ಯಾಹ್ನ 2:44 ಕ್ಕೆ ಧನು ರಾಶಿಯಿಂದ ಮಕರ ರಾಶಿಗೆ ಸೂರ್ಯನು ಪ್ರವೇಶಿಸುತ್ತಾನೆ. ಜನವರಿ 14 ರ ಮಧ್ಯಾಹ್ನ 2:44ರ ಮೇಲೆ ಹಬ್ಬ ಆಚರಿಸಲು ಆಗುವುದಿಲ್ಲ. ಹೀಗಾಗಿ ಜನವರಿ 15ರಂದು ಆಚರಿಸಲಾಗುತ್ತದೆ.

ಸೂರ್ಯನ ಆರಾಧನೆ

ಸೂರ್ಯನ ಮಕರ ರಾಶಿಯನ್ನು ಪ್ರವೇಶಿಸುವ ದಿನವನ್ನು ಮಕರ ಸಂಕ್ರಾಂತಿ ಎಂದು ಆಚರಿಸಲಾಗುತ್ತದೆ. ರವಿ ಯೋಗವು ಸೂರ್ಯನ ಆರಾಧನೆಗೆ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಮಕರ ಸಂಕ್ರಾಂತಿ ದಿನದಂದು ಪವಿತ್ರ ನದಿಗಳಲ್ಲಿ ಸ್ನಾನವನ್ನು ಮಾಡಬೇಕು. ನಂತರ, ಸೂರ್ಯ ದೇವರಿಗೆ ನೀರನ್ನು ಅರ್ಪಿಸಬೇಕು. ನೀರಿನಲ್ಲಿ ಕೆಂಪು ಚಂದನ ಮತ್ತು ಕೆಂಪು ಹೂವುಗಳನ್ನು ಸೇರಿಸಿ ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸಿ. ಅದರ ನಂತರ ಕಪ್ಪು ಎಳ್ಳು, ಬೆಲ್ಲ, ಅಕ್ಕಿ, ಗೋಧಿ, ಬಟ್ಟೆ ಇತ್ಯಾದಿಗಳನ್ನು ದಾನ ಮಾಡಬೇಕು.

ಮಕರ ಸಂಕ್ರಾಂತಿಯ ದಿನದಂದು ರವಿಯೋಗವು ಯಾವ ಸಮಯದಲ್ಲಿ ರೂಪುಗೊಳ್ಳುತ್ತದೆ? ಅಂದು ಸ್ನಾನ ಮತ್ತು ದಾನ ಮಾಡಲು ಶುಭ ಸಮಯ ಯಾವುದು? ಈ ದಿನ ಸೂರ್ಯನ ಆರಾಧನೆಯನ್ನು ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ತಿಳಿಯೋಣ..

ರವಿಯೋಗವು ಹೇಗೆ ಮತ್ತು ಯಾವ ಸಮಯದಲ್ಲಿ ರೂಪುಗೊಳ್ಳುತ್ತದೆ?

ಈ ವರ್ಷ ಮಕರ ಸಂಕ್ರಾಂತಿಯಂದು ರವಿಯೋಗವು ರೂಪುಗೊಳ್ಳುತ್ತಿದೆ. ಸೂರ್ಯನ ನಕ್ಷತ್ರದಿಂದ ಚಂದ್ರನ ನಕ್ಷತ್ರವು ನಾಲ್ಕನೇ, ಆರನೇ, ಒಂಬತ್ತನೇ, ಹತ್ತನೇ, ಹದಿಮೂರು ಅಥವಾ ಇಪ್ಪತ್ತನೇ ಸ್ಥಾನದಲ್ಲಿದ್ದಾಗ ರವಿ ಯೋಗವು ರೂಪುಗೊಳ್ಳುತ್ತದೆ. ರವಿಯೋಗವು ಜನವರಿ 15 ರಂದು ಬೆಳಗ್ಗೆ 07:15 ರಿಂದ 08:07 ರವರೆಗೆ ರೂಪುಗೊಳ್ಳುತ್ತದೆ. ಈ ಯೋಗದ ಸಮಯದಲ್ಲಿ ಸೂರ್ಯಸ್ನಾನ, ದಾನ, ಸೂರ್ಯನಿಗೆ ಪೂಜೆ ಮಾಡುವುದರಿಂದ ತುಂಬಾ ಪ್ರಯೋಜನವಾಗುತ್ತದೆ.

ಮಕರ ಸಂಕ್ರಾಂತಿ 2024 ಸ್ನಾನ-ದಾನದ ಮುಹೂರ್ತ

ಜನವರಿ 15 ರಂದು ಮಕರ ಸಂಕ್ರಾಂತಿಯ ದಿನದಂದು, ಮಹಾ ಪುಣ್ಯಕಾಲವು ಬೆಳಿಗ್ಗೆ 07:15 ರಿಂದ 09:00 ರವರೆಗೆ ಇರುತ್ತದೆ. ಈ ಮಹಾ ಮಂಗಳಕರ ಸಮಯದಲ್ಲಿ ಸ್ನಾನ ಮಾಡಿ ದಾನ ಮಾಡುವುದು ಉತ್ತಮ. ರವಿಯೋಗ ರೂಪುಗೊಳ್ಳುವ ಬೆಳಗ್ಗೆ 07:15 ರಿಂದ 08:07 ರವರೆಗೆ ಸ್ನಾನ-ದಾನ ಮಾಡುವುದು ಇನ್ನೂ ಉತ್ತಮ. ಅಥವಾ ಅಂದು ಬ್ರಹ್ಮ ಮುಹೂರ್ತದಲ್ಲಿ ಕೂಡ ಸ್ನಾನ ಮತ್ತು ದಾನ ಮಾಡಬಹುದು. ಅಂದು ಬೆಳಿಗ್ಗೆ 05:27 ರಿಂದ 06:21 ರವರೆಗೆ ಬ್ರಹ್ಮ ಮುಹೂರ್ತ ಇರುತ್ತದೆ.

ಮಕರ ಸಂಕ್ರಾಂತಿ ದಿನದ ರವಿ ಯೋಗದಲ್ಲಿ ಸೂರ್ಯನ ಆರಾಧನೆಯಿಂದ ಇರುವ ಪ್ರಯೋಜನಗಳು:

1. ರವಿ ಯೋಗದಲ್ಲಿ ಸೂರ್ಯನನ್ನು ಆರಾಧಿಸುವುದರಿಂದ ನಿಮ್ಮ ಜೀವನದ ತೊಂದರೆಗಳು ದೂರವಾಗುವುದು. ಸೂರ್ಯನ ಆಶೀರ್ವಾದದಿಂದ, ನಿಮ್ಮ ವಯಸ್ಸು ಮತ್ತು ಆರೋಗ್ಯವು ಹೆಚ್ಚಾಗುತ್ತದೆ. ರೋಗಗಳಿಂದ ಮುಕ್ತಿ ಪಡೆಯಬಹುದು.

2. ರವಿ ಯೋಗದ ಸಮಯದಲ್ಲಿ ನೀವು ಯಾವುದೇ ಕೆಲಸವನ್ನು ಮಾಡಿದರೆ ಅದರಲ್ಲಿ ಯಶಸ್ಸು ಸಿಗುವ ಸಾಧ್ಯತೆಗಳು ಹೆಚ್ಚು. ಈ ಯೋಗದಿಂದ ಎಲ್ಲಾ ದೋಷಗಳು ನಿವಾರಣೆಯಾಗಿ ಕಾರ್ಯ ಯಶಸ್ವಿಯಾಗುತ್ತದೆ.

3. ರವಿಯೋಗದಲ್ಲಿ ಭಾಸ್ಕರ ದೇವರನ್ನು ಪೂಜಿಸುವುದರಿಂದ ಮನೆಯಲ್ಲಿ ಸಂಪತ್ತು ಮತ್ತು ಧಾನ್ಯಗಳಿಗೆ ಕೊರತೆ ಇರುವುದಿಲ್ಲ. ಮಕರ ಸಂಕ್ರಾಂತಿಯಂದು ಸೂರ್ಯದೇವನ ಕೃಪೆಯಿಂದ ಶನಿ ಮಹಾರಾಜನ ಮನೆ ಸಂಪತ್ತಿನಿಂದ ತುಂಬಿತ್ತು ಎಂದು ಹೇಳಲಾಗಿದೆ.

4. ರವಿ ಯೋಗದಲ್ಲಿ ಸೂರ್ಯ ದೇವರನ್ನು ಆರಾಧಿಸುವುದರಿಂದ ವೃತ್ತಿ ಪ್ರಗತಿಗೆ ದಾರಿಯಾಗುತ್ತದೆ. ಉನ್ನತ ಸ್ಥಾನವನ್ನು ಪಡೆಯಬಹುದಾಗಿದೆ.

5. ರವಿಯೋಗದ ಶುಭ ಫಲಗಳನ್ನು ಪಡೆಯಲು ಅಹಂಕಾರದಿಂದ ದೂರವಿರಿ. ತಂದೆ-ತಾಯಿ ಮತ್ತು ಹಿರಿಯರನ್ನು ಅಗೌರವ ಮಾಡಬೇಡಿ. ನಿಯಮಗಳಿಗೆ ವಿರುದ್ಧವಾಗಿ ವರ್ತಿಸಬೇಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ