logo
ಕನ್ನಡ ಸುದ್ದಿ  /  ಜೀವನಶೈಲಿ  /  ದೇವಿಗೆ ಪ್ರಿಯ ಈ ಪಾಯಸಾನ್ನ; ನವರಾತ್ರಿ ನೈವೇದ್ಯಕ್ಕೆ ಮನೆಯಲ್ಲೇ ಸರಳವಾಗಿ ತಯಾರಿಸಿ ಈ ರುಚಿಕರ ರೆಸಿಪಿ

ದೇವಿಗೆ ಪ್ರಿಯ ಈ ಪಾಯಸಾನ್ನ; ನವರಾತ್ರಿ ನೈವೇದ್ಯಕ್ಕೆ ಮನೆಯಲ್ಲೇ ಸರಳವಾಗಿ ತಯಾರಿಸಿ ಈ ರುಚಿಕರ ರೆಸಿಪಿ

Suma Gaonkar HT Kannada

Oct 04, 2024 11:01 AM IST

google News

ದೇವಿಗೆ ಪ್ರಿಯವಾದ ಪಾಯಸಾನ್ನದ ರೆಸಿಪಿ

    • ನವರಾತ್ರಿಯಂದು ಒಂಭತ್ತು ದಿನ ಒಂಭತ್ತು ರೀತಿಯ ಖಾದ್ಯಗಳನ್ನು ಮಾಡಬೇಕಾಗುತ್ತದೆ. ದೇವಿಗೆ ಪ್ರಿಯವಾದ ಈ ಪಾಯಸಾನ್ನ ಮಾಡಿ. ನೈವೇದ್ಯಕ್ಕೆ ಮನೆಯಲ್ಲಿ ಮಾಡಬಹುದಾದ ಮೂರು ರೀತಿಯ ರೆಸಿಪಿಗಳನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ. 
ದೇವಿಗೆ ಪ್ರಿಯವಾದ ಪಾಯಸಾನ್ನದ ರೆಸಿಪಿ
ದೇವಿಗೆ ಪ್ರಿಯವಾದ ಪಾಯಸಾನ್ನದ ರೆಸಿಪಿ

ದೇವಿಗೆ ಪ್ರಿಯವಾದ ಪಾಯಸಾನ್ನವನ್ನು ನೀವೂ ನಿಮ್ಮ ಮನೆಯಲ್ಲಿ ಮಾಡಬಹುದು. ಇದನ್ನು ತಯಾರಿಸುವ ರೆಸಿಪಿ ಕೂಡ ತುಂಬಾ ಸರಳವಾಗಿದೆ. ಪಾಯಸಾನ್ನ ಮಾಡಲು ಬೇಕಾಗುವ ಸಾಮಗ್ರಿಗಳನ್ನು ಹಾಗೂ ಪಾಯಸಾನ್ನವನ್ನು ಮಾಡುವ ವಿಧಾನವನ್ನು ನಾವಿಲ್ಲಿ ನೀಡಿದ್ದೇವೆ. ಪಾಯಸಾನ್ನ ಮಾಡಲು ಬೇಕಾಗುವ ಸಾಮಗ್ರಿಗಳ ಪಟ್ಟಿಯನ್ನು ನಾವಿಲ್ಲಿ ನೀಡಿದ್ದೇವೆ.

ಬಾಸ್ಮತಿ ಅಕ್ಕಿ
ಹಾಲು
ಬೆಲ್ಲ
ಡ್ರೈ ಫ್ರೂಟ್ಸ್
ಜೊತೆಗೆ ಉಪ್ಪು
ಏಲಕ್ಕಿ
ತುಪ್ಪ

ಪಾಯಸಾನ್ನ ಮಾಡುವ ವಿಧಾನ
ಮೊದಲು ಹಾಲನ್ನು ಕುದಿಸಿಕೊಳ್ಳಿ, ಹೆಚ್ಚಿನ ಫ್ಯಾಟ್ ಇರುವ ಹಾಲನ್ನು ಇದಕ್ಕೆ ಬಳಸಿ. ಹಾಲು ಕೆನೆಗಟ್ಟಬೇಕು ಅಲ್ಲಿಯವರೆಗೂ ನೀವು ಚೆನ್ನಾಗಿ ಇದನ್ನು ಕಾಯಿಸುತ್ತಲೇ ಇರಬೇಕು. ಹಾಲು ಕಾಯುವಾಗ ನೀವು ಅಲ್ಲೇ ನಿಂತು ಕೈಯ್ಯಾಡಿಸುತ್ತಾ ಇರಬೇಕು. ಇಲ್ಲವೆಂದರೆ ಹಾಲು ಉಕ್ಕಿ ಬಂದು ಚೆಲ್ಲಿ ಹೋಗುತ್ತದೆ. ಇನ್ನು ಒಂದಷ್ಟು (ಅರ್ಧಕಪ್) ಅಕ್ಕಿಯನ್ನು ನೀವು ತೊಳೆದು ನೆನೆಸಿಟ್ಟುಕೊಳ್ಳಬೇಕು. ಆ ನೆನೆಸಿಟ್ಟುಕೊಂಡ ಅಕ್ಕಿಯನ್ನು ನೀವು ಹಾಲಿನಲ್ಲಿ ಹಾಕಬೇಕು.

ಹಾಲಿನಲ್ಲಿ ಹಾಕಿದ ನಂತರ ಅದರ ಕುದಿಯಲ್ಲಿ ಅಂದರೆ ಹಾಲಿನಲ್ಲೇ ಅಕ್ಕಿ ಅನ್ನವಾಗಬೇಕು. ಈ ರೀತಿ ಆದಾಗ ರುಚಿ ಜಾಸ್ತಿ. ಇದಕ್ಕೆ ಕೆಲವರು ಕಡಲೆ ಬೇಳೆಯನ್ನೂ ಸಹ ಹಾಕುತ್ತಾರೆ. ಅದನ್ನೂ ಅಕ್ಕಿಯ ಜೊತೆ ಬೇಯಿಸುತ್ತಾರೆ. ಅನ್ನವಾದ ನಂತರ ಅದಕ್ಕೆ ಬೆಲ್ಲವನ್ನು ಸೇರಿಸಬೇಕು. ಬೆಲ್ಲ ಸೇರಿಸಿದ ನಂತರ ಡ್ರೈ ಫ್ರೂಟ್ಸ್ ಪುಡಿ ಮಾಡಿಕೊಳ್ಳಬೇಕು. ಡ್ರೈ ಫ್ರೂಟ್ಸ್ ಪುಡಿ ಮಾಡಲು, ಒಂದು ಬಾಣಲೆಯಲ್ಲಿ ತುಪ್ಪ ಹಾಕಿ ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮ್ ಇವುಗಳನ್ನು ಹುರಿದುಕೊಳ್ಳಬೇಕು. ಹುರಿದ ನಂತರ ಅವೆಲ್ಲವನ್ನು ಮಿಕ್ಸಿಯಲ್ಲಿ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಬೇಕು. ತರಿತರಿಯಾಗಿ ರುಬ್ಬಿದ ಮಿಶ್ರಣಕ್ಕೆ ನೀವು ಏಲಕ್ಕಿಯನ್ನು ಸಹ ಸೇರಿಸಿಕೊಳ್ಳಬಹುದು.

ನಂತರ ಆ ಎಲ್ಲಾ ಪುಡಿಯನ್ನು ಬೇಯುತ್ತಿರುವ ಹಾಲು ಮತ್ತು ಅಕ್ಕಿಯಲ್ಲಿ ಹಾಕಿ ಇನ್ನಷ್ಟು ಕುದಿಸಬೇಕು. ಕೆಲವರು ಚಿಟಿಕೆ ಉಪ್ಪನ್ನು ಸಹ ಇದಕ್ಕೆ ಹಾಕುತ್ತಾರೆ. ಇದರಿಂದ ಪಾಯಸದ ರುಚಿ ಇನ್ನು ಹೆಚ್ಚಾಗುತ್ತದೆ. ನೀವು ನಿಮ್ಮ ಮನೆಯಲ್ಲಿ ನೈವೇದ್ಯಕ್ಕಾಗಿ ದೇವಿಗೆ ಪಾಯಸಾನ್ನವನ್ನೇ ನೀಡಿ.

ನೈವೇದ್ಯಕ್ಕೆ ಮಾಡಬಹುದಾದ ಇನ್ನಷ್ಟು ರೆಸಿಪಿಗಳು

ಮೊಸರನ್ನ: ಇದೊಂದು ಸುಲಭವಾಗಿ ಮತ್ತು ಬೇಗ ಮಾಡಬಹುದಾದ ತಿಂಡಿ. ರಾತ್ರಿ ಮಾಡಿದ ಅನ್ನ ಇದ್ದರೆ ಅದಕ್ಕೆ ಮೊಸರನ್ನು ಹಾಕಿ ಒಂದಷ್ಟು ಸಾಸಿವೆ, ಜೀರಿಗೆ, ಇಂಗು ಮತ್ತು ಕರಿಬೇವು, ಹಸಿಮೆಣಸುಗಳನ್ನು ತೆಗೆದುಕೊಂಡು ಒಗ್ಗರಣೆ ಹಾಕಿ. ಅದಕ್ಕೆ ಉಪ್ಪು ಹಾಕಿ ತಿಂದರೆ ಆಯ್ತು.

ಮೊಸರು ಮತ್ತು ಕಡಲೆ ಸಲಾಡ್: ಉಪ್ಪು , ನಿಂಬು, ಕಡಲೆ ಮತ್ತು ಮೊಸರು ಇವಿಷ್ಟನ್ನೂ ಸಹ ಮಿಕ್ಸ್‌ ಮಾಡಿಕೊಂಡರೆ ಕಡಲೆ ಸಲಾಡ್ ರೆಡಿ. ನೀವಿದನ್ನು ಮೊದಲೇ ಮಾಡಲು ಬಯಸಿದರೆ ಕಡಲೆ ಕಾಳುಗಳನ್ನು ನೆನೆಸಿಟ್ಟುಕೊಳ್ಳಬೇಕಾಗುತ್ತದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ