logo
ಕನ್ನಡ ಸುದ್ದಿ  /  ಜೀವನಶೈಲಿ  /  Mangalore Tourism: ಮಂಗಳೂರಿನ ಸಮುದ್ರದಲ್ಲಿ ತೇಲುವ ಸೇತುವೆ ಸಹಿತ ಜಲಕ್ರೀಡೆಗೆ ಅವಕಾಶ: ವಿಶೇಷತೆ ಏನು

Mangalore Tourism: ಮಂಗಳೂರಿನ ಸಮುದ್ರದಲ್ಲಿ ತೇಲುವ ಸೇತುವೆ ಸಹಿತ ಜಲಕ್ರೀಡೆಗೆ ಅವಕಾಶ: ವಿಶೇಷತೆ ಏನು

HT Kannada Desk HT Kannada

Dec 31, 2023 01:26 PM IST

google News

ಮಂಗಳೂರಿನ ಪಣಂಬೂರು ಬೀಚ್‌ನಲ್ಲಿ ಗಮನ ಸೆಳೆಯುವ ತೇಲುವ ಸೇತುವೆ.

    • Mangalore beach ಮಂಗಳೂರಿನಲ್ಲಿ ಪಣಂಬೂರು ಬೀಚ್‌ ಪ್ರವಾಸಿಗರ ಆಕರ್ಷಣೆ ತಾಣ. ಇಲ್ಲಿ ವೈವಿಧ್ಯಮಯ ವ್ಯವಸ್ಥೆಗಳನ್ನು ಪ್ರವಾಸಿಗೋಸ್ಕರವೇ ಮಾಡಲಾಗಿದೆ. ಇಲ್ಲಿದೆ ವಿವರ..
ಮಂಗಳೂರಿನ ಪಣಂಬೂರು ಬೀಚ್‌ನಲ್ಲಿ ಗಮನ ಸೆಳೆಯುವ ತೇಲುವ ಸೇತುವೆ.
ಮಂಗಳೂರಿನ ಪಣಂಬೂರು ಬೀಚ್‌ನಲ್ಲಿ ಗಮನ ಸೆಳೆಯುವ ತೇಲುವ ಸೇತುವೆ.

ಮಂಗಳೂರು:ಊರಿಗೆ ಬಂದವರು ನೀರಿಗೆ ಬರಲೇ ಬೇಕು ಎಂಬಂತೆ ಕರಾವಳಿ ಕರ್ನಾಟಕಕ್ಕೆ ಬಂದವರು ಮಂಗಳೂರಿನ ಬೀಚ್ ಗೆ ಬರಲೇಬೇಕು ಎಂಬ ಅಲಿಖಿತ ನಿಯಮದಂತೆ ಪ್ರವಾಸಿಗರ ದಂಡು ಮಂಗಳೂರು ಸಮುದ್ರ ಕಿನಾರೆಗೆ ಆಗಮಿಸುತ್ತಾರೆ.

ಮಂಗಳೂರಿನಲ್ಲಿ ಹಲವು ಬೀಚ್ ಗಳಿವೆ. ಅವುಗಳಲ್ಲಿ ಪ್ರಮುಖವಾದದ್ದು ಪಣಂಬೂರು ಬೀಚ್. ಇಲ್ಲಿ ಹಲವು ವೈವಿಧ್ಯಗಳಿವೆ. ಕರ್ನಾಟಕ ಕರಾವಳಿಯಲ್ಲಿ ಮಲ್ಪೆ ಬೀಚ್ ನಲ್ಲಿ ತೇಲುವೆ ಸೇತುವೆ ಇದೆ. ಅದನ್ನು ಹೊರತುಪಡಿಸಿದರೆ, ಮಂಗಳೂರಿನ ಪಣಂಬೂರು ಬೀಚ್ ನಲ್ಲಿ ಈ ವ್ಯವಸ್ಥೆ. ವೀಕೆಂಡ್, ವರ್ಷಾಂತ್ಯಗಳಲ್ಲಿ ಇಲ್ಲಿ ದಟ್ಟ ಜನಸಂದಣಿ.

ಏನಿದರ ವಿಶೇಷ?

  • ಮಂಗಳೂರು ನಗರದಿಂದ ಉಡುಪಿ ಮಾರ್ಗವಾಗಿ ಸಾಗುವ ಸಂದರ್ಭ 8 ಕಿ.ಮೀ. ದೂರದಲ್ಲಿ ಪಣಂಬೂರು ಬೀಚ್ ಸಿಗುತ್ತದೆ. ಸೂರ್ಯಾಸ್ತ ವೀಕ್ಷಣೆ, ಕಡಲಿನಲ್ಲಿ ಮೋಜು ಮಸ್ತಿಗೆ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಸಾಕಷ್ಟು ಪಾರ್ಕಿಂಗ್ ವ್ಯವಸ್ಥೆಯೂ ಇಲ್ಲಿದೆ. ಮಂಗಳೂರು ನವಮಂಗಳೂರು ಬಂದರಿನ ಪಕ್ಕದಲ್ಲೇ ಈ ಬೀಚ್ ಇದೆ.
  • ಇಲ್ಲಿನ ವಿಶೇಷ ಆಕರ್ಷಣೆಯಾಗಿ ಸಮುದ್ರದಲ್ಲಿ ತೇಲುವ ಸೇತುವೆಯನ್ನು ಅಳವಡಿಸಲಾಗಿದೆ. 2023ರ ಡಿ.27ರಂದು ವಿಧ್ಯುಕ್ತವಾಗಿ ಇದಕ್ಕೆ ಚಾಲನೆ ನೀಡಲಾಗಿದೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಪಬ್ಲಿಕ್ ಪ್ರೈವೇಟ್ ಪಾರ್ಟ್ ನರ್ ಶಿಪ್ ನಡಿಯಲ್ಲಿ ಕಡಲಿ ಬೀಚ್ ಟೂರಿಸಂ ಇದನ್ನು ನಿರ್ವಹಿಸುತ್ತಿದೆ.
  • ಮಂಗಳೂರಿನ ಪಣಂಬೂರು ಬೀಚ್‌ನಲ್ಲಿ ಪ್ಲೋಟಿಂಗ್ ಬ್ರಿಡ್ಜ್ ಆರಂಭವಾಗಿದೆ. ಇಡೀ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಲ್ಪೆ ಹೊರತುಪಡಿಸಿದರೆ, ಮಂಗಳೂರಿನಲ್ಲಿ ಈ ತೇಲುವ ಸೇತುವೆ ಇದೆ.
  • ಕೌಂಟರ್ ನಲ್ಲಿ ಟಿಕೆಟ್ ಪಡೆದುಕೊಂಡು (20 ನಿಮಿಷಕ್ಕೆ ಒಬ್ಬರಿಗೆ 150 ರೂ) ಲೈಫ್ ಜಾಕೆಟ್ ಗೆ 50 ರೂ ನೀಡಿ ಬಾಡಿಗೆಗೆ ಪಡೆದುಕೊಂಡು, ತೇಲುವ ಸೇತುವೆ ಮೇಲೆ ಹೆಜ್ಜೆ ಹಾಕಬಹುದು. ಈಗ ವಾರದ ಎಲ್ಲ ದಿನಗಳಲ್ಲೂ ತೇಲುವ ಸೇತುವೆ ಲಭ್ಯ. ಒಮ್ಮೆ ಇದರ ಮೇಲೆ ಹೋಗಿ ಬಂದರೆ ಹಾಯಿದೋಣಿ ಪಯಣದ ಅನುಭವ ಆಗಲಿದೆ.
  • ತೇಲುವ ಸೇತುವೆ 125 ಮೀಟರ್ ಉದ್ದವಿದ್ದು, ಫೋಟೋ ಸೆಲ್ಪಿ ಕ್ಲಿಕಿಸುತ್ತಾ, ಸಮುದ್ರ ಮೇಲೆ ನಡೆಯುತ್ತಿದ್ದೇವೆ ಎಂಬ ಫೀಲಿಂಗ್ ನೊಡನೆ ಹೆಜ್ಜೆ ಹಾಕಬಹುದು. ಹೋಗುವ ಮುನ್ನ ಲೈಫ್ ಜಾಕೆಟ್ ಕಡ್ಡಾಯ.

ಇದನ್ನೂ ಓದಿರಿ: ಡೇವಿಡ್ ವಾರ್ನರ್ ಅದ್ಧೂರಿ ವಿದಾಯಕ್ಕೆ ಸಿದ್ಧತೆ; ಮೂರನೇ ಟೆಸ್ಟ್​ಗೆ ಆಸ್ಟ್ರೇಲಿಯಾ ಬಲಿಷ್ಠ ತಂಡ ಪ್ರಕಟ

  • ಮಂಗಳೂರು ಪ್ರವಾಸೋದ್ಯಮದ ಮುಕುಟಕ್ಕೆ ಇದು ಮತ್ತೊಂದು ಗರಿ. ತೇಲುವ ಸೇತುವೆ ಮೇಲೆ ಬ್ಯಾಲೆನ್ಸ್ ಮಾಡುತ್ತಾ ಪ್ರವಾಸಿಗರು ಇಲ್ಲಿ ಎಂಜಾಯ್ ಮಾಡಬಹುದು. ಸುರಕ್ಷತೆಗೆ ವಿಶೇಷ ಒತ್ತನ್ನೂ ಇಲ್ಲಿ ನೀಡಲಾಗಿದೆ.
  • ದಕ್ಷಿಣ ಭಾರತದಲ್ಲಿಯೇ ಮೊದಲ ಬಾರಿಗೆ ಸ್ಕೂಬಾ ಡೈವಿಂಗ್, ಹೆಚ್ಚಿನ ಪ್ರವಾಸಿಗರ ಆಗ್ರಹದಂತೆ ಫುಡ್ಕೊರ್ಟ್, ಪ್ರವಾಸಿಗರಿಗೆ ಉಳಿದುಕೊಳ್ಳಲು ಲಾಡ್ಡಿಂಗ್ ಮಾದರಿಯಲ್ಲಿ ತಾತ್ಕಾಲಿಕ ನೆಲೆಯ ಕೋಣೆಗಳು ಇನ್ನು ಇಲ್ಲಿ ನಿರ್ಮಾಣವಾಗಲಿವೆ.
  • ಸುರಕ್ಷತೆಗೆ ಇಲ್ಲಿ ಗರಿಷ್ಠ ಆದ್ಯತೆ ನೀಡಲಾಗುತ್ತಿದೆ. ಇದಕ್ಕಾಗಿ 10ರಿಂದ 15 ಮಂದಿ ಲೈಫ್ ಗಾರ್ಡ್ ಗಳಿದ್ದಾರೆ. ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾತ್ರಿ 9 ಗಂಟೆಯವರೆಗೂ ಬೀಚ್ ತೆರೆದಿರುತ್ತದೆ.

ಇದನ್ನೂ ಓದಿರಿ: IFS Transfer: 30 ಐಎಫ್‌ಎಸ್‌ ಅಧಿಕಾರಿಗಳ ವರ್ಗ, ಬೆಂಗಳೂರಿಗೆ ಹೊಸ ಸಿಎಫ್‌, ಗದಗ, ಧಾರವಾಡಕ್ಕೂ ನೂತನ ಡಿಸಿಎಫ್‌: ಹೀಗಿದೆ ವರ್ಗಾವಣೆ ಪಟ್ಟಿ

  • KADALI BEACH TOURISM ವತಿಯಿಂದ ಇಲ್ಲಿ ಜೆಟ್ ಸ್ಕೈ ರೈಡ್ (300 ರೂ), ಡೆಸರ್ಟ್ ಬೈಕ್ ರೈಡ್ (200 ರೂ) ಮತ್ತು ಬಂಪರ್ ರೈಡ್ (300 ರೂ) ಇದೆ. ಲೈಫ್ ಜಾಕೆಟ್ ಅನ್ನು 50 ರೂ ಗೆ ಬಾಡಿಗೆ ನೀಡಲಾಗುತ್ತದೆ. ಅಲ್ಲದೆ ವಿಶೇಷ ಬೋಟಿಂಗ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದ್ದು, ಒಬ್ಬರಿಗೆ 250 ರೂ ನೀಡಿದರೆ ದೋಣಿವಿಹಾರವನ್ನು ಸಮುದ್ರದಲ್ಲಿ ಮಾಡಬಹುದು.

(ಚಿತ್ರ-ವರದಿ: ಹರೀಶ ಮಾಂಬಾಡಿ, ಮಂಗಳೂರು)

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ