logo
ಕನ್ನಡ ಸುದ್ದಿ  /  ಜೀವನಶೈಲಿ  /  Mangaluru News: ಹಳೆ ಬೆಂಚ್‌, ಡೆಸ್ಕ್‌ಗಳಿಗೆ ನವೀನ ರೂಪ; ಕಾಸರಗೋಡು ಸರ್ಕಾರಿ ಶಾಲೆ ಹಳೆ ವಿದ್ಯಾರ್ಥಿಯ ಶಾಲಾ ಪ್ರೀತಿಯ ಅಪರೂಪದ ಕಥೆಯಿದು

Mangaluru News: ಹಳೆ ಬೆಂಚ್‌, ಡೆಸ್ಕ್‌ಗಳಿಗೆ ನವೀನ ರೂಪ; ಕಾಸರಗೋಡು ಸರ್ಕಾರಿ ಶಾಲೆ ಹಳೆ ವಿದ್ಯಾರ್ಥಿಯ ಶಾಲಾ ಪ್ರೀತಿಯ ಅಪರೂಪದ ಕಥೆಯಿದು

HT Kannada Desk HT Kannada

Jun 30, 2023 11:11 AM IST

google News

ರಮೇಶ ಆಚಾರ್ಯ ಅವರು ರಚಿಸಿದ ಬುಕ್‌ ಶೆಲ್ಫ್‌ (ಎಡಚಿತ್ರ). ಹಳೆ ಮರದ ತುಂಡುಗಳಿಂದ ಸುಂದರ ಶೆಲ್ಪ್‌ ರಚಿಸುತ್ತಿರುವ ರಮೇಶ್‌ ಆಚಾರ್ಯ (ಬಲಚಿತ್ರ)

    • ಹಳೆ ವಿದ್ಯಾರ್ಥಿಗಳು ತಾವು ಕಲಿತ ಶಾಲೆಗೆ ಭಿನ್ನ ಕೊಡುಗೆಗಳನ್ನು ನೀಡುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಸಾಮಾನ್ಯ ಹಳೆ ವಿದ್ಯಾರ್ಥಿ ಇವರ ನಡುವೆ ಭಿನ್ನವಾಗಿ ಕಾಣುತ್ತಾರೆ. ಇವರು ಶಾಲೆಯಲ್ಲಿನ ಹಳೆ ಬೆಂಚ್‌, ಡೆಸ್ಕ್‌ಗಳಿಗೆ ನವೀನ ರೂಪ ನೀಡಿದ್ದಾರೆ. ತಮ್ಮ ವೃತ್ತಿಯನ್ನೇ ಶಾಲೆಗೆ ಕೊಡುಗೆ ನೀಡಲು ಬಯಸಿದ್ದಾರೆ. ಅಲ್ಲದೆ ಹಳೆಯ ವಸ್ತುಗಳಿಗೆ ಮರುಜೀವ ನೀಡಿದ್ದಾರೆ. 
ರಮೇಶ ಆಚಾರ್ಯ ಅವರು ರಚಿಸಿದ ಬುಕ್‌ ಶೆಲ್ಫ್‌ (ಎಡಚಿತ್ರ). ಹಳೆ ಮರದ ತುಂಡುಗಳಿಂದ ಸುಂದರ ಶೆಲ್ಪ್‌ ರಚಿಸುತ್ತಿರುವ ರಮೇಶ್‌ ಆಚಾರ್ಯ (ಬಲಚಿತ್ರ)
ರಮೇಶ ಆಚಾರ್ಯ ಅವರು ರಚಿಸಿದ ಬುಕ್‌ ಶೆಲ್ಫ್‌ (ಎಡಚಿತ್ರ). ಹಳೆ ಮರದ ತುಂಡುಗಳಿಂದ ಸುಂದರ ಶೆಲ್ಪ್‌ ರಚಿಸುತ್ತಿರುವ ರಮೇಶ್‌ ಆಚಾರ್ಯ (ಬಲಚಿತ್ರ)

ಮಂಗಳೂರು: ಸರ್ಕಾರಿ ಶಾಲೆಗಳಲ್ಲಿ ಕಲಿತವರು ಮುಂದೆ ದೊಡ್ಡ ದೊಡ್ಡ ಹುದ್ದೆಗಳಿಗೆ ಆಯ್ಕೆಯಾದ ಮೇಲೆ ಶಾಲೆಯ ಮೇಲಿನ ಪ್ರೀತಿಯಿಂದ ಏನಾದರೂ ಕೊಡುಗೆ ನೀಡುವುದನ್ನು ನೋಡಿದ್ದೇವೆ. ಆದರೆ ಸಾಮಾನ್ಯರಂತೆ ಜೀವಿಸುವವರೂ ತಾನು ಕಲಿತ ಶಾಲೆಗೆ ಏನಾದರೂ ಮಾಡಬೇಕು ಎಂಬ ಇಚ್ಛೆ ಇದ್ದರೆ, ತನ್ನ ವೃತ್ತಿಯನ್ನೇ ಬಳಸಿಕೊಂಡು ನೆರವಾಗಲು ಸಾಧ್ಯವಿದೆ. ಇದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಕರ್ನಾಟಕ-ಕೇರಳ ಗಡಿ ಭಾಗದ ಮೂಡಂಬೈಲು ಸರ್ಕಾರಿ ಶಾಲೆಯ ಹಳೆಯ ವಿದ್ಯಾರ್ಥಿಯೊಬ್ಬರು ಸಾಕ್ಷಿಯಾಗಿದ್ದಾರೆ.

ಇವರು ಬಳಸಿ ಬಿಸಾಡಬಹುದಾದ ವಸ್ತುಗಳನ್ನೆಲ್ಲಾ ಮರುಬಳಕೆ ಮಾಡಿ, ಶಾಲೆಗೊಂದು ಹೊಸರೂಪವನ್ನು ನೀಡುವ ನಿರ್ಧಾರ ಮಾಡಿ, ಶಾಲೆಯನ್ನು ಸುಂದರವಾಗಿಸುವಲ್ಲಿ ಶ್ರಮಿಸಿದ್ದಾರೆ. ಉಪಯೋಗಕ್ಕೆ ಬಾರದ, ಎಸೆಯುವಂತಹ ಮರದ ತುಂಡುಗಳಿಂದಲೇ ಅದ್ಭುತವಾದ ಕೆತ್ತನೆಗಳನ್ನು ಮಾಡುವ ಮೂಲಕ ಹಳ್ಳಿಯ ಸರ್ಕಾರಿ ಶಾಲೆಯೊಂದರಲ್ಲಿ ಉಚಿತವಾಗಿ ಅಂದದ ಬುಕ್ ಶೆಲ್ಫ್‌ ಸಹಿತ ಮರದ ಪೀಠೋಪಕರಣಗಳನ್ನು ರಚಿಸಿ ಗಮನ ಸೆಳೆದಿದ್ದಾರೆ.

53 ವರ್ಷದ ರಮೇಶ ಆಚಾರ್ಯ, ಕೇರಳ-ಕರ್ನಾಟಕದ ಗಡಿಭಾಗವಾದ ಮೂಡಂಬೈಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 80ರ ದಶಕದಲ್ಲಿ ಒಂದನೇ ಕ್ಲಾಸಿನಿಂದ ಏಳನೇ ತರಗತಿವರೆಗೆ ವ್ಯಾಸಂಗ ಮಾಡಿದ್ದರು. ಅವರ ಮಗ ಹರ್ಷೇಂದ್ರ ಇದೇ ಶಾಲೆಯಲ್ಲಿ ಕಲಿತು ಪದವಿಗೆ ಸೇರುವ ಹೊಸ್ತಿಲಲ್ಲಿದ್ದರೆ, ಮಗಳು ನಾಲ್ಕನೇ ಕ್ಲಾಸಿನಲ್ಲಿದ್ದಾರೆ.

ಶಾಲೆಯೊಂದಿಗೆ ಕಲಿಕಾ ನಂಟು ಈ ರೀತಿಯಾಗಿ ಮುಂದುವರಿದಿದ್ದರೆ, ಮತ್ತೊಂದು ರೀತಿಯಲ್ಲಿ ರಮೇಶ್ ಆಚಾರ್ಯರು ಸುಂದರವಾದ ಪೀಠೋಪಕರಣಗಳನ್ನು ಮರುಬಳಕೆ ಮಾಡಿಕೊಟ್ಟಿದ್ದಾರೆ. ಅವುಗಳಲ್ಲೂ ಆಕರ್ಷಕ ವಿನ್ಯಾಸದ ಪುಸ್ತಕದ ಶೆಲ್ ಎಲ್ಲರ ಗಮನ ಸೆಳೆಯುತ್ತಿದೆ.

ಮಿಂಚುತ್ತಿರುವ ಹೊಸ ಬೆಂಚು, ಡೆಸ್ಕು

ಮೂಡಂಬೈಲು ಸರ್ಕಾರಿ ಶಾಲೆಯಲ್ಲಿರುವ 60 ವಿದ್ಯಾರ್ಥಿಗಳಿಗೆ ಹೊಸ ಬೆಂಚು ಡೆಸ್ಕುಗಳು ಬಂದಿವೆ. ಹಳೆಯದ್ದು ಕುಳಿತುಕೊಳ್ಳಲು ಹಾಗೂ ಬರೆಯುವ ಪುಸ್ತಕಗಳನ್ನು ಇಡಲು ಅಸಾಧ್ಯವಾದ ಪರಿಸ್ಥಿತಿಯಲ್ಲಿದ್ದವು. ಇನ್ನು ಮತ್ತೆ ಅವುಗಳನ್ನು ಬೆಂಚು, ಡೆಸ್ಕುಗಳನ್ನಾಗಿ ಮಾರ್ಪಾಡು ಮಾಡಲು ಅಸಾಧ್ಯ ಎಂದಾದಾಗ, ಮುಖ್ಯೋಪಾಧ್ಯಾಯ ಅರವಿಂದ ಕುಡ್ಲ ಅವರು ರಮೇಶ್ ಆಚಾರ್ಯ ಅವರನ್ನು ಸಂಪರ್ಕಿಸಿದರು.

ಹಳೆ ಮರದ ತುಂಡುಗಳಿಂದ ತಯಾರಾದ ಸುಂದರ ಶೆಲ್ಫ್‌

ನುರಿತ ಮರಕೆಲಸಗಾರರೂ ಆಗಿರುವ ರಮೇಶ್ ಅವರಿಗೆ ಪೇಪರ್ ಓದುವ ಸಾಧನ, ಪುಸ್ತಕ ಶೆಲ್ಫ್‌, ಅಡುಗೆ ಕೋಣೆಯ ಶೆಲ್ಫ್‌ ಮಾಡಲು ಪರಿತ್ಯಕ್ತ ಬೆಂಚು, ಡೆಸ್ಕುಗಳಿಂದ ಮಾಡಲು ಸಾಧ್ಯವೇ ಎಂದು ಕೇಳಿದಾಗ ಕೇವಲ 20 ದಿನಗಳಲ್ಲಿ ಸುಂದರವಾದ ಶೆಲ್ಫ್‌ಗಳನ್ನು ತಯಾರಿಸಿಕೊಟ್ಟಿದ್ದಾರೆ. ʼಹೊಸ ಹಲಗೆ ಬದಲು ಹಳೆ ಬೆಂಚುಗಳನ್ನು ರಾಶಿಯಿಂದ ತೆಗೆದು ಅದರಲ್ಲಿ ಹುಡುಕಿ ಇಷ್ಟು ಮಾಡಿಕೊಟ್ಟಿದ್ದಾರೆʼ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಮುಖ್ಯೋಪಾಧ್ಯಾಯ ಕುಡ್ಲ.

ವಿಪ್ರೋ ಅರ್ಥಿಯನ್ ಸಸ್ಟೈನಬಿಲಿಟಿ ಡೆವಲಪ್‌ಮೆಂಟ್‌ ಯೋಜನೆಗೆ ದೇಶದ 40 ಶಾಲೆಗಳು ಆಯ್ಕೆಯಾಗಿದ್ದು, ಇವುಗಳಲ್ಲಿ ಮೂಡಂಬೈಲು ಶಾಲೆಯೂ ಒಂದು. ʼಸುಸ್ಥಿರ ಅಭಿವೃದ್ಧಿ ಪರಿಕಲ್ಪನೆಗೆ ಒಡ್ಡಿಕೊಳ್ಳುವುದು ಹಳೆಯ ಪೀಠೋಪಕರಣಗಳನ್ನು ಮರು-ಸೈಕ್ಲಿಂಗ್ ಮಾಡುವ ಬಗ್ಗೆ ಯೋಚಿಸುವಂತೆ ಮಾಡಿದೆʼ ಎಂದು ಅರವಿಂದ ಹೇಳಿದ್ದಾರೆ.

ವರದಿ: ಹರೀಶ ಮಾಂಬಾಡಿ, ಮಂಗಳೂರು

ಇದನ್ನೂ ಓದಿ

Heavy rain predicted: ಕರಾವಳಿ ಕರ್ನಾಟಕದಲ್ಲಿ ಮುಂದಿನ 10 ದಿನ ಅತಿ ಹೆಚ್ಚು ಮಳೆ ಸಾಧ್ಯತೆ; ವಿಪತ್ತು ನಿರ್ವಹಣೆಗೆ ಸಜ್ಜಾಗಿರಲು ಸೂಚನೆ

Heavy rain predicted: ದಕ್ಷಿಣ ಕನ್ನಡ ಮತ್ತು ಉಡುಪಿ ಸೇರಿ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 10 ದಿನಗಳ ಕಾಲ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ಎಚ್ಚರಿಸಿದೆ.

ಕರ್ನಾಟಕದಲ್ಲಿ, ದಕ್ಷಿಣ ಕನ್ನಡ ಮತ್ತು ಉಡುಪಿ ಸೇರಿ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಬಹುದು. ಕೆಲವು ಪ್ರದೇಶಗಳಲ್ಲಿ ಮುಂದಿನ 10 ದಿನಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ತಿಳಿಸಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ