logo
ಕನ್ನಡ ಸುದ್ದಿ  /  ಜೀವನಶೈಲಿ  /  Mantras: ಖಿನ್ನತೆ ಓಡಿಸಿ ಏಕಾಗ್ರತೆ ಸಾಧಿಸಿ; ಮಾನಸಿಕ ಆರೋಗ್ಯಕ್ಕಾಗಿ 6 ಅತ್ಯುತ್ತಮ ಮಂತ್ರಗಳು ಇಲ್ಲಿವೆ

Mantras: ಖಿನ್ನತೆ ಓಡಿಸಿ ಏಕಾಗ್ರತೆ ಸಾಧಿಸಿ; ಮಾನಸಿಕ ಆರೋಗ್ಯಕ್ಕಾಗಿ 6 ಅತ್ಯುತ್ತಮ ಮಂತ್ರಗಳು ಇಲ್ಲಿವೆ

Jayaraj HT Kannada

Feb 16, 2024 05:45 AM IST

google News

ಮಾನಸಿಕ ಆರೋಗ್ಯಕ್ಕಾಗಿ 6 ಅತ್ಯುತ್ತಮ ಮಂತ್ರಗಳು ಇಲ್ಲಿವೆ

    • Mental Health: ಮಾನಸಿಕ ಆರೋಗ್ಯಕ್ಕೆ ಧ್ಯಾನದೊಂದಿಗೆ ಮಂತ್ರ ಪಠಿಸುವುದು ಉತ್ತಮ ಅಭ್ಯಾಸ. ಇದರೊಂದಿಗೆ ಯೋಗ, ಪ್ರಾಣಾಯಾಮ, ಸೂರ್ಯ ನಮಸ್ಕಾರಗಳನ್ನು ಪ್ರತಿನಿತ್ಯ ಅಭ್ಯಾಸ ಮಾಡಬಹುದು. ಸುಲಭವಾಗಿ ಉಚ್ಛರಿಸಬಹುದಾದ ಆರು ಮಂತ್ರಗಳು ಇಲ್ಲಿವೆ.
ಮಾನಸಿಕ ಆರೋಗ್ಯಕ್ಕಾಗಿ 6 ಅತ್ಯುತ್ತಮ ಮಂತ್ರಗಳು ಇಲ್ಲಿವೆ
ಮಾನಸಿಕ ಆರೋಗ್ಯಕ್ಕಾಗಿ 6 ಅತ್ಯುತ್ತಮ ಮಂತ್ರಗಳು ಇಲ್ಲಿವೆ

ಧಾರ್ಮಿಕ ಮತ್ತು ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ಮಂತ್ರಗಳಿಗೆ ಉನ್ನತ ಮೌಲ್ಯವಿದೆ. ಮಾನಸಿಕ ಆರೋಗ್ಯಕ್ಕೆ ಮಂತ್ರ ಪರಿಣಾಮಕಾರಿ. ಆತಂಕ, ಖಿನ್ನತೆ ಸೇರಿದಂತೆ ಭಾವನಾತ್ಮಕ ಸವಾಲುಗಳನ್ನು ನಿಭಾಯಿಸಲು ಮಂತ್ರ ಪಠಿಸುವುದು ದಿವ್ಯ ಔಷಧ. ಸುಲಭವಾಗಿ ಎಲ್ಲರಿಗೂ ತಿಳಿದಿರುವ "ಓಂ" ಕೂಡಾ ಒಂದು ಮಂತ್ರ. ಇದು ಸರಳ ಹಾಗೂ ಪರಿಣಾಮಕಾರಿ ಮಂತ್ರ. ಇದರೊಂದಿಗೆ ಹಲವು ಮಂತ್ರಗಳಲ್ಲಿ ಆಧ್ಯಾತ್ಮಿಕ ಶಕ್ತಿ ಇದೆ.

ಮನುಷ್ಯನ ಸಕಾರಾತ್ಮಕ ಭಾವನೆ ಅಥವಾ ಯೋಗಕ್ಷೇಮವನ್ನು ಉತ್ತೇಜಿಸಲು ಬಳಸುವ ಯಾವುದೇ ಪದಗಳು ಅಥವಾ ಪದಗುಚ್ಛಗಳೇ ಮಂತ್ರಗಳು. ಮಾನಸಿಕ ಆರೋಗ್ಯಕ್ಕೆ ಮಂತ್ರ ಹೇಳುವುದು ಒಳ್ಳೆಯದು ಎಂಬ ನಂಬಿಕೆ ಅನಾದಿಕಾಲದಿಂದಲೂ ಇದೆ.

ಮಂತ್ರಗಳು ಯಾವುವು?

ತದೇಕಚಿತ್ತದಿಂದ ಧ್ಯಾನದ ವೇಳೆ ಧ್ವನಿಸುವ ಪದ ಅಥವಾ ಪದಗುಚ್ಛಗಳೇ ಮಂತ್ರ. ಇದು ಮನಸ್ಸು ಮತ್ತು ದೇಹದ ಅರಿವನ್ನು ಉದ್ದೇಶಪೂರ್ವಕವಾಗಿ ಅಭಿವೃದ್ಧಿಪಡಿಸುವ ಒಂದು ರೀತಿಯ ಅಭ್ಯಾಸವಾಗಿದೆ. ಧ್ಯಾನವು ಹೇಗೆ ಏಕಾಗ್ರತೆಯನ್ನು ಹೆಚ್ಚಿಸಲು ನೆರವಾಗುವುದೋ; ಗೊಂದಲ, ಶಾಂತಿ ಹಾಗೂ ಮನಸಿನೊಳಗೆ ನುಸುಳುವ ಅನಗತ್ಯ ಆಲೋಚನೆಗಳನ್ನು ಓಡಿಸಲು ಮಂತ್ರ ಪಠಣ ಸಹಕಾರಿ.

ಇಲ್ಲಿ ಕೆಲವೊಂದು ಶಕ್ತಿಯುತ ಮಂತ್ರಗಳಿವೆ. ಸರಿಯಾದ ನಿಯಮಗಳೊಂದಿಗೆ ಈ ಮಂತ್ರಗಳನ್ನು ಪಠಿಸಿದರೆ, ಏಕಾಗ್ರತೆ ಹೆಚ್ಚುತ್ತದೆ. ಖಿನ್ನತೆ ದೂರವಾಗಿ ಮನಸು ಶಾಂತವಾಗಿರಲು ಈ ಮಂತ್ರಗಳು ನೆರವಾಗುತ್ತವೆ. ಮಂತ್ರ ಪಠಣ ಮಾಡುವವರು ಸಾತ್ವಿಕ ಜೀವನಶೈಲಿಯನ್ನು ಅನುಸರಿಸರಿಸಿದರೆ ಉತ್ತಮ. ಮಕ್ಕಳಿಗೆ ಮಂತ್ರ ಹೇಳುವುದನ್ನು ಹೇಳಿಕೊಟ್ಟರೆ, ಅವರ ಏಕಾಗ್ರತೆ ಹೆಚ್ಚುತ್ತದೆ. ಅಲ್ಲದೆ, ಕಲಿಕೆಯತ್ತ ಆಸಕ್ತಿ ಬೆಳೆಯಯುತ್ತದೆ.

ಇಲ್ಲಿವೆ ಆರು ಸರಳ ಮಂತ್ರಗಳು

  • ಮಹಾ ಮೃತ್ಯುಂಜಯ ಮಂತ್ರ: ಓಂ ತ್ರಯಂಭಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ ಉರ್ವರುಕಮಿವ ಬಂಧನಾನ್ ಮೃತ್ಯೋರ್ ಮುಕ್ಷೀಯ ಮಾಮೃತಾತ್ ಓಂ||
  • ಗಾಯತ್ರಿ ಮಂತ್ರ: ಓಂ ಭೂರ್‌ ಭುವಃ ಸ್ವಃ | ತತ್ಸವಿತುರ್ವರೇಣ್ಯಂ | ಭರ್ಗೋ ದೇವಸ್ಯ ಧೀಮಹೀ | ಧಿಯೋ ಯೋನಃ ಪ್ರಚೋದಯಾತ್‌ ||
  • ದುರ್ಗಾ ಮಂತ್ರ: ಓಂ ಜಯಂತಿ ಮಂಗಳ ಕಾಳಿ ಭದ್ರಾ ಕಾಳಿ ಕಪಾಲಿನಿ। ದುರ್ಗಾ ಕ್ಷಮಾ ಶಿವಾ ಧಾತ್ರಿ ಸ್ವಾಹ ಸ್ವಧ ನಮೋಸ್ತುತೇ।।
  • ದುರ್ಗಾ ಮಂತ್ರ: ಸರ್ವಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ| ಶರಣ್ಯೇ ತ್ರ್ಯಂಬಕೇ ಗೌರೀ ನಾರಾಯಣಿ ನಮೋಸ್ತುತೇ|
  • ​ದುರ್ಗಾ ಸಪ್ತಶತಿ ಮಂತ್ರ: ಓಂ ಐಂ ಹ್ರೀಂ ಕ್ಲೀಂ ಮಹಾಸರಸ್ವತಿ ದೇವ್ಯಾಯ ನಮಃ||
  • ಶ್ರೀ ನರಸಿಂಹ ಮಂತ್ರ: "ಉಗ್ರಂ ವೀರಂ ಮಹಾ ವಿಷ್ಣುಂ ಜ್ವಲಂತಂ ಸರ್ವತೋ ಮುಖಂ ನರಸಿಂಹಂ ಭೀಷಣಂ ಭದ್ರಂ ಮೃತ್ಯೋರ್ ಮೃತ್ಯುಂ ನಮಾಮ್ಯಹಂ||

ಮಾನಸಿಕ ಆರೋಗ್ಯ ಸಾಧನೆಗೆ ಧ್ಯಾನದೊಂದಿಗೆ ಮಂತ್ರ ಪಠಿಸುವುದು ಉತ್ತಮ ಅಭ್ಯಾಸ. ಇದರೊಂದಿಗೆ ಯೋಗ, ಪ್ರಾಣಾಯಾಮ, ಸೂರ್ಯನಮಸ್ಕಾರಗಳನ್ನು ಪ್ರತಿನಿತ್ಯ ಅಭ್ಯಾಸ ಮಾಡಬಹುದು.

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ