logo
ಕನ್ನಡ ಸುದ್ದಿ  /  ಜೀವನಶೈಲಿ  /  Meditation Guide: ಮೆಡಿಟೇಷನ್‌ ಜರ್ನಿಯಲ್ಲಿ ನೀವು ಹೊಸಬರಾ? ನಿಮಗಾಗಿ ಇಲ್ಲಿದೆ ಕೆಲವು ಟಿಪ್ಸ್‌

Meditation Guide: ಮೆಡಿಟೇಷನ್‌ ಜರ್ನಿಯಲ್ಲಿ ನೀವು ಹೊಸಬರಾ? ನಿಮಗಾಗಿ ಇಲ್ಲಿದೆ ಕೆಲವು ಟಿಪ್ಸ್‌

HT Kannada Desk HT Kannada

Dec 05, 2023 08:57 PM IST

google News

ಮೆಡಿಟೇಷನ್‌ ಜರ್ನಿಯಲ್ಲಿ ನೀವು ಹೊಸಬರಾ? ನಿಮಗಾಗಿ ಇಲ್ಲಿದೆ ಕೆಲವು ಟಿಪ್ಸ್‌ (PC: Canva)

    • ಇತ್ತೀಚೆಗಷ್ಟೇ ಮೆಡಿಟೇಷನ್‌ ಆರಂಭಿಸಿದ್ದೀರಾ? ಮನಸ್ಸನ್ನು ಒಂದೆಡೆ ಕೇಂದ್ರೀಕರಿಸಿ, ಶಾಂತ ಚಿತ್ತರಾಗುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ? ನಿಮ್ಮ ಮೆಡಿಟೇಷನ್‌ ಜರ್ನಿಗೆ ಸಹಾಯಕವಾಗುವ ಟಿಪ್ಸ್‌ ಇಲ್ಲಿದೆ.
ಮೆಡಿಟೇಷನ್‌ ಜರ್ನಿಯಲ್ಲಿ ನೀವು ಹೊಸಬರಾ? ನಿಮಗಾಗಿ ಇಲ್ಲಿದೆ ಕೆಲವು ಟಿಪ್ಸ್‌ (PC: Canva)
ಮೆಡಿಟೇಷನ್‌ ಜರ್ನಿಯಲ್ಲಿ ನೀವು ಹೊಸಬರಾ? ನಿಮಗಾಗಿ ಇಲ್ಲಿದೆ ಕೆಲವು ಟಿಪ್ಸ್‌ (PC: Canva)

ಈಗಿನ ಧಾವಂತದ ಬದುಕಿನಲ್ಲಿ ಒತ್ತಡ, ಆತಂಕಗಳು ಸಾಮಾನ್ಯವಾಗಿದೆ. ಇದರಿಂದ ಅನೇಕ ಮಾನಸಿಕ ಖಾಯಿಲೆಗಳು ಸಹ ಬರುತ್ತಿವೆ. ಮನಸ್ಸನ್ನು ಶಾಂತಗೊಳಿಸಿ, ನೆಮ್ಮದಿಗಾಗಿ ಹುಡುಕಾಡುವುದೇ ಆಗಿದೆ. ಆದರೆ ಮೆಡಿಟೇಷನ್‌ ಇವೆಲ್ಲ ಗೊಂದಲಗಳಿಗೆ ಉತ್ತರ ನೀಡುತ್ತದೆ. ಒಟ್ಟಾರೆ ನಮ್ಮ ಯೋಗಕ್ಷೇಮ ಹೆಚ್ಚಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ. ನೀವು ಮೆಡಿಟೇಷನ್‌ ಇತ್ತೀಚೆಗಷ್ಟೇ ಪ್ರಾರಂಭಿಸಿದ್ದರೆ ಸ್ಥಿರವಾಗಿ ಒಂದೆಡೆ ಕುಳಿತುಕೊಳ್ಳುವುದು, ಮನಸ್ಸನ್ನು ಕೇಂದ್ರೀಕರಿಸುವುದು ಹಾಗೂ ಶಾಂತಗೊಳಿಸುವುದು ಸ್ವಲ್ಪ ಕಷ್ಟ ಎನಿಸಬಹುದು. ಆದರೆ ಹಂತಹಂತವಾಗಿ ಸಾಧಿಸುವುದು ಕಷ್ಟವೇನಲ್ಲ.

ಪ್ರತಿದಿನ ನಿರ್ದಿಷ್ಟ ಸಮಯದಲ್ಲಿ ಕೆಲವು ನಿಮಿಷಗಳ ಕಾಲ ಶಾಂತವಾಗಿ ಕುಳಿತುಕೊಳ್ಳಲು ಮೀಸಲಿಡಿ. ಇದರಿಂದ ಒತ್ತಡ ಕಡಿಮೆಯಾಗಿ, ಮನಸ್ಸು ಶಾಂತಗೊಂಡು, ಗೊಂದಲದಿಂದ ಹೊರಬರಲು ಸಹಾಯವಾಗುತ್ತದೆ. ಇದಲ್ಲದೆ ಮೆಡಿಟೇಷನ್‌ ಎನ್ನುವುದು ನಿಮ್ಮನ್ನು ನೀವು ಆಂತರಿಕವಾಗಿ ವಿಕಸನಗೊಳಿಸಿಕೊಳ್ಳುವ ಅಭ್ಯಾಸವಾಗಿದೆ. ನೀವು ಈಗಷ್ಟೇ ಮೆಡಿಟೇಷನ್‌ ಜರ್ನಿ ಪ್ರಾರಂಭಿಸಿದ್ದರೆ, ನಿಮಗಾಗಿ ಇಲ್ಲಿ ಕೆಲವು ಟಿಪ್ಸ್‌ ಇವೆ.

ಶಾಂತ ಸ್ಥಳವನ್ನು ಆರಿಸಿಕೊಳ್ಳಿ

ಮೆಡಿಟೇಷನ್‌ ಪ್ರಾರಂಭಿಸುವ ಮೊದಲು ಪ್ರಶಾಂತವಾದ ಮತ್ತು ಆರಾಮದಾಯಕ ಸ್ಥಳವನ್ನು ಆಯ್ದುಕೊಳ್ಳಿ. ನಿಮಗೆ ಸರಿ ಎನಿಸುವು ಭಂಗಿಯಲ್ಲಿ ಕುಳಿತುಕೊಳ್ಳಿ. ಅದಕ್ಕಾಗಿ ಪ್ರತ್ಯೇಕ ಧ್ಯಾನದ ಕೊಠಡಿಯ ಅಗತ್ಯವಿಲ್ಲ. ನಿಮ್ಮ ಮಲಗುವ ಕೋಣೆಯ ಒಂದ ಮೂಲೆಯಾದರೂ ಸರಿ, ಇಲ್ಲವೇ ಈಸಿ ಚೇರ್‌ ಆದರೂ ಸರಿ. ಪ್ರಶಾಂತ ಸ್ಥಳ ಆಯ್ದುಕೊಳ್ಳುವುದು ನಿಮ್ಮ ಮೆಡಿಟೇಷನ್‌ ಜರ್ನಿ ಅರ್ಧದಷ್ಟು ಸಾಗಿದಂತೆ.

ಆರಾಮದಾಯಕ ಭಂಗಿಯಲ್ಲಿ ಕುಳಿತುಕೊಳ್ಳಿ

ಜನಪ್ರಿಯ ನಂಬಿಕೆಯಂತೆಯೇ, ಮೆಡಿಟೇಷನ್‌ ಮಾಡಲು ನೀವು ನೆಲದ ಮೇಲೆ ಕಾಲು ಚಾಚಿ ಕುಳಿತುಕೊಳ್ಳಬೇಕಾಗಿಲ್ಲ. ನಿಮಗೆ ಆರಾಮದಾಯಕ ಎನಿಸುವ ಭಂಗಿಯಲ್ಲಿಯೇ ಕುಳಿತು ಸಾಧಿಸಬಹುದು. ಸುಲಭವಾದ ಉಸಿರಾಟ ಮತ್ತು ಮನಸ್ಸುನ್ನು ಕೇಂದ್ರೀಕರಿಸಲು ನಿಮ್ಮ ಬೆನ್ನುಮೂಳೆಯನ್ನು ನೇರವಾಗಿ ಇಟ್ಟುಕೊಳ್ಳುವುದು ಮುಖ್ಯ ವಿಷಯವಾಗಿದೆ.

ಉಸಿರಾಟದ ಮೇಲೆ ನಿಮ್ಮ ಗಮನ ಕೇಂದ್ರೀಕರಿಸಿ

ನಿಮ್ಮ ಕಣ್ಣುಗಳನ್ನು ಮುಚ್ಚಿ ಮತ್ತು ನಿಮ್ಮ ಗಮನವನ್ನು ಸಂಪೂರ್ಣವಾಗಿ ನಿಮ್ಮ ಉಸಿರಾಟದ ಕಡೆಗೆ ತನ್ನಿ. ನಿಮ್ಮ ಉಶ್ವಾಸ ಮತ್ತು ನಿಶ್ವಾಸಗಳ ನೈಸರ್ಗಿಕ ಲಯವನ್ನು ಗಮನಿಸಿ. ನೀವು ಉಸಿರು ಎಳೆದುಕೊಳ್ಳುವಾಗ ಮತ್ತು ಬಿಡುವಾಗ, ನಿಮ್ಮ ಎಲ್ಲ ಒತ್ತಡವನ್ನು ಮುಕ್ತರಾಗಲು ಪ್ರಯತ್ನಿಸಿ. ನಿಮ್ಮ ಮನಸ್ಸು ಏನೇನೋ ಯೋಚಿಸಲು ಪ್ರಾರಂಭಿಸಿದರೆ, ನಿಧಾನವಾಗಿ ನಿಮ್ಮ ಗಮನವನ್ನು ನಿಮ್ಮ ಉಸಿರಾಟದ ಕಡೆಗೆ ಮರುಸ್ಥಾಪಿಸಿ.

ಇದನ್ನೂ ಓದಿ: Japanese Water Therapy: ನೈಸರ್ಗಿಕವಾಗಿ ತ್ವಚೆಯ ಅಂದ ಹೆಚ್ಚಿಸುವ ವಾಟರ್‌ ಥೆರಪಿ; ಜಪಾನಿಗರ ಸೌಂದರ್ಯ ರಹಸ್ಯದ ಮೂಲವಿದು

ಮನಸ್ಸಿನ ಅರಿವು

ಮೆಡಿಟೇಷನ್‌ ಅಂದರೆ ನಿಮ್ಮ ಮನಸ್ಸಿನ ಆಲೋಚನೆಗಳನ್ನೆಲ್ಲ ದೂರ ಮಾಡುವುದಲ್ಲ. ಬದಲಿಗೆ, ನಿಮ್ಮ ಆಲೋಚನೆಗಳು ಮತ್ತು ಭಾವನೆಗಳ ಬಗ್ಗೆ ನಿರ್ಣಯ ತೆಗೆದುಕೊಳ್ಳಲು ಬೇಕಾದ ಅರಿವನ್ನು ಬೆಳೆಸುವುದಾಗಿದೆ. ಆಲೋಚನೆಗಳು ಬರಲು ಬಿಡಿ ಆದರೆ ಅವು ಸರಿಯಾಗಿದ್ದರೆ ಮಾತ್ರ ಒಪ್ಪಿಕೊಳ್ಳಿ. ನಿಮ್ಮ ಗಮನವನ್ನು ಉಸಿರಾಟದ ಮೇಲೆ ಅಥವಾ ನೀವೇ ಆಯ್ಕೆಮಾಡಿದ ವಸ್ತುಗಳ ಕಡೆಗೆ ನಿಧಾನವಾಗಿ ಬರುವಂತೆ ಮಾಡಿ.

ಕಡಿಮೆ ಅವಧಿಯೊಂದಿಗೆ ಪ್ರಾರಂಭಿಸಿ

ಪ್ರಾರಂಭದಲ್ಲಿ, ಮೆಡಿಟೇಷನ್‌ ಅವಧಿ ಕಡಿಮೆಯಿರಲಿ, ಕ್ರಮೇಣ ಹೆಚ್ಚಿಸಿ. ಈ ಅಭ್ಯಾಸವು ಮೆಡಿಟೇಷನ್‌ನಲ್ಲಿ ನಿಮ್ಮನ್ನು ನೀವು ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಸಹಕಾರಿಯಾಗಿದೆ. ಆರಂಭದಲ್ಲಿ 5-10 ನಿಮಿಷಗಳ ಕಾಲ ಗುರಿ ಇಟ್ಟುಕೊಳ್ಳಿ‌. ಆದರೆ ನೆನಪಿಡಿ ಈ ಸಮಯದಲ್ಲಿ ನೀವು ಹೆಚ್ಚು ಆರಾಮದಾಯಕವಾಗುವಂತೆ ನೋಡಿಕೊಳ್ಳಿ.

ಮೆಡಿಟೇಷನ್‌ ಗೈಡ್‌ಗಳು ಸಹ ಉತ್ತಮವಾಗಿದೆ

ಹೊಸದಾಗಿ ಮೆಡಿಟೇಷನ್‌ ಪ್ರಾರಂಭಿಸಿದವರಿಗೆ ಗೈಡ್‌ಗಳು ಅತ್ಯುತ್ತಮ ಸಾಧನಗಳಾಗಿವೆ. ಮೊಬೈಲ್‌ ಅಪ್ಲಿಕೇಶನ್‌ಗಳು, ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಹಾಗೂ ಅನುಭವಿ ಮೆಡಿಟೇಷನ್‌ ಟೀಚರ್‌ಗಳ ನೇತೃತ್ವದಲ್ಲಿ ಅಭ್ಯಾಸ ಮಾಡುವುದು ಸಹ ಉತ್ತಮವಾಗಿದೆ. ಅವರು ನೀಡುವ ಮಾರ್ಗದರ್ಶನವು ಮನಸ್ಸು ಕೇಂದ್ರೀಕರಿಸಲು ಮತ್ತು ಶಾಂತಗೊಳಿಸಲು ಸುಲಭವಾಗುತ್ತದೆ.

ತಾಳ್ಮೆಯಿಂದಿರಿ

ಮೆಡಿಟೇಷನ್‌ ಒಂದೇ ದಿನಕ್ಕೆ ಸಾಧಿಸಬಹುದಾದ ಕಲೆಯಲ್ಲ. ಅದಕ್ಕೆ ತಾಳ್ಮೆ ಅಗತ್ಯ. ಅನೇಕ ಸವಾಲುಗಳನ್ನು ಎದುರಿಸ ಬೇಕಾಗಬಹುದು. ಪ್ರತಿ ಧ್ಯಾನದ ಅವಧಿಯಲ್ಲಿ ನಿಮ್ಮ ಮನಸ್ಸನ್ನು ಹೆಚ್ಚು ಶಾಂತಗೊಳಿಸಲು ಪ್ರಯತ್ನಿಸಿ.

ಸ್ಥಿರವಾದ ದಿನಚರಿ ಪಾಲಿಸಿ

ಮೆಡಿಟೇಷನ್‌ ಜರ್ನಿಯಲ್ಲಿ ಒಂದೇ ರೀತಿಯ ಸ್ಥಿರತೆ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಪ್ರತಿ ದಿನವೂ ನಿಮ್ಮ ಧ್ಯಾನಕ್ಕಾಗಿ ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿ. ಅದು ಬೆಳಿಗ್ಗೆ, ಸಂಜೆ ಅಥವಾ ಮಲಗುವ ಮುನ್ನ ಯಾವುದೇ ಇರಲಿ, ಪ್ರತಿದಿನ ಒಂದೇ ಸಮಯವಿರಲಿ. ಮೆಡಿಟೇಷನ್‌ ಸಮಯವು ನಿಮ್ಮ ದೈನಂದಿನ ದಿನಚರಿಯ ಅವಿಭಾಜ್ಯ ಅಂಗವಾಗಿರಲಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ