logo
ಕನ್ನಡ ಸುದ್ದಿ  /  ಜೀವನಶೈಲಿ  /  Menstrual Hygiene Day: ಮುಟ್ಟಿನ ದಿನಗಳಲ್ಲಿ ನೈರ್ಮಲ್ಯ ಕಾಪಾಡದಿದ್ದರೆ ಎದುರಾಗಬಹುದು ಗಂಭೀರ ಸಮಸ್ಯೆ, ಸ್ವಚ್ಛತೆ ಮರಿಬೇಡಿ

Menstrual Hygiene Day: ಮುಟ್ಟಿನ ದಿನಗಳಲ್ಲಿ ನೈರ್ಮಲ್ಯ ಕಾಪಾಡದಿದ್ದರೆ ಎದುರಾಗಬಹುದು ಗಂಭೀರ ಸಮಸ್ಯೆ, ಸ್ವಚ್ಛತೆ ಮರಿಬೇಡಿ

Reshma HT Kannada

May 27, 2024 05:00 PM IST

google News

ಮುಟ್ಟಿನ ದಿನಗಳಲ್ಲಿ ನೈರ್ಮಲ್ಯ ಕಾಪಾಡದಿದ್ದರೆ ಎದುರಾಗಬಹುದು ಗಂಭೀರ ಸಮಸ್ಯೆ, ಸ್ವಚ್ಛತೆಗಿರಲಿ ಆದ್ಯತೆ

    • ಮಹಿಳೆಯರು ಮುಟ್ಟಿನ ದಿನಗಳಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳದೇ ಇರುವುದು ಬಹಳ ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ. ಇದು ಭವಿಷ್ಯದಲ್ಲಿ ಬಂಜೆತನ ಹಾಗೂ ಹೆಪಟೈಟಿಸ್ ಬಿಯಂತಹ ಕಾಯಿಲೆಗಳನ್ನು ತಂದೊಡ್ಡಬಹುದಾಗಿದೆ. ಹೀಗಾಗಿ ಮುಟ್ಟಿನ ದಿನಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳುವುದು ಬಹಳ ಮುಖ್ಯ.
ಮುಟ್ಟಿನ ದಿನಗಳಲ್ಲಿ ನೈರ್ಮಲ್ಯ ಕಾಪಾಡದಿದ್ದರೆ ಎದುರಾಗಬಹುದು ಗಂಭೀರ ಸಮಸ್ಯೆ, ಸ್ವಚ್ಛತೆಗಿರಲಿ ಆದ್ಯತೆ
ಮುಟ್ಟಿನ ದಿನಗಳಲ್ಲಿ ನೈರ್ಮಲ್ಯ ಕಾಪಾಡದಿದ್ದರೆ ಎದುರಾಗಬಹುದು ಗಂಭೀರ ಸಮಸ್ಯೆ, ಸ್ವಚ್ಛತೆಗಿರಲಿ ಆದ್ಯತೆ

ಋತುಸ್ರಾವದ ದಿನಗಳಲ್ಲಿ ಮಹಿಳೆಯರು ನೈರ್ಮಲ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಮುಟ್ಟಿನ ನೈರ್ಮಲ್ಯ ದಿನವನ್ನು ಆಚರಿಸಲಾಗುತ್ತದೆ. ಮುಟ್ಟಿನ ದಿನಗಳಲ್ಲಿ ಮಹಿಳೆಯರು ಸ್ವಚ್ಛತೆ ಕಾಪಾಡಿಕೊಳ್ಳುವುದರ ಬಗೆಗಿನ ಮಹತ್ವದ ಬಗ್ಗೆ ಅರಿವು ಮೂಡಿಸಲು ಮೇ 28 ಅನ್ನು ಮೀಸಲಿಡಲಾಗಿದೆ. ಋತುಸ್ರಾವ ಎನ್ನುವುದು ಪ್ರತಿ ತಿಂಗಳು ಮಹಿಳೆಯು ಎದುರಿಸುವ ಒಂದು ನೈಸರ್ಗಿಕ ಪ್ರಕ್ರಿಯೆ. ಇದು ಪ್ರತಿ 28 ದಿನಗಳಿಗೊಮ್ಮೆ ಆಗುತ್ತದೆ ಹಾಗೂ ಸಾಮಾನ್ಯವಾಗಿ ಐದು ದಿನಗಳ ಕಾಲ ಮುಟ್ಟಿನ ರಕ್ತಸ್ರಾವ ಇರುತ್ತದೆ. ಹೀಗಾಗಿ ವರ್ಷದ ಐದನೇ ತಿಂಗಳಲ್ಲಿಯೇ ಮುಟ್ಟಿನ ನೈರ್ಮಲ್ಯ ದಿನಕ್ಕೆ ದಿನಾಂಕವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಮುಟ್ಟಿನ ದಿನಗಳಲ್ಲಿ ನಾವು ಶುಚಿತ್ವವನ್ನು ಕಾಪಾಡಿಕೊಳ್ಳದೇ ಹೋದಲ್ಲಿ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ಈ ವರ್ಷವು ಮುಟ್ಟಿನ ನೈರ್ಮಲ್ಯ ದಿನದಂದು ನಾವು ಸ್ವಚ್ಛತೆಯ ಕಡೆಗೆ ಪಣ ತೊಡಬೇಕಿದೆ.

ಋತುಸ್ರಾವದ ದಿನಗಳಿಂದ ನೈರ್ಮಲ್ಯ ಕಾಪಾಡಿಕೊಳ್ಳದೇ ಇರುವುದು ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಉಂಟು ಮಾಡಬಹುದು. ಇದರಿಂದ ಏನೆಲ್ಲಾ ಸಮಸ್ಯೆಗಳು ಎದುರಾಗಬಹುದು ನೋಡಿ.

ಶುಚಿತ್ವ ಇಲ್ಲದೇ ಇರುವಂತಹ ಸ್ಯಾನಿಟರಿ ಪ್ಯಾಡ್‌ಗಳು

ಮುಟ್ಟಿನ ದಿನಗಳಲ್ಲಿ ನೀವು ಬಳಕೆ ಮಾಡುವ ಸ್ಯಾನಿಟರಿ ಪ್ಯಾಡ್‌ಗಳನ್ನು ಪ್ರತಿ ಮೂರರಿಂದ ನಾಲ್ಕು ಗಂಟೆಗಳಿಗೆ ಒಮ್ಮೆ ಬದಲಾಯಿಸುತ್ತಾ ಇರಬೇಕು. ಈ ರೀತಿ ಮಾಡದೇ ನೀವು ಶುಚಿತ್ವ ಇಲ್ಲದ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಕೆ ಮಾಡಿದಲ್ಲಿ ಮೂತ್ರಕ್ಕೆ ಸಂಬಂಧಿಸಿದ ಸೋಂಕು, ಶಿಲೀಂಧ್ರ ಸೋಂಕುಗಳು ಹಾಗೂ ಯೋನಿ ಪ್ರದೇಶದಲ್ಲಿ ಸೋಂಕು ಉಂಟಾಗುವ ಸಾಧ್ಯತೆ ಇರುತ್ತದೆ. ಈ ರೀತಿಯ ಸೋಂಕುಗಳು ಮಹಿಳೆಯರಲ್ಲಿ ಬಂಜೆತನವನ್ನು ಉಂಟುಮಾಡಬಹುದು.

ಕೈ ತೊಳೆದುಕೊಳ್ಳದೇ ಇರುವುದು

ಸ್ಯಾನಿಟರಿ ಪ್ಯಾಡ್‌ಗಳನ್ನು ಬದಲಾವಣೆ ಮಾಡಿಕೊಂಡ ಬಳಿಕ ಸಾಬೂನನ್ನು ಹಾಕಿ ಚೆನ್ನಾಗಿ ಕೈ ತೊಳೆದುಕೊಳ್ಳಬೇಕು. ಈ ರೀತಿ ಮಾಡದಿದ್ದರೆ ಭವಿಷ್ಯದಲ್ಲಿ ನಿಮಗೆ ಹೆಪಟೈಟಿಸ್ ಬಿಯಂತಹ ಕಾಯಿಲೆಗಳು ಬರಬಹುದು. ಅದೇ ರೀತಿ ಸ್ಯಾನಿಟರಿ ಪ್ಯಾಡ್‌ಗಳನ್ನು ಬದಲಿಸುವ ಮುನ್ನವೂ ನೀವು ಕೈಗಳ್ಳನ್ನು ಚೆನ್ನಾಗಿ ತೊಳೆದಿರಬೇಕು.

ಸಂಪೂರ್ಣ ಸ್ವಚ್ಚತೆ ಅವಶ್ಯ

ಮುಟ್ಟಿನ ಸಂದರ್ಭದಲ್ಲಿ ನಾವು ಯಾವುದೋ ಅವಸರದಲ್ಲಿ ನಮ್ಮ ವೈಯಕ್ತಿಕ ಅಂಗಗಳನ್ನು ತೊಳೆದುಕೊಳ್ಳುತ್ತೇವೆ. ಆದರೆ ಇದು ಅತ್ಯಂತ ಹಾನಿಕಾರಕ ಕ್ರಮ. ಮಲ ವಿಸರ್ಜನೆಯಾಗುವ ಜಾಗದಲ್ಲಿ ಕೆಲವು ಬ್ಯಾಕ್ಟೀರಿಯಾಗಳು ಇದ್ದರೆ ಅವುಗಳು ಯೋನಿಯ ಕಡೆಗೆ ಚಲಿಸುವ ಸಾಧ್ಯತೆ ಇರುತ್ತದೆ. ಇದು ವಿವಿಧ ಸೋಂಕುಗಳನ್ನುಂಟು ಮಾಡುತ್ತದೆ. ಹೀಗಾಗಿ ಮುಟ್ಟಿನ ಸಂದರ್ಭದಲ್ಲಿ ಖಾಸಗಿ ಅಂಗಗಳನ್ನು ಬಹಳ ಜಾಗರೂಕತೆಯಿಂದ ತೊಳೆದುಕೊಳ್ಳಬೇಕು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ