logo
ಕನ್ನಡ ಸುದ್ದಿ  /  ಜೀವನಶೈಲಿ  /  Over Thinking: ಅತಿಯಾದ ಆಲೋಚನೆಗಳಿಂದ ಕಂಗೆಟ್ಟಿದ್ದೀರಾ; ಓವರ್‌ ಥಿಂಕಿಂಗ್‌ ನಿಲ್ಲಿಸಲು ಇಲ್ಲಿದೆ ಜಪಾನಿಗರ 7 ಸರಳ ತಂತ್ರ

Over Thinking: ಅತಿಯಾದ ಆಲೋಚನೆಗಳಿಂದ ಕಂಗೆಟ್ಟಿದ್ದೀರಾ; ಓವರ್‌ ಥಿಂಕಿಂಗ್‌ ನಿಲ್ಲಿಸಲು ಇಲ್ಲಿದೆ ಜಪಾನಿಗರ 7 ಸರಳ ತಂತ್ರ

Reshma HT Kannada

Jan 23, 2024 02:01 PM IST

google News

ಸಾಂಕೇತಿಕ ಚಿತ್ರ

    • How to Stop Over Thinking: ಅತಿಯಾದ ಆಲೋಚನೆಗಳು ತಲೆ ತುಂಬ ತುಂಬಿಕೊಂಡು ತಲೆ ನೋವು ತರಿಸುತ್ತಿವೆ. ಬೇಡವೆಂದರೂ ಇಲ್ಲದ ಯೋಚನೆಗಳು ಆವರಿಸುತ್ತವೆ. ಇದರಿಂದ ನೆಮ್ಮದಿಯಿಲ್ಲ ಎಂದು ಹೇಳುವವರು ಜಪಾನಿಗರ ಈ ತಂತ್ರವನ್ನು ಪಾಲಿಸಬಹುದು. ಓವರ್‌ ಥಿಂಕಿಂಗ್‌ ನಿಲ್ಲಿಸಲು ಜಪಾನಿಗರ 7 ತಂತ್ರಗಳು ಹೀಗಿವೆ.
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಇದು ಒತ್ತಡದ ಜಮಾನ. ಪ್ರತಿದಿನ, ಪ್ರತಿಕ್ಷಣ ನಾವು ಇಲ್ಲಿ ಓಡುತ್ತಲೇ ಇರಬೇಕು. ಸಮಯ ಎನ್ನುವುದು ಮರೀಚಿಕೆಯಂತೆ ಕಾಡುತ್ತಿರುವುದು ಸುಳ್ಳಲ್ಲ. ಪ್ರತಿದಿನದ ಹೋರಾಟದ ಈ ಬದುಕಿನಲ್ಲಿ ಅತಿಯಾದ ಆಲೋಚನೆಗಳು ಮನಸ್ಸನ್ನು ಆವರಿಸುತ್ತಿವೆ. ಇಲ್ಲದ ಯೋಚನೆಗಳು ಮನದೊಳಗೆ ಬಂದು ಕೂತು ಗದ್ದಲ ಎಬ್ಬಿಸುತ್ತವೆ. ಅರ್ಥವಿಲ್ಲದ ಯೋಚನೆಗಳು ನೆಮ್ಮದಿ ಕೆಡಿಸುವುದು ನಿಜ. ಕೆಲವೊಮ್ಮೆ ನಾವು ನಮಗರಿವಿಲ್ಲದೇ ಓವರ್‌ ಥಿಕಿಂಗ್‌ ಮಾಡುತ್ತೇವೆ. ಓವರ್‌ ಥಿಕಿಂಗ್‌ ಎನ್ನುವುದು ನಮ್ಮ ನೆಮ್ಮದಿ ಹಾಗೂ ಮನಶಾಂತಿ ಕೆಡಿಸುತ್ತವೆ ಎಂದು ತಿಳಿದಿದ್ದರೂ ಪುನಃ ಪುನಃ ಅದನ್ನೇ ಮಾಡುತ್ತೇವೆ. ಹಾಗಾದ್ರೆ ಈ ಓವರ್‌ ಥಿಕಿಂಗ್‌ ನಿಲ್ಲಿಸೋದು ಹೇಗೆ? ಇಲ್ಲಿದೆ ಜಪಾನಿಗರ 7 ತಂತ್ರ. ಇದನ್ನು ಪಾಲಿಸಿ ಓವರ್‌ ಥಿಕಿಂಗ್‌ಗೆ ಬ್ರೇಕ್‌ ಹಾಕಿ.

ಶೋಗನೈ

ನಮ್ಮ ನಿಯಂತ್ರಣದಲ್ಲಿಲ್ಲದ ವಿಷಯಗಳನ್ನು ತಲೆ ತುಂಬಿಸುವುದು ಎ ಎಂದರ್ಥ. ನಮ್ಮ ನಿಯಂತ್ರಣದಲ್ಲಿ ಇಲ್ಲದ ವಿಷಯಗಳ ಮೇಲೆ ಸಮಯ ವ್ಯರ್ಥ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಇದರ ಬದಲು ನಿಮ್ಮ ಕೈಲಾಗುವ ಅಥವಾ ನಮ್ಮ ನಿಯಂತ್ರಣದಲ್ಲಿರುವ ವಿಷಯಗಳನ್ನು ಯಾವಾಗಲೂ ಎದುರು ನೋಡಬೇಕು. ಇದರಿಂದ ಜೀವನದಲ್ಲಿ ನೆಗೆಟಿವ್‌ ಯೋಚನೆಗಳಿಂದ ಹೊರ ಬರಬಹುದು.

ಶಿರಿನ್-ಯೋಕು

ಇಲ್ಲಸಲ್ಲದ ಯೋಚನೆಗಳನ್ನು ಮನಸ್ಸಿನಲ್ಲಿ ತುಂಬಿ ದಣಿರುವಾಗ ಮನಸ್ಸಿಗೆ ಒಂದಿಷ್ಟು ವಿರಾಮ ಬೇಕು ಎನ್ನಿಸುವುದು ಸಹಜ. ಅದಕ್ಕಾಗಿ ನಾವು ಮಾಡಬೇಕಿರುವುದು ಇಷ್ಟೇ. ನಿಸರ್ಗದ ಮಡಿಲಲ್ಲಿ ಸಮಯ ಕಳೆಯಿರಿ. ಇದರಿಂದ ಮನಸ್ಸು ನಿರಾಸವಾಗುತ್ತದೆ. ನೆಮ್ಮದಿಯ ಭಾವ ಆವರಿಸುತ್ತದೆ.

ನೆನ್ಬುಟ್ಸು

ಅತಿಯಾಗಿ ಯೋಚಿಸಲು ಕಾರಣವಾಗುವ ವಿಚಾರಗಳಿಂದ ಮನಸ್ಸನ್ನು ಹೊರತನ್ನಿ. ನಿಮ್ಮ ಆಲೋಚನೆಗಳನ್ನು ಬದಲಾಯಿಸಿ. ನೀವು ನಂಬುವ ದೇವರನ್ನು ಪ್ರಾರ್ಥಿಸಿ. ಹೀಗೆ ನಿಧಾನಕ್ಕೆ ಮನಸ್ಸನ್ನು ಬದಲಾಯಿಸಿ. ಶ್ಲೋಕಗಳನ್ನು ಪಠಿಸುವ ಮೂಲಕವೂ ಅತಿಯಾದ ಯೋಚನೆಗೆ ಬ್ರೇಕ್‌ ಹಾಕಬಹುದು. ಮನಸ್ಸನ್ನು ಶಾಂತಗೊಳಿಸಲು ಇದು ಉತ್ತಮ ವಿಧಾನ.

ಝಝೆನ್

ಝಝೆನ್ ಎಂಬುದು ಝೆನ್ ಬೌದ್ಧಧರ್ಮದಲ್ಲಿ ವ್ಯಾಪಕವಾಗಿ ಅಭ್ಯಾಸ ಮಾಡುವ ಧ್ಯಾನದ ಒಂದು ರೂಪ. ಇದು ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಅತಿಯಾದ ಯೋಚನೆ ತಲೆ ತುಂಬಿಕೊಳ್ಳುವುದನ್ನ ತಡೆಯಲು ಇದು ಉತ್ತಮ ಮಾರ್ಗ.

ಗಾಮನ್

ಕಷ್ಟದ ಸಮಯದಲ್ಲಿ ಧೃತಿಗೆಡಬಾರದು, ತಲೆ ಕೆಡಿಸಿಕೊಳ್ಳಬಾರದು. ಇದನ್ನು ನೀವು ಕಲಿಯಬೇಕು. ಆಗ ಮುಂದಿನ ಜೀವನ ಸರಳ ಎನ್ನಿಸುತ್ತದೆ. ಯಾವುದೇ ವಿಚಾರದಲ್ಲಿ ದೃಢ ನಿರ್ಧಾರ ಕೈಗೊಳ್ಳುವುದು ಕೂಡ ಮುಖ್ಯವಾಗಿದೆ. ನಾವು ಯಾವ ಹೆಜ್ಜೆಯನ್ನು ಇಡುತ್ತೇವೆ ಅದರ ಮೇಲೆ ಗಮನ ಕೇಂದ್ರೀಕರಿಸುವುದು ಮುಖ್ಯವಾಗುತ್ತದೆ.

ವಾಬಿ-ಸಾಬಿ

ಈ ಜಪಾನೀಸ್ ತಂತ್ರವು ಎಲ್ಲಾ ಸಮಯದಲ್ಲೂ ವಿಷಯಗಳು ಪರಿಪೂರ್ಣವಲ್ಲ ಮತ್ತು ಜೀವನದಲ್ಲಿ ಎಲ್ಲವೂ ಹೇಗೆ ಕ್ಷಣಿಕ ಎಂಬುದನ್ನು ನಮಗೆ ಅರ್ಥೈಸುತ್ತದೆ. ಯಾರೂ ಪರಿಪೂರ್ಣವಲ್ಲ, ಯಾವುದೂ ಶಾಶ್ವತವಲ್ಲ ಎಂಬ ಎರಡು ಅಂಶಗಳು ನಿಮಗೆ ತಿಳಿದರೆ ಸಾಕು ಆಗ ನೀವು ಅತಿಯಾಗಿ ಯೋಚಿಸುವುದಕ್ಕೆ ತಾನಾಗಿಯೇ ಬ್ರೇಕ್‌ ಹಾಕುತ್ತೀರಿ.

ಇಕೆಬಾನಾ

ಇದು ಆಸಕ್ತಿದಾಯಕ ಹಾಗೂ ಪರಿಣಾಮಕಾರಿ ತಂತ್ರ. ಇದು ಹೇಗೆಂದರೆ ನೀವು ಹೂಗಳನ್ನು ಜೋಡಿಸುವುದು, ರಂಗೋಲಿ ಬಿಡುವುದು, ಚಿತ್ರ ಬಿಡಿಸುವುದು ಇಂತಹವುಗಳ ಮೇಲೆ ಗಮನ ಹರಿಸುವುದು. ಈ ರೀತಿ ಮನಸ್ಸಿಗೆ ಖುಷಿ ನೀಡುವ ಕೆಲಸದಲ್ಲಿ ತೊಡಗಿದಾಗ ಮನಸ್ಸು ಪ್ರಫುಲ್ಲವಾಗುತ್ತದೆ. ಅಲ್ಲದೆ ಇದರಿಂದ ಬೇಡದ ಯೋಚನೆಗಳು ಮನಸ್ಸಿನಲ್ಲಿ ಸುಳಿದಾಡುವುದಿಲ್ಲ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ