logo
ಕನ್ನಡ ಸುದ್ದಿ  /  ಜೀವನಶೈಲಿ  /  Monday Motivation: ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ; ಭವಿಷ್ಯ, ಭೂತಕಾಲದ ನಡುವೆ ಬದುಕುವವರೇ ಜೀವನದಲ್ಲಿ ಖುಷಿಯಾಗಿರಲು ಸಾಧ್ಯ

Monday Motivation: ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ; ಭವಿಷ್ಯ, ಭೂತಕಾಲದ ನಡುವೆ ಬದುಕುವವರೇ ಜೀವನದಲ್ಲಿ ಖುಷಿಯಾಗಿರಲು ಸಾಧ್ಯ

HT Kannada Desk HT Kannada

Mar 25, 2024 10:04 AM IST

google News

ಜೀವನಕ್ಕೊಂದು ಸ್ಫೂರ್ತಿಮಾತು

  • Monday Motivation: ನಿನ್ನೆ ಹಾಗೂ ನಾಳೆಗಳ ಬಗ್ಗೆ ಚಿಂತಿಸದೆ ಇಂದು , ಈ ಕ್ಷಣವನ್ನು ಅನುಭವಿಸುತ್ತಾ ಬದುಕುವವರು ಮಾತ್ರ ಜೀವನದಲ್ಲಿ ಸುಖವಾಗಿರಲು ಸಾಧ್ಯ. ಇಲ್ಲವಾದರೆ ಹಳೆಯದನ್ನು ಯೋಚಿಸುತ್ತಾ, ಭವಿಷ್ಯದಲ್ಲಿ ನಮ್ಮ ಜೀವನ ಹೇಗಿರುವುದೋ ಎಂದು ಚಿಂತಿಸುತ್ತಾ ಇರುವವರು ಎಂದಿಗೂ ಸಂತೋಷದಿಂದ ಇರಲು ಸಾಧ್ಯವಿಲ್ಲ. 

ಜೀವನಕ್ಕೊಂದು ಸ್ಫೂರ್ತಿಮಾತು
ಜೀವನಕ್ಕೊಂದು ಸ್ಫೂರ್ತಿಮಾತು (PC: Unsplash)

Monday Motivation: ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ ಎಂಬ ಮಾತಿದೆ. ಸುಖ ಆಗಲೀ ದುಃಖ ಆಗಲೀ ಆ ಕ್ಷಣ ಮತ್ತೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಜೀವನದಲ್ಲಿ 100 ರಲ್ಲಿ 99 ಜನರು ಈ ರೀತಿ ಕಳೆದು ಹೋದ ವಿಚಾರಗಳ ಬಗ್ಗೆ ಯೋಚನೆ ಮಾಡಿಯೇ ಇನ್ನಷ್ಟು ದುಃಖಿತರಾಗುತ್ತಾರೆ. ಅದರಿಂದ ಇನ್ನಷ್ಟು ನೋವು ಅನುಭವಿಸುತ್ತಾರೆಯೇ ಹೊರತು ಎಂದಿಗೂ ಖುಷಿ ಸಿಗುವುದಿಲ್ಲ.

ಅದರಲ್ಲಿ ಒಬ್ಬರು ಮಾತ್ರ ಕಳೆದು ಹೋದ ವಿಚಾರಗಳ ಬಗ್ಗೆ ಯೋಚನೆ ಮಾಡದೆ, ಭವಿಷ್ಯದ ಬಗ್ಗೆ ಚಿಂತಿಸದೆ ವಾಸ್ತವದಲ್ಲಿ ಬದುಕುತ್ತಾರೆ. ನಾವೆಲ್ಲರೂ ಆ ಒಬ್ಬರಂತೆ ಆಗಬೇಕು. ನಾನು ಹಾಗೆ ಮಾಡಿದ್ದರೆ ಚೆನ್ನಾಗಿರುತ್ತಿತ್ತು. ಹಾಗೆ ಮಾಡಿದ್ದರೆ ನನ್ನ ಜೀವನ ಅದ್ಭುತವಾಗಿರುತ್ತಿತ್ತು ಎಂದು ಯೋಚಿಸುತ್ತಾ ಕೂತರೆ ಮನುಷ್ಯ ತನ್ನ ಜೀವನವನ್ನು ಇನ್ನಷ್ಟು ಹಾಳು ಮಾಡಿಕೊಳ್ಳುತ್ತಾನೆ. ಆದರೆ ಭೂತಕಾಲವು ಆ ಕ್ಷಣ ಮಾತ್ರ. ಆ ಸಮಯದಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ಜಾಗರೂಕರಾಗಿರಬೇಕು. ಯಾರಿಗೆ ಗೊತ್ತು ಜೀವನದಲ್ಲಿ ಮುಂದೆ ನೀವು ಕಳೆದುಕೊಂಡ ದುಪ್ಪಟ್ಟು ಖುಷಿ ನಿಮಗೆ ದೊರೆಯಬಹುದು.

ಕಹಿ ಸಿಹಿಗಳ ಮಿಶ್ರಣ

ಜೀವನದಲ್ಲಿ ಸಿಹಿ ಕಹಿ ಎರಡೂ ಇರಬೇಕು. ಎಲ್ಲರ ಜೀವನದಲ್ಲಿ ಎಲ್ಲವೂ ಚೆನ್ನಾಗಿದ್ದರೆ ಜೀವನ ಚೆನ್ನಾಗಿರುವುದಿಲ್ಲ. ಹಾಗಂಥ ಎಲ್ಲವೂ ನಕಾರಾತ್ಮಕ ಅಂಶಗಳಿಂದ ಕೂಡಿದ್ದರೂ ಅದು ನರಕವಾಗಿರುತ್ತದೆ. ನಮ್ಮ ಭವಿಷ್ಯವು ವರ್ತಮಾನದಲ್ಲಿ ನಾವು ಹೇಗೆ ಬದುಕುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿದೆ. ಪ್ರಸ್ತುತ ಕ್ಷಣವು ಹಿಂದಿನದಾಗಿರುತ್ತದೆ. ಅದಕ್ಕಾಗಿಯೇ ನೀವು ವರ್ತಮಾನದಲ್ಲಿ ಬದುಕಬೇಕು. ಆಗ ಮಾತ್ರ ನೀವು ಸಂತೋಷವಾಗಿರುತ್ತೀರಿ. ಇಲ್ಲದಿದ್ದರೆ ಎಲ್ಲಾ ಸಮಸ್ಯೆಗಳು ಉದ್ಭವಿಸುತ್ತವೆ. ಇದಕ್ಕೆ ಸಂಬಂಧಿಸಿದಂತೆ ಒಂದು ಪುಟ್ಟ ಕಥೆ ಇದೆ.

ಗುರುಗಳು ಒಮ್ಮೆ ತಮ್ಮ ಶಿಷ್ಯರನ್ನು ಕರೆದು ನಾಳೆ ಎಂಬುದು ಭ್ರಮೆ ಇಂದು ವಾಸ್ತವ ಆದ್ದರಿಂದ ನಾಳೆವರೆಗೂ ಯಾವ ಕೆಲಸವನ್ನೂ ಮುಂದೂಡಬೇಡಿ ಎನ್ನುತ್ತಾರೆ. ಗುರುಗಳು ಹೇಳಿದ ಮಾತನ್ನು ಒಬ್ಬ ಯೋಧ ಕೇಳಿಸಿಕೊಳ್ಳುತ್ತಾನೆ. ಸ್ವಲ್ಪ ದಿನಗಳ ನಂತರ ಒಂದು ದಿನ ಯೋಧನು ತನ್ನ ಶತ್ರುಗಳನ್ನು ಜೈಲಿನಲ್ಲಿ ಬಂಧಿಸುತ್ತಾನೆ. ಆದರೆ ಆ ರಾತ್ರಿ ಯೋಧನಿಗೆ ನಿದ್ರೆ ಬರುವುದಿಲ್ಲ. ಶತ್ರುಗಳು ತಪ್ಪಿಸಿಕೊಂಡು, ಮುಂದಿನ ದಿನಗಳಲ್ಲಿ ನನಗೆ ಇನ್ನಷ್ಟು ಸಮಸ್ಯೆ ನೀಡಿದರೆ ಏನು ಮಾಡುವುದು ಎಂದು ಚಿಂತೆಯಲ್ಲಿ ಮುಳುಗುತ್ತಾನೆ. ಅದರ ನಡುವೆಯೇ ಆ ದಿನ ಗುರುಗಳು ಹೇಳಿದ ಮಾತು ಆತನಿಗೆ ನೆನಪಾಗುತ್ತದೆ. ಹೌದು, ನಾಳೆಗಾಗಿ ಏಕೆ ಯೋಚನೆ ಮಾಡಬೇಕು, ನಾಳೆಯ ವಿಚಾರವನ್ನು ನಾಳೆ ನೋಡಿಕೊಳ್ಳೋಣ ಎಂದುಕೊಳ್ಳುತ್ತಾನೆ, ಹಾಗೇ ಯೋಚಿಸುತ್ತಿದ್ದಂತೆ ಆತನಿಗೆ ನಿದ್ರೆ ಆವರಿಸುತ್ತದೆ.

ಕಾಲದ ಜೊತೆ ಯುದ್ಧ ಮಾಡುವ ಪರಿಸ್ಥಿತಿಗೆ ತಂದುಕೊಳ್ಳಬೇಡಿ

ಗುರುಗಳು ಹೇಳಿದ ಮಾತು ಮೇಲ್ನೋಟಕ್ಕೆ ಸರಳ ಎನಿಸಬಹುದು. ಆದರೆ ಅದರಲ್ಲಿ ಬಹಳ ಅರ್ಥ ಅಡಗಿದೆ. ನಾವೆಲ್ಲರೂ ಭೂತ ಕಾಲ, ಭವಿಷ್ಯದ ಬಗ್ಗೆ ಯೋಚಿಸುತ್ತಲೇ ಅರ್ಧ ಕಾಲ ಕಳೆಯುತ್ತೇವೆ. ಆದರೆ ವಾಸ್ತವದಲ್ಲಿ ಬದುಕಿದರೆ ಮಾತ್ರ ನೀವು ಖುಷಿಯಾಗಿರಬಹುದು. ಇಲ್ಲವಾದರೆ ನೂರಾರು ಯೋಚನೆಗಳು ನಿಮ್ಮ ತಲೆಯನ್ನು ತುಂಬಿ ನೀವು ಖುಷಿಯಿಂದ ಬದುಕಲು ಸಾಧ್ಯವೇ ಇಲ್ಲ. ಕಾಲದ ಜೊತೆ ಯುದ್ಧ ಮಾಡುವ ಪರಿಸ್ಥಿತಿ ಎದುರಾಗುತ್ತದೆ. ಎಷ್ಟೇ ದೊಡ್ಡ ವ್ಯಕ್ತಿಗಳಾಗಿದ್ದರೂ, ಪವಾಡ ಪುರುಷರಾದರೂ ಕಳೆದು ಹೋದ ಕಾಲವನ್ನು ಮರಳಿ ವಾಪಸ್‌ ತರಲು ಸಾಧ್ಯವಿಲ್ಲ. ಹಾಗೇ ಭವಿಷ್ಯದಲ್ಲಿ ಏನು ಜರುತ್ತದೆ ಎಂಬುದನ್ನು ನಿರ್ಣಯಿಸಲು ಸಾಧ್ಯವಿಲ್ಲ. ಆದ್ದರಿಂದ ಅದರೆಡನ್ನೂ ಬಿಟ್ಟು ವಾಸ್ತವದಲ್ಲಿ ಬದುಕಬೇಕು.

ಜೀವನದಲ್ಲಿ ಯಾವುದೂ ಶಾಶ್ವತವಲ್ಲ. ಗಡಿಯಾರ, ಹರಿಯುವ ನದಿ, ನಿಮ್ಮ ಜೀವಿತಾವಧಿ ಯಾವುದೂ ಶಾಶ್ವತವಲ್ಲ. ಯಾವುದೂ ಹಿಮ್ಮುಖವಾಗಿ ಚಲಿಸುವುದಿಲ್ಲ. ಅದಕ್ಕಾಗಿಯೇ ನಾವು ವರ್ತಮಾನದಲ್ಲಿ ಸಂತೋಷದಿಂದ ಬದುಕಬೇಕು. ನಿಮ್ಮನ್ನು ನೋಯಿಸಿದವರ ಬಗ್ಗೆ ಚಿಂತಿಸಬೇಡಿ. ನಾಳೆ ಏನಾಗುತ್ತದೆ ಎಂದು ಚಿಂತಿಸಬೇಡಿ. ಏಕೆಂದರೆ ನಡೆಯುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ನಿಮ್ಮ ವರ್ತಮಾನದ ಆಲೋಚನೆಗಳು ಮಾತ್ರ ಯಾವ ವಿಚಾರವನ್ನಾದರೂ ನಿರ್ಣಯಿಸಬಲ್ಲವು. ನಾಲ್ಕು ಜನರೊಂದಿಗೆ ನಗುತ್ತಾ ಜೀವನ ಸಾಗಿಸಬೇಕು. ನಿಮ್ಮ ಬದುಕಿಗೆ ನೀವೇ ರಾಜ/ರಾಣಿ, ನೀವೇ ಮಂತ್ರಿಗಳು. ಇತರರಿಗೆ ಹೆಚ್ಚು ಗಮನ ಕೊಡುವ ಅಗತ್ಯವಿಲ್ಲ. ನಿಮಗಾಗಿ ಬದುಕಿ, ನಿಮಗಾಗಿ ಸಂತೋಷ ಕಂಡುಕೊಳ್ಳಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ