logo
ಕನ್ನಡ ಸುದ್ದಿ  /  ಜೀವನಶೈಲಿ  /  Money Saving Tips: ಹಣ ಉಳಿತಾಯ ಮಾಡೋದು ಹೇಗೆ ಎಂದು ಚಿಂತೆ ಮಾಡೋರಿಗಾಗಿ ಇಲ್ಲಿದೆ 10 ಟಿಪ್ಸ್‌

Money Saving Tips: ಹಣ ಉಳಿತಾಯ ಮಾಡೋದು ಹೇಗೆ ಎಂದು ಚಿಂತೆ ಮಾಡೋರಿಗಾಗಿ ಇಲ್ಲಿದೆ 10 ಟಿಪ್ಸ್‌

Reshma HT Kannada

Jan 15, 2024 05:00 PM IST

google News

ಸಾಂಕೇತಿಕ ಚಿತ್ರ

    • ನನ್ನಕೈಯಲ್ಲಿ ಎಷ್ಟು ದುಡ್ಡಿದ್ರೂ ಖರ್ಚಾಗುತ್ತೆ, ಇತ್ತೀಚಗಂತೂ ಹಣವೇ ಉಳಿತಿಲ್ಲ, ಹಣ ಉಳಿತಾಯೋ ಮಾಡೋದು ಹೇಗೆ ಅನ್ನೋದೆ ನಂಗೆ ತಿಳಿತಿಲ್ಲ… ಹೀಗೆ ಯೋಚಿಸುವವರಿಗಾಗಿ ಇಲ್ಲಿದೆ ಒಂದಿಷ್ಟು ಹಣ ಉಳಿತಾಯದ ಟಿಪ್ಸ್‌. ಇದನ್ನು ನೀವು ಫಾಲೋ ಮಾಡಿದ್ರೆ ಖಂಡಿತ ನಿಮ್ಮ ತಿಂಗಳ ಹಣದಲ್ಲಿ ಒಂದಿಷ್ಟು ಉಳಿತಾಯ ಮಾಡಲು ಸಾಧ್ಯವಾಗೋದು ಪಕ್ಕಾ. 
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಎಷ್ಟೇ ದುಡ್ಡಿದ್ರೂ ಹೀಗೆ ಹೋಗಿ ಹಾಗೆ ಬರುವಷ್ಟರಲ್ಲಿ ಖರ್ಚಾಗುತ್ತೆ. ಪ್ರತಿ ತಿಂಗಳು ಎಷ್ಟೇ ಸಂಬಳ ಬಂದ್ರೂ ತಿಂಗಳ ಕೊನೆಯಲ್ಲಿ ಕೈ ಖಾಲಿ ಆಗೋದು ಖಂಡಿತ. ನಾನು ಎಷ್ಟ್ರೇ ಪ್ರಯತ್ನ ಮಾಡಿದ್ರೂ ದುಡ್ಡು ಉಳಿಸೋಕೆ ಆಗ್ತಾನೇ ಇಲ್ಲ... ಹೀಗೆ ಹಣ ಉಳಿತಾಯ ಮಾಡಲಾಗದೇ ಗೋಗರೆಯುವವರು ಪೈಕಿ ನಮ್ಮಲ್ಲಿ ಹಲವರಿದ್ದಾರೆ. ಹಣ ಉಳಿತಾಯ ಮಾಡಲಾಗದೇ ಒದ್ದಾಡುವವರು ನಾವು ನೀವು ಮಾತ್ರವಲ್ಲ ನಮ್ಮಂತೆ ಸಾಕಷ್ಟು ಮಂದಿ ಇದ್ದಾರೆ.

ಹಾಗಂತ ಹಣ ಉಳಿಸೋದು ಅಸಾಧ್ಯ ಎಂದೇನಲ್ಲ. ಅದಕ್ಕಾಗಿ ನೀವು ಒಂದಿಷ್ಟು ಸಲಹೆಗಳನ್ನು ಪಾಲಿಸಬೇಕು. ಈ ಸಲಹೆಗಳನ್ನು ತಪ್ಪದೇ ಪಾಲಿಸಿದ್ರೆ ನೀವು ಹಣ ಉಳಿತಾಯ ಮಾಡೋದ್ರಲ್ಲಿ ಪಂಟರಾಗೋದು ಪಕ್ಕಾ. ಹಾಗಾದ್ರೆ ಏನದು ಸಲಹೆ, ಹಣ ಉಳಿತಾಯ ಮಾಡೋಕೆ ಏನು ಮಾಡಬೇಕು ಅಂತೆಲ್ಲಾ ನೀವು ಯೋಚಿಸ್ತಾ ಇದ್ರೆ ನಿಮಗಾಗಿ ಇಲ್ಲಿದೆ ಟಿಪ್ಸ್‌.

ನಿಮ್ಮ ಖರ್ಚನ್ನು ಗಮನಿಸಿ

ನೀವು ಖರ್ಚನ್ನು ಕಡಿಮೆ ಮಾಡಬೇಕು ಅಂತಿದ್ರೆ ಮೊದಲು ನಿಮ್ಮ ವೆಚ್ಚಗಳ ಮೇಲೆ ಗಮನ ಹರಿಸಬೇಕು. ಪ್ರತಿ ತಿಂಗಳು ನೀವು ಯಾವ್ಯಾವುದಕ್ಕೆ ಎಷ್ಟೆಷ್ಟು ಖರ್ಚು ಮಾಡುತ್ತಿದ್ದೀರಿ ಎಂಬುದರ ಮೇಲೆ ನಿಗಾ ಇರಲಿ. ಇದರಿಂದ ಎಲ್ಲೆಲ್ಲಿ ಉಳಿತಾಯ ಮಾಡಬಹುದು ಎಂಬುದು ನಿಮಗೆ ತಿಳಿಯುತ್ತದೆ. ಹಿಂದಿನ ತಿಂಗಳ ಬ್ಯಾಂಕ್‌ ಸ್ಟೇಟ್‌ಮೆಂಟ್‌ ತೆಗೆದು ಇದರಲ್ಲಿ ಯಾವ್ಯಾವುದು ಅನಗತ್ಯ ಖರ್ಚು ಎಂಬುದನ್ನು ತಿಳಿಯಿರಿ. ಅದನ್ನು ನಿಮ್ಮ ಖರ್ಚಿನ ಪಟ್ಟಿಯಂದ ತೆಗೆದು ಹಾಕಿ. ಹೀಗೆ ಮಾಡುವುದರಿಂದ ಹಣ ಉಳಿತಾಯವಾಗುತ್ತದೆ.

ಇದನ್ನೂ ಓದಿ: Money Saving: ಹಣ ಉಳಿತಾಯ ಮಾಡೋದ್ರಲ್ಲಿ ಈ ರಾಶಿಯವರು ಎತ್ತಿದ ಕೈ; ಯಾವೆಲ್ಲಾ ರಾಶಿಯವರಿಗೆ ದುಡ್ಡು ಉಳಿಸೋ ಯೋಗ ಇದೆ ನೋಡಿ

ಉಳಿತಾಯವನ್ನು ಸ್ವಯಂಚಾಲಿತಗೊಳಿಸಿ

ಇದು ಉಳಿತಾಯಕ್ಕೆ ಇರುವ ಬೆಸ್ಟ್‌ ಮಾರ್ಗ. ಸ್ವಯಂಚಾಲಿತಗೊಳಿಸುವುದು ಎಂದರೆ ನಿಮ್ಮ ಖಾತೆಯಿಂದ ಉಳಿತಾಯ ಖಾತೆಗೆ ನೇರವಾಗಿ ಹಣ ಸಂದಾಯವಾಗುವಂತೆ ಮಾಡುವುದು. ಪ್ರತಿ ತಿಂಗಳು ಆರ್‌ಡಿಯಂತಹ ಸ್ಕ್ರೀಮ್‌ಗಳನ್ನು ಮಾಡಬಹುದು. ಇದು ಉಳಿತಾಯಕ್ಕೆ ಬೆಸ್ಟ್‌ ಮಾರ್ಗ. ಒಂದು ಬ್ಯಾಂಕ್‌ ಖಾತೆ ಇರಿಸಿಕೊಂಡು ಅದಕ್ಕೆ ಎಟಿಎಂ, ಮೊಬೈಲ್‌ ಬ್ಯಾಂಕಿಂಗ್‌, ನೆಟ್‌ ಬ್ಯಾಂಕಿಂಗ್‌ ಯಾವುದೂ ಬಳಸದೇ ಅದರಲ್ಲಿ ಪ್ರತಿ ತಿಂಗಳು ಇಂತಿಷ್ಟು ಎಂದು ಹಣ ಹಾಕುವುದು ಮುಖ್ಯವಾಗುತ್ತದೆ. ಇದು ನಿಮ್ಮ ಅತಿಯಾದ ಖರ್ಚಿನ ನಿಯಂತ್ರಣಕ್ಕೆ ಉತ್ತಮ ಮಾರ್ಗ.

ನೋಟಿಫಿಕೇಷನ್‌ಗಳನ್ನು ಆಫ್‌ ಮಾಡಿ ಇಡಿ

ಇತ್ತೀಚಿನ ದಿನಗಳಲ್ಲಿ ಹೆಚ್ಚು ಹಣ ಖರ್ಚಾಗುವಂತೆ ಮಾಡುವಲ್ಲಿ ಮೊಬೈಲ್‌ ನೋಟಿಫಿಕೇಶನ್‌ಗಳ ಪಾತ್ರವೂ ದೊಡ್ಡದು. ಮೊಬೈಲ್‌ ನೋಟಿಫಿಕೇಷನ್‌ಗಳು ಆಫರ್‌ಗಳನ್ನು ತೋರಿಸುವ ಮೂಲಕ ಹೆಚ್ಚು ಹಣ ಖರ್ಚಾಗುವಂತೆ ಮಾಡುವುದು ಸುಳ್ಳಲ್ಲ. ಆಫರ್‌ಗಳನ್ನು ನೋಡಿದಾಗ ಬೇಡವೆಂದರೂ ಹಣ ಖರ್ಚಾಗುತ್ತದೆ. ಇದಕ್ಕಾಗಿ ನೋಟಿಫಿಕೇಶನ್‌ ಆಪ್‌ ಮಾಡಿ ಇಡುವುದು ಉತ್ತಮ ಪರಿಹಾರ.

ನಿಮ್ಮ ಮೋಜಿನ ಖರ್ಚನ್ನು ಮೌಲ್ಯಮಾಪನ ಮಾಡಿ

ಸಿನಿಮಾ ನೋಡುವುದು, ಮನೆಯ ಇಂಟರ್‌ನೆಟ್‌, ಕೇಬಲ್‌ ಬಿಲ್‌, ಅಮೆಜಾನ್‌ ಪ್ರೈಮ್‌, ನೆಟ್‌ಫ್ಲಿಕ್ಸ್‌ನಂತಹ ಒಟಿಟಿ ವೇದಿಕೆಗಳ ರೀಚಾರ್ಜ್ ಈ ಎಲ್ಲಾ ಖರ್ಚುಗಳ ಮೌಲ್ಯಮಾಪನ ಮಾಡಿ. ಇದರಿಂದ ಎಲ್ಲೆಲ್ಲಿ ಹಣ ಉಳಿಸಬಹುದು ಎಂಬುದು ನಿಮಗೆ ಅರಿವಿಗೆ ಬರುತ್ತದೆ.

ಇದನ್ನೂ ಓದಿ: Money Saving Tips: ಮಕ್ಕಳ ವಿದ್ಯಾಭ್ಯಾಸಕ್ಕೆ ಬಾಲ್ಯದಿಂದಲೇ ಹಣ ಹೊಂದಿಸುವುದು ಹೇಗೆ; ಪೋಷಕರಿಗೆ ಇಲ್ಲಿದೆ ಒಂದಿಷ್ಟು ಸಲಹೆ

ಮನೆ ಖರ್ಚಿನ ಮೇಲೆ ನಿಗಾ ಇರಲಿ

ಪ್ರತಿ ತಿಂಗಳು ಮನೆಗೆ ದಿನಸಿ ವಸ್ತುಗಳನ್ನು ತರುವಾಗ ಬೇಡದ ವಸ್ತುಗಳ ಮೇಲೆ ನಿಗಾ ಇರಲಿ. ಸುಮ್ಮನೆ ಬೇಡದ ವಸ್ತುಗಳನ್ನು ಮನೆಯಲ್ಲಿ ತಂದು ತುಂಬಿಸಿ ಹಾಳು ಮಾಡಬೇಡಿ. ಆಫರ್‌ ಇರುವುದನ್ನು ಗಮನಿಸಿ ಆ ಸಮಯದಲ್ಲೇ ಶಾಪಿಂಗ್‌ ಮಾಡಿ.

ಅತಿಯಾದ ಬ್ರ್ಯಾಂಡ್‌ ಬಳಕೆ ಕಡಿಮೆ ಮಾಡಿ

ನೀವು ಬ್ರ್ಯಾಂಡೆಡ್‌ ವಸ್ತುಗಳನ್ನೇ ಬಳಸುವುದು ಎಂದಾದರೆ ಇದರಲ್ಲಿ ಒಂದಿಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಿ. ಬ್ರ್ಯಾಂಡೆಂಡ್‌ ವಸ್ತುಗಳನ್ನು ಆಫರ್‌ ಇರುವಾಗ ಖರೀದಿಸಬಹುದು ಅಥವಾ ಬ್ರ್ಯಾಂಡೆಡ್‌ ವಸ್ತುಗಳನ್ನು ಆಫರ್‌ನಲ್ಲಿ ಮಾರಾಟ ಮಾಡುವ ಔಟ್‌ಲೆಟ್‌ಗಳನ್ನು ಹುಡುಕಿ ಖರೀದಿ ಮಾಡಿ.

ಬ್ಯಾಂಕ್‌ಗಳನ್ನು ಹೋಲಿಸಿ

ನೀವು ಯಾವುದೇ ಬ್ಯಾಂಕ್‌ನಲ್ಲಿ ಲೋನ್‌ ಇಎಂಐಗಳನ್ನು ಕಟ್ಟುತ್ತಿದ್ದರೆ, ಬೇರೆ ಬ್ಯಾಂಕ್‌ಗಳೊಂದಿಗೆ ಹೋಲಿಸಿ ನೋಡಿ. ಬೇರೆ ಬ್ಯಾಂಕ್‌ಗಳಲ್ಲೂ ಬಡ್ಡಿದರ ಇಷ್ಟೇ ಇದ್ಯಾ ಗಮನಿಸಿ. ಇದು ಕೂಡ ನಿಮಗೆ ಹಣ ಉಳಿತಾಯಕ್ಕೆ ಸಹಾಯ ಮಾಡುವ ಮಾರ್ಗವಾಗಿದೆ.

ಕಾರ್‌ ಇನ್ಷ್ಯೂರೆನ್ಸ್‌

ನೀವು ಕಾರ್‌ ಹೊಂದಿದ್ದು ಪ್ರತಿವರ್ಷ ಇನ್ಷ್ಯೂರೆನ್ಸ್‌ ಕಟ್ಟುವುದು ಕಡ್ಡಾಯವಾಗಿದೆ. ಆದರೆ ಬೇರೆ ಬೇರೆ ಕಂಪನಿಗಳು ಒಂದೊಂದು ದರವನ್ನು ಇನ್ಷ್ಯೂರೆನ್ಸ್‌ಗೆ ನಿಗದಿ ಮಾಡಿರುತ್ತಾರೆ. ಅದನ್ನು ಸರಿಯಾಗಿ ಪರಿಶೀಲಿಸಿ. ಯಾವ ಕಂಪನಿಯ ಹೆಚ್ಚು ಇನ್ಷ್ಯೂರೆನ್ಸ್‌ ಕಡಿಮೆ ದರದಲ್ಲಿ ಹೆಚ್ಚು ಪ್ರಯೋಜನಗಳನ್ನು ನೀಡುವ ಕಂಪನಿಯ ಇನ್ಷ್ಯೂರೆನ್ಸ್‌ ಆಯ್ಕೆ ಮಾಡಿ.

ಕೂಪನ್‌, ಪ್ರೊಮೊಷನಲ್‌ ಕೋಡ್‌ಗಳನ್ನು ಬಳಸಿ

ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್‌, ಡೆಬಿಟ್‌, ಮೊಬೈಲ್‌ ಅಪ್ಲಿಕೇಷನ್‌ಗಳಲ್ಲಿ ಕೂಪನ್‌ ಕೋಡ್‌ಗಳು ಲಭ್ಯವಾಗುತ್ತವೆ. ಇದನ್ನು ಸಮರ್ಥವಾಗಿ ಬಳಸಿಕೊಳ್ಳುವ ಅಭ್ಯಾಸ ಮಾಡಿ. ಇದರಿಂದ ಕೂಡ ಹಣ ಉಳಿತಾಯ ಮಾಡಬಹುದು.

ನಿಮಗೆ ನೀವೇ ಚಾಲೆಂಜ್‌ ಮಾಡಿಕೊಳ್ಳಿ

ಹಣ ಉಳಿತಾಯಕ್ಕೆ ಮೊದಲು ಹಣದೊಂದಿಗೆ ಮನಸ್ಸು ಕೂಡ ಇರ್ಬೇಕು. ಈ ತಿಂಗಳು ಉಳಿತಾಯ ಮಾಡೇ ಮಾಡುತ್ತೇನೆ ಎಂಬ ದೃಢ ಸಂಕಲ್ಪ ನಿಮ್ಮದಾದರೆ ಖಂಡಿತ ನೀವು ಹಣ ಉಳಿಸಬಹುದು. ನಾನು ಈ ತಿಂಗಳು ಇಷ್ಟು ಹಣ ಉಳಿಸುತ್ತೇನೆ ಎಂದು ನಿಮಗೆ ನೀವೇ ಚಾಲೆಂಜ್‌ ಮಾಡಿಕೊಳ್ಳಿ. ಆಗ ನಿಮ್ಮಲ್ಲಿ ಒಂದು ರೀತಿಯ ಹಟ ಮೂಡುತ್ತದೆ. ಇದರಿಂದ ನೀವು ಉಳಿತಾಯ ಮಾಡಲು ಸಾಧ್ಯವಾಗುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ